ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂದರಂತೆ ಎಲ್​.ಕೆ. ಆಡ್ವಾಣಿ, ಅದಕ್ಕೆ ಟಿಕೆಟ್​ ಕೊಡಲಿಲ್ಲವಂತೆ

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್​.ಕೆ. ಆಡ್ವಾಣಿ ಪಕ್ಷಕ್ಕೆ ತಿಳಿಸಿದ್ದರು. ಆದ್ದರಿಂದ ಗುಜರಾತ್​ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಅವರ ಬದಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ಎಲ್​.ಕೆ. ಆಡ್ವಾಣಿ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ತಾವು ಈ ಬಾರಿ ಲೋಕಸಭೆಗೆ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ಎಲ್​.ಕೆ. ಆಡ್ವಾಣಿ ಅವರು ಪಕ್ಷದ ಪದಾಧಿಕಾರಿಗಳಿಗೆ 3-4 ದಿನಗಳ ಮೊದಲು ತಿಳಿಸಿದ್ದರು. ತನ್ಮೂಲಕ 91 ವರ್ಷ ವಯಸ್ಸಿನ ಆಡ್ವಾಣಿ ರಾಜಕೀಯ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ದರಿಂದ ಪಕ್ಷ ಅವರಿಗೆ ಟಿಕೆಟ್​ ನೀಡದಿರಲು ನಿರ್ಧರಿಸಿತು ಎಂದು ಹೆಸರು ಹೇಳಲಿಚ್ಛಿಸದ ಆಡ್ವಾಣಿ ಆಪ್ತರು ಹೇಳಿದ್ದಾರೆ. (ಏಜೆನ್ಸೀಸ್​)

One Reply to “ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂದರಂತೆ ಎಲ್​.ಕೆ. ಆಡ್ವಾಣಿ, ಅದಕ್ಕೆ ಟಿಕೆಟ್​ ಕೊಡಲಿಲ್ಲವಂತೆ”

Comments are closed.