24.9 C
Bangalore
Wednesday, December 11, 2019

‘ಪ್ರಶ್ನೆಯ ಬಗ್ಗೆ ಗಮನವಿರಲಿ, ಸರಿಯಾಗಿ ಕೇಳಿಸಿಕೊಳ್ಳಿ’ ಎಂದು ಕೇಂದ್ರ ಸಚಿವರಿಗೆ ಗದರಿದ ಲೋಕಸಭಾ ಸ್ಪೀಕರ್​​ ಓಂ ಬಿರ್ಲಾ

Latest News

ಚಾಲೆಂಜಿಂಗ್​ ಸ್ಟಾರ್​ ತೂಗುದೀಪ ದರ್ಶನ್​ ಅಭಿನಯದ ಚಿತ್ರ ಒಡೆಯ ನಾಳೆ ತೆರೆಗೆ : 300ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನ

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಯನಯದ ಒಡೆಯ ಸಿನಿಮಾ ನಾಳೆ (ಡಿ.12ರ ಗುರುವಾರ) ತೆರೆಗೆ ಅಪ್ಪಳಿಸಲಿದೆ. ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಒಡೆಯ ಸಿನಿಮಾ...

ವಿಷ್ಣು‌ ಸೇನಾ‌ ಸಮಿತಿಯಿಂದ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಆಯೋಜನೆ

ಬಳ್ಳಾರಿ: ಚಿತ್ರನಟ ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ ಹಿನ್ಮೆಲೆಯಲ್ಲಿ ವಿಷ್ಣು ಸೇನಾ ಸಮಿತಿಯಿಂದ ಡಿ.29ರಂದು ನಗರ ಹಾಗೂ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.29ರಂದು...

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ನವದೆಹಲಿ: ಸದನದಲ್ಲಿ ನಡೆಯುತ್ತಿದ್ದ ಚರ್ಚೆಯ ಬಗ್ಗೆ ಗಮನಕೊಡದ ಕೇಂದ್ರ ಸಚಿವರೋರ್ವರಿಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಗದರಿದ್ದಾರೆ.

ಸಂಸತ್​ ಪ್ರಶ್ನಾವಳಿ ಸಮಯದಲ್ಲಿ ಶಿವಸೇನೆಯ ಸಂಸದ ಹೇಮಂತ್​ ತುಕಾರಾಂ ಗೋಡ್ಸೆ ಅವರು ಕೇಂದ್ರ ಗ್ರಾಹಕ ವ್ಯವಹಾರ ಖಾತೆಗೆ ಸಂಬಂಧಪಟ್ಟಂತೆ ಪ್ರಶ್ನೆಯೊಂದನ್ನು ಕೇಳಿದರು. ಆದರೆ ಖಾತೆಯ ರಾಜ್ಯ ಸಚಿವ ರಾವ್​ ಸಾಹೇಬ್​ ದನ್ವೆ ಅವರು ಆ ಪ್ರಶ್ನೆಯನ್ನು ಸರಿಯಾಗಿ ಕೇಳಿಸಿಕೊಳ್ಳದೆ, ಮತ್ತೊಮ್ಮೆ ಕೇಳುವಂತೆ ತುಕಾರಾಂ ಗೋಡ್ಸೆ ಅವರ ಬಳಿ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಓಂಬಿರ್ಲಾ, ಗೌರವಾನ್ವಿತ ಸಚಿವರೇ, ಅವರು ಕೇಳುವ ಪ್ರಶ್ನೆಗಳ ಕಡೆಗೆ ಸರಿಯಾಗಿ ಗಮನಕೊಡಿ. ಲಕ್ಷ್ಯವಿಟ್ಟು ಕೇಳಿಕೊಳ್ಳಿ ಎಂದು ಖಡಕ್​ ಆಗಿ ಹೇಳಿದರು. ಅಷ್ಟೇ ಅಲ್ಲದೆ, ಒಂದೇ ಪ್ರಶ್ನೆಯನ್ನು ಮತ್ತೆಮತ್ತೆ ಕೇಳಬೇಡಿ ಎಂದು ಶಿವಸೇನೆಯ ಗೋಡ್ಸೆಗೂ ನಿರ್ದೇಶನ ನೀಡಿದರು. ನಾನು ನಿಮಗೆ ಇನ್ನೊಂದು ಅವಕಾಶ ಕೊಡುತ್ತೇನೆ, ಆದರೆ ಬೇರೆ ಪ್ರಶ್ನೆಯನ್ನು ಕೇಳಿ ಎಂದು ಹೇಳಿದರು.

ಸ್ಪೀಕರ್​ ಮಾತನ್ನು ಹೇಮಂತ್​ ತುಕಾರಾಂ ಗೋಡ್ಸೆ ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಶಿವಸೇನಾ ಮುಖಂಡ ಅರವಿಂದ್ ಸಾವಂತ್​ ಅವರು ಗೋಡ್ಸೆ ಅವರ ಬಳಿ ತೆರಳಿ, ಸ್ಪೀಕರ್ ಹೇಳಿದ್ದನ್ನು ತಿಳಿಸಿ ಹೇಳಿದರು.

ಅದಾದ ಬಳಿಕ ಗೋಡ್ಸೆ ಅವರು ಕೇಳಿದ ಇನ್ನೊಂದು ಪ್ರಶ್ನೆಗೆ ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ಉತ್ತರಿಸಿದರು. ಪಾಸ್ವಾನ್​ ಅವರು ನಿಂತುಕೊಂಡು ವಿವರಣೆ ನೀಡುತ್ತಿದ್ದಾಗ, ಮಧ್ಯ ಪ್ರವೇಶ ಮಾಡಿದ ಸ್ಪೀಕರ್​ ಓಂಬಿರ್ಲಾ, ನಿಮ್ಮ ಕಾಲಿಗೆ ಏಟಾಗಿದೆಯಲ್ಲ, ನೀವು ಕುಳಿತುಕೊಂಡೇ ಉತ್ತರ ನೀಡಿ, ಸದನದಲ್ಲಿ ಅದಕ್ಕೆ ಅವಕಾಶವಿದೆ ಎಂದು ಹೇಳಿದರು.

ಆದರೆ ಅಧಿವೇಶನ ಪ್ರಾರಂಭಕ್ಕೂ ಮೊದಲು ಹಲವರು ಗೈರಾಗಿದ್ದನ್ನು ನೋಡಿದ ಸ್ಪೀಕರ್ ಓಂಬಿರ್ಲಾ ತೀವ್ರ ಬೇಸರ ವ್ಯಕ್ತಪಡಿಸಿದರು. ಪ್ರಶ್ನಾವಳಿಗೆ ತಮ್ಮ ಹೆಸರನ್ನು ಕೊಟ್ಟು, ಬಳಿಕ ಗೈರಾದವರಿಗೆ ಮುಂದೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...