ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 3 ಕೋಟಿ ರೂ. ಒಡೆಯ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹಾಗೂ ಅವರ ಪತ್ನಿ ಶರಣ್ಯಾ ಶೆಟ್ಟಿ ಒಟ್ಟಿಗೆ 3,29,63,607 ರೂ. ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದಾರೆ.

ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರರಾಗಿರುವ ಅವರು 77.81 ಲಕ್ಷ ರೂ.ನ ಸ್ಥಿರಾಸ್ತಿ ಹಾಗೂ 34.07 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಶರಣ್ಯ ಶೆಟ್ಟಿ ಹೆಸರಲ್ಲಿ 42.27 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಮಿಥುನ್ 9.15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದರೆ ಪತ್ನಿ 42.27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.

ಮಿಥುನ್ ಕೈನಲ್ಲಿ ಒಟ್ಟು 1.98 ಲಕ್ಷ ರೂ. ನಗದು(ಪತ್ನಿ 70 ಸಾವಿರ ರೂ.) ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 21,524 ಬ್ಯಾಲೆನ್ಸ್ ಹೊಂದಿದ್ದರೆ ಪತ್ನಿಯ ವಿವಿಧ ಖಾತೆಯಲ್ಲಿ ಕೇವಲ 2661 ರೂ. ಇದೆ. ಸೀ ಸಫೈರ್ ಮೋಟೆಲ್ಸ್‌ನಲ್ಲಿ 63.18 ಲಕ್ಷ ರೂ, ಸೀ ಸಫೈರ್ ಲಾಜಿಸ್ಟಿಕ್ಸ್‌ನಲ್ಲಿ 12.25 ಲಕ್ಷ ರೂ. ಹಾಗೂ ಡಿಎಲ್ ವೆಂಚರ್‌ನಲ್ಲಿ 12 ಸಾವಿರ ರೂ. ಸೇರಿದಂತೆ 80.56 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಸಂಸ್ಥೆ/ವ್ಯಕ್ತಿ ಸೇರಿದಂತೆ 7 ಮಂದಿಗೆ ಒಟ್ಟು 29.19 ಲಕ್ಷ ರೂ. ಸಾಲ ನೀಡಿದ್ದಾರೆ.

4.98 ಲಕ್ಷ ರೂ. ಮೌಲ್ಯದ ಹುಂಡೈ ಇಲೈಟ್ ಕಾರು, 19.82 ಲಕ್ಷ ರೂ. ಮೌಲ್ಯದ ಇನ್ನೊವಾ ಕ್ರಿಸ್ಟಾ ಕಾರು ಹೊಂದಿದ್ದಾರೆ.

ಮಂಗಳೂರು ತಾಲೂಕಿನ ಬಡಗ ಉಳಿಪಾಡಿಯಲ್ಲಿ 21,780 ಚದರಡಿಯ 53.69 ಲಕ್ಷ ರೂ. ಮೌಲ್ಯದ ಕೃಷಿಯೇತರ ಜಮೀನು, ಮಂಗಳೂರು ಎಂ.ಜಿ.ರಸ್ತೆಯಲ್ಲಿ 291 ಚದರಡಿಯ 29 ಲಕ್ಷ ರೂ. ಮೌಲ್ಯದ ಜಾಗ ಹೊಂದಿದ್ದಾರೆ. ಒಟ್ಟಾರೆ ವಿವಿಧ ಬ್ಯಾಂಕ್‌ಗಳಿಂದ, ಇತರ ಸಂಸ್ಥೆಗಳಿಂದ 1.48 ಕೋಟಿ ರೂ. ಸಾಲ ಪಡೆದಿದ್ದಾರೆ.

ಮಂಗಳೂರು ದಕ್ಷಿಣ ಠಾಣೆಯಲ್ಲಿ ಮಿಥುನ್ ರೈ ವಿರುದ್ಧ ಹಲ್ಲೆ, ಜೀವ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿದ್ದು, ಜೆಎಂಎಫ್‌ಸಿ 2ನೇ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.