ಮಾಜಿ ಸಿಎಂ ಎಸ್.​ಎಂ.ಕೃಷ್ಣ ಮನೆಗೆ ಭೇಟಿ ನೀಡಿ ಬಿಎಸ್​ವೈ ಚರ್ಚಿಸಿದ್ದೇನು?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರ ಸೂಚನೆಯಂತೆ ಸದಾಶಿವನಗರದಲ್ಲಿರುವ ಎಸ್​.ಎಂ.ಕೃಷ್ಣ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಬಿಎಸ್​ವೈ ಚರ್ಚಿಸಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕೃಷ್ಣರಿಗೆ ಬಿಎಸ್​ವೈ ಮನವಿ ‌ಮಾಡಿದ್ದು, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಎಸ್​ಎಂಕೆ ಸಮ್ಮತಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​ಎಂಕೆ ತಾವಾಗಲಿ ತಮ್ಮ ಮಗಳು ಶಾಂಭವಿಯಾಗಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ಪರ ಪ್ರಚಾರಕ್ಕೆ ಸೀಮಿತರಾಗುವುದಾಗಿ ಸ್ಪಷ್ಟನೆ ನೀಡಿದರು.

ರೈತರ ಸಾಲಮನ್ನಾ ಮಾಡುವುದಾದರೆ ವೈಜ್ಞಾನಿಕವಾಗಿ ಮಾಡಬೇಕು. ಸಹಕಾರ ಬ್ಯಾಂಕ್​ಗಳಲ್ಲಿ ಕೇವಲ ಬುಕ್ ಅಡ್ಜೆಸ್ಟ್​ಮೆಂಟ್ ಮಾಡುವುದರಿಂದ ರೈತರಿಗೆ ಯಾವುದೇ ಲಾಭವಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದರು. (ದಿಗ್ವಿಜಯ ನ್ಯೂಸ್​)