ಬಿ.ಜಿ.ಕೆರೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ

ಕೊಂಡ್ಲಹಳ್ಳಿ: ಸರ್ಕಾರದಿಂದ ದೊರೆವ ಉಚಿತ ಸೌಲಭ್ಯ ಬಳಸಿಕೊಂಡು ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸದಸ್ಯ ಡಾ.ಬಿ.ಯೋಗೇಶ್‌ಬಾಬು ರೈತರಿಗೆ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬಿ .ಜಿ.ಕೆರೆಯಲ್ಲಿ ಪಶುಪಾಲನೆ ಇಲಾಖೆ, ಕರ್ನಾಟಕ ಹಾಲು ಮಹಾಮಂಡಳಿ, ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನುವಾರುಗಳು ಕೃಷಿ ಕ್ಷೇತ್ರದ ಸಂಪತ್ತು. ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಆಗಿದೆ ಎಂದರು.

ಮೊಳಕಾಲ್ಮೂರು ತಾಲೂಕು ಸಹಾಯಕ ನಿರ್ದೇಶಕ ತಿಮ್ಮಣ್ಣ ಮಾತನಾಡಿ, ಕಾಲುಬಾಯಿ ರೋಗ ನಿವಾರಣೆಗೆ ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಿಸಬೇಕು. ತಾಲೂಕಿನಲ್ಲಿ ಎತ್ತು, ಹಸು, ಎಮ್ಮೆ ಸೇರಿ 28.5 ಸಾವಿರ ಜಾನುವಾರುಗಳಿವೆ. ಇವುಗಳಿಗೆ ಲಸಿಕೆ ನೀಡಲು 5-6 ಸದಸ್ಯರ ಮೂರು ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಕೃಷಿ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡರಗಿ ನಾಗರಾಜ್, ಸದಸ್ಯ ಡಾ.ದೇವರಾಜ್. ಗ್ರಾಪಂ ಅಧ್ಯಕ್ಷ ಎಸ್.ಅಜ್ಜಣ್ಣ, ಗ್ರಾಪಂ ಸದಸ್ಯರಾದ ಮೊಗಲಹಳ್ಳಿ ಜಯಣ್ಣ, ಮಂಜುನಾಥ, ಗಂಗಾಧರ, ನಾಗಭೂಷಣ್, ಕೊಂಡ್ಲಹಳ್ಳಿ ತಿಪ್ಪೇಸ್ವಾಮಿ ಇತರರಿದ್ದರು.

Leave a Reply

Your email address will not be published. Required fields are marked *