ತಾಳಿಕೋಟೆಯಲ್ಲಿ ಬೈಕ್ ರ‌್ಯಾಲಿ

ತಾಳಿಕೋಟೆ: ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದ ರಮೇಶ ಜಿಗಜಿಣಗಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟ್ಟದಲ್ಲಿ ಬೈಕ್ ರ‌್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮುಖಂಡ ವಾಸುದೇವ ಹೆಬಸೂರ ಮಾತನಾಡಿದರು. ಮುಖಂಡರಾದ ದತ್ತು ಹೆಬಸೂರ, ಕಕ್ಕು ರಂಗರೇಜ, ಚನಬಸು ದೇಸಾಯಿ, ಹಣಮೇಶ ಜೈನಾಪುರ, ಶ್ರೀಶೈಲ ಗಣಾಚಾರಿ, ಮಂಜು ಬಿರಾದಾರ, ಈಶ್ವರ ಹೂಗಾರ, ವಿಜಯ ಲಿಂಗದಳ್ಳಿ, ಪ್ರಮೋದ ಅಗರವಾಲಾ, ರಾಘವೇಂದ್ರ ಚವಾಣ್, ಕಿರಣ ರಡ್ಡಿ, ಸಿದ್ದು ಬೆಳಗುಂಪಿ, ಸತ್ಯನಾರಾಯಣ ತಾಳಪಲ್ಲೆ, ಬಸು ಸರೂರ, ಸುಭಾಷ ಬನ್ನಿ, ರಾಹುಲ್ ಸಜ್ಜನ, ಕಿರಣ ರಂಗರೇಜಿ, ಶಿವಶಂಕರ ಹಿರೇಮಠ, ರಾಘವೇಂದ್ರ ವಿಜಾಪೂರ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.