ಸರಿಗಮಪ ಖ್ಯಾತಿಯ ಕುರಿಗಾಹಿ ಗಾಯಕ ಹನುಮಂತ ಮೊದಲ ಬಾರಿ ಮತದಾನ ಮಾಡಿ ಹೇಳಿದ್ದೇನು ಗೊತ್ತಾ?

ಹಾವೇರಿ: ಈ ಬಾರಿ ಲೋಕಸಭಾ ಚುನಾವಣೆಯ ಮತ ಜಾಗೃತಿ ಅಭಿಯಾನದ ಹಾವೇರಿ ಕ್ಷೇತ್ರದ ರಾಯಭಾರಿ ಜನಪದ ಗಾಯಕ, ಕುರಿಗಾಹಿ ಹನುಮಂತ ಲಮಾಣಿ ಇಂದು ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ತಮ್ಮ ಮೊದಲ ಬಾರಿಯ ಮತದಾನ ಮಾಡಿದರು.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚಿಲ್ಲೂರುಬಡ್ನಿಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿ, ಮತದಾನ ಮಾಡಿ, ನಿಮ್ಮ ಹಕ್ಕು ನೀವೇ ಚಲಾವಣೆ ಮಾಡಿ, ಸೂಕ್ತ ಜನಪ್ರತಿನಿಧಿ ಆಯ್ಕೆ ಮಾಡಿ ಎಂದು ಹೇಳಿದರು.

ಮತ ಜಾಗೃತಿ ಅಭಿಯಾನದ ರಾಯಭಾರಿಯಾಗಿದ್ದ ಇವರು ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತವ ಹಾಕು ಮನುಜ ಹಾಡಿನ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದರು.

ಜಾನಪದ ಗಾಯಕ, ಮತ ಜಾಗೃತಿ ಅಭಿಯಾನದ ಹಾವೇರಿ ಕ್ಷೇತ್ರದ ರಾಯಭಾರಿ ಹನುಮಂತ ಲಮಾಣಿ ಮೊದಲ ಮತದಾನ…

ಜಾನಪದ ಗಾಯಕ, ಮತ ಜಾಗೃತಿ ಅಭಿಯಾನದ ಹಾವೇರಿ ಕ್ಷೇತ್ರದ ರಾಯಭಾರಿ ಹನುಮಂತ ಲಮಾಣಿ ಮೊದಲ ಮತದಾನ…

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಏಪ್ರಿಲ್ 23, 2019