ರಾಹುಲ್ ಗಾಂಧಿ ವಯನಾಡ್ ಸ್ಪರ್ಧೆ ಇನ್ನೂ ಆಗಿಲ್ಲ ನಿರ್ಧಾರ, ಕಾಂಗ್ರೆಸ್ ಲೆಕ್ಕಾಚಾರಕ್ಕಿಲ್ಲ ಫುಲ್​ಸ್ಟಾಪ್

ಕಾಸರಗೋಡು: ಕೇರಳದ ವಯನಾಡ್ ಲೋಕಸಭಾ ಸ್ಥಾನವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗಾಗಿ ಮೀಸಲಿರಿಸಿದ್ದು, ಅಭ್ಯರ್ಥಿಗಳ ಒಂಭತ್ತನೇ ಪಟ್ಟಿಯಲ್ಲೂ ವಯನಾಡ್ ಹೆಸರಿಲ್ಲ. ಹೀಗಾಗಿ ರಾಹುಲ್ ಸ್ಪರ್ಧಿಸುವ ಬಗ್ಗೆ ಅತಂತ್ರ ಸ್ಥಿತಿ ಮುಂದುವರಿದಿದೆ.

ವಯನಾಡ್ ಸಹಿತ ದಕ್ಷಿಣ ಭಾರತದಲ್ಲಿ ಸ್ಪರ್ಧೆಗಿಳಿಯುವ ಬಗ್ಗೆ ಸ್ವತಃ ರಾಹುಲ್‌ಗಾಂಧಿ ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಯನಾಡಿನಲ್ಲಿ ಸ್ಪರ್ಧೆಗಿಳಿಯುವಂತೆ ಕಾಂಗ್ರೆಸ್ ಮಾತ್ರವಲ್ಲ ಐಕ್ಯರಂಗ ಕೇರಳ ಘಟಕವೂ ರಾಹುಲ್ ಮೇಲೆ ಒತ್ತಡ ಹೇರಿದೆ. ರಾಹುಲ್ ಗಾಂಧಿ ಕೇರಳದಲ್ಲಿ ಸ್ಪರ್ಧೆಗಿಳಿದರೆ, ಐಕ್ಯರಂಗದ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ಇನ್ನೊಂದೆಡೆ, ವಯನಾಡ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಪುತ್ರ ಕೆ.ಮುರಳೀಧರನ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಟಿ.ಸಿದ್ದಿಕ್ ಅವರ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.

Leave a Reply

Your email address will not be published. Required fields are marked *