ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಡ್ಡದ ಕುರಿತು ಮಾತನಾಡಿದ ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಅವರು ಹೇರ್‌ಸ್ಟೈಲ್ ಕುರಿತು ಮಾತನಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳಿಗೆ ತೃಪ್ತಿ ಪಡುವುದು ನಿಶ್ಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭವಿಷ್ಯ ನುಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ತಲೆಕೂದಲಿನ ಬಗ್ಗೆ ಮಾತನಾಡುವ ಬಿಜೆಪಿಯವರು ಮಾಜಿ ರಾಷ್ಟಪತಿ ಎಪಿಜೆ ಅಬ್ದುಲ್ ಕಲಾಂ ಹೇರ್‌ಸ್ಟೈಲ್ ಕುರಿತು ಮಾತನಾಡುವರೇ? ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಡ್ಡ ಬಿಟ್ಟಿದ್ದರು. ಆ ಬಗ್ಗೆ ವಿಜೆಪಿಯವರು ಏನಾದರು ಟೀಕೆ ಮಾಡಿದ್ದರಾ? ನನ್ನ ಕೂದಲು ಚೆನ್ನಾಗಿದೆ, ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬದ್ಧಿ ಇಲ್ಲ ಎಂದುತಿರುಗೇಟು ನೀಡಿದರು. ಯಾವುದೇ ಸಮುದಾಯವನ್ನು ನೋಯಿಸುವ ರೀತಿಯಲ್ಲಿ ನಾನು ಹೇಳಿಕೆ ನೀಡಿಲ್ಲ. ಯಾರನ್ನೂ ನೋಯಿ ಸುವ ಉದ್ದೇಶ ಹೊಂದಿಲ್ಲ. ಬಹುಶಃ ಸವಿತಾ ಸಮಾಜದವರನ್ನು ಯಾರೋ ಮಿಸ್‌ಲೀಡ್ ಮಾಡಿರಬಹುದು ಎಂದರು.