18 C
Bangalore
Friday, December 6, 2019

ಸರ್ಕಾರ ಉಳಿಸಲು ಕಾಂಗ್ರೆಸ್ ಕಸರತ್ತು

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಬೆಂಗಳೂರು: ಲೋಕ ಸಮರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮೈತ್ರಿ ಸರ್ಕಾರಕ್ಕೆ ಆಪತ್ತು ಎದುರಾಗಲಿದೆ ಎಂಬ ಆತಂಕ ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿ ಮನೆ ಮಾಡಿರುವ ನಡುವೆ, ಬಿಕ್ಕಟ್ಟು ಎದುರಿಸಲು ಕೈ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಂಗಳವಾರ ಮಹತ್ವದ ಸಭೆ ನಡೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಸತಿಗೃಹಕ್ಕೆ ಆಗಮಿಸಿದ ವೇಣುಗೋಪಾಲ್, ಪಕ್ಷದ ಇತರ ನಾಯಕರನ್ನು ಅಲ್ಲಿಗೆ ಆಹ್ವಾನಿಸಿದರು. ವಿದೇಶ ಪ್ರವಾಸದಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರೊಂದಿಗೆ ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಬಳಿಕ ಖಾಸಗಿ ಹೋಟೆಲ್​ಗೆ ತೆರಳಿದ ಕಾಂಗ್ರೆಸ್ ನಾಯಕರು, ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆ ವಿಚಾರ ವಿನಿಮಯ ಮಾಡಿಕೊಂಡರು.

ಕಳೆದ ವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ರ್ಚಚಿಸಿದ ರಾಜ್ಯ ಕಾಂಗ್ರೆಸ್ ನಾಯಕರು, ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಅಭಿಪ್ರಾಯ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಮಂಗಳವಾರ ಸಭೆ ನಡೆಯಿತು. ಎಕ್ಸಿಟ್ ಪೋಲ್​ಗಳು, ಜೆಡಿಎಸ್ ನಾಯಕರ ಹೇಳಿಕೆಗಳು, ರೋಷನ್ ಬೇಗ್ ಮಾತುಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತೆನ್ನಲಾಗಿದೆ. ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಹೈಕಮಾಂಡ್ ಒಲವು ವ್ಯಕ್ತಪಡಿಸಿದ್ದು, ಎಷ್ಟೇ ಸವಾಲು ಎದುರಾದರೂ ಪ್ರಯತ್ನ ಈ ದಿಕ್ಕಿನಲ್ಲಿ ಇರಬೇಕೆಂಬುದು ಪಕ್ಷದ ತೀರ್ಮಾನ ಎನ್ನಲಾಗಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಜತೆಗೆ ಗುರುತಿಸಿಕೊಂಡಿರುವ ಶಾಸಕರೊಂದಿಗೆ ಮಾತುಕತೆ ನಡೆಸಿ ಭವಿಷ್ಯದ ರಾಜಕೀಯದ ಬಗ್ಗೆ ಮನವರಿಕೆ ಮಾಡಿಕೊಡಲು ತೀರ್ಮಾನ ಮಾಡಲಾಯಿತೆಂದು ತಿಳಿದುಬಂದಿದೆ.

ಪದವೀಧರ ಕ್ಷೇತ್ರ ಗೆಲ್ಲುವ ಗುರಿ

ಬೆಂಗಳೂರು: ವಿಧಾನಪರಿಷತ್​ನ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಈಗಿನಿಂದಲೇ ಶ್ರಮ ಹಾಕಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ಶಿಕ್ಷಕರು ಹಾಗೂ ಪದವೀಧರರ ಘಟಕಕ್ಕೆ ಸಲಹೆ ನೀಡಿದ್ದಾರೆ. ಘಟಕದ ನೂತನ ಅಧ್ಯಕ್ಷ ಡಾ.ಆರ್.ಎಂ.ಕುಬೇರಪ್ಪ ಜವಾಬ್ದಾರಿ ಸ್ವೀಕಾರ ಹಾಗೂ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ, ಅಭ್ಯರ್ಥಿ ತಡವಾಗಿ ಘೋಷಿಸುವುದರಿಂದ ಮತ್ತು ವಿವಿಧ ಕಾರಣಗಳಿಂದ ಆ ಕ್ಷೇತ್ರಗಳಲ್ಲಿ ಹಿನ್ನೆಡೆಯಾಗಿದೆ. ಮುಂದೆ ಈ ರೀತಿ ಆಗಬಾರದು. ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ ರಾಜ್ಯ ಪ್ರವಾಸ ಮಾಡಿ ಸೂಕ್ತ ತಯಾರಿ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ನೂತನ ಅಧ್ಯಕ್ಷರಿಗೆ ಸೂಚಿಸಿದರು. ಮುಂದಿನ ಚುನಾವಣೆಗಳಲ್ಲಿ ಕನಿಷ್ಠ 6 ಕ್ಷೇತ್ರವಾದರೂ ಕಾಂಗ್ರೆಸ್ ಪಾಲಾಗಬೇಕು. ಹೀಗಾಗಿ ಎಲ್ಲರೂ ಸೇರಿ ಶ್ರಮಿಸಬೇಕೆಂದರು.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...