ಸುಲಲಿತ ಚುನಾವಣೆಗಾಗಿ ಪೊಲೀಸ್ ಪಥಸಂಚಲನ

ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಶನಿವಾರ ನಗರದಲ್ಲಿ ಪಥಸಂಚಲನ ನಡೆಸಿತು.

ಇಲ್ಲಿನ ಪೊಲೀಸ್ ಹೆಡ್‌ಕ್ವಾಟರ್ಸ್‌ದಿಂದ ಆರಂಭಿಸಿ ವಾಟರ್ ಟ್ಯಾಂಕ್ ಮಾರ್ಗವಾಗಿ ಶಿವಾಜಿ ವೃತ್ತ, ಉಪ್ಪರಿ ಬುರ್ಜ್, ರಾಮಮಂದಿರ ರೋಡ್, ನಾಗೂರ ಆಸ್ಪತ್ರೆ ಕ್ರಾಸ್, ಸಿದ್ಧೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದವರೆಗೆ ಸಂಚರಿಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯ ಗೊಳಿಸಿತು.

ಪಥಸಂಚಲನದಲ್ಲಿ ಚುನಾವಣಾ ವೀಕ್ಷಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಮಾಂಡೆಂಟ್ ಸಿಐಎಸ್‌ಎ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪ್ರೋಬೆಷನರಿ ಐಪಿಎಸ್ ಪ್ರಶಿಕ್ಷಣಾರ್ಥಿಗಳು, ಪೊಲೀಸ್ ಉಪಾಧೀಕ್ಷಕರು, ಸಿಐಎಸ್‌ಎ್ ತುಕಡಿಗಳು, ಪ್ರಶಿಕ್ಷಣಾರ್ಥಿ ಪೊಲೀಸ್ ಸಿಬ್ಬಂದಿ, ಜೈಲ್ ವಾರ್ಡರ್‌ಗಳು, ನಾಗರಿಕ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ಸಿಬ್ಬಂದಿ ಹೀಗೆ 500 ಕ್ಕೂ ಹೆಚ್ಚು ಜನ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.