ಮತಭಾರತ ಸಮಾರೋಪ: ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ ವಿಜಯವಾಣಿ.ನೆಟ್, ದಿಗ್ವಿಜಯ ನ್ಯೂಸ್​ನಲ್ಲಿ

ಬೆಂಗಳೂರು: ಇಡೀ ರಾಷ್ಟ್ರವನ್ನು ತುದಿಗಾಲಲ್ಲಿ ನಿಲ್ಲಿಸಿರುವ ಆ ಕ್ಷಣ ಇನ್ನು ಕೆಲ ನಿಮಿಷಗಳಲ್ಲಿ ತೆರೆದುಕೊಳ್ಳಲಿದೆ. ಲೋಕಸಭಾ ಚುನಾವಣೆಯ ಕದನ ಕಲಿಗಳ ಭವಿಷ್ಯವನ್ನು ಮತಯಂತ್ರವೆಂಬ ಮಾಯಾಪೆಟ್ಟಿಗೆಯಿಂದ ಹೊರತೆಗೆದು ಅನಾವರಣಗೊಳಿಸಲಾಗುವುದು. ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಮತ ಎಣಿಕೆ ಮಧ್ಯಾಹ್ನದ ವೇಳೆಗೆ ಯಾವ ಮೈತ್ರಿಕೂಟಕ್ಕೆ ಮುನ್ನಡೆ, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿದೆ. ಮತ ಎಣಿಕೆಯ ಆ ರೋಮಾಂಚಕ ಕ್ಷಣಗಳ ಕ್ಷಣಕ್ಷಣದ ಮಾಹಿತಿಯನ್ನು ನಿಮ್ಮ ವಿಜಯವಾಣಿ.ನೆಟ್ ಹಾಗೂ ದಿಗ್ವಿಜಯ ನ್ಯೂಸ್ ಉಣಬಡಿಸಲಿದೆ.

ಏಪ್ರಿಲ್​ 11 ರಂದು ಆರಂಭವಾಗಿ ಏಳು ಹಂತಗಳಲ್ಲಿ ರಾಷ್ಟ್ರಾದ್ಯಂತ ಸುದೀರ್ಘವಾಗಿ ನಡೆದ ಲೋಕಸಭಾ ಚುನಾವಣೆಗೆ ಮೇ19ರ ಭಾನುವಾರದಂದು ತೆರೆಬಿದ್ದಿದ್ದು, ಈಗಾಗಲೇ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮತ್ತೊಮ್ಮೆ ಗದ್ದುಗೆ ಏರಲಿದೆ ಎಂದು ಅಂದಾಜಿಸಿವೆ. ಆದರೆ, ಅಸಲಿ ಫಲಿತಾಂಶ ಇಂದು ಹೊಳಬೀಳಲಿದ್ದು, ಇವಿಎಂನಲ್ಲಿ ಭದ್ರವಾಗಿರುವ ಘಟಾನುಘಟಿ ನಾಯಕರ ಭವಿಷ್ಯ ಹೊರಬರಲಿದೆ. ಇಡೀ ದಿನ ನಡೆಯುವ ಮತಎಣಿಕೆಯ ಸಂಪೂರ್ಣ ಚಿತ್ರಣವನ್ನು ವಿಜಯವಾಣಿ ವೆಬ್​ಸೈಟ್ (www.vijayavani.net) ಹಾಗೂ ದಿಗ್ವಿಜಯ ನ್ಯೂಸ್​ 24×7 ನಿಮ್ಮ ಮುಂದೆ ಇಡಲಿದೆ.

ಯಾವ ಪಕ್ಷ ಬಹುಮತ ಸಾಧಿಸಲಿದೆ? ಯಾರು ಪ್ರಧಾನಿ ಪಟ್ಟಕ್ಕೇರುತ್ತಾರೆ? ವಿವಿಧ ಪಕ್ಷಗಳು ಗಳಿಸುವ ಸ್ಥಾನಗಳು ಎಷ್ಟು? ಗೆಲುವು ಸಾಧಿಸುವ ಘಟಾನುಘಟಿ ನಾಯಕರು ಯಾರು? ಸೋತು ಮನೆಗೆ ಹೋಗುವ ಪ್ರಮುಖ ನಾಯಕರು ಯಾರು? ಅಭ್ಯರ್ಥಿಗಳ ಗೆಲುವಿನ ಅಂತರ ಎಷ್ಟಿದೆ? ಗೆಲವು ಸಾಧಿಸಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ವಿಜಯೋತ್ಸವ ಹೇಗಿರುತ್ತದೆ? ಗೆಲುವು-ಸೋಲಿನ ಬಗ್ಗೆ ವಿವಿಧ ಪಕ್ಷದ ರಾಜಕೀಯ ನಾಯಕರು ಆಡುವ ಮಾತೇನು? ಮತ ಎಣಿಕೆ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆಯೇ ಗರಿಗೆದರುವ ರಾಜಕೀಯ ಚಟುವಟಿಕೆ ಹೇಗಿರುತ್ತದೆ? ಹೀಗೆ ಮುಂತಾದ ಕ್ಷಣ ಕ್ಷಣದ ರೋಚಕ ಮಾಹಿತಿಯನ್ನು ನಿಮ್ಮ ಅಂಗೈಯಲ್ಲಿ ತೋರಿಸಲಾಗುವುದು.

ದಿಗ್ವಿಜಯ ನ್ಯೂಸ್​ನಲ್ಲಿ ಫಲಿತಾಂಶದ ವಿವರಣೆ ಜತೆಗೆ ಪರಿಣಿತರಿಂದ ವಿಶ್ಲೇಷಣೆ
3D ತಂತ್ರಜ್ಞಾನವುಳ್ಳ ಕನ್ನಡದ ಏಕೈಕ ನ್ಯೂಸ್​ ಚಾನೆಲ್​ ದಿಗ್ವಿಜಯ ನ್ಯೂಸ್​ 24×7 ನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಸಂಪೂರ್ಣ ಚಿತ್ರಣ ದೊರೆಯಲಿದ್ದು, ಅತಿವೇಗವಾಗಿ ಇತರೆ ಎಲ್ಲ ಚಾನಲ್​ಗಳಿಗಿಂತ ವೇಗವಾಗಿ ಫಲಿತಾಂಶದ ಅಪ್​ಡೇಟ್​ ಸಿಗಲಿದೆ. ಅಲ್ಲದೆ, ಫಲಿತಾಂಶದ ಜತೆಯಲ್ಲಿಯೇ ರಾಜಕೀಯ ಪಂಡಿತರಿಂದ ಫಲಿತಾಂಶದ ವಿಶ್ಲೇಷಣೆಯು ಲಭ್ಯವಾಗಲಿದ್ದು, ಮತಎಣಿಕೆ ಮುಗಿದು ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಗರಿಗೆದರುವ ರಾಜಕೀಯ ಚಟುವಟಿಕೆಗಳ ಮುನ್ನೋಟವನ್ನು ನೀಡಲಾಗುವುದು. ಅಲ್ಲದೆ, ಚುನಾವಣಾ ಅಖಾಡದಲ್ಲಿರುವ ನಾಯಕರ ಗೆಲುವು-ಸೋಲಿನ ಹಿಂದಿನ ಕಾರಣವೇನು ಎಂಬುದನ್ನು ಪರಿಣತರು ವಿಶ್ಲೇಷಣೆ ಮೂಲಕ ಉತ್ತರ ನೀಡಲಿದ್ದಾರೆ.

ಫಾಲೋ ಮಾಡಬೇಕಾದ ನಮ್ಮ ಜಾಲತಾಣ, ಸೋಷಿಯಲ್ ಮೀಡಿಯಾ ವಿಳಾಸಗಳು
1. www.vijayavani.net
2. www.dighvijaytv.com
3. www.facebook.com/VVani4U/
4. https://twitter.com/VVani4U
5. https://www.facebook.com/Dighvijay24X7
6. https://twitter.com/DighvijayNews24

Leave a Reply

Your email address will not be published. Required fields are marked *