ಲಾಕ್​ಡೌನ್​ನಿಂದಾಗಿ ದೇಶದ 5 ಮಹಾನಗರಗಳಲ್ಲಿ ಆಗಿರುವ ಹಣದ ಉಳಿತಾಯ ಎಷ್ಟು ಗೊತ್ತಾ?

blank

ನವದೆಹಲಿ: ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಅದರ ಪ್ರಸರಣದ ಸರಪಳಿಯನ್ನು ತುಂಡರಿಸಲು ಕೇಂದ್ರ ಸರ್ಕಾರ ಮಾ.25ರಿಂದ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಿತು. ಇದಾದ ನಂತರದಲ್ಲಿ ದೇಶದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಲಿದೆ, ಸಹಸ್ರಾರು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬಿತ್ಯಾದಿ ಹುಯಿಲು ಎಬ್ಬಿಸಲಾಯಿತು.

ಈ ರೀತಿಯ ಹುಯಿಲುಗಳು ಅರ್ಥವಿಲ್ಲದೇ ಇರಲಿಲ್ಲ. ಆದರೂ, ಊಹಿಸಿದಷ್ಟು ಭಾರಿ ನಷ್ಟವೇನೂ ಆಗಿಲ್ಲ, ಬದಲಿಗೆ ಸಾಕಷ್ಟು ಲಾಭವಾಗಿದೆ ಎಂಬುದು ಋಣಾತ್ಮಕ ಸಂದರ್ಭದಲ್ಲೂ ಸಕಾರಾತ್ಮಕವಾದ ಆಲೋಚನೆ ಎಂದೆನಿಸಿಕೊಳ್ಳುತ್ತದೆ. ಬ್ರಿಟನ್​ನ ಸರ್ರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ದೆಹಲಿ ಮತ್ತು ಮುಂಬೈ ಸೇರಿ ಭಾರತದ ಪ್ರಮುಖ 5 ನಗರಗಳಲ್ಲಿ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. ಈ ಅಧ್ಯಯನದ ಪ್ರಕಾರ ಲಾಕ್​ಡೌನ್​ನಿಂದಾಗಿ ಭಾರತದ 5 ಮಹಾನಗರಗಳಲ್ಲಿ 630 ಅಕಾಲಿಕ ಮರಣಗಳನ್ನು ತಡೆಯಲಾಗಿದೆ. ಜತೆಗೆ 5,169.90 ಕೋಟಿ ರೂಪಾಯಿ ಉಳಿತಾಯವಾಗಿದೆ. ಹೇಗೆ?

ಲಾಕ್​ಡೌನ್​ ಅವಧಿಯಲ್ಲಿ ದೆಹಲಿ, ಮುಂಬೈ, ಕೋಲ್ಕತ, ಚೆನ್ನೈ ಮತ್ತು ಹೈದರಾಬಾದ್​ ನಗರಗಳಲ್ಲಿ ವಾಹನಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಅತಿಸೂಕ್ಷ್ಮ ಪ್ಯಾಟ್ರಿಕ್ಯುಲೇಟ್​ ಮ್ಯಾಟರ್​ಗಳು (ಪಿಎಂ2.5) ಸೇರಿ ವಿಷಕಾರಿ ಅಂಶಗಳು ಕನಿಷ್ಠ ಪ್ರಮಾಣಕ್ಕೆ ಇಳಿದಿದ್ದವು.

ಇದನ್ನೂ ಓದಿ: ಜನಪ್ರತಿನಿಧಿಗಳು ನಿಯಮ ಉಲ್ಲಂಘಿಸಿದ್ರೂ ಕ್ರಮ ತೆಗೆದುಕೊಳ್ಳಿ- ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಸಸ್ಟೇನಬಲ್​ ಸಿಟೀಸ್​ ಆ್ಯಂಡ್​ ಸೊಸೈಟಿ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಮಾ.25ರಿಂದ ಮೇ 11ರವರೆಗಿನ ಪಿಎಂ2.5 ಅಂಶಗಳನ್ನು ಕಳೆದ ಐದು ವರ್ಷಗಳಲ್ಲಿನ ಇದೇ ಅವಧಿಯ ಪಿಎಂ2.5 ಅಂಶಗಳ ವರದಿಯೊಂದಿಗೆ ತುಲನೆ ಮಾಡಿದಾಗ ಈ ಅಂಶ ಬಹಿರಂಗವಾಗಿದ್ದಾಗಿ ವಿವರಿಸಲಾಗಿದೆ. ವಿಜ್ಞಾನಿಗಳ ಪ್ರಕಾರ ಲಾಕ್​ಡೌನ್​ ಅವಧಿಯಲ್ಲಿ ಗಾಳಿಯಲ್ಲಿನ ವಿಷಕಾರಿ ಅಂಶಗಳು ಮುಂಬೈನಲ್ಲಿ ಶೇ.10 ಹಾಗೂ ನವದೆಹಲಿಯಲ್ಲಿ ಗರಿಷ್ಠ ಶೇ.54 ಇಳಿಕೆಯಾಗಿದ್ದವು ಎನ್ನಲಾಗಿದೆ.

ಇತರೆ ನಗರಗಳಲ್ಲಿನ ವಾಯುಮಾಲಿನ್ಯದ ಪ್ರಮಾಣ ಶೇ.24ರಿಂದ ಶೇ.32 ಕಡಿಮೆಯಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪಿಎಂ2.5 ಪ್ರಮಾಣ ತಗ್ಗುವ ವಿಷಯದಲ್ಲಿ ಅಚ್ಚರಿಯೇನಿಲ್ಲ. ಆದರೆ, ಅದು ಕಡಿಮೆಯಾಗಿರುವ ಗಾತ್ರವನ್ನು ಗಮನಿಸಬೇಕಾದದ್ದು ಮುಖ್ಯವಾಗುತ್ತದೆ. ಇದರಿಂದಾಗಿ ಪಿಎಂ 2.5 ಮಾಲಿನ್ಯದಿಂದ ಭೂಗ್ರಹದ ಮೇಲಾಗಿರುವ ದುಷ್ಪರಿಣಾಮ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದು ಸರ್ರೆ ವಿಶ್ವವಿದ್ಯಾಲಯದ ಅಧ್ಯಯನ ತಂಡದ ಪ್ರಶಾಂತ್​ ಕುಮಾರ್​ ಹೇಳುತ್ತಾರೆ.

ಇದನ್ನೂ ಓದಿ: 12ನೇ ತರಗತಿಯಲ್ಲಿ ಪಾಸ್​ ಆದರೂ ಸಾಕು, ದೊರೆಯುತ್ತೆ ಐಐಟಿಗೆ ಪ್ರವೇಶ

ವಾಯುಮಾಲಿನ್ಯ ಕಡಿಮೆಯಾಗಿದ್ದರಿಂದ ಆರ್ಥಿಕವಾಗಿ ಆಗಿರುವ ಲಾಭಗಳನ್ನು ಲೆಕ್ಕಹಾಕಿರುವ ಅಧ್ಯಯನ ತಂಡ, ಪಿಎಂ2.5 ಮಲಿನಕಾರಕ ಅಂಶಗಳ ಇಳಿಕೆಯಿಂದಾಗಿ ಕನಿಷ್ಠ 630 ಜನರು ಅಕಾಲಿಕ ಮರಣದಿಂದ ಪಾರಾಗಿದ್ದಾರೆ. ಅಂತೆಯೇ ಚಿಕಿತ್ಸಾ ವೆಚ್ಚದ ರೂಪದಲ್ಲಿ ಒಟ್ಟಾರೆ 5,190.90 ಕೋಟಿ ರೂ. ಉಳಿತಾಯವಾಗಿದೆ ಎಂದು ತಿಳಿಸುತ್ತಾರೆ.

ಈ ಅಂಕಿ ಅಂಶಗಳನ್ನು ಗಮನಿಸಿದಾಗ ನಗರ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೊಳಿಸಬೇಕಾದ ನಿಯಂತ್ರಣ ಕ್ರಮಗಳು ಮತ್ತು ನಿರ್ಬಂಧಗಳ ಮಹತ್ವದ ಅರಿವಾಗುತ್ತದೆ. ಅಂದರೆ, ಕೋವಿಡೋತ್ತರ ಯುಗದಲ್ಲಿ ನಾವು ಅನುಸರಿಸಬಹುದಾದ ಹೊಸ ಕ್ರಮಗಳ (ನ್ಯೂ ನಾರ್ಮಲ್​) ಕುರಿತು ಚರ್ಚಿಸಲು ಇದುವೇ ಸಕಾಲ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.

ಪಾಕ್​ ಗುಂಡಿನ ದಾಳಿಗೆ ಎಲ್​ಒಸಿಯಲ್ಲಿ 3 ನಾಗರಿಕರು ಬಲಿ; ಭದ್ರತಾ ಪಡೆ ಗುಂಡಿಗೆ ಶೋಪಿಯಾನ್​ನಲ್ಲಿ 3 ಉಗ್ರರು ಹತ

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…