ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ಲೋಕಾಪುರ: ಆಲಮಟ್ಟಿ ಹಿನ್ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಲಿಂಕ್ ಮಾಡಿ ತಾಲೂಕನ್ನು ನೂರಕ್ಕೆ ನೂರರಷ್ಟು ನೀರಾವರಿ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ನೂತನ ಸಚಿವ ಗೋವಿಂದ ಕಾರಜೋಳ ಹೇಳಿದರು.

ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ. ಲೋಕಾಪುರದ ಸುತ್ತಲಿನ ಏಳು ಗ್ರಾಮಗಳನ್ನು ಸೇರಿಸಿ ಲೋಕಾಪುರ ಗ್ರಾಪಂನ್ನು ಮೆಲ್ದರ್ಜೆಗೇರಿಸಿ ಪಪಂ ಮಾಡಲಾಗುವುದು ಎಂದು ಹೇಳಿದರು.

ಲೋಕಾಪುರದಲ್ಲಿ ಜಮೀನು ಸಿಕ್ಕರೆ ಅಥವಾ ಯಾರಾದರೂ ದಾನಿಗಳು ಭೂಮಿ ನೀಡಿದರೆ ಐಟಿಐ, ಡಿಪ್ಲೊಮಾ, ಪಿಯು ಕಾಲೇಜು ಮತ್ತು ಕ್ರೀಡಾಂಗಣ ನಿರ್ಮಿಸಲಾಗುವುದು. ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಹೊಲ ಗದ್ದೆಗಳನ್ನು ಹತ್ತು ದಿನದಲ್ಲಿ ಸರ್ವೇ ಮಾಡಿಸಿ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಯಮನಪ್ಪ ಹೊರಟ್ಟಿ, ವಿ.ಎಂ. ತೆಗ್ಗಿ, ಪ್ರಕಶಾ ಚುಳಕಿ, ಬಿ.ಎಲ್. ಬಬಲಾದಿ, ಕೆ.ಆರ್. ಬೋಳಿಶೆಟ್ಟಿ, ಸಿ.ಎ. ಪಾಟೀಲ, ಡಿ.ಆರ್. ದಾಸರಡ್ಡಿ, ವೆಂಕಣ್ಣ ಕಮಕೇರಿ, ಅಡಿವೆಪ್ಪ ಕೃಷ್ಣಗೌಡರ, ಮಾರುತಿ ರಂಗಣ್ಣವರ, ಸೈಯ್ಯದ ಜೀರಗಾಳ, ಬೀರಪ್ಪ ಮಾಯನ್ನವರ, ಅರುಣ ಮೂಧೋಳ, ಸುರೇಶ ಹುಗ್ಗಿ, ಜಾಕೀರ್ ಅತ್ತಾರ, ಸಾಬಣ್ಣ ಚೌಡನ್ನವರ, ಹುಸೇನಪ್ಪ ರುದ್ರಾಕ್ಷಿ, ಶಂಕರ ಮಾಳಿ, ಹೊಳಬಸು ಯರಗಟ್ಟಿ, ಪರಸಪ್ಪ ಪರಸನ್ನವರ ಇತರರಿದ್ದರು.

Leave a Reply

Your email address will not be published. Required fields are marked *