ಗಂಗಾವತಿ: ನಿವೇಶನ ಮತ್ತು ಸೂರುರಹಿತ ಕುಟುಂಬಗಳಿಗಾಗಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಾಂತ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ ಹೇಳಿದರು.

ತಾಲೂಕಿನ ವಿರುಪಾಪುರಗಡ್ಡಿಯಲ್ಲಿ ನಿವೇಶನ ಮತ್ತು ವಸತಿ ರಹಿತ ಹೋರಾಟ ಸಮಿತಿಯಿಂದ ಹಮ್ಮಿಕೊಂಡ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಇದನ್ನು ಓದಿ: ಮುಡಾ ಹಗರಣ ಅಹೋರಾತ್ರಿ ಧರಣಿ
ಸೂರು ಮತ್ತು ನಿವೇಶನ ನೀಡುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ವರ್ಷ ಕಳೆದರೂ ಇನ್ನೂ ಪ್ರಸ್ತಾಪಿಸುತ್ತಿಲ್ಲ. ಅರ್ಜಿ ಸ್ವೀಕರಿಸಲು ಗ್ರಾಪಂ, ಪಪಂ, ಪುರಸಭೆ ಮತ್ತು ನಗರಸಭೆ ನಿರಾಕರಿಸುತ್ತಿದ್ದು, ವಸತಿ ನಿಗಮದ ವೆಬ್‌ಸೈಟ್ ಚಾಲ್ತಿಯಲ್ಲಿಲ್ಲ. ನಿವೇಶನ ಮತ್ತು ಸೂರಿಗಾಗಿ ಒತ್ತಾಯಿಸಿ, ಗಂಗಾವತಿ ತಹಸೀಲ್ ಕಚೇರಿ ಎದುರುಗಡೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ ಮಾತನಾಡಿ, ಜಿಲ್ಲೆಯ 74ಸಾವಿರ ಕುಟುಂಬಗಳು ವಸತಿ ಯೋಜನೆಯಿಂದ ವಂಚಿತರಾಗಿದ್ದು, ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಧಿಕಾರ ಸಿಕ್ಕ ನಂತರ ಸಿಎಂ ಸೂರು ರಹಿತರನ್ನು ಮರೆತಿದ್ದಾರೆ ಎಂದರು.