ಗುರುಮಠಕಲ್ ಜನರ ಆಶೀರ್ವಾದ ನನ್ನ ಮೇಲಿದೆ

ಗುರುಮಠಕಲ್: ನಾನು ಚಿಂಚೋಳಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದರಿಂದಲೇ ಅಲ್ಲಿಯ ಜನ ಎರಡು ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ್ದು, ಈ ಬಾರಿ ಗುರುಮಠಕಲ್ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಬಿಜೆಪಿಯ ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಾಸಕ ಡಾ. ಉಮೇಶ ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದ ಅವರು, ವಿಧಾನಸಭೆಗೆ ನೀಡಿರುವ ರಾಜೀನಾಮೆ ಅಂಗೀಕಾರದ ಬಗ್ಗೆ ಹಲವು ಕಾನೂನು ತಜ್ಞರ ಜತೆಯಲ್ಲಿ ಚರ್ಚಿಸಲಾಗಿದೆ. ಇದರಿಂದ ಲೋಕಸಭೆ ಚುನಾವಣೆ ಸ್ಪಧರ್ೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ ಅವರು, ಸ್ಪಿಕರ್ ರಮೇಶಕುಮಾರ ನ್ಯಾಯಯುತವಾಗಿ ನಡೆದುಕೊಂಡು ನನ್ನ ರಾಜೀನಾಮೆ ಅಂಗೀಕರುಸುತ್ತಾರೆ. ಏ.2 ರಂದು ನಾಮಪತ್ರ ಸಲ್ಲಿಸುತ್ತೆದ್ದೇನೆ ಎಂದು ಮಾಹಿತಿ ನೀಡಿದರು.

ಹೈಕ ಭಾಗದ ಪ್ರಮುಖ ಮುಖಂಡರಾದ ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ್, ಡಾ.ಎ.ಬಿ.ಮಾಲಕ ರೆಡ್ಡಿ, ವೈಜನಾಥ ಪಾಟೀಲ್, ಬಾಬುರಾವ ಚವ್ಹಾಣ್, ಮಾಲಿಕಯ್ಯ ಗುತ್ತೇದಾರ್ ಸೇರಿ ಘಟಾನುಘಟಿ ರಾಜಿಕಾರಣಿಗಲೇ ಕಾಂಗ್ರೇಸ್ ಬಿಟ್ಟಿದ್ದಾರೆ. ಈಗ ಕಲಬುರಗಿ ಕಾಂಗ್ರೆಸ್ನ ಭದ್ರಕೋಟೆಯಾಗಿ ಉಳಿದಿಲ್ಲ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಶರಣುಗೌಡ ಬಾಡಿಯಾಲ, ನರಸಿಂಹಲು ನಿರೇಟಿ, ಕೆ.ದೇವದಾಸ್, ಚಂದುಲಾಲ್ ಚೌಧರಿ, ವೆಂಕಟಪ್ಪ ಅವಂಗಪುರ್, ರಾಜೇಂದ್ರ ಕಲಾಲ, ಸುರೇಶ ರಾಥೋಡ, ರಾಮೇಶ್ ಪವಾರ, ಉದಯ ಸಿಂಗ್ ಇತರರಿದ್ದರು.

Leave a Reply

Your email address will not be published. Required fields are marked *