ಲೋಕ ಸಮರ ಬಿಜೆಪಿಗೆ 300 ಸ್ಥಾನ ಖಚಿತ!

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಆಂತರಿಕ ಸಮೀಕ್ಷೆ ತಿಳಿಸಿದೆ. ಎನ್​ಡಿಎನ ಒಟ್ಟಾರೆ ಸಂಖ್ಯಾಬಲ 360 ದಾಟಲಿದೆ. ಶೇ.51ಕ್ಕೂ ಹೆಚ್ಚು ಮತ ಸಿಗಲಿದ್ದು, ಇದು 2014ರ ಚುನಾವಣೆಗಿಂತ ಶೇ.12 ಅಧಿಕ ಎಂದು ಸಮೀಕ್ಷಾ ವರದಿ ಹೇಳಿದೆ. ಕೇಂದ್ರ ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳು ಶೇ.90 ಗ್ರಾಮೀಣ ಭಾರತಕ್ಕೆ ತಲುಪಿದೆ. ಇದರಿಂದಾಗಿ ಬಿಜೆಪಿ ಬಗ್ಗೆ ಜನರಿಗೆ ಒಲವಿದೆ ಎಂದು ಸಮೀಕ್ಷಾ ತಂಡದಲ್ಲಿದ್ದ ಮುಖಂಡರೊಬ್ಬರು ಹೇಳಿದ್ದಾರೆ. ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ, ಬೇರೆ ಬೇರೆ ಸಮಯದಲ್ಲಿ ಸಮೀಕ್ಷೆ ನಡೆಸಿರುವುದಾಗಿ ತಿಳಿದು ಬಂದಿದೆ.