12ರಂದು ಮೋದಿ ಸಮಾವೇಶ

ಉಡುಪಿ: ಉಡುಪಿ ಅಥವಾ ಮಂಗಳೂರಿನಲ್ಲಿ ಏ.12ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ಪೂರ್ವಭಾವಿಯಾಗಿ ಮನೆ ಮನೆ ಭೇಟಿ ಸಂಪರ್ಕ ಅಭಿಯಾನ ಪೂರ್ಣಗೊಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯ ದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಬೂತ್ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. 25ಕ್ಕಿಂತ ಅಧಿಕ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿರುವ ಇಂಜಿನಿಯರ್, ವೈದ್ಯರು, ದೇವಸ್ಥಾನಗಳ ಆಡಳಿತ ಮಂಡಳಿ ಅಧ್ಯಕ್ಷರು ಮೊದಲಾದವರನ್ನು ಭೇಟಿ ಮಾಡಿ ಮೋದಿ ಸಾಧನೆ ಪುಸ್ತಕಗಳನ್ನು ಹಸ್ತಾ ಂತರಿಸಬೇಕು. ಏ.7ರಿಂದ 12ರವರೆಗೆ ಮನೆ ಮನೆ ಭೇಟಿ ಅಭಿಯಾನ ಹಾಗೂ ಏ.14ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದರು.