More

    ದೇಶ ಬಲಪಡಿಸಲು ಪೌರತ್ವ ಕಾಯ್ದೆ ಜಾರಿ

    ಲೋಕಾಪುರ: ದೇಶವನ್ನು ಬಲಪಡಿಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡ್ದಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜಾಗೃತಿ ಅಭಿಯಾನ, ಸಹಿ ಸಂಗ್ರಹ ಮತ್ತು ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಪೌರತ್ವ ಕಾಯ್ದೆ ಇದೆ. ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಹೋದರು ವಿಸಾ ಮುಗಿದ ನಂತರ ಕೂಡಲೇ ಆ ದೇಶವನ್ನು ಬಿಟ್ಟು ಹೊರಹಾಕುತ್ತಾರೆ. ನಮ್ಮ ದೇಶದಲ್ಲಿ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದರೆ ಕಾಂಗ್ರೆಸ್‌ಗೆ ಏನು ತೊಂದರೆ?, ಕಾಂಗ್ರೆಸ್‌ಗೆ ಪೌರತ್ವ ಮತ್ತು ದೇಶದ ಬಗ್ಗೆ ಅರ್ಥವಾಗಿಲ್ಲ. ಕಾಂಗ್ರೆಸ್‌ನವರು ಏಕೆ ವಿರೋಧ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ನಿಲುವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್‌ನವರು ಅಲ್ಪಸಂಖ್ಯಾತ ಸಮುದಾಯದಲ್ಲಿ ಗೊಂದಲ ಮೂಡಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಓಟ ಬ್ಯಾಂಕ್ ರಾಜಕಾರಣಕ್ಕಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆೆ ಎಂದು ಆರೋಪಿಸಿದರು.

    ಆರ್.ಕೆ. ಮಠದ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಎಂ.ಎಂ.ವಿರಕ್ತಮಠ, ಬಿ.ಎಲ್.ಬಬಲಾದಿ, ವಿ.ಎಂ. ತೆಗ್ಗಿ, ಬೀರಪ್ಪ ಮಾಯಣ್ಣವರ, ಮಲ್ಲಪ್ಪ ಅಂಗಡಿ, ಜಾಕೀರ ಅತ್ತಾರ, ವಿರೇಶ ಪಂಚಕಟ್ಟಿಮಠ, ವಿನೋದ ಘೋರ್ಪಡೆ, ರಾಮಪ್ಪ ಕಿಲಾರಿ, ಆನಂದ ಹವಳಖೋಡ, ಸುರೇಶ ಹುಗ್ಗಿ, ಗುರು ಪಂಚಕಟ್ಟಿಮಠ, ಕಷ್ಣಾ ಸಾಳುಂಕೆ, ಅರುಣ ಮುಧೋಳ, ಅನೀಲ ಹಂಚಾಟೆ, ವಿನಾಯಕ ಗಂಗಣ್ಣವರ ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.

    ದೇಶದ ಮೂರು ಕೋಟಿ ಮತ್ತು ರಾಜ್ಯದ 30 ಲಕ್ಷ ಮನೆಗಳಿಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ ಪೌರತ್ವ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ತಿಳಿವಳಿಕೆ ದೂರು ಮಾಡಲಿದ್ದಾರೆ.
    – ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts