ಕೈ ಬೆರಳು ಮುರಿದರೂ ಆಟ ನಿಲ್ಲಿಸದ ಇಂಗ್ಲೆಂಡ್​ ಆಟಗಾರ ಲಿವಿಂಗಸ್ಟನ್​!

ನವದೆಹಲಿ: ತನ್ನೊಳಗೆ ಯಾವುದೇ ಸಮಸ್ಯೆಯಿದ್ದರೂ ತಂಡದ ಗೆಲವಿಗೆ ಶ್ರಮಿಸುವವನೇ ನಿಜವಾದ ಕ್ರೀಡಾಪ್ರೇಮಿ. ಇಂಥಹದ್ದೇ ಕ್ರೀಡಾ ಸ್ಫೂರ್ತಿಗೆ ಇಂಗ್ಲೆಂಡ್​ ತಂಡದ ಆಟಗಾರ ಲಿಯಾಮ್​ ಲಿವಿಂಗ್​ಸ್ಟೋನ್​ ಉದಾಹರಣೆಯಾಗಿದ್ದಾರೆ.

ಇಂಗ್ಲೆಂಡ್​ನ ಓಲ್ಡ್ ಟ್ರಾಫ್ಫೊರ್ಡ್​ನಲ್ಲಿ ಲಾಂಚಸೈರ್​ ಮತ್ತು ಯಾರ್ಕ್​ಸೈರ್​ ನಡುವೆ ನಡೆದ ನಾಲ್ಕು ದಿನಗಳ ಟೆಸ್ಟ್​ ಪಂದ್ಯದ ವೇಳೆ ಲಿವಿಂಗ್​ಸ್ಟನ್​ ಅವರ ಎಡಗೈಗೆ ಚೆಂಡು ತಗುಲಿ ಹೆಬ್ಬೆರಳಿನ ಮುರಿತಕ್ಕೆ ಒಳಗಾಗಿದ್ದರು. ಹೀಗಾದರೂ ಕೂಡ ಕ್ರಿಸ್​ಗೆ ಇಳಿದ ಲಿವಿಂಗಸ್ಟನ್​ ತಂಡದ ಗೆಲುವಿಗೆ ಹೋರಾಡಿದ ಪ್ರಯತ್ನಕ್ಕೆ ಎಲ್ಲರೂ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ಲಾಂಚ್​ಸೈರ್​ ತಂಡದ ನಾಯಕನಾಗಿರುವ ಲಿವಿಂಗಸ್ಟನ್​ ಬೆರಳು ಮುರಿತಕ್ಕೊಳಗಾಗಿದ್ದರೂ, ಕೈ ರಕ್ಷಣೆಗೆ ಕಾಲಿಗೆ ಹಾಕಿಕೊಳ್ಳುವ ಪ್ಯಾಡ್​ ಧರಿಸಿ ಕ್ರೀಸ್​ಗೆ ಇಳಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಇದೇ ಮೊದಲೇನಲ್ಲ
ಗಾಯದ ಸಮಸ್ಯೆಯಿದ್ದರೂ ತಂಡದ ಗೆಲುವಿಗೆ ಶ್ರಮಿಸಿದ ಆಟಗಾರರು ನಮ್ಮ ಮುಂದೆ ಬಂದು ಹೋಗಿದ್ದಾರೆ. ಅಂಥವರಲ್ಲಿ ಪ್ರಮುಖವಾಗಿ ಗಮನ ಸೆಳೆದವರೆಂದರೆ ಇಂಗ್ಲೆಂಡ್​ನ ಕೊಲಿನ್​ ಕವಾರ್ಡ್ಲಿ, ಮೆಕಲಂ ಮಾರ್ಷಲ್​ ಹಾಗೂ ಅನಿಲ್​ ಕುಂಬ್ಳೆ.

ಇಂಗ್ಲೆಂಡ್​ನ ಕೊಲಿನ್​ ಕವಾರ್ಡ್ಲಿ ಅವರು 1963 ರಲ್ಲಿ ವೆಸ್ಟ್​ ಇಂಡೀಸ್​ ತಂಡದ ವಿರುದ್ಧ ಟೆಸ್ಟ್​ನಲ್ಲಿ ತೋಳಿಗೆ ಚೆಂಡು ತಗುಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆದರೂ, ಪ್ಲ್ಯಾಸ್ಟರ್​ ಸುತ್ತಿಕೊಂಡು ಆಟವನ್ನು ಮುಂದುವರಿಸಿದ್ದರು. ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ವೆಸ್ಟ್​ ಇಂಡೀಸ್ ತಂಡದ ವೇಗಿ​ ಮೆಕಲಂ ಮಾರ್ಷಲ್​ 1984ರಲ್ಲಿ ನಡೆದ ಹೆಡಿಂಗ್ಲಿ ಟೆಸ್ಟ್​ ಪಂದ್ಯದಲ್ಲಿ ಕೈಬೆರಳು ಮುರಿತಕ್ಕೆ ಒಳಗಾಗಿ ಬೌಲಿಂಗ್​ ಮಾಡುವ ಅವಕಾಶದಿಂದ ವಂಚಿತರಾಗಿದ್ದರು. ಆದರೂ, ಆ ಪಂದ್ಯದಲ್ಲಿ ಒಂದೇ ಕೈನಲ್ಲಿ ಬ್ಯಾಟಿಂಗ್​ ಮಾಡುವ ಮೂಲಕ ಶತಕ ದಾಖಲಿಸಿ ತಂಡವು ಗರಿಷ್ಠ ಮೊತ್ತ ದಾಖಲಿಸುವಲ್ಲಿ ನೆರವಾಗಿದ್ದರು. ಅಲ್ಲದೇ ಬೌಲಿಂಗ್​ನಲ್ಲೂ ಮಿಂಚುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು.

ಭಾರತದ ಹೆಮ್ಮೆ ಅನಿಲ್​ ಕುಂಬ್ಳೆ
2002 ರಲ್ಲಿ ಆಂಟಿಗುವಾದಲ್ಲಿ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಮರ್ವ್​ ಡಿಲಾನ್ ಬೌಲಿಂಗ್​ನಲ್ಲಿ ಮುಖಕ್ಕೆ ಚೆಂಡು ತಗುಲಿ ಭಾರತದ ಲೆಗ್​ ಸ್ಪಿನ್ನರ್​ ಅನಿಲ್​ ಕುಂಬ್ಳೆ ಅವರು ದವಡೆ ನೋವಿಗೆ ಒಳಗಾಗಿದ್ದರು. ಆದರೂ, ಮುಖಕ್ಕೆ ಬ್ಯಾಂಡೇಜ್​ ಹಾಕಿಕೊಂಡು ಬೌಲ್​ ಮಾಡಿ ಬ್ರಿಯಾನ್​ ಲಾರ ಅವರ ವಿಕೆಟ್​ ಪಡೆದಿದ್ದರು. (ಏಜೆನ್ಸೀಸ್​​)​