ಲೋಕಾಪುರ: ಸಮೀಪದ ಚೌಡಾಪುರ ಗ್ರಾಮದ ಎಸ್.ಸಿ ಕಾಲನಿಯಲ್ಲಿ ಮೂರು ತಿಂಗಳಿಂದ ಕುಡಿಯುವ ನೀರಿನ ಸರಬರಾಜು ಇಲ್ಲದೆ ಆಕೋಶಕೊಂಡು ಗ್ರಾಮಸ್ಥರು ಹಾಗೂ ಮಹಿಳೆಯರು ಮಂಗಳವಾರ ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಕುರಿತು ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಗಳು ಹಾಗೂ ಅಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿತ್ಯದ ಕೆಲಸ ಬಿಟ್ಟು ನೀರು ತರುವುದೇ ಒಂದು ಉದ್ಯೋಗವಾಗಿದೆ. ಕೋಡ ನೀರಿಗಾಗಿ 2-3 ಕಿ.ಮೀ ದೂರ ಸಾಗಿ ಪಕ್ಕದ ಗ್ರಾಮದಿಂದ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ನೀರಿಲ್ಲದಿದ್ದರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೂ ತೊಂದೆರೆಯಾಗಿದೆ. ಕುಡಿಯಲು ಮನೆಯಿಂದ ನೀರು ತರಬೇಕಿದೆ. ಬೇರೆ ಕಡೆಯಿಂದ ನೀರು ತಂದು ಅದುಗೆ ಮಾಡಬೇಕಿದೆ. ಕೂಡಲೇ ಸಮರ್ಪಕ ನೀರು ಪೂರೈಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮುತ್ತಪ್ಪ ಮಾಳಿ ಮತ್ತು ಈರಪ್ಪ ದೊಡಮನಿ, ಹನುಮವ್ವ ಮಾದರ, ಯಲ್ಲವ್ವ ದೊಡಮನಿ, ಗಂಗವ್ವ ಮಾದರ, ಯಮನವ್ವ ದೊಡಮನಿ, ಸುಸಲವ್ವ ದೊಡಮನಿ, ಮಹಾದೇವಿ ಮಾದರ, ಬಸವ್ವ ಮಾದರ, ಹನುಮವ್ವ ದೊಡಮನಿ, ರಾಮಣ್ಣ ದೊಡಮನಿ, ವೆಂಕಣ್ಣ ದೊಡಮನಿ, ಶಂಕರ ದೊಡಮನಿ, ಹನುಮಂತ ದೊಡಮನಿ, ಮಹಾದೇವ ನರಸಾಪುರ, ಪ್ರಜ್ವಲ್ ದೊಡಮನಿ, ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.
ಮೇಲಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಮೂರ್ನಾಲ್ಕು ದಿನದಿಂದ ವಿದ್ಯುತ್ ಸಮಸ್ಯೆಯಿಂದ ನೀರಿನ ತೊಂದರೆಯಾಗಿದೆ. ಇಂದು ಬೋರ್ವೆಲ್ ಹಾಕಲಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ.
– ಎಸ್.ವಾ. ನರಸನ್ನವರ ಗ್ರಾಪಂ ಪಿಡಿಒ