ವಸತಿಯೇತರ ಕಟ್ಟಡಗಳಿಗೆ ಬೀಗ ಜಡಿದು ವಸೂಲಿ: ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ

blank

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಮುದ್ರೆ ಹಾಕಿ ವಸೂಲಿ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಲ್ಲೆಶ್ವರದ ಐಪಿಪಿ ಸಭಾಂಗಣ ಕೊಠಡಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.

ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವಲಯ ಸಹಾಯಕ ಕಂದಾಯ ಅಧಿಕಾರಿಗಳು, ವ್ಯಾಪ್ತಿವಾರು ಸಭೆ ನಡೆಸಿ ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರಕರಣ ಪಟ್ಟಿ ಅನುಸಾರ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಕಿ ಆಸ್ತಿ ತೆರಿಗೆದಾರರಿಗೆ “ಒಂದು ಬಾರಿ ಪರಿಹಾರ’ (ಒಟಿಎಸ್​) ಯೋಜನೆ ಪುನರಾರಂಭಿಸಲಾಗಿದೆ. 30ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲವಾದರೆ ಡಿ.1ರಿಂದ ಪಾವತಿಸುವ ಬಾಕಿ ಆಸ್ತಿ ತೆರಿಗೆ ದುಪ್ಪಟ್ಟಾಗಲಿದೆ. ಈ ಬಗ್ಗೆ ಅಧಿಕಾರಿಗಳು ಮನೆಗಳಿಗೆ ತೆರಳಿ ಅರಿವು ಮೂಡಿಸಬೇಕು ಎಂದರು.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡುವವರು ಸಮರ್ಪಕವಾಗಿ ಯೋಜನೆ ಲಾಭ ಪಡೆದಿಲ್ಲ. ನಗರದಲ್ಲಿ 250 ಕೋಟಿ ರೂ. ಅಧಿಕ ಬಾಕಿ ಇರುವ 16 ಸಾವಿರ ಪ್ರಕರಣಗಳಿವೆ. 400 ಕೋಟಿ ರೂ. ಹೆಚ್ಚು ಬಾಕಿ ಇರುವ ಅಂದಾಜು 2.4 ಲಕ್ಷ ಸುಸ್ತಿದಾರರರು ತೆರಿಗೆ ಪಾವತಿಸಿಲ್ಲ ಎಂದು ಮುಖ್ಯಆಯುಕ್ತರು ತಿಳಿಸಿದರು. ಪಾಲಿಕೆ ವಿಶೇಷ ಆಯುಕ್ತರಾದ ಮುನೀಶ್​ ಮೌದ್ಗಿಲ್​, ಸುರಳ್ಕರ್​ ವಿಕಾಸ್​ ಕಿಶೋರ್​, ಡಾ.ಕೆ. ಹರೀಶ್​ ಕುಮಾರ್​, ಅವಿನಾಶ್​ ಮೆನನ್​ ರಾಜೇಂದ್ರನ್​, ಪ್ರೀತಿ ಗೆಹ್ಲೋಟ್​, ವಲಯ ಆಯುಕ್ತರಾದ ವಿನೋತ್​ ಪ್ರಿಯಾ, ಸತೀಶ್​, ಸ್ನೇಹಲ್​, ಕರೀಗೌಡ, ಅರ್ಚನಾ, ರಮೇಶ್​, ಗಿರೀಶ್​, ಪ್ರಧಾನ ಅಭಿಯಂತರ, ಮುಖ್ಯ ಅಭಿಯಂತರರಿದ್ದರು.

“ಬೆಂಗಳೂರು ಒನ್​’ನಲ್ಲಿ ಇ-ಖಾತಾ ವ್ಯವಸ್ಥೆ
ನಗರದಲ್ಲಿ ಇ&ಖಾತಾ ಪಡೆಯುವ ಸಲುವಾಗಿ “ಬೆಂಗಳೂರು ಒನ್​’ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ದಾಖಲೆ ಸಲ್ಲಿಸಿ 45 ರೂ. ಪಾವತಿಸಿದರೆ ಖಾತಾ ಸಿಗಲಿದೆ. ಖಾತಾ ಪಡೆಯುವ ಸಲುವಾಗಿ ಅರ್ಜಿ ಹಾಕುವ, ದಾಖಲೆ ಅಪ್​ಲೋಡ್​ ಮಾಡುವ ಕುರಿತು ಯುಟ್ಯೂಬ್​ನಲ್ಲಿ ವಿಡಿಯೋ ವೀಸುವ ಮೂಲಕ ಮಾಹಿತಿ ಪಡೆಯಬಹುದು. ಪಾಲಿಕೆ ಯೂಟ್ಯೂಬ್​ ಚಾನಲ್​ ಅನ್ನು ನಾಗರಿಕರು ಸಬ್​ಸ್ಕ್ರೆ ೃಬ್​ ಮಾಡಿಕೊಳ್ಳಬೇಕು ಎಂದು ತುಷಾರ್​ ಗಿರಿನಾಥ್​ ಮನವಿ ಮಾಡಿದರು. ಖಾತಾ ಪಡೆಯುವ ವೇಳೆ ಎದುರಾಗುವ ತಾಂತ್ರಿಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಲಯವಾರು 13 ಸಹಾಯ ತಂಡ ರಚಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದರು.

ವಲಯವಾರು ಸಹಾಯವಾಣಿ ಸಂಖ್ಯೆ ವಿವರ
ಬೊಮ್ಮನಹಳ್ಳಿ      94806 83182, 94806 83712
ದಾಸರಹಾಳ್ಳಿ        94806 83710
ಮಹಾದೇವಪುರ   94806 83718, 94806 83720
ಪೂರ್ವ               94806 83203
ಪಶ್ಚಿಮ               94806 83653, 9480683204
ದಕ್ಷಿಣ                   94806 83638,9480683179
ಆರ್​.ಆರ್​. ನಗರ  94806 83576
ಯಲಹಂಕ           94806 83645, 9480683516

 

13ರಿಂದ ರಾಜ್ಯದಲ್ಲಿ ಮಳೆ:ದಕ್ಷಿಣ ಕರ್ನಾಟಕದಲ್ಲಿ ಬಿರುಸು

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…