20 C
Bangalore
Saturday, December 7, 2019

ರಣರೋಚಕ ಮೋದಿ-ದೀದಿ ಕಾಳಗ

Latest News

ಈರುಳ್ಳಿ ಕದಿಯಲು ಅಪಘಾತ ಡ್ರಾಮಾ!

ಶಿರಾ: ಕ್ಯಾಂಟರ್ ಅಪಘಾತವಾದಂತೆ ಸೃಷ್ಟಿಸಿ ಈರುಳ್ಳಿ ಕದಿಯಲು ಯತ್ನಿಸಿದ್ದ ಚಾಲಕ ಸೇರಿ ಐವರನ್ನು ತಾವರೆಕೆರೆ ಪೊಲೀಸರು ಶನಿವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಚಳ್ಳಕೆರೆಯ...

ದೇಹ ಸದೃಢತೆಗೆ ಕ್ರೀಡೆಗಳು ಅವಶ್ಯ

ರೋಣ: ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಪ್ರಗತಿಪರ ರೈತ ನೀಲಪ್ಪ ತಳಬಟ್ಟಿ ಹೇಳಿದರು. ಕರ್ನಾಟಕ...

ಟಿ20 ಇತಿಹಾಸದಲ್ಲಿ ಮಾಲ್ಡೀವ್ಸ್​ ತಂಡದ ವಿನೂತನ ದಾಖಲೆ: 8 ರನ್​ಗೆ ಆಲೌಟ್​, 9 ಡಕೌಟ್, ಇತರೆ 7 ರನ್​!​

ಕಾಠ್ಮಂಡು: ನೇಪಾಳದಲ್ಲಿ ಕಾಠ್ಮಂಡುವಿನಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್​ ಗೇಮ್ಸ್​ನಲ್ಲಿ ಮಾಲ್ಡೀವ್ಸ್​ನ ಮಹಿಳಾ ಕ್ರಿಕೆಟ್​ ತಂಡವು ನೇಪಾಳ ಮಹಿಳಾ ಕ್ರಿಕೆಟ್​ ತಂಡದ ಎದುರು...

ಮಹಿಳೆಯರಿಗೆ ಉಚಿತ ಸವಾರಿ

ಗದಗ: ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗಲು ಭಯ. ಒಬ್ಬಳೇ ಹೇಗೆ ಹೋಗಬೇಕು? ಆಟೋದಲ್ಲಿ ಹೋದರೆ ಹೇಗೋ ಏನೋ?ಎಂದು ಆತಂಕದಲ್ಲೇ ತೊಳಲಾಡುತ್ತಿರುವ ಮಹಿಳೆಯರ...

ಒಳಚರಂಡಿ ಸಂಸ್ಕರಣೆ ಘಟಕ ಉದ್ಘಾಟನೆ ನಾಳೆ

ರೋಣ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ತಾಲೂಕು ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಒಳಚರಂಡಿ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆ...

| ಕೆ. ರಾಘವ ಶರ್ಮ ನವದೆಹಲಿ

‘ಪಶ್ಚಿಮ ಬಂಗಾಳದ ರಾಜಕಾರಣಿಗಳಲ್ಲಿ ಯಾರಿಗಾದರೂ ಪ್ರಧಾನಿ ಆಗುವ ಅವಕಾಶ ಇದೆ ಎಂದರೆ ಅದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮಾತ್ರ’ ಎಂದು ಇತ್ತೀಚೆಗೆ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೊಷ್ ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿಯಲ್ಲಿದ್ದುಕೊಂಡು ಹೀಗೇಕೆ ಹೇಳಿದರು ಎಂಬ ಪ್ರಶ್ನೆಗಳೆದುರಾದಾಗ ‘ಅಂದು ಎಡಪಕ್ಷಗಳ ನಾಯಕ ಜ್ಯೋತಿ ಬಸುಗೆ ಪ್ರಧಾನಿ ಆಗಲು ಎಡಪಕ್ಷಗಳೇ ಬಿಡಲಿಲ್ಲ ಮತ್ತು ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾದರೂ ಪ್ರಧಾನಿ ಹುದ್ದೆಗೇರಲು ಕಾಂಗ್ರೆಸ್ ಬಿಡಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಅದೇನೇ ಇರಲಿ, ಮಮತಾ ಬ್ಯಾನರ್ಜಿ ಪ್ರಧಾನಿಯಾಗುವ ಕನಸು ಕಾಣುತ್ತಿರುವುದಂತೂ ನಿಜ.

‘ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆಯಬಲ್ಲ ಆಕ್ರಮಣಕಾರಿ ವಿಪಕ್ಷ ನಾಯಕಿ ನಾನೇ’ ಎಂಬಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಆದರೆ ಮಮತಾಗೆ ಪಶ್ಚಿಮ ಬಂಗಾಳ ಹೊರತುಪಡಿಸಿದ ರಾಜ್ಯಗಳಲ್ಲಿ ಜನಪ್ರಿಯತೆ ಇಲ್ಲ.

ಭಾರತ ರತ್ನದ ಪ್ರಭಾವ?: ಕಳೆದ ತಿಂಗಳು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಭಾರತ ರತ್ನ ಪುರಸ್ಕಾರವನ್ನು ಎನ್​ಡಿಎ ಸರ್ಕಾರ ಘೋಷಿಸಿತು. ಆರ್ಥಿಕ ತಜ್ಞ, ಮುತ್ಸದ್ದಿ ರಾಜಕಾರಣಿ ಪ್ರಣಬ್ ಪಶ್ಚಿಮ ಬಂಗಾಳದ ಹೆಮ್ಮೆಯ ಪುತ್ರ ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ಸಾಧನೆ ಗುರುತಿಸಿ ಗೌರವಿಸಿರುವ ನಡೆ ಒಂದಿಷ್ಟು ಮತಗಳನ್ನೂ ತರಬಲ್ಲದು ಎಂಬ ನಿರೀಕ್ಷೆ ಬಿಜೆಪಿ ನಾಯಕರದ್ದು.

ಕುಸಿದ ಎಡ ಸಾಮ್ರಾಜ್ಯ

1991ರ ಲೋಕಸಭೆ ಚುನಾವಣೆಯಲ್ಲಿ ಶೇ.11ರಷ್ಟು ಮತ ಗಳಿಸಿದ್ದ ಬಿಜೆಪಿ 2014ರಲ್ಲಿ ಶೇ.16.80ರಷ್ಟು ಮತ ಪಡೆದು ಇತಿಹಾಸ ಸೃಷ್ಟಿಸಿತು. 1998ರಲ್ಲಿ ಸ್ಥಾಪನೆಗೊಂಡ ಟಿಎಂಸಿ ಅತ್ಯಧಿಕ 34 ಸೀಟುಗಳನ್ನು ಗೆದ್ದುಕೊಂಡು, ದಶಕಗಳಿಂದ ಕಟ್ಟಿಕೊಂಡಿದ್ದ ಎಡಪಕ್ಷಗಳ ರಾಜಕೀಯ ಸಾಮ್ರಾಜ್ಯವನ್ನೇ ಉರುಳಿಸಿತು. 2019ರಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ಮಧ್ಯೆ ಸೀಟು ಹಂಚಿಕೆ ಬಿಕ್ಕಟ್ಟಿದ್ದರೂ ಮೈತ್ರಿ ಬಹುತೇಕ ಖಚಿತ. ಟಿಎಂಸಿಯದ್ದಂತೂ ಏಕಾಂಗಿ ಹೋರಾಟ.

ಮತ ಸೆಳೆಯುವ ವಿಷಯ

ಪ. ಬಂಗಾಳದಲ್ಲಿ ಶೇ.27ರಷ್ಟು ಮುಸ್ಲಿಂ ಜನಸಂಖ್ಯೆಯಿದ್ದು, ಬಾಂಗ್ಲಾದೇಶದಿಂದ ಕೂಡ ಮುಸ್ಲಿಮರು ಅಕ್ರಮವಾಗಿ ಬಂದು ರಾಜ್ಯದಲ್ಲಿ ನೆಲೆಸಿದ್ದಾರೆಂಬ ಆರೋಪ ಸಾಕಷ್ಟು ಚರ್ಚೆಯಾಗಿದೆ. 2011ರ ವಿಧಾನಸಭೆ ಮತ್ತು 2014ರ ಲೋಕಸಭೆ ಚುನಾವಣೆ ವೇಳೆ ಮುಸ್ಲಿಂ ಮತಗಳು ಟಿಎಂಸಿ ಹಾಗೂ ಸಿಪಿಎಂ-ಕಾಂಗ್ರೆಸ್ ಮಧ್ಯೆ ವಿಭಜನೆಗೊಂಡಿದ್ದವು. ಹಿಂದೂ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿ ರುವುದರಿಂದ ಎರಡೂ ಪಕ್ಷಗಳು ಧರ್ಮ ಮುಂದಿಟ್ಟು ಮತ ಬಾಚಿಕೊಳ್ಳಲು ಹೊರಟಂತಿದೆ.

ಬಿಜೆಪಿ ಮಿಷನ್ 22

ಉತ್ತರ ಪ್ರದೇಶ, ಮಹಾರಾಷ್ಟ್ರ ನಂತರ ಪ. ಬಂಗಾಳದಲ್ಲಿ (42) ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿವೆ. ಪ.ಬಂಗಾಳ ಎಂದಿಗೂ ಬಿಜೆಪಿ ಭದ್ರಕೋಟೆ ಆಗಿಲ್ಲ. 2011ರ ತನಕ ಎಡಪಕ್ಷಗಳ ಕೇಂದ್ರ ಸ್ಥಾನವಾಗಿದ್ದ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪರ ಬೀಸಿದ ಪ್ರಚಂಡ ಅಲೆಯಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಧೂಳಿಪಟಗೊಂಡವು. ಆದರೆ, ಮೂರೇ ವರ್ಷಗಳ ಅಂತರದಲ್ಲಿ ರಾಷ್ಟ್ರವ್ಯಾಪಿ ಕಂಡುಬಂದ ಮೋದಿ ಅಲೆ ಪರಿಣಾಮ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಪ್ರಮಾಣದಲ್ಲಿ ಮತ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇದು ಮಮತಾಗೆ ಎಚ್ಚರಿಕೆ ಗಂಟೆ ಆಗಿತ್ತಾದರೂ, ಎಡಪಕ್ಷಗಳನ್ನು ಮೀರಿ ಬಿಜೆಪಿ ಬೆಳೆದಿದ್ದು ಬಂಗಾಳದ ಮಟ್ಟಿಗೆ ಐತಿಹಾಸಿಕ ಬೆಳವಣಿಗೆ ಆಗಿತ್ತು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಸಿಪಿಎಂ-ಕಾಂಗ್ರೆಸ್ ಜತೆಗಿದ್ದ ಮತಬ್ಯಾಂಕ್​ಗಳು ಈಗ ಟಿಎಂಸಿ, ಬಿಜೆಪಿಯತ್ತ ಮುಖ ಮಾಡಿವೆ. ಕಳೆದ ವರ್ಷದ ಉಪ ಚುನಾವಣೆಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿದ್ದರಿಂದ ಈಗ ಮಮತಾಗೆ ಬಿಜೆಪಿಯೇ ಪ್ರಮುಖ ಎದುರಾಳಿ. ಪ್ರಸಕ್ತ ಸನ್ನಿವೇಶದಲ್ಲಿ ಟಿಎಂಸಿ ಮೀರಿ ಬಿಜೆಪಿ ಬೆಳೆಯುವ ಸಾಧ್ಯತೆ ಕಡಿಮೆ ಇದ್ದರೂ, ಮಿಷನ್ 22 ಯೋಜನೆ ಮೂಲಕ ಟಿಎಂಸಿಗೆ ಬಿಸಿ ಮುಟ್ಟಿಸಲು ಮೋದಿ-ಷಾ ವ್ಯಾಪಕ ಗ್ರೌಂಡ್ ವರ್ಕ್ ಮಾಡಿದ್ದಾರೆ. ಕೇಸರಿ ನಾಯಕರ ಅಂದಾಜಿನಂತೆ ಕನಿಷ್ಟ 12 ಸೀಟುಗಳನ್ನಾದರೂ ಬಿಜೆಪಿ ಇಲ್ಲಿ ಗೆಲ್ಲುವ ಲಕ್ಷಣಗಳಿವೆ. ರೋಸ್ ವ್ಯಾಲಿ ಮತ್ತು ಶಾರದಾ ಚಿಟ್​ಫಂಡ್ ಹಗರಣದಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಸಿಬಿಐ ತನಿಖೆಗೆ ಅವಕಾಶ ನೀಡದೆ ರಾಜಕೀಯ ಪ್ರಹಸನ ಸೃಷ್ಟಿಸಿದ್ದ ಮಮತಾ, ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಆದರೆ ರಾಜ್ಯದಲ್ಲಿ ಬಿಜೆಪಿ ಬೇರೂರಲು ಯತ್ನಿಸಿರುವುದೇ ಮಮತಾರ ಈ ಪ್ರಹಸನಗಳಿಗೆ ಮೂಲಪ್ರೇರಣೆ.

ಸೋಷಿಯಲ್ ಮೀಡಿಯಾ ಟ್ರೆಂಡ್

ಯಾರು ಅಹಂಕಾರಿ?

ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಬಳಿಕ ಹುಮ್ಮಸ್ಸಿನಿಂದ ಬೀಗುತ್ತಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಈಗ ಕೇಂದ್ರ ಸರ್ಕಾರದ ವಿರುದ್ಧ ಆಕ್ರಾಮಕವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉತ್ತರಪ್ರದೇಶದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಉದ್ಘಾಟಿಸಿದ ಬೆನ್ನಲ್ಲೇ, ಇದರಲ್ಲೂ ಕೊರತೆ ಹುಡುಕಿರುವ ಮಾಯಾವತಿ ‘ಶ್ರಮದಾಯಿ ರೈತರಿಗೆ ಕೊಂಚ ಸರ್ಕಾರಿ ಸಹಾಯ ನೀಡುವ ಬಿಜೆಪಿ ಸರ್ಕಾರದ ಚಿಂತನೆಯೇ ಅಹಂಕಾರದಿಂದ ಕೂಡಿದೆ. ವರ್ಷಕ್ಕೆ ಕೇವಲ 6 ಸಾವಿರ ರೂ. ನೀಡುವ ಮೂಲಕ ಅದು ರೈತರನ್ನು ಅವಮಾನಿಸಲು ಹೊರಟಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಟ್ವಿಟರ್, ಫೇಸ್​ಬುಕ್​ನಲ್ಲಿ ‘ಯಾರು ಅಹಂಕಾರಿ? ಎಂಬ ಚರ್ಚೆ ಗರಿದೆಗರಿದೆ. ‘ಸರ್ಕಾರಿ ದುಡ್ಡಲ್ಲಿ ಪಕ್ಷದ ಲಾಂಛನ ಆನೆಯ ಪುತ್ಥಳಿಗಳನ್ನು ಸ್ಥಾಪಿಸಿ ಕೊಂಡ, ನೋಟುಗಳ ಹಾರ ಹಾಕಿಕೊಂಡು ಸಂಭ್ರಮಿಸಿದ, ಅಧಿಕಾರವಿದ್ದಾಗ ರೈತರತ್ತ ನೋಡದ ಮಾಯಾವತಿ ರೈತರ ನೆರವಿಗೆ ಹೊರಟಿರುವ ಸರ್ಕಾರಕ್ಕೆ ಅಹಂಕಾರಿ ಎಂದಿರುವುದು ವಿಶ್ವದ 8ನೇ ಅದ್ಭುತ’ ಎಂದು, ‘ಪ್ಲೀಸ್, ರೈತರ ವಿಷಯದಲ್ಲಾದರೂ ರಾಜಕಾರಣ ಮಾಡ್ಬೇಡಿ. ಬಡ ರೈತರಿಗೆ ಬದುಕಲು ಬಿಡಿ’ ಎಂಬ ಟ್ವೀಟ್​ಗಳು ಹರಿದಾಡಿವೆ.

ಇತಿಹಾಸ

ಮಹತ್ತರ ತಿರುವಿಗೆ ಕಾರಣವಾದ ಚುನಾವಣೆ

6ನೇ ಲೋಕಸಭೆಗೆ 1977ರ ಮಾರ್ಚ್​ನಲ್ಲಿ ಚುನಾವಣೆ ನಡೆಯಿತು. ಹಿಂದಿನ ಅವಧಿಯಲ್ಲಿ ಇಂದಿರಾ ಗಾಂಧಿ ರಾಷ್ಟ್ರದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ವಿಪಕ್ಷಗಳಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಿತು. ಈ ಅವಧಿಯಲ್ಲಿ ಕಂಡುಬಂದ ಬಲವಂತದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ, ರಾಜಕೀಯ ಎದುರಾಳಿಗಳ ಬಂಧನದಂಥ ಅತಿರೇಕಗಳು ಹಾಗೂ ಮಾನವಹಕ್ಕಿನ ಉಲ್ಲಂಘನೆಯ ನಿದರ್ಶನಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಜನತಾ ಪರಿವಾರ ಒಟ್ಟು 545 ಸ್ಥಾನಗಳ ಪೈಕಿ 298ನ್ನು ದಕ್ಕಿಸಿಕೊಂಡಿತು. ನಿರಂತರ ದರ್ಬಾರು ನಡೆಸಿದ್ದ ಕಾಂಗ್ರೆಸ್ 153 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅಷ್ಟೊತ್ತಿಗಾಗಲೇ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದ ಇಂದಿರಾ ಗಾಂಧಿ ಮತ್ತು ಆಕ್ರಮಣಕಾರಿ ರಾಜಕಾರಣಕ್ಕೆ ಹೆಸರಾಗಿದ್ದ ಅವರ ಮಗ ಸಂಜಯ್ ಗಾಂಧಿ ಇಬ್ಬರೂ ಈ ಚುನಾವಣೆಯಲ್ಲಿ ಸೋತಿದ್ದು, ಬದಲಾದ ಭಾರತೀಯ ಮತದಾರನ ಮನೋಧರ್ಮಕ್ಕೆ ಜ್ವಲಂತ ಸಾಕ್ಷಿಯಾಗಿತ್ತು. ದೇಶದ ಮೊಟ್ಟಮೊದಲ ‘ಕಾಂಗ್ರೆಸ್ಸೇತರ’ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆ ಮೊರಾರ್ಜಿ ದೇಸಾಯಿಯವರ ಹೆಗಲೇರಿತು. ಆದರೆ ಹೀಗೆ ದಕ್ಕಿದ ಅಮೂಲ್ಯ ಅಧಿಕಾರ, ಜನತಾ ಪರಿವಾರಿಗರ ಕಿತ್ತಾಟದಿಂದ ಹಾಳಾಗಿದ್ದು ಮತ್ತೊಂದು ಇತಿಹಾಸ.

Stay connected

278,741FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...