18 C
Bengaluru
Monday, January 20, 2020

ಮೋದಿ ಅಲೆ ಮೇಲೆ ಬಹುಮತದ ಮಳೆ

Latest News

FasTag ರಿಯಾಲಿಟಿ | ಹೆಸರು ಫಾಸ್ಟ್ ಕೆಲಸ ಸ್ಲೋ..

ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂರು ಬಾರಿ ಗಡುವು ವಿಸ್ತರಿಸಿ ಕೊನೆಗೆ...

ವೇದ ದರ್ಶನ 91 | ವಿಷ್ಣುವೇ ದೇವತಾಸಾರ್ವಭೌಮ

ಎಲ್ಲ ದೇವತೆಗಳೂ ಭಗವಂತನ ಮುಖಗಳೆಂಬುದು ನಿಜವಾದರೂ ಈ ಮುಖಗಳಲ್ಲಿ ಯಾವುದು ಮುಖ್ಯ ಎಂಬ ಗೊಂದಲದ ಪ್ರಶ್ನೆ ಒಮ್ಮೊಮ್ಮೆ ಏಳುತ್ತದೆ. ಇದು ಸರಿಯಾಗಿರಲಿ, ಇಲ್ಲದಿರಲಿ,...

ಯೋಧನ ಮದುವೆಗೆ ಅಡ್ಡಿಪಡಿಸಿದ ಭಾರೀ ಹಿಮಪಾತದ

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಹಿಮಪಾತದಲ್ಲಿ ಸಿಲುಕಿಕೊಂಡ ಯೋಧನೋರ್ವ ತನ್ನ ಮದುವೆಯನ್ನೇ ತಪ್ಪಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ನಿವಾಸಿ ಸುನಿಲ್ ಕಳೆದ...

ಯೋಗವಾಸಿಷ್ಠ 211| ಐದು ಮಹಾಭೂತಗಳ ಸೃಷ್ಟಿಯಾದ ನಂತರ ಬ್ರಹ್ಮಾಂಡದ ಸೃಷ್ಟಿ (3.12.24ರಿಂದ 29)

ಪ್ರಳಯ ಆಖ್ಯಾಯಿಕೆಯ (ಪ್ರಳಯಾವಸ್ಥೆಯ ನಿರೂಪಣೆ) ನಂತರ ಸೃಷ್ಟಿ ಆಖ್ಯಾಯಿಕೆಯನ್ನು ಪ್ರಾರಂಭಿಸಿದ ಶ್ರೀ ವಸಿಷ್ಠರು ಈ ಹಿಂದೆ ಈಶ್ವರ-ಜೀವಗಳ ಆವಿರ್ಭಾವ, ಆಕಾಶ, ಅಹಂಕಾರ, ಆಕಾಶತನ್ಮಾತ್ರೆ,...

ಇಂದಿನಿಂದ ಆಸ್ಟ್ರೇಲಿಯನ್ ಓಪನ್: ಪುರುಷರ ಟೆನಿಸ್​ನಲ್ಲಿ ಬಿಗ್ ಥ್ರೀ ಪ್ರಾಬಲ್ಯಕ್ಕೆ ಬೀಳಲಿದೆಯೇ ಕೊನೆ?

ಮೆಲ್ಬೋರ್ನ್: ಇದು ಹೊಸ ದಶಕದ ಆರಂಭವಿರಬಹುದು. ಆದರೆ, ಟೆನಿಸ್ ಜಗತ್ತಿನ ಹೊಸ ದಶಕದ ಆರಂಭವೆಂದು ಅನಿಸುವುದಿಲ್ಲ. 21ರ ದಶಕದ ಮೊಟ್ಟ ಮೊದಲ ಗ್ರಾಂಡ್...

ದಿನೇದಿನೆ ದೇಶಾದ್ಯಂತ ಲೋಕಸಭೆ ಚುನಾವಣೆ ಕಾವು ಏರುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಅಖಾಡಕ್ಕಿಳಿದಿರುವ ರಾಜಕೀಯ ನಾಯಕರು ಆರೋಪ, ಪ್ರತ್ಯಾರೋಪ, ಸಾಧನೆ, ವೈಫಲ್ಯಗಳ ಪ್ರಚಾರ ಭರಾಟೆಯಲ್ಲಿ ಮುಳುಗಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳಿಂದ ಓದುಗರ ಮನಗೆದ್ದಿರುವ ವಿಜಯವಾಣಿ ಈ ಬಾರಿಯೂ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಮತದಾರರ ನಾಡಿಮಿಡಿತ ಅರಿಯುತ್ತಲೇ ಮತಕಣದ ಜಿದ್ದಾಜಿದ್ದಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಹೊಸ ಹೊಸ ಸುದ್ದಿಗಳನ್ನು ಪ್ರದೇಶವಾರು ವಿಶ್ಲೇಷಣೆ, ವಿಷಯ ತಜ್ಞರ ಅಭಿಪ್ರಾಯದಡಿ ಬೇರೆ ಬೇರೆ ಆಯಾಮಗಳಿಂದ ಸಂಗ್ರಹಿಸಿ ವಿಶೇಷವಾಗಿ ಕಟ್ಟಿಕೊಡಲಿದೆ. ಲೋಕಸಭೆ ಚುನಾವಣೆ ಕಂಪ್ಲೀಟ್ ಕವರೇಜ್ ಇಂದಿನಿಂದ…

# ಮೋದಿ ಸರ್ಕಾರದ ಸಾಧನೆಗಳು

# ಎಲೆಕ್ಷನ್ ಕ್ವಿಜ್

# ಕರ್ನಾಟಕದ ಕ್ಷೇತ್ರವಾರು ರಣಕಣ

# ಚುನಾವಣಾ ಇತಿಹಾಸ

# ವೈವಿಧ್ಯಮಯ ಸುದ್ದಿ

# ಎಲ್ಲ ರಾಜ್ಯಗಳ ಚಿತ್ರಣ

# ಮಾತಂದ್ರೆ ಮಾತು, ಹಾಗೇ ಸುಮ್ಮನೆ!

ಅರಳಿದ ಕಮಲ

2014ರ ಏಪ್ರಿಲ್ 7ರಿಂದ ಮೇ 12ರವರೆಗೆ 9 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಚುನಾವಣಾ ಆಯೋಗದ ಪ್ರಕಾರ ಇದು ದೇಶದ ಇತಿಹಾಸದಲ್ಲಿ ದೀರ್ಘ ಅವಧಿಯವರೆಗೆ ನಡೆದ ಮತದಾನ ಪ್ರಕ್ರಿಯೆಗಳಲ್ಲೊಂದು. 543 ಲೋಕಸಭಾ ಸ್ಥಾನಗಳಿಗೆ ಒಟ್ಟು 8,251 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ದೇಶದ ಒಟ್ಟು 81 ಕೋಟಿ ಜನರು ಮತಚಲಾಯಿಸಲು ಅರ್ಹರಾಗಿದ್ದರು. ದೇಶದ ಒಟ್ಟು ಮತದಾರರ ಪೈಕಿ 18-19 ವಯೋಮಾನದವರ ಪ್ರಮಾಣ ಶೇ.2.7ರಷ್ಟಿತ್ತು. 15ನೇ ಲೋಕಸಭೆ ಅವಧಿ 2014ರ ಮೇ 31ರಂದು ಮುಗಿಯಿತು. 2014ರ ಮೇ 16ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು. ಬಿಜೆಪಿ 282 ಸೀಟುಗಳನ್ನು ಪಡೆಯುವ ಮೂಲಕ ಐತಿಹಾಸಿಕ ವಿಜಯ ಸಾಧಿಸಿತು. ಶತಮಾನದ ಪಕ್ಷ ಕಾಂಗ್ರೆಸ್ ಕೇವಲ 44 ಸ್ಥಾನಗಳಿಗೆ ಸೀಮಿತವಾಗಿ ಹೀನಾಯ ಸೋಲನ್ನು ಕಂಡಿತು. ಬಹುಮತಕ್ಕೆ ಅಗತ್ಯವಾದ ಸೀಟುಗಳನ್ನು ಬಿಜೆಪಿಯೊಂದೇ ಪಡೆದಿದ್ದರೂ, ಮಿತ್ರಪಕ್ಷಗಳಿಗೂ ಸರ್ಕಾರದಲ್ಲಿ ಅವಕಾಶ ನೀಡಲಾಯಿತು.

ಹೊಸ ಸಂಪ್ರದಾಯಕ್ಕೆ ನಾಂದಿ

ಬಿಜೆಪಿಯ ಭರ್ಜರಿ ಸಾಧನೆಗೆ ಮೋದಿ ಅಲೆ ಮುಖ್ಯ ಕಾರಣವಾಗಿತ್ತು. ಮುಖ್ಯಮಂತ್ರಿಯಾಗಿ ಗುಜರಾತ್ ಮಾಡೆಲ್ ಮೂಲಕ ಸಂಚಲನ ಮೂಡಿಸಿದ್ದ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮುಂಚಿತವಾಗಿಯೇ ಘೋಷಿಸುವ ಮೂಲಕ ಬಿಜೆಪಿ ಭಾರತದಲ್ಲಿ ಹೊಸ ಸಂಪ್ರದಾಯ ಶುರುಮಾಡಿತು. ಈ ಕಾರ್ಯತಂತ್ರ ಯಶಸ್ಸು ಗಳಿಸಿತು. 10 ವರ್ಷಗಳಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಕಂಡಿದ್ದ ಜನ ಬದಲಾವಣೆ ಬಯಸಿದ್ದರು. ಆ ಸಮಯಕ್ಕೆ ಸರಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಮೋದಿ ಎಂಟ್ರಿಯಾಯಿತು. ದೇಶದ ಹಲವೆಡೆ ಬಿರುಗಾಳಿಯಂತೆ ಸಂಚರಿಸಿದ ಮೋದಿ 450 ರ್ಯಾಲಿಗಳನ್ನು ನಡೆಸಿದರು. ಮೋದಿಗೆದುರಾಗಿ ಕಾಂಗ್ರೆಸ್​ನಿಂದ ರಾಹುಲ್ ಗಾಂಧಿ ಬಿಂಬಿತವಾಗಿದ್ದರೂ, ಅವರಿಂದ ನಿರೀಕ್ಷಿತ ಸಾಧನೆ ಹೊಮ್ಮಲಿಲ್ಲ. ಯುವಜನರು ಪಕ್ಷಭೇದ ಮರೆತು ಮೋದಿಯವರನ್ನು ಬೆಂಬಲಿಸಿದ್ದು ಫಲಿತಾಂಶೋತ್ತರ ವಿಶ್ಲೇಷಣೆಯಲ್ಲಿ ಕಂಡುಬಂತು.

ಭಿನ್ನ ಹಾದಿ

2014ರ ಮೇ 26ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಲ್ಲಿಯೂ ಒಂದು ವಿಶೇಷವಿತ್ತು. ಅವರು ಮುಖ್ಯಮಂತ್ರಿಯಾಗಿಯೇ ಮೊದಲ ಬಾರಿಗೆ ಗುಜರಾತ್ ವಿಧಾನಸಭೆ ಪ್ರವೇಶಿಸಿದ್ದರು. ಅಂತೆಯೇ, ಪ್ರಧಾನಿಯಾಗಿಯೇ ಸಂಸತ್ ಪ್ರವೇಶಿಸಿದ ದಾಖಲೆ ನಿರ್ವಿುಸಿದರು. ಬಿಜೆಪಿ ನಾಯಕರು ಮತ್ತು ಪಕ್ಷದ ನೂತನ ಸಂಸದರನ್ನು ಉದ್ದೇಶಿಸಿ ಮಾತನಾಡಲು ಮೋದಿಯವರು ಸಂಸತ್ ಭವನದ ಸೆಂಟ್ರಲ್ ಹಾಲ್​ಗೆ ಆಗಮಿಸುವಾಗ ಪ್ರವೇಶದ್ವಾರದ ಮೆಟ್ಟಿಲಿಗೆ ಹಣೆತಾಗಿಸಿ ನಮಸ್ಕರಿಸಿದ್ದು ದೇಶದ ಗಮನಸೆಳೆಯಿತು. ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸುವ ಮೂಲಕ, ವಿದೇಶಾಂಗ ನೀತಿ ತಮಗೆ ಹೊಸದಾದರೂ ಈ ನಿಟ್ಟಿನಲ್ಲಿ ವಿಭಿನ್ನ ಹೆಜ್ಜೆಯಿರಿಸುವ ಸುಳಿವನ್ನು ಆರಂಭದಲ್ಲೇ ನೀಡಿದರು. ಆ ರೀತಿಯಲ್ಲೇ ನಂತರದಲ್ಲಿ ಸರ್ಕಾರದ ವಿದೇಶಾಂಗ ರೂಪುಗೊಳ್ಳುತ್ತ ಸಾಗಿದ್ದು ಈಗ ಸರ್ವವಿದಿತ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...