ಮ್ಯಾಡ್ರಿಡ್: ಭಾನುವಾರ ಪಟ್ಟಣದ ಬೀದಿಯಲ್ಲಿ ಸಿಂಹವೊಂದು ಕಾಣಿಸಿಕೊಂಡಿದೆ ಎಂಬ ಕರೆ ಸ್ವೀಕರಿಸಿದ ಸ್ಪೇನ್ ಪೊಲೀಸರು ಜನರ ಕಾಳಜಿಯಿಂದಲೇ ಸಿಂಹದ ಜಾಡನ್ನು ಹಿಡಿಯಲು ತಮ್ಮ ತಂಡದೊಂದಿಗೆ ಸ್ಪೇನ್ನ ಮೊಲಿನಾ ಡಿ ಸೆಗುರಾ ಪಟ್ಟಣಕ್ಕೆ ಆಗಮಿಸಿದಾದ ಅವರಿಗೆ ಅಕ್ಷರಶಃ ಅಚ್ಚರಿಯೇ ಕಾದಿತ್ತು.
ಪೊಲೀಸರು ಬರುವ ಮುಂಚೆಯೇ ಸಿಂಹವನ್ನು ಸ್ಥಳೀಯರು ಸರೆಹಿಡಿದಿದ್ದರು. ಬಳಿಕ ಸಿಂಹವನ್ನು ಪೊಲೀಸರ ಎದುರು ನಿಲ್ಲಿಸಿದಾಗ ಅಕ್ಷರಶಃ ಕಂಗಾಲಾಗಿದ್ದಾರೆ. ಏಕೆಂದರೆ ಅವರ ಮುಂದೆ ಇದ್ದದ್ದು ಸಿಂಹವಲ್ಲ, ಬದಲಾಗಿ ಥೇಟ್ ಸಿಂಹದಂತೆ ಕಾಣುವ ಶ್ವಾನ.
ಶ್ವಾನವನ್ನು ನೋಡಿ ಅಚ್ಚರಿಗೊಂಡ ಸ್ಪೇನ್ ಪೊಲೀಸರು ಸಿಂಹದ ರೀತಿಯಂತಿರುವ ಶ್ವಾನದ ಫೋಟೋವನ್ನು ಸೆರೆಹಿಡಿದು ತಮ್ಮ ಟ್ವಿಟರ್ ಪೇಜ್ನಲ್ಲಿ ಅಪ್ಲೋಡಿ ಮಾಡಿ ಘಟನೆಯನ್ನು ವಿವರಿಸಿದ್ದಾರೆ.
ಭಾನುವಾರ ಗಾರ್ಡನ್ ಏರಿಯಾದಲ್ಲಿ ಸಿಂಹವೊಂದು ಅಡ್ಡಾಡುತ್ತಿರುವುದಾಗಿ ಅನೇಕ ಎಚ್ಚರಿಕಾ ಕರೆಗಳನ್ನು ಸ್ವೀಕರಿಸಿದೆವು. ಜಾಗೃತರಾದ ನಾವು ಅಲ್ಲಿಗೆ ಹೋಗಿ ನೋಡಿದರೆ, ಸಿಂಹವು ಶ್ವಾನವಾಗಿ ಬದಲಾಗಿತ್ತು ಎಂದು ಮೊಲಿನಾ ಡಿ ಸೆಗುರಾ ಪಟ್ಟಣ ಪೊಲೀಸರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಬೀದಿ ಬೀದಿ ಅಡ್ಡಾಡುತ್ತಿದ್ದ ನಾಯಿಯನ್ನು ಅದರ ಮಾಲೀಕನ ಬಳಿ ಸೇರಿಸಲಾಗಿದೆ. ಆದರೆ, ಶ್ವಾನಕ್ಕೆ ಸಿಂಹದಂತೆ ಕೂದಲು ಕತ್ತರಿಸಿದ್ದೇಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ನೋಡಿ ನೆಟ್ಟಿಗರು ಕೂಡ ಬಾಯಿ ಮೇಲೆ ಬೆರಳಿಟ್ಟಿದ್ದಾರೆ. (ಏಜೆನ್ಸೀಸ್)
Se han recibido esta mañana varios avisos alertando de que habían visto suelto por la zona de huerta un león 🦁, otros un bicho extraño, pero finalmente le hemos pasado el lector de microchip y ha resultado ser un… perro 🐕. Identificando a su titular. pic.twitter.com/O5k6ZClX9a
— Policia Local Molina de Segura (@MolinaPolicia) March 7, 2020
VIDEO| ವೆಡ್ಡಿಂಗ್ ಫೋಟೋಶೂಟ್ ವೇಳೆ ನವದಂಪತಿಗೆ ಶಾಕ್ ನೀಡಿದ ಜಿರಾಫೆ: ವಿಡಿಯೋ ವೈರಲ್!
ಬಾಲಿವುಡ್ ನಟಿಯ ಅತ್ತೆಯಿಂದ ಫ್ಲಿಪ್ ದಿ ಸ್ವಿಚ್ ಹಾಡಿಗೆ ಹೆಜ್ಜೆ: ವೈರಲ್ ಆಯ್ತು ಈ ಜೋಡಿಯ ಡ್ಯಾನ್ಸ್