ಗಜೇಂದ್ರಗಡ: ಗದಗ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಕೌಂಟೆಂಟ್ ಲಕ್ಷ್ಮಣ ಕರ್ಣೆ ಅವರಿಗೆ ಸೇರಿದ ಪಟ್ಟಣದ ಮನೆ ಮೇಲೆ ಲೋಕಾಯುಕ್ತರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕರ್ಣೆಯವರು ಮೂರು ಮನೆ, 1 ಕಾರು, 2 ಬೈಕ್, 1 ನಿವೇಶನ, 1 ವಾಣಿಜ್ಯ ಮಳಿಗೆ, 3.5 ಎಕರೆ ಜಮೀನು ಸೇರಿ ಸುಮಾರು 1 ಕೋಟಿ ರೂಪಾಯಿಗೂ (ಶೇ. 215ರಷ್ಟು) ಅಧಿಕ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ಮಾಹಿತಿ ನೀಡಿದ್ದಾರೆ.
ಗಜೇಂದ್ರಗಡ ಪಟ್ಟಣದಲ್ಲಿ ಕರ್ಣೆಗೆ ಸೇರಿದ ಒಂದು ಮನೆ, ಗದಗನಲ್ಲಿ ಮೂರು ಮನೆಗಳು ಹಾಗೂ ಹಾವೇರಿಯಲ್ಲಿ 1 ಮನೆ ಒಟ್ಟು ಇವರಿಗೆ ಸೇರಿದ 5 ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ.