16 C
Bangalore
Saturday, December 7, 2019

ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಕ್ಕೆ ವಿವಿಪ್ಯಾಟ್​ನಲ್ಲಿನ ಮತ ಹೊಂದಾಣಿಕೆ ಮಾಡುವ ಕುರಿತ ಪ್ರತಿಪಕ್ಷಗಳ ಆಗ್ರಹವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಹಿಂದೆ ತಿಳಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ವಿವಿಪ್ಯಾಟ್​ಗಳಲ್ಲಿನ ಮತ ಎಣಿಸಲಾಗುತ್ತದೆ. ಒಂದೊಮ್ಮೆ ಇವಿಎಂನಲ್ಲಿನ ಮತಕ್ಕಿಂತ ವಿವಿಪ್ಯಾಟ್ ಮತಕ್ಕೆ ವ್ಯತ್ಯಾಸವಿದ್ದರೆ ವಿವಿಪ್ಯಾಟ್ ಮತಗಳನ್ನೇ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಪಪಡಿಸಿದೆ. ಪ್ರತಿಪಕ್ಷಗಳ ದೂರು ಆಗ್ರಹಿಸಿ ಬುಧವಾರ ಸಭೆ ಸೇರಿಸಿದ ಚುನಾವಣಾ ಆಯುಕ್ತರು, ಸುದೀರ್ಘ ಚರ್ಚೆ ಬಳಿಕ 22 ಪಕ್ಷಗಳ ವಾದ ತಿರಸ್ಕರಿಸಿದ್ದಾರೆ. ಆಯೋಗವು ಪಾರದರ್ಶಕವಾಗಿ ಚುನಾವಣೆ ನಡೆಸಿದೆ, ಈ ಪ್ರಕ್ರಿಯೆ ಕುರಿತು ಅನವಶ್ಯಕ ಗೊಂದಲ ಮೂಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇವಿಎಂ ಪರ ಐಜಿಪಿ ಟ್ವೀಟ್: ಇವಿಎಂ ಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ ಎಂಬ ಐಜಿಪಿ ಡಿ.ರೂಪಾ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇವಿಎಂ ಹ್ಯಾಕ್ ಮಾಡಲು ಆಗುವುದಿಲ್ಲ ಎಂಬುದು ಇಡೀ ದೇಶಕ್ಕೇ ಗೊತ್ತಿರುವ ವಿಚಾರ. ಅಧಿಕಾರಿಗಳು ಚುನಾವಣೆಯಲ್ಲಿ ರಿಟರ್ನಿಂಗ್ ಆಫೀಸರ್/ ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಾರೆ. ಇವಿಎಂಗಳು ಅಧಿಕಾರಿಗಳ ಭದ್ರತೆಯಲ್ಲಿರುತ್ತವೆ. ಹಾಗಾಗಿ ಇವಿಎಂ ಹ್ಯಾಕ್ ಆಗುತ್ತವೆ ಎಂದರೆ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಅಪಮಾನ ಮಾಡಿದಂತೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಯಾವುದೇ ರಾಜಕೀಯ ಉದ್ದೇಶದಿಂದ ಈ ಟ್ವೀಟ್ ಮಾಡಿದ್ದಲ್ಲ, ನನ್ನ ಸ್ನೇಹಿತರು ಹಾಗೂ ಸಾರ್ವಜನಿಕರು ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಎಂದು ಕೇಳಿದ್ದಕ್ಕೆ ಈ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಟ್ವೀಟ್ ಸರಣಿಯಲ್ಲಿ ರೂಪಾ ಸ್ಪಷ್ಟಪಡಿಸಿದ್ದಾರೆ.

ಷಡ್ಯಂತ್ರದಲ್ಲಿ ಸುಪ್ರೀಂ ಭಾಗಿ ಆರೋಪ

ಇವಿಎಂ ಷಡ್ಯಂತ್ರದಲ್ಲಿ ಸುಪ್ರೀಂ ಕೋರ್ಟ್ ಕೂಡ ಭಾಗಿಯಾಗಿದೆಯೇ ಎಂದು ದೆಹಲಿ ಕಾಂಗ್ರೆಸ್ ಅಭ್ಯರ್ಥಿ ಉದಿತ್ ರಾಜ್ ಪ್ರಶ್ನಿಸಿದ್ದಾರೆ. ಎರಡು ತಿಂಗಳು ಚುನಾವಣೆ ನಡೆಸುವರಿಗೆ ಮತ ಎಣಿಕೆಗೆ ಇನ್ನೈದು ದಿನ ವಿಳಂಬವಾದರೆ ಸಮಸ್ಯೆ ಏನು? ಎಲ್ಲ ವಿವಿಪ್ಯಾಟ್​ಗಳಲ್ಲಿನ ಮತ ಎಣಿಕೆ ಆಗಲು ಸುಪ್ರೀಂ ಕೋರ್ಟ್ ಏಕೆ ಒಲವು ತೋರುತ್ತಿಲ್ಲ, ಈ ಷಡ್ಯಂತ್ರದಲ್ಲಿ ಅವರೂ ಭಾಗಿಯಾಗಿದ್ದಾರೆಯೇ? ಎಂದು ಉದಿತ್ ವಿವಾದಿತ ಹೇಳಿಕೆ ನೀಡಿದ್ದಾರೆ.

ನಕಲಿ ವಿಡಿಯೋ, ಎಫ್​ಐಆರ್

ಇವಿಎಂ ಹ್ಯಾಕ್ ಕುರಿತು ಸುಳ್ಳು ಸುದ್ದಿಯ ವಿಡಿಯೋ ಟ್ವೀಟ್ ಮಾಡಿದ್ದ ಆಪ್ ಮುಖಂಡ ಸಂಜಯ್ ಸಿಂಗ್, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಇತರರ ವಿರುದ್ಧ ಸೈಬರ್ ಪೊಲೀಸರಿಗೆ ಚುನಾವಣಾ ಆಯೋಗ ದೂರು ನೀಡಿದೆ. ದೇಶದ 200ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿನ ಇವಿಎಂಗಳನ್ನು ಆಡಳಿತಾರೂಢ ಬಿಜೆಪಿ ಹ್ಯಾಕ್ ಮಾಡಿದೆ ಎಂದು ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂಬ ವಿಡಿಯೋವನ್ನು ಇವರು ಹಂಚಿಕೊಂಡಿದ್ದರು. ಆದರೆ ದುರುದ್ದೇಶಪೂರ್ವಕವಾಗಿ ಈ ರೀತಿಯ ವಿಡಿಯೋ ಸೃಷ್ಟಿಸಿ ವಿದೇಶಿ ಮಾಧ್ಯಮಗಳ ಮೇಲೆ ಜವಾಬ್ದಾರಿ ಹೊರಿಸಲು ಪ್ರತಿಪಕ್ಷ ನಾಯಕರು ಮುಂದಾಗಿರುವುದು ಬಹಿರಂಗವಾಗಿದೆ.

ಇವಿಎಂ ರಕ್ಷಣೆ ಹೇಗೆ?

 • ಚುನಾವಣಾಧಿಕಾರಿ ಹಾಗೂ ಅಭ್ಯರ್ಥಿ ಗಳ ಏಜೆಂಟ್ ಸಮ್ಮುಖದಲ್ಲಿಯೇ ಇವಿಎಂ- ವಿವಿಪ್ಯಾಟ್ ಬಾಕ್ಸ್​ಗಳನ್ನು ಮುಚ್ಚಿಟ್ಟು ಮುದ್ರೆ ಹಾಕಲಾಗುತ್ತದೆ.
 • ಇವಿಎಂ, ವಿವಿಪ್ಯಾಟ್ ಬಾಕ್ಸ್​ಗಳನ್ನು ಸೂಕ್ತ ಭದ್ರತೆಯೊಂದಿಗೆ ಜಿಪಿಎಸ್ ಸೌಲಭ್ಯ ಹೊಂದಿರುವ ಅಧಿಕೃತ ವಾಹನಗಳಲ್ಲಿ ಸಾಗಾಟ ಮಾಡಿ ಸ್ಟ್ರಾಂಗ್ ರೂಮ್ೆ ತರಲಾಗುತ್ತದೆ.
 • ಸ್ಟ್ರಾಂಗ್​ರೂಮ್ೆ ಯಂತ್ರಗಳನ್ನು ತಂದ ಬಳಿಕ ಕೊಠಡಿಯ ಬಾಗಿಲು, ಕಿಟಕಿಗಳನ್ನು ಮುಚ್ಚಿ ಮುದ್ರೆ ಒತ್ತಲಾಗುತ್ತದೆ.
 • ಸ್ಟ್ರಾಂಗ್​ರೂಮ್ೆ 24ಗಿ7 ಭದ್ರತೆ, ಸಿಸಿಟಿವಿ ಕ್ಯಾಮರಾ ಕಣ್ಗಾವಲು ಹಾಗೂ ಚುನಾವಣಾಧಿಕಾರಿ ಹಾಜರಿ ಕಡ್ಡಾಯ.
 • ಮತ ಎಣಿಕೆಗೂ ಮುನ್ನ ಬಾಕ್ಸ್​ಗಳನ್ನು ತೆರೆಯುವಾಗ ಏಜೆಂಟ್​ಗಳ ಜತೆ ಇವಿಎಂಗಳ ಮಾದರಿ ಗುರುತಿನ ಸಂಖ್ಯೆ ಹೊಂದಾಣಿಕೆ ಮಾಡಿ ಖಾತ್ರಿಪಡಿಸಲಾಗುತ್ತದೆ. ಇದಾದ ಬಳಿಕವೇ ಮತ ಎಣಿಕೆ ಆರಂಭವಾಗಲಿದೆ.

ಅಮಿತ್ ಷಾ 6 ಪ್ರಶ್ನೆಗಳು

 • ಇವಿಎಂ ಹ್ಯಾಕ್ ಮೂಲಕವೇ ಅಧಿಕಾರಕ್ಕೆ ಬರುವುದಾದರೆ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಛತ್ತೀಸ್​ಗಢ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಂಡು ಅಧಿಕಾರ ನಡೆಸಿದ್ದೇಕೆ?
 • ಸುಪ್ರೀಂ ಕೋರ್ಟ್ ಆದೇಶದ ಬಳಿಕ 5 ವಿವಿಪ್ಯಾಟ್​ಗಳಲ್ಲಿನ ಮತ ಎಣಿಕೆಗೆ ಸಮ್ಮತಿಸ ಲಾಗಿದೆ, ಕೋರ್ಟ್ ಮೇಲೂ ನಂಬಿಕೆ ಇಲ್ಲವೇ?
 • ಆಯೋಗವು ಯಾವುದೇ ನಿರ್ಣಯವನ್ನು ಏಕಪಕ್ಷೀಯವಾಗಿ ಮಾಡುವುದಿಲ್ಲ, ಚುನಾವಣೆಯ ಕೊನೆಯ ಹಂತದಲ್ಲಿ ಇಂತಹ ಬೇಡಿಕೆಗಳು ಏಕೆ?
 • ಆರು ಹಂತದ ಚುನಾವಣೆ ಬಳಿಕ ಇವಿಎಂ ಬಗ್ಗೆ ಭಯ ಆರಂಭವಾಗಿದ್ದೇಕೆ. ಅದರಲ್ಲೂ ಮತದಾನೋತ್ತರ ಸಮೀಕ್ಷೆ ಯಲ್ಲಿ ಸೋಲು ಖಾತ್ರಿಯಾದ ಬಳಿಕ ಕೂಗು ಹೆಚ್ಚಾಗಿದ್ದೇಕೆ?
 • ಚುನಾವಣಾ ಆಯೋಗ ಹ್ಯಾಕಥಾನ್​ಗೆ ಆಹ್ವಾನ ನೀಡಿದಾಗ ಪ್ರತಿಪಕ್ಷಗಳು ಸುಮ್ಮನಿದ್ದಿದ್ದೇಕೆ?
 • ಸೋಲಿನ ಭಯದಲ್ಲಿ ಹಿಂಸಾಚಾರದ ಮಾತುಗಳು ಪ್ರತಿಪಕ್ಷಗಳ ನಾಯಕರಿಂದ ಕೇಳಿಬರುತ್ತಿದೆ. ಇದು ಲೋಕತಂತ್ರ ವ್ಯವಸ್ಥೆಯನ್ನು ಪ್ರತಿಪಕ್ಷಗಳು ಗೌರವಿಸುವ ರೀತಿಯೇ?

ಸೋಲಿನ ಭಯದಿಂದ ಇವಿಎಂ ಬಗ್ಗೆ ಪ್ರತಿಪಕ್ಷಗಳು ಮಾತನಾಡುತ್ತಿವೆ. ಇತ್ತೀಚೆಗೆ ನಡೆದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಚುನಾವಣೆಗಳಲ್ಲಿ ಇವಿಎಂಗಳ ಬಗ್ಗೆ ಏಕೆ ಮಾತನಾಡಿಲ್ಲ? ಜನರನ್ನು ಗೊಂದಲಕ್ಕೀಡು ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಬಿಜೆಪಿ. ಆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್ ಈ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ಆ ಅನುಮಾನವನ್ನು ಬೆಂಬಲಿಸಿ ಎಲ್.ಕೆ.ಆಡ್ವಾಣಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ‘ಇವಿಎಂ’ ಬಗ್ಗೆ ಈ ಹತ್ತು ವರ್ಷಗಳಲ್ಲಿ ಬಿಜೆಪಿಯ ಬದಲಾದ ನಿಲುವಿಗೆ ಕಾರಣವೇನು? ಬಿಜೆಪಿಯವರು ಎಲ್ಲ ರಾಜ್ಯಗಳಲ್ಲೂ ಚುನಾವಣಾ ಅಕ್ರಮ ಮಾಡುವುದಿಲ್ಲ.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...