ಕಿರುವಾರ ಎಸ್.ಸುದರ್ಶನ್ ಕೋಲಾರ
ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳ ವಿಳಂಬ, ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಲೋಕಾಯುಕ್ತರಿಗೆ ದೂರುಗಳು ಹೋಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಲೋಕಾ ನ್ಯಾಯಮೂರ್ತಿಗಳು, ಅಧಿಕಾರಿಗಳು ಆಗಾಗ ದಿಢೀರನೆ ಭೇಟಿ ನೀಡಿ ಬಿಸಿ ಮುಟ್ಟಿಸುತ್ತಿದ್ದಾರೆ.
ಜ.13ರಂದು ಜಿಲ್ಲೆಯ ಕೆಜಿಫ್ ಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ತಂಡವು ದಿಢೀರ್ ಭೇಟಿ ನೀಡಿದ್ದ ವೇಳೆ ವಿವಿಧ ಇಲಾಖೆಗಳ ಕರ್ತವ್ಯ ಲೋಪ ಕಂಡು ಬಂದಿದ್ದು, ಈ ಸಂಬಂಧ 5 ಪ್ರತ್ಯೇಕ ಸ್ವಯಂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದು ಭ್ರಷ್ಟ ಅಧಿಕಾರಿ, ಸಿಬ್ಬಂದಿ ತಲೆ ಕೆಡಿಸಿದೆ. 5 ಪ್ರಕರಣಗಳ ಪೈಕಿ ಒಟ್ಟು ಆರು ಮಂದಿ ಎದುರುದಾರರಾಗಿದ್ದಾರೆ. ನಗರಸಭೆ ಪೌರಾಯುಕ್ತ ಪವನ್ ಕುಮಾರ್ ವಿರುದ್ಧ 2 ಪ್ರಕರಣ ದಾಖಲಾಗಿದ್ದರೆ, 4 ಮಂದಿ ವಿರುದ್ಧ ತಲಾ ಒಂದು ದೂರು ದಾಖಲಾಗಿದೆ.
ಕೆಜಿಎ್ ನಗರಸಭೆ, ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದಾಗ ಅಧಿಕಾರಿ, ಸಿಬ್ಬಂದಿ ಗೈರು, ದಿನವಹಿ ಹಾಜರಾತಿಯಲ್ಲಿ ಸಹಿ ಮಾಡದೇ ಇರುವುದು, ಕಚೇರಿಗೆ ಹಾಜರಾದಾಗ ಮಾತ್ರ ಸಿಬ್ಬಂದಿ ತಮ್ಮ ಬಳಿ ಇದ್ದ ನಗದನ್ನು ನಗದು ವಹಿಯಲ್ಲಿ ಘೋಷಣೆ ಮಾಡಿಕೊಂಡಿರುತ್ತಾರೆ. ಆದರೆ, ಕಚೇರಿಯಿಂದ ತೆರಳುವ ಸಮಯದಲ್ಲಿ ಅವರ ಬಳಿಯಿದ್ದ ನಗದಿನ ಬಗ್ಗೆ ಘೋಷಣೆ ಮಾಡಿಕೊಳ್ಳದೆ ಇರುವುದು ಪತ್ತೆಯಾಗಿದೆ.
ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿದಾಗ ಸಮಸ್ಯೆಗೆ ಸ್ಪಂದನೆ ದೊರೆಯದ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದವು. ಈ ಬಗ್ಗೆ ಕೆಲವರು ನೇರವಾಗಿ ಲೋಕಾಯುಕ್ತ ಪೊಲೀಸರ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು. ಇನ್ನು ಕೆಲವರು ದೂರವಾಣಿ ಕರೆ ಮಾಡಿ, ಇ&ಮೇಲ್ ಮಾಡಿ ದೂರು ನೀಡುತ್ತಿದ್ದರು.
ಜತೆಗೆ ಲೋಕಾಯುಕ್ತದಿಂದ ಪ್ರತಿ ತಾಲೂಕಿನಲ್ಲೂ 3ತಿಂಗಳಿಗೊಮ್ಮೆ ಏರ್ಪಡಿಸುವ ಸಾರ್ವಜನಿಕ ಕುಂದುಕೊರತೆಗಳ ಸಭೆಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಇ-ಖಾತೆ ಆಗದೆ ಇರುವುದು, ಅರ್ಜಿ ಸಲ್ಲಿಸಿದರೆ ದಿನಗಟ್ಟಲೇ ಅಲೆದಾಡಿಸುವುದು, ಕಂದಾಯ ಇಲಾಖೆಯಲ್ಲಿ ಭೂ ದಾಖಲೆ ತಿದ್ದುಪಡಿ, ಸರ್ವೇ ಬಗ್ಗೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೌಲಭ್ಯ ದೊರೆಯದೆ ಇರುವ ಬಗ್ಗೆ ವ್ಯಾಪಕ ದೂರುಗಳು ಸಲ್ಲಿಕೆಯಾಗುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು ಆಗಾಗ ದಿಢೀರ್ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರು
ಕೆಜಿಎ್ನ ಅಬಕಾರಿ ಇಲಾಖೆ ಕಚೇರಿಗೆ ಜ.13ರಂದು ಮಧ್ಯಾಹ್ನ 12.30ಕ್ಕೆ ಭೇಟಿ ನೀಟಿ ನೀಡಿದಾಗ ಬಾಗಿಲು ತೆರೆದಿತ್ತು. ಆದರೆ, ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಹಾಜರಿರಲಿಲ್ಲ, ಚಲನವಲನ ವಹಿ ಹಾಗೂ ನಗದು ಘೋಷಣೆ ವಹಿ ನಿರ್ವಹಿಸಿರಲಿಲ್ಲ. ಹಾಜರಾತಿ ಪರಿಶೀಲಿಸಿದಾಗ ಒಟ್ಟು 7 ಮಂದಿ ಅಧಿಕಾರಿ, ಸಿಬ್ಬಂದಿ ಇರುವುದು ಕಂಡು ಬಂದಿದ್ದು, ಒಬ್ಬ ಚಾಲಕ ಹೊರತುಪಡಿಸಿದರೆ ಉಳಿದವರು ಸಹಿ ಮಾಡಿರಲಿಲ್ಲ. ಈ ಸಂಬಂಧ ಅಬಕಾರಿ ಉಪಾಧೀಕ್ಷಕರಾದ ಎಸ್.ಎನ್.ಶಂಕರ್ ಪ್ರಸಾದ್, ಪುಷ್ಪಾ ಹಾಗೂ ನಿರೀಕ್ಷಕಿ ರಮಾಮಣಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
* ಸರ್ಕಾರಿ ಆಸ್ಪತ್ರೆಯಲ್ಲಿ ಸಾಲುಸಾಲು ಸಮಸ್ಯೆಗಳು
ಕೆಜಿಎ್ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಗಳ ದಿಗ್ದರ್ಶನವಾಯಿತು. ಆದ್ದರಿಂದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ವಿರುದ್ಧ ದೂರು ದಾಖಲಾಗಿದೆ. ಡ್ರೆಸ್ಸಿಂಗ್ ರೂಂ ಹಾಗೂ ಸ್ಟಮಕ್ ಕ್ಲೀನಿಂಗ್ ರೂಂನಲ್ಲಿ ಅನೈರ್ಮಲ್ಯ, ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ, ಡುಜಾರಟ್ ಇಂಜೆಕ್ಷನ್ ಅನ್ನು ಹೊರಗಿನಿಂದ ಖರೀದಿಸಿರುವುದು ಕಂಡು ಬಂದಿದೆ.
* ಅವಧಿ ಮೀರಿದ ಔಷಧ ಲಭ್ಯ
ಆಸ್ಪತ್ರೆಯಲ್ಲಿ 2025ರ ಜನವರಿ, ಫಬ್ರವರಿ ಅವಧಿಗೆ ಮುಕ್ತಾಯವಾಗಿರುವ ಔಷಧಗಳು ದೊರಕಿವೆ. ಸ್ಕಾ$ನಿಂಗ್ ಸೆಂಟರ್ ವಾರಕ್ಕೆ ಕೇವಲ 2 ದಿನ ಮಾತ್ರ ತೆಗೆಯಲಾಗಿರುತ್ತದೆ. ಮಹಿಳಾ ರೋಗಿಗಳ ಚುಚ್ಚುಮದ್ದು ಕೊಠಡಿಯಲ್ಲಿ ಪುರುಷ ರೋಗಿಗಳಿಗೆ ಚುಚ್ಚುಮದ್ದನ್ನು ನೀಡಲಾಗುತ್ತಿರುವುದು ಕಂಡು ಬಂದಿದೆ.
* ಪಿಡಿಒ, ಪೌರಾಯುಕ್ತ ವಿರುದ್ಧ ದೂರು
ತಾಲೂಕಿನ ಪಾರಂಡಹಳ್ಳಿ ಸಮೀಪ 16 ಎಕರೆ ಪ್ರದೇಶದಲ್ಲಿ ನಗರಸಭೆ ಮತ್ತು ಪಂಚಾಯಿತಿಯವರು 2008ರಿಂದ ಇಲ್ಲಿಯವರೆಗೆ 40 ಸಾವಿರ ಮೆಟ್ರಿಕ್ ಟನ್ಗೂ ಹೆಚ್ಚು ನ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರಂತೆ 5 ವರ್ಷಗಳ ಒಳಗಾಗಿ ವಿಲೇವಾರಿ ಮಾಡದೇ ಇದ್ದುದರಿಂದ ಕಸದ ರಾಶಿ ಬೆಟ್ಟದಂತಾಗಿದೆ.
ತ್ಯಾಜ್ಯದಿಂದ ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿದ್ದು, ವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವುದಿಲ್ಲ. ಇದರಿಂದಾಗಿ ಮಕ್ಕಳ ಆರೋಗ್ಯ ಹಾಗೂ ಪ್ರಾಣಿ, ಪಗಳ ಪ್ರಾಣಕ್ಕೆ ಅಪಾಯವಿರುವುದು ಕಂಡು ಬಂದಿದೆ.
ಟಕದ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ, ಮಣ್ಣಿನ ಸತ್ವ, ಅಕಳುಗಳ ಹಾಲಿನ ಮೇಲೆ, ವಯೋವೃದ್ಧರ, ಮಕ್ಕಳ ಆರೋಗ್ಯದ ಮೇಲೆ, ಬೆಳೆಯುವ ತರಕಾರಿ ಮೇಲೆ ವಿಷಕಾರಿ ಪರಿಣಾಮ ಬೀರುವ ಬಗ್ಗೆ ಸಾರ್ವಜನಿಕರು ದೂರಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ಆಕಳು ಹಾಲು, ತರಕಾರಿಯನ್ನು ಪರೀೆಗೆ ಒಳಪಡಿಸಿ ವರದಿ ನೀಡುವಂತೆ ಸೂಚಿಸಿದರಲ್ಲದೆ, ಪಾರಂಡಹಳ್ಳಿ ಪಿಡಿಒ ಎಂ.ಮಂಜುನಾಥ್, ಪೌರಾಯುಕ್ತ ಕೆ.ಎಂ.ಪವನ್ ವಿರುದ್ಧ ದೂರು ದಾಖಲಾಗಿದೆ.
* ಹೆಲ್ತ್ ಇನ್ಸ್ಪೆಕ್ಟರ್ ಯುಪಿಐನಲ್ಲಿ ವಹಿವಾಟು ಜೋರು
ಕೆಜಿಫ್ ನಗರದಲ್ಲಿ ಕರ್ನಾಟಕ ಮುನಿಸಿಪಲ್ ಕಾಪೋರ್ರೇಷನ್ ಕಾಯ್ದೆ ಕಲಂ 107ರ ನಿಯಮಗಳನ್ನು ಉಲ್ಲಂಘಿಸಿ ಹಾಗೂ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿರುವವರಿಗೆ ಕೇವಲ ದಂಡವನ್ನು ವಿಧಿಸಿದ್ದು, ಉಲ್ಲಂನೆದಾರರ ವಿರುದ್ಧ ಕ್ರಮ ಜರುಗಿಸದೆ ನಗರಸಭೆ ಅಧಿಕಾರಿಗಳು ಕರ್ತವ್ಯಲೋಪವೆಸಗಿದ್ದಾರೆ. ಆರೋಗ್ಯ ಸಿಬ್ಬಂದಿಯೊಬ್ಬರಿಗೆ 36 ಸಾವಿರ ರೂ. ವೇತನವಿದೆ. ಅವರ ಮೊಬೈಲ್ನಲ್ಲಿ ಯುಪಿಐ ಪರಿಶೀಲಿಸಿದಾಗ 60 ಸಾವಿರ, 90 ಸಾವಿರ, 1 ಲಕ್ಷ ರೂ. ಜಮೆ ಆಗಿದ್ದು, ವೇತನಕ್ಕಿಂತ ಹೆಚ್ಚಾಗಿ ಹಣಕಾಸು ವಹಿವಾಟು ನಡೆಸಿರುವುದು ಕಂಡು ಬಂದಿದೆ. ಜತೆಗೆ ಇತರ ಖಾಯಂ ಸಿಬ್ಬಂದಿ, ಹೊರಗುತ್ತಿಗೆ ನೌಕರರ ಮೊಬೈಲ್ನಲ್ಲಿ ಹಣಕಾಸು ವಹಿವಾಟು ಜೋರಾಗಿ ನಡೆದಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಕೆಜಿಎ್ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗಳ ಒಂದು ವರ್ಷದ ಆರ್ಥಿಕ ವಹಿವಾಟಿನ ಬ್ಯಾಂಕ್ ವರದಿ ಹಾಗೂ ಆಸ್ತಿ ಮತ್ತು ಜವಾಬ್ದಾರಿ ತಖ್ತೆಯನ್ನು ಸಲ್ಲಿಸುವಂತೆ ಪೌರಾಯುಕ್ತ ಕೆ.ಎಂ.ಪವನ್ಗೆ ಸೂಚಿಸಿದ್ದು, ದೂರು ದಾಖಲಾಗಿದೆ.
* ಲಾನುಭವಿಗಳ ಕೈ ಸೇರದ ಸೌಲಭ್ಯ
ಕಾರ್ಮಿಕ ಇಲಾಖೆ ಕಾರ್ಮಿಕ ನಿರೀಕ್ಷಕ ಕಿರಣ್ ಕುಮಾರ್ ಇಂಗಲೆ ಪದೇ ಪದೇ ಕಚೇರಿಗೆ ಗೈರಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದು, ಅಲ್ಮೇರಾ ಬೀಗ ಹಾಕಿಕೊಂಡು ಹೋಗಿರುತ್ತಾರೆ. ಇಲಾಖೆಯ ಪ್ರಗತಿ ಕುರಿತು ಪ್ರಶ್ನಿಸಿದಾಗ ಕಂಪ್ಯೂಟರ್ ಅಪರೇಟರ್ ನಾಗಲಕ್ಷ್ಮಿ ಮಾಹಿತಿ ನೀಡಿಲ್ಲ. ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಲಾನುಭವಿಗಳಿಗೆ ನೀಡಿರುವುದಿಲ್ಲ, ಆರೋಗ್ಯ ನಿರೀಕ್ಷಕರು ಕಚೇರಿಗೆ ಆಗಮಿಸದೆ ಸಿಬ್ಬಂದಿ ಹಾಜರಾತಿ ಹಾಗೂ ಕರ್ತವ್ಯದ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳದೆ ಕರ್ತವ್ಯಲೋಪವೆಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಅಧಿಕಾರಿ ವರಲಕ್ಷ್ಮಿ, ನಿರೀಕ್ಷಕ ಕಿರಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.