ಪ್ರಚಾರದ ವೇಳೆ ಖ್ಯಾತ ನಟಿ ಖುಷ್ಬೂ ಜತೆ ಯುವಕನ ಅನುಚಿತ ವರ್ತನೆ: ನಟಿಯಿಂದ ಕಪಾಳಮೋಕ್ಷ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಯುವಕನೊಬ್ಬ ನಟಿ ಹಾಗೂ ಕಾಂಗ್ರೆಸ್​ ನಾಯಕಿ ಖುಷ್ಬೂ ಜತೆ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಪರ ಮರ್ಫಿ ಟೌನ್​ನಲ್ಲಿ ರೋಡ್ ಶೋ ನಡೆಸಲು ಖುಷ್ಬೂ ಆಗಮಿಸಿದ್ದರು. ಈ ವೇಳೆ ಕಾರ್ಯಕರ್ತರ ದೊಡ್ಡ ದಂಡೇ ಸೇರಿತ್ತು. ಎಲ್ಲರನ್ನೂ ಸರಿಸಿ ಪ್ರಚಾರದ ವಾಹನದತ್ತ ತೆರಳುತ್ತಿದ್ದ ಖುಷ್ಬುಗೆ ಯುವಕ ಕೀಟಲೆ ಮಾಡಿದ್ದಾನೆ ಎನಿಸಿದೆ. ಮುಂದೆ ತೆರಳಿದ್ದ ಆಕೆ ಎರಡು ಹೆಜ್ಜೆ ಹಿಂದೆ ಬಂದು ಆತನ ಕಪಾಳಕ್ಕೆ ಬಾರಿಸಿದರು.

ಆತ ಏನು ಮಾಡಿದ ಎಂಬುದು ಯಾರ ಅರಿವಿಗೂ ಬಂದಿಲ್ಲ. ಆ ಯುವಕ ಕೂಡ ತಾನೇನೂ ಮಾಡಿಲ್ಲ, ಸುಮ್ಮನೆ ಈ ರೀತಿ ಮಾಡಿದರೆಂದು ಹೇಳಿದ್ದಾನೆ. ಇದಿಷ್ಟೇ ಅಲ್ಲದೇ ಆತನನ್ನು ಕೊಂದುಬಿಡುತ್ತೇನೆ ಎಂದು ತಮಿಳಿನಲ್ಲಿ ಖುಷ್ಬೂ ಹೇಳಿದ್ದು ಸಹ ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ.

One Reply to “ಪ್ರಚಾರದ ವೇಳೆ ಖ್ಯಾತ ನಟಿ ಖುಷ್ಬೂ ಜತೆ ಯುವಕನ ಅನುಚಿತ ವರ್ತನೆ: ನಟಿಯಿಂದ ಕಪಾಳಮೋಕ್ಷ”

  1. ಭಲೇ ಖುಷ್ಬೂ ಅವರೇ, ಮೈ ಮುಟ್ಟಿದವನ ಕೆನ್ನೆಗೆ ಬಲವಾಗಿ ತಟ್ಟಿ, ಅನುಚಿತವಾಗಿ ವರ್ತಿಸುವ ಪಡ್ಡೆ ವಯಸ್ಸಿಗೆ ಸರಿಯಾದ ಪಾಠ ಕಲಿಸಿದ್ದೀರಿ. – ಗುಂಜಮಂಜ (GUNJMANJA)

Comments are closed.