Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕಮಲ-ದಳ ಕೋಟೆಗಳತ್ತ ಕೈ ಚಿತ್ತ!

Wednesday, 29.08.2018, 3:04 AM       No Comments

| ಮಾದರಹಳ್ಳಿ ರಾಜು ಮಂಡ್ಯ

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳನ್ನೂ ಗೆದ್ದು ಬೀಗುತ್ತಿರುವ ಜೆಡಿಎಸ್ ತನ್ನ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಕೊಳ್ಳಲು ಹವಣಿಸುತ್ತಿದ್ದರೆ, ಭೇದಿಸಲು ಕಾಂಗ್ರೆಸ್ ಕಸರತ್ತು ನಡೆಸá-ತ್ತಿದೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಕಮಲ ವಿಫಲವಾಗಿದ್ದು, ಕೆಲವೆಡೆ ಮಾತ್ರ ಪೈಪೋಟಿಗೆ ನಿಂತಿದೆ.

ಕೆ.ಆರ್.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣಗಳ ಪುರಸಭೆ ಅವಧಿ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಜಿಲ್ಲೆಯ ಮೂವರು ವಿಧಾನ ಪರಿಷತ್ ಸದಸ್ಯರು ಜೆಡಿಎಸ್​ನವರೇ ಆಗಿರುವುದರಿಂದ ಸಹಜವಾಗಿ ದಳಪಡೆ ಮುಂದಿರುವಂತಿದೆ. ಆದರಿಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಕುಟುಂಬ, ಸಂಬಂಧಗಳು ಪ್ರಮುಖಪಾತ್ರ ವಹಿಸುತ್ತವೆೆ. ಬಹುತೇಕ ಕಾಂಗ್ರೆಸ್-ಜೆಡಿಎಸ್ ನಡುವೆಯೇ ಕುಸ್ತಿ, ಕೆಲವೆಡೆ ಕಮಾಲ್​ಗೆ ಕಮಲ ಯತ್ನಿಸುತ್ತಿದೆ.

ಪಾಂಡವಪುರದಲ್ಲಿ ದೋಸ್ತಿ ಫೈಟ್

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರ ಕ್ಷೇತ್ರ ಪಾಂಡವಪುರದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಳಸಿದ್ದ ಕಾಂಗ್ರೆಸ್-ರೈತಸಂಘದ ದೋಸ್ತಿ ಮತ್ತೆ ಒಂದá-ಗೂಡಿದೆ. 23 ವಾರ್ಡ್​ಗಳಲ್ಲಿ ಕಾಂಗ್ರೆಸ್ 10, ರೈತಸಂಘ 13ರಲ್ಲಿ ಸ್ಪರ್ಧೆಗಿಳಿದಿವೆ. ಬಿಜೆಪಿ 13 ವಾರ್ಡ್​ಗಳಲ್ಲಿ ಮಾತ್ರ ಸ್ಪರ್ಧೆಗಿಳಿದಿದ್ದು, ಕೆಲವೆಡೆ ಮಾತ್ರ ಪೈಪೋಟಿ ನೀಡುತ್ತಿದೆ. 2 ಸ್ಥಾನ ಬಯಸಿದ್ದ ಬಿಎಸ್​ಪಿಗೆ ಜೆಡಿಎಸ್ ಮನ್ನಣೆ

ನೀಡದ ಹಿನ್ನೆಲೆಯಲ್ಲಿ ಒಂದೆಡೆ ಬಿಎಸ್​ಪಿ ಅಭ್ಯರ್ಥಿ ಕಣದಲ್ಲಿದ್ದಾರೆ. ಪಾಂಡವಪುರ ಪಟ್ಟಣ ಪಂಚಾಯಿತಿ ಈ ಬಾರಿ ಪುರಸಭೆಯಾಗಿದ್ದು, ಪುಟ್ಟಣ್ಣಯ್ಯ ಅನುಪಸ್ಥಿತಿಯಲ್ಲಿ ಚುನಾವಣೆ ನಡೆಯುತ್ತಿದೆ.

ಸಚಿವದ್ವಯರಿಗೆ ಸವಾಲ್

ಲೋಕಸಭಾ ಚುನಾವಣೆ ದೃಷ್ಟಿಯಿಂದ ಇದು ಜೆಡಿಎಸ್-ಕಾಂಗ್ರೆಸ್​ಗೆ ಪ್ರತಿಷ್ಠೆಯ ಚುನಾವಣೆ. ಪ್ರಮುಖವಾಗಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರಿಗೆ ಎಲ್ಲೆಡೆ ಅಧಿಕಾರ ಹಿಡಿಯಬೇಕಾದ ಒತ್ತಡವಿದೆ. ಜತೆಗೆ ಸೋಲಿನ ಸುಳಿಯಿಂದ ಹೊರಬರಲು ಹವಣಿಸಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಆತ್ಮಾನಂದ, ಮೇಲುಕೋಟೆಯಲ್ಲಿ ರೈತಸಂಘದ ನಾಯಕರು ಆತ್ಮವಿಶ್ವಾಸದ ಟಾನಿಕ್ ನೀಡುತ್ತಿದ್ದು, ಬಿಗ್ ಫೈಟ್ ನಿಶ್ಚಿತ.

ಮಂಡ್ಯದಲ್ಲಿ ತ್ರಿಕೋನ ಯಾನ!

ನಗರಸಭೆಯ 35 ವಾರ್ಡ್​ಗಳಲ್ಲಿ ಜೆಡಿಎಸ್ ಎಲ್ಲೆಡೆ ಸ್ಪರ್ಧಿಸಿದೆ. 1 ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಿದ್ದರೆ, 2 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಲ್ಲ. 1 ‘ಬಿ’ ಫಾರಂ ಕೈತಪ್ಪಿದ್ದಕ್ಕೆ ಸಿಟ್ಟಾಗಿ 35 ‘ಬಿ’ ಫಾರಂ ಬಿಸಾಡಿ ಬಂದು, ಕಡೆಗೆ ಎಲ್ಲವನ್ನೂ ತನ್ನ ಬೆಂಬಲಿಗರಿಗೆ ಹಂಚಿರುವ ಜೆಡಿಎಸ್ ಶಾಸಕ ಶ್ರೀನಿವಾಸ್​ರಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಆತ್ಮಾನಂದ, ಗಣಿಗ ರವಿಕುಮಾರ್ ಸೇರಿ ಹಲವರು ಟೊಂಕಕಟ್ಟಿದ್ದಾರೆ. ಪ್ರಥಮ ಬಾರಿಗೆ 33 ವಾರ್ಡ್​ಗಳಲ್ಲಿ ಅಭ್ಯರ್ಥಿ ಹಾಕಿರುವ ಕಮಲ, ಆರಂಭದಲ್ಲಿಯೇ ಎ, ಬಿ, ಸಿ ಗ್ರೇಡ್ ನೀಡಿ ಹಲವು ಅಭ್ಯರ್ಥಿಗಳ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಕೆಲವೆಡೆ ಅನ್ಯ ಪಕ್ಷದವರನ್ನು ಕಣಕ್ಕಿಳಿಸಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಜಿಪಂ ಸದಸ್ಯ ಚಂದಗಾಲು ಶಿವಣ್ಣ, ಅಬ್ಬಾಸ್ ಆಲಿ ಬೊಹ್ರಾ, ನಾಗಣ್ಣಗೌಡ, ಅರವಿಂದ್ ಸೇರಿ ಹಲವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೂ ಪ್ರಬಲರಾಗಿದ್ದಾರೆ.

ಮದ್ದೂರಲ್ಲಿ ಗುದ್ದು ಕೊಡೋರ್ಯಾರು?

ಮದ್ದೂರಲ್ಲಿ ಗೆಲá-ವಿಗಾಗಿ ಭಾರಿ ಕಸರತ್ತು ನಡೆದಿದ್ದು, ಕೆಲ ವಾರ್ಡ್​ನಲ್ಲಿ ಪ್ರತಿ ಮನೆಗೆ 50 ಕೆ.ಜಿ. ಅಕ್ಕಿ, 5 ಲೀಟರ್ ಅಡುಗೆ ಎಣ್ಣೆ ವಿತರಿಸಲಾಗಿದೆ. ಬೆಳ್ಳಿ ಪಾತ್ರೆಗಳು ಸೇರಿ ವಿವಿಧ ಆಮಿಷ ಒಡ್ಡಲಾಗುತ್ತಿದೆ. ಇದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರ ಕ್ಷೇತ್ರವಾಗಿದ್ದು, ಸವಾಲಾಗಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಕೊರತೆ ಅಭ್ಯರ್ಥಿಗಳನ್ನು ಕಂಗೆಡಿಸಿದಂತೆ ಕಾಣುತ್ತಿಲ್ಲ. 23 ವಾರ್ಡ್​ಗಳ ಪೈಕಿ 20ನೇ ವಾರ್ಡ್​ನಿಂದ ಜೆಡಿಎಸ್​ನ ಪ್ರಸನ್ನಕುಮಾರ್ ಅವಿರೋಧ ಆಯ್ಕೆಯಾಗಿದ್ದರೆ, ಮತ್ತೊಂದು ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಬಿಜೆಪಿ 15 ಕಡೆ ಮಾತ್ರ ಕಣದಲ್ಲಿದ್ದು, ಕೆಲವೆಡೆ ಪೈಪೋಟಿ ನೀಡಲಿದೆ.

ಯಾರಿಗೆ ನಾಗ‘ಮಂಗಲ’?

ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಸೋತ ಚಲುವರಾಯಸ್ವಾಮಿಗೆ ಇದು ಪ್ರತಿಷ್ಠೆ ಪ್ರಶ್ನೆ. ಪುರಸಭೆಯಾದ ಬಳಿಕ ನಡೆಯುತ್ತಿರುವ ಪ್ರಥಮ ಚುನಾವಣೆಯಾಗಿದ್ದು, 23 ವಾರ್ಡ್​ಗಳಲ್ಲೂ ಜೆಡಿಎಸ್, ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಇದೆ. ಮತ್ತದೇ ಸುರೇಶ್​ಗೌಡ, ಶಿವರಾಮೇಗೌಡ, ಅಪ್ಪಾಜಿಗೌಡ, ಶ್ರೀಕಂಠೇಗೌಡರ ವಿರುದ್ಧ ಚಲುವರಾಯಸ್ವಾಮಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ 7 ವಾರ್ಡ್​ಗಳಲ್ಲಿ ಅಭ್ಯರ್ಥಿಗಳನ್ನು ಕಣRಳಿಸಿದೆ.

ಬೆಳ್ಳೂರು ಪ.ಪಂ. ಕುತೂಹಲ

ಬೆಳ್ಳೂರು ಪಟ್ಟಣ ಪಂಚಾಯಿತಿಯ 13 ವಾರ್ಡ್

ಗಳಲ್ಲಿ ಜೆಡಿಎಸ್ ಎರಡು, ಕಾಂಗ್ರೆಸ್ ಒಂದು ವಾರ್ಡ್​ನಲ್ಲಿ ಅಭ್ಯರ್ಥಿಗಳೇ ಇಲ್ಲ. ಬಿಜೆಪಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೆಲ ಪಕ್ಷದ ಕಾರ್ಯಕರ್ತರೂ ಪಕ್ಷೇತರವಾಗಿ ಕಣಕ್ಕೆ ಇಳಿದಿರುವುದು ಕುತೂಹಲ ಕೆರಳಿಸಿದೆ.


ಶಿವಮೊಗ್ಗದಲ್ಲಿ ಭಿನ್ನಮತ ಕಾಟ?

| ಅರವಿಂದ ಅಕ್ಲಾಪುರ ಶಿವಮೊಗ್ಗ

ನಗರ ಪಾಲಿಕೆಯಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕೆಂಬ ತವಕ ಬಿಜೆಪಿ ಹಾಗೂ ಕಾಂಗ್ರೆಸ್​ಗೆ. ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚು ಸ್ಥಾನಗಳಿಸಿದರೆ ಹಿಂದಿನ ಐದು ವರ್ಷದಂತೆ ಮತೆôದು ವರ್ಷ ಕಿಂಗ್ ಮೇಕರ್ ಆಗಬಹುದೆಂಬ ಕನಸು ಜೆಡಿಎಸ್​ಗೆ. ನಗರಸಭೆಯಿಂದ ಪಾಲಿಕೆಗೆ ಮೇಲ್ದರ್ಜೆಗೇರಿದ ಬಳಿಕ ಸ್ಮಾರ್ಟ್ ಸಿಟಿ ಗರಿ ಹೊತ್ತ ಶಿವಮೊಗ್ಗಕ್ಕೆ ಇದು ಮೊದಲ ಪೂರ್ಣ ಪ್ರಮಾಣದ ಚುನಾವಣೆ. 35 ವಾರ್ಡ್​ಗಳಿಗೆ 206 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜೆಡಿಎಸ್ ಭಿನ್ನ ಲೆಕ್ಕಾಚಾರ

ಬಿಜೆಪಿ-ಕಾಂಗ್ರೆಸ್ ಎಲ್ಲ 35 ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಜೆಡಿಎಸ್ 31 ವಾರ್ಡ್​ಗಳಿಗೆ ಸ್ಪರ್ಧೆ ಸೀಮಿತಗೊಳಿಸಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಐವರ ಪೈಕಿ ಮೂವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಮೇಯರ್ ಏಳುಮಲೈ ಪತ್ನಿಗೆ ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ 2013ಕ್ಕಿಂತ ಸ್ವಲ್ಪ ಉತ್ತಮಗೊಳಿಸಿಕೊಂಡು ಅತಂತ್ರ ಪಾಲಿಕೆ ನಿರ್ವಣವಾದರೆ ನಾವೇ ಕಿಂಗ್ ಮೇಕರ್ ಎಂಬುದು ಜೆಡಿಎಸ್ ಲೆಕ್ಕಾಚಾರ.

ಬಿಜೆಪಿ-ಕಾಂಗ್ರೆಸ್​ಗೆ ವೇದನೆ

ಕಳೆದ ನಗರಸಭೆ (ಆಗ ಇನ್ನೂ ಮಹಾನಗರಪಾಲಿಕೆಯಾಗಿರಲಿಲ್ಲ) ಚುನಾವಣೆಯು ಬಿ.ಎಸ್.ಯಡಿಯೂರಪ್ಪ (ಕೆಜೆಪಿ)- ಕೆ.ಎಸ್.ಈಶ್ವರಪ್ಪ (ಬಿಜೆಪಿ) ನಡುವಿನ ಸ್ಪರ್ಧಾ ಕಣವಾಗಿತ್ತು. ಈಗ ಆಂತರಿಕವಾಗಿ ಏನೇ ಇದ್ದರೂ ಬಹಿರಂಗವಾಗಿ ಒಂದಾಗಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಚುನಾವಣಾ ತಂತ್ರ ಈಶ್ವರಪ್ಪ ನಿರ್ಧಾರದಂತೆ ನಡೆಯುತ್ತಿದೆ. ಕೆಜೆಪಿಯಿಂದ ನಗರಸಭೆಗೆ ಆಯ್ಕೆಯಾಗಿದ್ದ ಯಾರಿಗೂ ಮತ್ತೊಂದು ಅವಕಾಶ ನೀಡಿಲ್ಲ. ಇದು ಸ್ವಲ್ಪಮಟ್ಟಿನ ಅಸಮಾಧಾನಕ್ಕೂ ಕಾರಣವಾಗಿದೆ. 3 ವಾರ್ಡ್ ಗಳಲ್ಲಿ ಬಂಡಾಯದ ಬಿಸಿ ಇದೆ. ಕಾಂಗ್ರೆಸ್​ಗೆ ಈ ಚುನಾವಣೆ ಸವಾಲಾಗಿದ್ದು, ಬಂಡಾಯ, ಟಿಕೆಟ್ ಸಿಗದವರ ಅಸಮಾಧಾನವನ್ನು ಮೆಟ್ಟಿನಿಲ್ಲಬೇಕಿದೆ. 8 ವಾರ್ಡ್​ಗಳಲ್ಲಿ ಎಸ್​ಡಿಪಿಐ ಅಭ್ಯರ್ಥಿಗಳಿದ್ದು, ಪಾರಂಪರಿಕ ಮತ ಗಳಿಸಿದರೆ ಎಂಬ ಆತಂಕವೂ ಎದುರಾಗಿದೆ.

ಗಣಿ ಸಚಿವರಿಗೆ ತವರಿನ ಸವಾಲು!

| ಸ.ದಾ. ಜೋಶಿ ಬೀದರ್

ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ಪೈಕಿ ಹುಮನಾಬಾದ್ ತಾಲೂಕಿನ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಹಳ್ಳಿಖೇಡ್(ಬಿ) ಪುರಸಭೆಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಗಣಿ, ಭೂ ವಿಜ್ಞಾನ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ತವರಿನಲ್ಲಿ ಮೊದಲ ಸವಾಲು ಎದುರಾಗಿದೆ. ಸ್ಥಳೀಯವಾಗಿ ಮೈತ್ರಿ ಏರ್ಪಡದ ಕಾರಣ ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕುಸ್ತಿ ನಡೆಸುತ್ತಿವೆ. ಇಬ್ಬರ ಮಧ್ಯೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ಹೆಣೆಯುತ್ತಿದೆ. ಮೂರೂ ಪಕ್ಷದ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದು, ಲೋಕಸಭಾ ಸಮರಕ್ಕೂ ಮುನ್ನ ತಂತಮ್ಮ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಲು ಮುಂದಾಗಿದ್ದಾರೆ.

ಗರಿಗೆದರಿದ ಅಭಿವೃದ್ಧಿ ಆಸೆ

ಹಳ್ಳಿಖೇಡ್ ಮುಂಚೆ ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಅತಿ ಹೆಚ್ಚು 51 ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿ ಕೇಂದ್ರವಾಗಿತ್ತು. ಇದನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಸ್ಥಳೀಯರ ದಶಕದ ಬೇಡಿಕೆಯನ್ನು ಹಿಂದಿನ ಸರ್ಕಾರ ಈಡೇರಿಸಿದೆ. ಈಗ ಅಸ್ತಿತ್ವಕ್ಕೆ ಬಂದ ಪುರಸಭೆ 23 ವಾರ್ಡ್ ಹೊಂದಿದೆ. ಪುರಸಭೆ ರಚನೆ ಮೂಲಕ ಪಟ್ಟಣದ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ಬಂದು ಅಭಿವೃದ್ಧಿಗೆ ಹೊಸ ಆಯಾಮ ಸಿಗಬಹುದೆಂಬ ನಿರೀಕ್ಷೆಗಳು ಸ್ಥಳೀಯವಾಗಿ ಗರಿಗೆದರಿವೆ.

Leave a Reply

Your email address will not be published. Required fields are marked *

Back To Top