ಮಾರ್ಚಲ್ಲಿ ಮುಹೂರ್ತ

ಬೆಂಗಳೂರು: ಮುಂಬರುವ ಲೋಕಸಭಾ ಮಹಾಸಮರದ ಮುಹೂರ್ತ ವನ್ನು ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸುವ ಸುಳಿವು ನೀಡಿರುವ ಕೇಂದ್ರ ಚುನಾವಣಾ ಆಯೋಗ, ಈ ಸಂಬಂಧ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

ನರೇಂದ್ರ ಮೋದಿ ಸರ್ಕಾರದ ಅವಧಿ 2019 ಮೇ 26ಕ್ಕೆ ಮುಕ್ತಾಯವಾಗಲಿದೆ. ಅಷ್ಟರೊಳಗೆ ಚುನಾವಣೆ ನಡೆಸಬೇಕಾಗಿರುವುದರಿಂದ ಮಾರ್ಚ್​ನಲ್ಲಿ ದಿನಾಂಕ ಪ್ರಕಟಿಸಲಾಗುತ್ತದೆ. ಮೊದಲ ಹಂತದ ಚುನಾವಣೆ ಬಹುತೇಕ ಏಪ್ರಿಲ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ ಎಂಬುದು ಒಂದು ಅಂದಾಜು.

ಚುನಾವಣೆ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಏನೇನು ಸಿದ್ಧತೆಗಳಾಗಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಂಗ್ರಹ: ಮಾರ್ಚ್​ನಲ್ಲಿ ನಡೆಯಲಿರುವ ವಿವಿಧ ಪರೀಕ್ಷೆ ಹಾಗೂ ಜಾತ್ರೆಗಳ ಬಗ್ಗೆಯೂ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.

ಯಾವ ಸಿದ್ಧತೆಗೆ ಸೂಚನೆ?

  • ಮತದಾರರ ಪಟ್ಟಿ ಪರಿಷ್ಕರಣೆ
  • ಬೂತ್​ಗಳಲ್ಲಿ ಮೂಲ ಸೌಕರ್ಯ ವ್ಯವಸ್ಥೆ
  • ಕಳೆದ ಅಸೆಂಬ್ಲಿ ಚುನಾವಣೆ ವೆಚ್ಚದ ಬಿಲ್ ಬಾಕಿ ಪಾವತಿ
  • ಅಗತ್ಯ ಹಣಕಾಸು ಬಿಡುಗಡೆ ಕ್ರಮ ಕೈಗೊಳ್ಳುವುದು
  • ಇವಿಎಂಗಳ ವ್ಯವಸ್ಥೆ ಮಾಡಿಕೊಳ್ಳುವುದು

Leave a Reply

Your email address will not be published. Required fields are marked *