ಲೋಕಸಭೆ ಚುನಾವಣೆ, ಕುಂದಗೋಳ-ಚಿಂಚೋಳಿ ಉಪಚುನಾವಣೆ ಮತದಾನದ ಕ್ಷಣ ಕ್ಷಣದ ಮಾಹಿತಿ ನಿಮ್ಮ ವಿಜಯವಾಣಿ ವೆಬ್​ಸೈಟ್​ನಲ್ಲಿ

ನವದೆಹಲಿ: ಲೋಕಸಭೆ ಚುನಾವಣೆಯ 7ನೇ ಹಂತದಲ್ಲಿ 8 ರಾಜ್ಯಗಳ 59 ಕ್ಷೇತ್ರಗಳಿಗೆ ಹಾಗೂ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಇಂದು(ಭಾನುವಾರ) 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಮತದಾನದ ಸಂಪೂರ್ಣ ಚಿತ್ರಣವನ್ನು ವಿಜಯವಾಣಿ ಇಡೀ ದಿನ ನಿಮ್ಮ ಮುಂದೆ ಹೊತ್ತು ತರಲಿದ್ದು, ಕ್ಷಣ ಕ್ಷಣದ ಮಾಹಿತಿಗಾಗಿ www.vijayavani.net ಅನ್ನು ಫಾಲೋ ಮಾಡಿ.

7ನೇ ಹಂತದ ಮತೋತ್ಸವದಲ್ಲಿ ಬಿಹಾರ, ಜಾರ್ಖಂಡ್​, ಮಧ್ಯಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ಚಂಡೀಗಢ, ಉತ್ತರ ಪ್ರದೇಶ, ಹಿಮಾಚಲಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. 7ನೇ ಹಂತದ ಮತದಾನದಲ್ಲಿ ಒಟ್ಟು 10.17 ಕೋಟಿ ಮತದಾರರು 918 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ನಿರ್ಣಾಯಕವೆಂದೇ ಗುರುತಿಸಲಾಗಿರುವ ಪ್ರಮುಖ ಕ್ಷೇತ್ರಗಳಿಗೂ 7ನೇ ಹಂತದಲ್ಲಿ ಮತದಾನ ನಡೆಯುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಅಂತಿಮ ಚರಣದ ಮತದಾನದ ಬಳಿಕ ಫಲಿತಾಂಶಕ್ಕೆ ನಾಲ್ಕು ದಿನವಷ್ಟೇ ಬಾಕಿ ಉಳಿದಿರುವುದರಿಂದ ಎಲ್ಲರ ಚಿತ್ತ ಮೇ 23ರತ್ತ ನೆಟ್ಟಿದೆ.

Leave a Reply

Your email address will not be published. Required fields are marked *