ಕೇರಳದ ಕಲ್ಲಿಕೋಟೆ ಬಿಜೆಪಿಅಭ್ಯರ್ಥಿ ನ್ಯಾಯಾಂಗ ವಶಕ್ಕೆ

ಕಾಸರಗೋಡು: ಶಬರಿಮಲೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೇರಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಕೋಳಿಕ್ಕೋಡ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ವಕೀಲ ಕೆ.ಪಿ ಪ್ರಕಾಶ್‌ಬಾಬು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆಟ್ಟತಿರುನಾಳ್ ಮಹೋತ್ಸವ ಸಂದರ್ಭ ಶಬರಿಮಲೆ ದರ್ಶನಕ್ಕೆ ಆಗಮಿಸಿದ್ದ ಯುವತಿಯ ಹತ್ಯೆಗೆ ಯತ್ನಿಸಿದ್ದಾರೆಂಬ ಆರೋಪದಲ್ಲಿ ಇವರ ವಿರುದ್ಧ ಕೇಸು ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆಯಲು ರಾನ್ನಿ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂದರ್ಭ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಶಬರಿಮಲೆ ಯುವತಿಯರ ಪ್ರವೇಶ ವಿಷಯಕ್ಕೆ ಸಂಬಂಧಿಸಿ ಪ್ರಕಾಶ್‌ಬಾಬು ವಿರುದ್ಧ ಎಂಟು ಪ್ರಕರಣ ದಾಖಲಾಗಿದ್ದು, ಇದರಲ್ಲಿ ಬಹುತೇಕ ಬಂಧನ ವಾರಂಟ್ ಹೊಂದಿದೆ.