ಪರ್ಸನಲ್ ಲೋನ್ ಯಾರಿಗೆ ಸಿಗುತ್ತದೆ?

ಉತ್ತರಿಸುವವರು: ಸಿ.ಎಸ್. ಸುಧೀರ್

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಪರ್ಸನಲ್ ಲೋನ್​ನ ಅಗತ್ಯವಿದೆ. ಹೇಗೆ ಪಡೆದುಕೊಳ್ಳುವುದು ತಿಳಿಸಿ.

| ಆನಂದ್ ಬೆಂಗಳೂರು

ಹೆಸರೇ ಹೇಳುವಂತೆ ವೈಯಕ್ತಿಕ ಬಳಕೆಗೆ ಬ್ಯಾಂಕಿನಿಂದ ಪಡೆದುಕೊಳ್ಳುವುದೇ ಪರ್ಸನಲ್ ಲೋನ್ (ವೈಯಕ್ತಿಕ ಸಾಲ). ಇಲ್ಲಿ ನೀವು ಯಾವ ಉದ್ದೇಶಕ್ಕಾದರೂ ಸಾಲದ ಹಣವನ್ನು ಬಳಸಬಹುದು, ವೇತನ ಅಥವಾ ಆದಾಯದ ಆಧಾರದ ಮೇಲೆ ಸಾಲ ಸಿಗುತ್ತದೆ. ಪರ್ಸನಲ್ ಲೋನ್ ಪಡೆಯಬೇಕಾದರೆ ಆದಾಯ ತೆರಿಗೆ ಪಾವತಿಸಿರುವ ಮಾಹಿತಿ (ಐಟಿ ರಿಟರ್ನ್್ಸ, ಸ್ಯಾಲರಿ ಸ್ಲಿಪ್ ಅಗತ್ಯ. ಸಂಬಳದ ಆಧಾರದ ಮೇಲೆ ಎಷ್ಟು ಪರ್ಸನಲ್ ಲೋನ್ ನೀಡಬಹುದು ಎನ್ನುವುದನ್ನು ಬ್ಯಾಂಕ್ ತೀರ್ವನಿಸುತ್ತದೆ. ಲೋನ್ ಸಿಗಬೇಕಾದರೆ ಕ್ರೆಡಿಟ್ ಸ್ಕೋರ್ ಸಹ ಉತ್ತಮವಾಗಿರಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎನ್ನುವುದನ್ನು ನೀವು ಇಂಡಿಯನ್ ಮನಿ ಡಾಟ್ ಕಾಂ ವೆಬ್​ಸೈಟ್​ಗೆ (ಜಠಿಠಿಟಠ://ಜ್ಞಿಛಜಿಚ್ಞಞಟ್ಞಛಿಢ.ಟಞ) ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು. ಪರ್ಸನಲ್ ಲೋನ್​ನ ಬಡ್ಡಿದರ ಗೃಹಸಾಲದ ಬಡ್ಡಿದರಕ್ಕಿಂತ ಹೆಚ್ಚಿರುತ್ತದೆ. ಕೆಲ ಬ್ಯಾಂಕ್​ಗಳು 12-16 ಪರ್ಸೆಂಟ್​ವರೆಗೆ ಬಡ್ಡಿ ವಿಧಿಸುತ್ತವೆ. ತುರ್ತು ಅಗತ್ಯಗಳಿಗೆ ಮಾತ್ರ ಪಡೆಯುವುದು ಉತ್ತಮ.

ಎಸ್​ಐಪಿ ಎಂದರೇನು? ಇದರಲ್ಲಿ ಹಣ ಹೂಡಬಹುದೇ ಮಾಹಿತಿ ಕೊಡಿ.

| ಪೀತಾಂಬರ್ ಹುಗ್ಗಿ ಹುಬ್ಬಳ್ಳಿ ಮತ್ತು ಶ್ರೀನಿವಾಸ ಪಾಟೀಲ್ ಬಾಗಲಕೋಟೆ

ಹನಿ ಹನಿಗೂಡಿದರೆ ಹಳ್ಳ ಎಂಬ ಮಾತನ್ನು ನೀವು ಕೇಳಿಲ್ಲವೇ? ಸರಳವಾಗಿ ಹೇಳುವುದಾದರೆ ಈ ಗಾದೆ ಮಾತಿಗೆ ಅನ್ವರ್ಥದಂತೆ ಎಸ್​ಐಪಿ ನಿಲ್ಲುತ್ತದೆ. ಎಸ್​ಐಪಿ ಅಂದರೆ ಮ್ಯೂಚುವಲ್ ಫಂಡ್​ಗಳಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಯೋಜನೆ. ಇದರಲ್ಲಿ ನಿಯಮಿತವಾಗಿ ತಿಂಗಳಿಗೊಮ್ಮೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು. ತಿಂಗಳಿಗೆ ಕನಿಷ್ಠ 500 ರೂ. ಇದ್ದರೂ ಸರಿ, ನೀವು ಎಸ್​ಐಪಿಯಲ್ಲಿ ಹೂಡಿಕೆ ಆರಂಭಿಸಬಹುದು. ಇದಕ್ಕೆ ಪ್ಯಾನ್​ಕಾರ್ಡ್ ಜತೆ ಕೆವೈಸಿ ಇದ್ದರೆ ಸಾಕು. ಡಿಮ್ಯಾಟ್ ಖಾತೆ ಬೇಕೆಂದು ಇಲ್ಲ. ನಿಮ್ಮೂರಿನಲ್ಲಿ ಮ್ಯೂಚುವಲ್ ಫಂಡ್ ಪ್ರತಿನಿಧಿಗಳು ಯಾರಾದರೂ ಇದ್ದರೆ, ಅವರ ಬಳಿ ಹೋದರೆ ಮ್ಯೂಚುವಲ್ ಫಂಡ್ ಆಯ್ಕೆಗೆ ಸಹಕರಿಸುತ್ತಾರೆ. ತಜ್ಞರ ಸಲಹೆ ಪಡೆದು ಆದಷ್ಟು ಲಾಭದಲ್ಲಿರುವ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಮ್ಯೂಚುವಲ್ ಫಂಡ್​ಗೆ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ ಮೂಲಕ ನಿಗದಿಪಡಿಸಿದಲ್ಲಿ ಸ್ವಯಂಚಾಲಿತವಾಗಿ ಪ್ರತಿ ತಿಂಗಳು ಹಣ ಎಸ್​ಐಪಿ ಖರೀದಿಗೆ ವರ್ಗಾವಣೆಯಾಗುತ್ತದೆ. ನೆನಪಿನಲ್ಲಿಡಿ, ನಿರ್ದಿಷ್ಟ ದಿನಾಂಕದಂದು ನಿಗದಿತ ಮೊತ್ತ ಬ್ಯಾಂಕ್ ಖಾತೆಯಲ್ಲಿ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಮ್ಯೂಚುವಲ್ ಫಂಡ್ ಖರೀದಿ ನಿಲ್ಲಿಸಬೇಕೆಂದರೆ ಬ್ಯಾಂಕ್​ಗೆ ಮೊದಲೇ ಮಾಹಿತಿ ನೀಡಿ.

ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿ: ಉದಾಹರಣೆ 1:5 ವರ್ಷದ ಮಗುವಿನ ಹೆಸರಿನಲ್ಲಿ ತಿಂಗಳಿಗೆ 5 ಸಾವಿರ ಉಳಿಸುತ್ತ ಬಂದು ಶೇ. 15ರಷ್ಟು ಲಾಭ ಸಿಕ್ಕರೆ ಆ ಮಗುವಿಗೆ 18 ವರ್ಷ ತುಂಬುವಷ್ಟರಲ್ಲಿ ನಿಮ್ಮ ಕೈಯಲ್ಲಿ 22.3 ಲಕ್ಷ ರೂ. ಇರುತ್ತದೆ. ಇದು ಎಸ್​ಐಪಿಯ ಲೆಕ್ಕಾಚಾರ.

ನನಗೆ ಜೀವವಿಮಾ ಪಾಲಿಸಿಯಿಂದ ಒಂದು ಲಕ್ಷ ರೂ. ಮೆಚ್ಯೂರಿಟಿ ಹಣ ಬಂದಿದೆ. ಇದಕ್ಕೆ ಆದಾಯ ತೆರಿಗೆ ಯಾವ ರೀತಿ ಕಟ್ಟಬೇಕಾಗುತ್ತದೆ ತಿಳಿಸಿ.

| ದೇವರಾಜ ಕೆ. ದಾವಣಗೆರೆ

ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿರುವ ಪ್ರೀಮಿಯಂ ಹಣವು ಸಮ್ ಅಶೂರ್ಡ್ ಮೊತ್ತದ ಶೇ. 10ಕ್ಕಿಂತ ಜಾಸ್ತಿ ಇದ್ದಲ್ಲಿ ಮೆಚ್ಯೂರಿಟಿಗೆ ಒಳಪಟ್ಟ ಪಾಲಿಸಿಗಳಿಗೆ ನೀವು ಪೂರ್ಣ ತೆರಿಗೆ ಪಾವತಿಸಬೇಕಾಗುತ್ತದೆ. ನೀವು ಪಡೆದಿರುವ 1 ಲಕ್ಷ ರೂ. ಮೆಚ್ಯೂರಿಟಿ ಹಣಕ್ಕೆ ತೆರಿಗೆ ಪಾವತಿಸಬೇಕಿರುವ ಸಾಧ್ಯತೆ ಕಡಿಮೆ. ಆದರೆ ಪಾಲಿಸಿಯ ಮೆಚ್ಯೂರಿಟಿ ಹಣ ನೀಡಿದ ಇನ್ಶೂರೆನ್ಸ್ ಕಂಪನಿಯಲ್ಲಿ ವಿಚಾರಿಸಿ ಇನ್ನಷ್ಟು ಸ್ಪಷ್ಟತೆ ಪಡೆದುಕೊಳ್ಳುವುದು ಒಳಿತು.

ಆದಾಯ ತೆರಿಗೆಯಲ್ಲಿನ 40 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಪಿಂಚಣಿದಾರರಿಗೂ ಅನ್ವಯಿಸುವುದೇ?

| ವಿ.ಎಂ. ಪ್ರಭು ಕುಮಟಾ

ಪಿಂಚಣಿದಾರರಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ಅನ್ವಯವಾಗುತ್ತದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಈ ವಿಷಯವನ್ನು ಸ್ಪಷ್ಟಪಡಿಸಿದೆ. ವೇತನದಾರರು ಮತ್ತು ಪಂಚಣಿದಾರರು 40 ಸಾವಿರ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ಪಡೆಯಲು ಯಾವುದೇ ರಶೀದಿ, ದಾಖಲೆ ನೀಡಬೇಕಿಲ್ಲ. ತೆರಿಗೆ ವಿನಾಯಿತಿ ಪಡೆಯಲು ಯಾವುದೇ ದಾಖಲೆ ಸಲ್ಲಿಸದೇ ಇರುವುದಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುತ್ತಾರೆ. ಇದರಿಂದಾಗಿ ನಿಮ್ಮ ಒಟ್ಟು ಆದಾಯದಲ್ಲಿ 40 ಸಾವಿರ ರೂ.ಗೆ ನೇರವಾಗಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

ಷೇರು ಮಾರುಕಟ್ಟೆಯ ಬಗ್ಗೆ ನಾನು ಕಲಿಯಬೇಕು. ಇದಕ್ಕೆ ಯಾವುದಾದರೂ ಕೋರ್ಸ್ ಇದೆಯಾ ತಿಳಿಸಿ.

| ಅಕ್ಷಯ್ ಕುಮಾರ್ ಪಟ್ಟದ

ಷೇರು ಮಾರುಕಟ್ಟೆ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಲು ಸಾಕಷ್ಟು ಕೋರ್ಸ್​ಗಳಿವೆ. ಹಲವು ಹೂಡಿಕೆ ತಜ್ಞರು ಈ ಕೋರ್ಸ್​ಗಳನ್ನು ನಡೆಸುತ್ತಾರೆ. ಷೇರು ಮಾರುಕಟ್ಟೆಯ ಕೋರ್ಸ್ ಅಥವಾ ಕಾರ್ಯಾಗಾರಕ್ಕೆ ಸೇರುವ ಮೊದಲು ಸಾಕಷ್ಟು ಪೂರ್ವಾಪರ ತಿಳಿದು ಮುನ್ನಡೆಯಿರಿ. ಹಲವರು ಷೇರು ಮಾರುಕಟ್ಟೆ ಕೋರ್ಸ್ ಮಾಡುವುದಾಗಿ ಜಾಹೀರಾತು ನೀಡಿ ವಂಚಿಸಿರುವ ಪ್ರಕರಣಗಳಿವೆ. ನಿಖರ ಮತ್ತು ನಂಬಲರ್ಹ ಮಾಹಿತಿಗಾಗಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ)ನ ವೆಬ್​ಸೈಟ್​ಗೆ ಭೇಟಿ ನೀಡಿ. ಅಲ್ಲಿ ಬಿಎಸ್​ಇ ವತಿಯಿಂದಲೇ ನಡೆಸುವ ಕಾರ್ಯಾಗಾರ ಮತ್ತು ಕೋರ್ಸ್​ಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆ.

80 ವರ್ಷದ ನಾಗರಿಕರಿಗೆ ಆದಾಯ ತೆರಿಗೆ ಮಿತಿ ಎಷ್ಟು ತಿಳಿಸಿ.

| ರಮಾಮಣಿ

2018ರ ಬಜೆಟ್ ಪ್ರಕಾರ 60-80 ವರ್ಷಗಳ ವಯಸ್ಸಿನ ಹಿರಿಯ ನಾಗರಿಕರಿಗೆ 3 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. 80 ವರ್ಷ ಮೇಲ್ಪಟ್ಟ ಅತ್ಯಂತ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಪ್ರಸಕ್ತ ಸಾಲಿನ ತೆರಿಗೆ ಮಿತಿಗಳ ಬಗ್ಗೆ ಪ್ರತ್ಯೇಕವಾಗಿ ವಿವರಿಸಲಾಗಿದೆ. ಅದನ್ನು ಗಮನಿಸಿ.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.

ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

Leave a Reply

Your email address will not be published. Required fields are marked *