ಬೆಳಗಾವಿ: ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಕರೊನಾ ವೈರಸ್ ಪ್ರಕರಣ ಹೆಚ್ಚುತ್ತಿದ್ದು, ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಸಾರಿಗೆ ಸಂಸ್ಥೆಯ ಬೆಳಗಾವಿ, ಚಿಕ್ಕೋಡಿ ವಿಭಾಗಗಳು ಮತ್ತು ಧಾರವಾಡ ವಿಭಾಗದ ಸವದತ್ತಿ ಘಟಕಕ್ಕೆ ನಿತ್ಯ ಸರಾಸರಿ 1.38 ಕೋಟಿ ರೂ. ನಷ್ಟ ಉಂಟಾಗುತ್ತಿದೆ.
ಕರೊನಾತಂಕದ ಹಿನ್ನೆಲೆಯಲ್ಲಿ: ಮಾ. 24ರಿಂದ ಮೇ 18ರ ವರೆಗೆ ಜಿಲ್ಲಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮೇ 19ರಿಂದ ಬಸ್ ಸಂಚಾರ ಆರಂಭಗೊಂಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಸಂಚರಿಸುತ್ತಿಲ್ಲ. ಹೊರ ರಾಜ್ಯ ಹಾಗೂ ದೂರದ ಮಹಾನಗರಗಳಿಗೂ ಬಸ್ ತೆರಳುತ್ತಿಲ್ಲ.
ಈ ಮಧ್ಯೆ, ಕಳೆದೊಂದು ವಾರದಿಂದ ಕರೊನಾ ಪ್ರಕರಣ ಇನ್ನಷ್ಟು ಹೆಚ್ಚಿದ್ದರಿಂದ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಸಂಸ್ಥೆಗೆ ಬರುತ್ತಿದ್ದ ಅಲ್ಪ ಆದಾಯವೂ ಪಾತಾಳಕ್ಕೆ ಕುಸಿದಿದೆ. ಸದ್ಯ ಪರಿಸ್ಥಿತಿ ಸುಧಾರಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಜನರಿಗೆ ಕರೊನಾ ಭಯ: ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರವೇ ಪ್ರಯಾಣಿಕರನ್ನು ನಿಲ್ದಾಣದೊಳಗೆ ಬಿಡಲಾಗುತ್ತಿದೆ. ದೈಹಿಕ ಅಂತರ ಕಾಪಾಡುವ ದೃಷ್ಟಿಯಿಂದ 30 ಪ್ರಯಾಣಿಕರಿಗಷ್ಟೇ ಬಸ್‌ಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗುತ್ತಿದೆ. ಆದರೂ, ಕರೊನಾ ಭಯದಿಂದಾಗಿ ಜನರು ಪ್ರಯಾಣಿಸುತ್ತಿಲ್ಲ.
ಕರೊನಾ ಹಾವಳಿ ಕಡಿಮೆಯಾಗಿ ಈ ಮೊದಲಿನಂತೆ ಬಸ್ ಸಂಚಾರ ಆರಂಭಗೊಂಡರೆ, ಸಂಸ್ಥೆಯ ಪರಿಸ್ಥಿತಿ ಸುಧಾರಿಸಲಿದೆ ಎನ್ನುತ್ತಾರೆ ಚಿಕ್ಕೋಡಿ ವಿಭಾಗೀಯ ಸಾರಿಗೆ ಸಂಸ್ಥೆ ನಿಯಂತ್ರಣಾಧಿಕಾರಿ ವಿ.ಎಂ. ಶಶಿಧರ.
ಮುಂದಿನ ವಾರ ವೇತನ: ಬೆಳಗಾವಿ ಜಿಲ್ಲಾದ್ಯಂತ ಸಾರಿಗೆ ಸಂಸ್ಥೆಯಲ್ಲಿ 6 ಸಾವಿರಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯು ಆರ್ಥಿಕ ನಷ್ಟದಲ್ಲಿರುವ ಕಾರಣ ಜೂನ್ ತಿಂಗಳ ವೇತನ ಈವರೆಗೂ ಪಾವತಿಯಾಗಿಲ್ಲ. ಒಂದು ವಾರದೊಳಗಾಗಿ ಸರ್ಕಾರದಿಂದ ಅನುದಾನ ಬರಲಿದ್ದು, ವೇತನ ಪಾವತಿಸಲಾಗುವುದು ಎಂದು ಸಾರಿಗೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವಿಭಾಗವಾರು ನಷ್ಟ ಮಾಹಿತಿ: ಲಾಕ್‌ಡೌನ್ ಜಾರಿಗೂ ಮುನ್ನ, ಬೆಳಗಾವಿ ವಿಭಾಗದಲ್ಲಿ ನಿತ್ಯ 691 ಬಸ್‌ಗಳ ಸಂಚಾರವಿತ್ತು. 75 ಲಕ್ಷ ರೂ. ಆದಾಯ ಬರುತ್ತಿತ್ತು. ಈಗ ಆ ಪ್ರಮಾಣ, 6 ಲಕ್ಷ ರೂ.ಗೆ ಇಳಿಕೆಯಾಗಿದ್ದು, 69 ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ಪ್ರಯಾಣಿಕರಿಂದ ಬೇಡಿಕೆ ಇರುವ 100ರಿಂದ 120 ಬಸ್ ಓಡಿಸಲಾಗುತ್ತಿದೆ. ಚಿಕ್ಕೋಡಿ ವಿಭಾಗದಲ್ಲಿ ನಿತ್ಯ 630 ಬಸ್‌ಗಳ ಸಂಚಾರದಿಂದ 65 ಲಕ್ಷ ರೂ. ಆದಾಯ ಬರುತ್ತಿತ್ತು.ಅದೀಗ, 5 ಲಕ್ಷ ರೂ.ಗೆ ಇಳಿಕೆಯಾಗಿದ್ದು, 60 ಲಕ್ಷ ರೂ. ನಷ್ಟವಾಗುತ್ತಿದೆ. 60 ಬಸ್ ಓಡಿಸಲಾಗುತ್ತಿದೆ.
ಧಾರವಾಡ ವಿಭಾಗದ ಸವದತ್ತಿ ಘಟಕದಲ್ಲಿ 80 ಬಸ್‌ಗಳ ಸಂಚಾರದಿಂದ ನಿತ್ಯ 10 ಲಕ್ಷ ರೂ. ಆದಾಯ ಬರುತ್ತಿತ್ತು. ಲಾಕ್‌ಡೌನ್ ಜಾರಿಯಾದ ಪರಿಣಾಮ ಅಲ್ಲಿ ಈಗ ಕೇವಲ 7 ಬಸ್ ಮಾತ್ರ ಓಡಿಸಲಾಗುತ್ತಿದೆ. ಇದರಿಂದ ನಿತ್ಯವೂ 50 ಸಾವಿರ ರೂ.ನಷ್ಟು ಟಿಕೆಟ್ ಹಣ ಬರುತ್ತಿದ್ದು, 9.50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದೀಗ, 5 ಲಕ್ಷ ರೂ.ಗೆ ಇಳಿಕೆಯಾಗಿದ್ದು, 60 ಲಕ್ಷ ರೂ. ನಷ್ಟವಾಗುತ್ತಿದೆ.
60 ಬಸ್ ಓಡಿಸಲಾಗುತ್ತಿದೆ. ಧಾರವಾಡ ವಿಭಾಗದ ಸವದತ್ತಿ ಘಟಕದಲ್ಲಿ 80 ಬಸ್‌ಗಳ ಸಂಚಾರದಿಂದ ನಿತ್ಯ 10 ಲಕ್ಷ ರೂ. ಆದಾಯ ಬರುತ್ತಿತ್ತು. ಲಾಕ್‌ಡೌನ್ ಜಾರಿಯಾದ ಪರಿಣಾಮ ಅಲ್ಲಿ ಈಗ ಕೇವಲ 7 ಬಸ್ ಮಾತ್ರ ಓಡಿಸಲಾಗುತ್ತಿದೆ. ಇದರಿಂದ ನಿತ್ಯವೂ 50 ಸಾವಿರ ರೂ.ನಷ್ಟು ಟಿಕೆಟ್ ಹಣ ಬರುತ್ತಿದ್ದು, 9.50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆಯಾದ ನಂತರ, ಹಂತ ಹಂತವಾಗಿ ಆದಾಯ ಹೆಚ್ಚುತ್ತಿತ್ತು. ಜೂನ್ ಅಂತ್ಯದ ವೇಳೆಗೆ, 15-20 ಲಕ್ಷ ರೂ. ಆದಾಯ ಬಂದಿತ್ತು. ಆದರೆ, ಕಳೆದೊಂದು ವಾರದಲ್ಲಿ ಬಸ್‌ಗಳ ಕಾರ್ಯಾಚರಣೆ ಪ್ರಮಾಣವೂ ಕಡಿಮೆಯಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
| ಮಹಾದೇವ ಮುಂಜಿ ವಿಭಾಗೀಯ ನಿಯಂತ್ರಣಾಧಿಕಾರಿ, ಬೆಳಗಾವಿ