ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರತಿಬಂಧಕಾಜ್ಞೆ ಜಾರಿ

ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಏ.23ರಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಆರ್.ವಿಶಾಲ ಅವರು ಸಿಆರ್‌ಪಿಸಿ ಕಲಂ 144ರ ಅಡಿಯಲ್ಲಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ.

ಈ ಆದೇಶದ ಪ್ರಕಾರ ಬೆಳಗಾವಿ ಜಿಲ್ಲಾದ್ಯಂತ ಏ.21ರಂದು ಸಾಯಂಕಾಲ 6 ಗಂಟೆಯಿಂದ ಏ.23 ಸಾಯಂಕಾಲ 6ಗಂಟೆ ವರೆಗೆ ಯಾವುದೇ ರೀತಿಯಾದ ಸಭೆಗಳು, ರ‌್ಯಾಲಿಗಳು, ಮೆರವಣಿಗೆಗಳನ್ನು ನಡೆಸುವಂತಿಲ್ಲ. ಅದೇ ರೀತಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಂದರೆ ಮತದಾನದ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡಿರುವ ಸರ್ಕಾರಿ ನೌಕರರು ಹಾಗೂ ಮತಗಟ್ಟೆಯಲ್ಲಿ ಮತದಾನ ಮಾಡಲು ನಿಂತಿರುವ ಮಾತದಾರರನ್ನು ಹೊರತುಪಡಿಸಿ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಜಿಲ್ಲಾ ದಂಡಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.