ಲೋಕಸಭಾ ಚುನಾವಣೆ ಬಗ್ಗೆ ಪಾಕ್‌ ಮಾಧ್ಯಮಗಳಿಂದ ಲೈವ್‌: ಹೇಗಿದೆ ಪಾಕ್‌ನಲ್ಲಿ ಮೋದಿ ಟ್ರೆಂಡ್‌?

ನವದೆಹಲಿ: 17ನೇ ಲೋಕಸಭಾ ಚುನಾವಣೆಯು ದೇಶದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದರೆ, ಪಾಕ್‌ ನೆಲದಲ್ಲೂ ತಲ್ಲಣ ಸೃಷ್ಟಿಸಿದೆ. ಭಾರತದಲ್ಲಿ ಮತ್ತೆ ಮೋದಿ ಬಂದರೆ ಎನ್ನುವ ಭಯ ಈಗಾಗಲೇ ಮೂಡಿದೆ.

ಹೌದು, ಪಾಕಿಸ್ತಾನದ ಮಾಧ್ಯಮಗಳಲ್ಲೂ ಕೂಡ ಲೋಕಸಭಾ ಚುನಾವಣೆಯ ಫಲಿತಾಂಶ ಬಿತ್ತರವಾಗುತ್ತಿದ್ದು, ಹಲವಾರು ಮಾಧ್ಯಮಗಳು ಭಾರತದ ಆಗುಹೋಗುಗಳ ಕುರಿತು ಲೈವ್‌ ಕವರೇಜ್‌ ಮಾಡುತ್ತಿವೆ.

ಇದರೊಂದಿಗೆ ಮತದಾನೋತ್ತರ ಸಮೀಕ್ಷೆ ದಿನ ಭಾರತಕ್ಕಿಂತ ಪಾಕಿಸ್ತಾನಿಯರು ಗೂಗಲ್​ನಲ್ಲಿ ಮೋದಿಯನ್ನು ಹೆಚ್ಚಾಗಿ ‘ಸರ್ಚ್’ ಮಾಡಿದ್ದಾರೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ ‘ಮೋದಿ’ ಯನ್ನು ಹೆಚ್ಚು ಹುಡುಕಾಡಿದ್ದಾರೆ ಎಂದು ಗೂಗಲ್ ಟ್ರೆಂಡ್ ತಿಳಿಸಿದೆ.

ರಾಷ್ಟ್ರೀಯ ಚುನಾವಣೆಯ ಫಲಿತಾಂಶವನ್ನು ಭಾರತ ನಿರೀಕ್ಷಿಸುತ್ತಿದೆ. ಮತ ಎಣಿಕೆ ಪ್ರಗತಿಯಲ್ಲಿದೆ ಎಂಬ ಬರಹದ ಮೂಲಕ ಪಾಕ್‌ ಮಾಧ್ಯಮ ಡಾನ್‌, ಜಿಯೋ ನ್ಯೂಸ್‌ ಸೇರಿದಂತೆ ಹಲವು ಮಾಧ್ಯಮಗಳು ಲೋಕಸಭಾ ಚುನಾವಣೆಯ ಫಳಿತಾಂಶದ ಕುರಿತು ಲೈವ್‌ ಕವರೇಜ್‌ಗೆ ಆದ್ಯತೆ ನೀಡಿವೆ. (ಏಜೆನ್ಸೀಸ್)

Leave a Reply

Your email address will not be published. Required fields are marked *