ಚುನಾವಣೆ ಹಿನ್ನೆಲೆ ಗಡಿ ಪ್ರದೇಶಗಳಲ್ಲಿ ನಕ್ಸಲ್ ಕೂಂಬಿಂಗ್

ಸುಳ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ(ಎ.ಎನ್.ಎಫ್) ಕೂಂಬಿಂಗ್ ಆರಂಭಿಸಿದೆ. ಸಂಪಾಜೆ, ಅರೆಕಲ್ಲು, ಕೊಲ್ಲಮೊಗ್ರ, ಕೂಜಿಮಲೆ, ಸುಬ್ರಹ್ಮಣ್ಯ, ಬಿಸಿಲೆ ಮತ್ತಿತರ ಪ್ರದೇಶಗಳಲ್ಲಿ ಮತ್ತು ಸಮೀಪದ ಅರಣ್ಯ ಪ್ರದೇಶಗಳಲ್ಲಿ ಮೂರು ದಿನಗಳಿಂದ ಎ.ಎನ್.ಎಫ್ ಕೂಂಬಿಂಗ್ ಕೈಗೊಂಡಿದೆೆ. ಮುಖ್ಯವಾಗಿ ಈ ಹಿಂದೆ ನಕ್ಸಲರು ಭೇ ಟಿ ನೀಡಿದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಬಂದೋಬಸ್ತ್ ಏರ್ಪಡಿಸುವ ದೃಷ್ಟಿಯಿಂದ ಮತ್ತು ನಕ್ಸಲ್ ಚಟುವಟಿಕೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೂಂಬಿಂಗ್ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೇರಳ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಎ.ಎನ್.ಎಫ್ ಕಾರ್ಯಾಚರಣೆ ನಡೆಸಿತ್ತು.