ಪಂಚಭೂತಗಳಲ್ಲಿ ‘ಅಮರ’ನಾದ ಕಲಿಯುಗ ಕರ್ಣ

ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ರೆಬೆಲ್​ ಸ್ಟಾರ್​ ಅಂಬರೀಷ್​ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು.

ಪುತ್ರ ಅಭಿಷೇಕ್​ ಗೌಡ ಸಂಜೆ 5.56ಕ್ಕೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನ ಪೂರೈಸಿದರು. ವೇದ ಮಂತ್ರಗಳೊಂದಿಗೆ ಖ್ಯಾತ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ಶಿಷ್ಯಂದಿರು ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟರು.

ವರನಟ ಡಾ. ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಅಂತ್ಯಕ್ರಿಯೆ ನಡೆಯಿತು. ಮೂರು ಸುತ್ತು ಕುಶಾಲುತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸಿಎಂ ಎಚ್​ಡಿಕೆ ಅಂಬಿ ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಿದರು. ಕುಟುಂಬ ಸದಸ್ಯರು, ಚಲನಚಿತ್ರ ನಟ-ನಟಿಯರು, ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರೆಬೆಲ್ ಸ್ಟಾರ್ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವುದನ್ನು ಕಂಡು ಗದ್ಗದಿತರಾದರು. ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದರು. ಸತತ ಮೂರೂವರೆ ಗಂಟೆ 13 ಕಿ.ಮೀ. ಸಾಗಿಬಂದ ಮೆರವಣಿಗೆ ಸಂಜೆ 4 ಗಂಟೆಗೆ ಸ್ಟುಡಿಯೋ ತಲುಪಿತು. ಮಧ್ಯಾಹ್ನ 12.30ಕ್ಕೆ ಕಂಠೀರವ ಸ್ಟುಡಿಯೋದಿಂದ ಮೆರವಣಿಗೆ ಆರಂಭವಾಗಿತ್ತು.

ಇದಕ್ಕೂ ಮೊದಲು ಕಂಠೀರವ ಸ್ಟೇಡಿಯಂ ಹಾಗೂ ಮಂಡ್ಯದ ಸರ್​​ ಎಂ. ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಮಂದಿ ದರ್ಶನ ಮಾಡಿದರು.

ಅಂಬರೀಷ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಕಂಠೀರವ ಸ್ಟೇಡಿಯಂಗೆ ಹರಿದುಬಂದಿತ್ತು. ರಾಜ್ಯ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಯಿಂದ ಸೋಮವಾರ ಬೆಳಗ್ಗೆ 10 ಗಂಟೆಯವರೆಗೆ ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಅಂಬಿ ವಿಕ್ರಮ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅಸುನೀಗಿದ್ದರು.


05:32PM- ಅಂಬಿ ಅಂತ್ಯಕ್ರಿಯೆಯ ಅಂತಿಮ ಕ್ಷಣಗಳ ದೃಶ್ಯಾವಳಿ

05:17PM- ಪುರೋಹಿತರಿಂದ ಅಂತಿಮ ವಿಧಿವಿಧಾನ ಆರಂಭ.

04:58PM- ಪೊಲೀಸ್ ರಿಂದ ಮೂರು ಸುತ್ತು ಕುಶಾಲುತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಕೆ.

04:53PM- ನಟರಾದ ದರ್ಶನ್, ಯಶ್, ಪುನೀತ್ ರಾಜ್​ಕುಮಾರ್, ಅರ್ಜುನ್ ಸರ್ಜಾ, ಜಗ್ಗೇಶ್​, ದೊಡ್ಡಣ್ಣ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ರಿಂದ ಅಂತಿಮ ನಮನ

04:41PM- ಸಚಿವರಾದ ರೇವಣ್ಣ, ಜಾರ್ಜ್​​, ತೆಲುಗು ನಟ ಮೋಹನ್ ಬಾಬು, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಡಿ.ಕೆ.ಶಿವಕುಮಾರ್​, ಡಿ.ಸಿ ತಮ್ಮಣ್ಣ, ಸಿ.ಎಸ್​.ಪುಟ್ಟರಾಜು, ಸಾ.ರಾ.ಮಹೇಶ್, ಜಯಮಾಲ, ಶ್ರೀ ನಂಜಾವಧೂತ ಸ್ವಾಮೀಜಿ ಅವರಿಂದ ಗೌರವ ಸಲ್ಲಿಕೆ.

04:34PM- ಅಂಬರೀಷ್ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಕೆ; ಅಂತಿಮ ನಮನ ಸಲ್ಲಿಸಿದ ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್, ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​.

04:29PM- ಸ್ಟುಡಿಯೋ ಮುಂಭಾಗ ಅಳವಡಿಸಿರುವ ಎಲ್.ಇ.ಡಿ ಯಲ್ಲಿ ಅಂತ್ಯಕ್ರಿಯೆ ವೀಕ್ಷಿಸುತ್ತಿರುವ ಸಾವಿರಾರು ಅಭಿಮಾನಿಗಳು

04:17PM- ಅಂತ್ಯಕ್ರಿಯೆ ಸ್ಥಳಕ್ಕೆ ಅಂಬರೀಷ್ ಪಾರ್ಥಿವ ಶರೀರ, ಅಂತಿಮ ವಿಧಿವಿಧಾನ ಆರಂಭ, ಒಂದು ಗಂಟೆಗೂ ಹೆಚ್ಚು ಕಾಲ ನಡೆಯುವ ಅಂತಿಮ ವಿಧಿವಿಧಾನ

04:03PM- ಭಾವುಕರಾಗಿ ಕುಸಿದುಬಿದ್ದ ಅಂಬರೀಷ್ ಪತ್ನಿ ಸುಮಲತಾ, ಸಹಾಯಕ್ಕೆ ಧಾವಿಸಿದ ಯಶ್, ರಾಕ್​​ಲೈನ್ ವೆಂಕಟೇಶ್, ದೊಡ್ಡಣ್ಣ

03:55PM- ಕಂಠೀರವ ಸ್ಟುಡಿಯೋ ಬಳಿ ಸಾವಿರಾರು ಅಭಿಮಾನಿಗಳು… ಮುಗಿಲು ಮುಟ್ಟಿದ ಅಂಬರೀಷ್ ಅಭಿಮಾನಿಗಳ ಆಕ್ರಂದನ,
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ.

03:48PM- ಕಂಠೀರವ ಸ್ಟುಡಿಯೋ ತಲುಪಿದ ಅಂಬಿ ಪಾರ್ಥಿವ ಶರೀರ

03:44PM- ಕಂಠೀರವ ಸ್ಟುಡಿಯೋ ಸಮೀಪಿಸಿದ ಅಂಬಿ ಪಾರ್ಥಿವ ಶರೀರ, ಸ್ಟುಡಿಯೋ ಸುತ್ತಮುತ್ತ ವಾಹನ ಸಂಚಾರ ನಿಷೇಧ

03:32PM- ಸಾರ್ವಜನಿಕರ ಅಂತ್ಯಕ್ರಿಯೆ ವೀಕ್ಷಣೆಗೆ 4 ಕಡೆ ಎಲ್​ಇಡಿ ಅಳವಡಿಕೆ

03:27PM- ಕಂಠೀರವ ಸ್ಟುಡಿಯೋ ಕಡೆಗೆ ತಿರುಗಿದ ಪಾರ್ಥಿವ ಶರೀರ

03:10PM- ಸ್ವಲ್ಪಹೊತ್ತಿನಲ್ಲೇ ಅಂಬಿ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪಲಿದೆ.

03:03PM- ಗೊರಗುಂಟೆಪಾಳ್ಯ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

ಕಂಠೀರವ ಸ್ಟುಡಿಯೋ ಹೊರಭಾಗದಲ್ಲಿ ಜಮಾಯಿಸಿರುವ ಅಭಿಮಾನಿಗಳು.
ಕಂಠೀರವ ಸ್ಟುಡಿಯೋ ಹೊರಭಾಗದ ಕಟ್ಟಡಗಳ ಮೇಲೆ ನಿಂತಿರುವ ಸಾರ್ವಜನಿಕರು.

02:53PM- ಕಂಠೀರವ ಸ್ಟುಡಿಯೋಗೆ ಆಗಮಿಸಿರುವ ಗಣ್ಯರು
ಸಚಿವೆ ಜಯಮಾಲಾ, ನಟ ಪುನೀತ್​ ರಾಜ್​ಕುಮಾರ್​, ಶಿವರಾಜ್​​ಕುಮಾರ್​, ಅಜಯ್ ರಾವ್​​, ನಿರ್ದೇಶಕ ಶಶಾಂಕ್​, ನಟಿ ರಾಗಿಣಿ, ನಟ ಉಪೇಂದ್ರ, ಸಚಿವ ಎಚ್​.ಡಿ.ರೇವಣ್ಣ, ನಟ ಜೋಗಿ ಪ್ರೇಮ್, ರವಿಚಂದ್ರನ್​​, ಸಾಧುಕೋಕಿಲ, ಸಂಸದ ಡಿ.ಕೆ.ಸುರೇಶ್​, ಹಿರಿಯ ನಟಿ ಸರೋಜಾದೇವಿ, ನಟ ಯಶ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​, ಹಿರಿಯ ನಟಿ ಬಿ.ವಿ.ರಾಧಾ, ನಟ ಪ್ರಕಾಶ್ ರೈ, ಹಿರಿಯ ನಟ ಶ್ರೀನಾಥ್, ಮಾಜಿ ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಟ ಗಣೇಶ್, ಮಾಜಿ ಸಚಿವ ಆರ್.ಅಶೋಕ್, ಎಂಎಲ್​ಸಿ ತೇಜಸ್ವಿನಿ, ನಟಿ ಅಭಿನಯ, ಮೈತ್ರಿಗೌಡ ಸ್ವಾಮಿ ನಿರ್ಮಲಾನಂದನಾಥ ಶ್ರೀ, ನಂಜವಧೂತ ಸ್ವಾಮೀಜಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ನಟ ರಮೇಶ್​​ಅರವಿಂದ್, ಸಿಎಂ ಕುಮಾರಸ್ವಾಮಿ, ನಟ ನಿಖಿಲ್ ಕುಮಾರಸ್ವಾಮಿ, ಮಾಜಿ ಸಿಎಂ ಎಸ್​.ಎಂ.ಕೃಷ್ಣ, ನಟ ಅಭಿಜಿತ್, ದೇವರಾಜ್, ಪ್ರಜ್ವಲ್​ ದೇವರಾಜ್, ಚರಣ್​ರಾಜ್, ವಿಜಯ್​ ರಾಘವೇಂದ್ರ, ರಾಮ್​​ಕುಮಾರ್, ರಾಜೇಶ್​, ಡಿಸಿಎಂ ಪರಮೇಶ್ವರ್​, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​, ಜೆಡಿಎಸ್​ ನಾಯಕ ಟಿ.ಎ.ಶರವಣ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ನಟ ಶ್ರೀನಗರ ಕಿಟ್ಟಿ ಹಾಗೂ ಸಂಚಾರಿ ವಿಜಯ್

02:50PM- ತುಮಕೂರು ರಸ್ತೆ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

ಅಂಬಿ ಚಿತೆಗೆ ಗಂಧದ ಕಟ್ಟಿಗೆ ಇಟ್ಟು ನಮಸ್ಕರಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​.
ಅಂಬಿ ಅಂತ್ಯಕ್ರಿಯೆ ಸಿದ್ಧತೆ ಕುರಿತು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್​ ಸಮಾಲೋಚನೆ ನಡೆಸುತ್ತಿರುವುದು.
ಕಂಠೀರವ ಸ್ಟುಡಿಯೋಗೆ ಆಗಮಿಸಿ ಚಿತೆಗೆ ಗಂಧದ ಕಟ್ಟಿಗೆ ಇಟ್ಟು ನಮಸ್ಕರಿಸಿದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ.
ಯಶವಂತಪುರ ಫ್ಲೈಓವರ್​ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.
ಅಂಬಿ ಚಿತೆಗೆ ಗಂಧದ ಕಟ್ಟಿಗೆ ಇಟ್ಟು ನಮಸ್ಕರಿಸಿದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ.

ಕಂಠೀರವ ಸ್ಟುಡಿಯೋಗೆ ಆಗಮಿಸಿ ಚಿತೆಗೆ ಗಂಧದ ಕಟ್ಟಿಗೆ ಇಟ್ಟ ನಿರ್ಮಾಲನಂದ ಸ್ವಾಮೀಜಿ ಮತ್ತು ನಂಜವಧೂತ ಸ್ವಾಮೀಜಿ.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ಮಾಜಿ ಸಚಿವ ಆರ್​.ಅಶೋಕ್ ಹಾಗೂ ನಟರಾದ ಗಣೇಶ್​, ರವಿಶಂಕರ್​​.
ಅಂಬಿ ಅಂತ್ಯಕ್ರಿಯೆಗೆ ಸಿದ್ಧಗೊಂಡಿರುವ ಚಿತೆ.

02:12PM- ಅಭಿಮಾನಿಗಳನ್ನು ನಿಯಂತ್ರಿಸಲು ಕಂಠೀರವ ಸ್ಟುಡಿಯೋ ಬಳಿ ಲಾಠಿಚಾರ್ಜ್​.​ ಪೊಲೀಸರು ಮತ್ತು ಅಭಿಮಾನಿಗಳ ನಡುವೆ ವಾಗ್ವಾದ.

ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ದುನಿಯಾ ವಿಜಯ್​ ಹಾಗೂ ಹಾಸ್ಯ ನಟರಾದ ರಂಗಾಯಣ ರಘು, ಬುಲೆಟ್​ ಪ್ರಕಾಶ್​.

ಕಂಠೀರವ ಸ್ಟುಡಿಯೋಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ಯಶ್​​, ಚಿತೆಗೆ ನಮಸ್ಕರಿಸಿದರು.

02:02PM- ಸ್ಯಾಂಕಿ ರಸ್ತೆ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.​

ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ರವಿಚಂದ್ರನ್​.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ಉಪೇಂದ್ರ.
ಚಿತೆಯ ಕಟ್ಟೆಯ ಒಳಗೆ ಕಟ್ಟಿಗೆ ಇಟ್ಟು ಅಂಬಿ ನೆನೆದು ಗಳಗಳನೇ ಅತ್ತ ತೆಲುಗು ನಟ ಮೋಹನ್ ಬಾಬು.

01:45PM- ಇಡೀ ಫ್ಯಾಮಿಲಿ ಸಮೇತ ಕಂಠೀರವ ಸ್ಟುಡಿಯೋಗೆ ಆಗಮಿಸಿದ ತೆಲುಗು ನಟ ಮೋಹನ್ ಬಾಬು. ಮಕ್ಕಳಾದ ಮಂಚು ಮನೋಜ್, ಮಂಚು ಲಕ್ಷ್ಮಿ ಹಾಗೂ ಪತ್ನಿ ಆಗಮನ. ಚಿತೆಯ ಕಟ್ಟಿಗೆ ಇಟ್ಟ ಮೋಹನ್ ಬಾಬು. ಅಂಬಿ ನೆನೆದು ಗಳಗಳನೇ ಅತ್ತ ಮೋಹನ್ ಬಾಬು.

01:41PM- ಕಾವೇರಿ ಜಂಕ್ಷನ್ ಬಳಿ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.​

01:39PM- ಅಂಬಿ ಅಂತ್ಯಕ್ರಿಯೆ ಪ್ರಕ್ರಿಯೆ ವೀಕ್ಷಣೆಗೆ ಗೊರಗುಂಟೆಪಾಳ್ಯ ಫ್ಲೈಓವರ್ ಬಳಿ ಎಲ್‌ಇಡಿ ಅಳವಡಿಕೆ. ಅಂತ್ಯಕ್ರಿಯೆ ನೇರಪ್ರಸಾರ ವೀಕ್ಷಿಸಲು ವ್ಯವಸ್ಥೆ.

ಕಂಠೀರವ ಸ್ಟುಡಿಯೋಗೆ ಆಗಮಿಸಿರುವ ಸಚಿವ ಡಿ.ಕೆ.ಶಿವಕುಮಾರ್​, ಮಾಜಿ ಶಾಸಕ ಚೆಲುರಾಯಸ್ವಾಮಿ ಹಾಗೂ ನಟ, ನಿರ್ದೇಶಕ ಪ್ರೇಮ್​.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ನವರಸ ನಾಯಕ ಜಗ್ಗೇಶ್​ ಹಾಗೂ ನಟ ಅಭಿಜಿತ್​.
ವಿಂಡಸರ್ ಬ್ರಿಡ್ಜ್ ತಲುಪಿದ ಮೆರವಣಿಗೆ.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ಪುನೀತ್​ ರಾಜ್​ಕುಮಾರ್​.
ಮಹಾರಾಣಿ ಕಾಲೇಜು ರಸ್ತೆಯಲ್ಲಿ ಕಂಡು ಬಂದ ಅಂಬಿ ಪಾರ್ಥಿವ ಶರೀರ ಮೆರವಣಿಗೆ ದೃಶ್ಯ.

ಆತ್ಮಹತ್ಯೆಗೆ ಶರಣಾದ ಅಭಿಮಾನಿ ಸುರೇಂದ್ರ.

01:19PM- ಮತ್ತೊಬ್ಬ ಅಂಬರೀಷ್ ಅಭಿಮಾನಿ ಆತ್ಮಹತ್ಯೆ. ಅಂಬಿ ದರ್ಶನ ಮಾಡಿ ಬಂದು ನೇಣಿಗೆ ಶರಣಾದ ಅಭಿಮಾನಿ. ಸುರೇಂದ್ರ.ಜಿ.ಎಸ್(46) ಮೃತ. ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ, ಗೊರವನಹಳ್ಳಿ ಗ್ರಾಮದ ಸುರೇಂದ್ರ. ಮದ್ದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬಿ ದರ್ಶನ ಪಡೆದಿದ್ದ ಅಭಿಮಾನಿ. ಅಂಬಿ ಮೇಲಿನ ಅಭಿಮಾನದಿಂದ ಹಲವು ವರ್ಷಗಳ ಹಿಂದೆಯೇ ತನ್ನ ಕೈ ಮೇಲೆ ಅಂಬಿ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ. ಅಂಬಿ ಅಗಲಿಕೆ ಸಹಿಸಲಾಗದೆ ನೇಣಿಗೆ ಶರಣು. ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

01:15PM- ವಿಕ್ಕಿ ಆರ್ಟ್ಸ್​ನಿಂದ ಸ್ವಯಂ ಪ್ರೇರಿತರಾಗಿ ಬಂದು ಚಿತೆಯ ಕಟ್ಟೆಯ ಮೇಲೆ ಚಿತ್ರ ಬಿಡಿಸಿದ ಕಲಾವಿದ ವಿಕ್ಕಿ ಮತ್ತು ಮುರುಗೇಶ್​​.

ಅಂಬಿ ಪಾರ್ಥಿವ ಶರೀರ ಮೆರವಣಿಗೆ ನೋಡಲು ಕಟ್ಟಡ ಮೇಲತ್ತಿರುವ ಅಭಿಮಾನಿಗಳು.

01:12PM- ಚಾಲುಕ್ಯ ಸರ್ಕಲ್​ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

ಅಂಬಿ ಅಂತ್ಯಕ್ರಿಯೆ ನೋಡಲು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿರುವ ಸಹಸ್ರಾರು ಅಭಿಮಾನಿಗಳು.
ಮಳವಳ್ಳಿಯ ಅಭಿಮಾನಿ ಸೋಮರಾಜು. ಎಚ್ಎಎಲ್ ನಿಂದ ಸೈಕಲ್​ನಲ್ಲಿ ಆಗಮನ.
ಅಂಬಿ ಪಾರ್ಥಿವ ಶರೀರ ಮೆರವಣಿಗೆಗೆ ನುಗ್ಗಿ ಬಂದ ಸಹಸ್ರಾರು ಅಭಿಮಾನಿಗಳು‌‌.
ಡಿ. ಹೂಸೂರು ಗ್ರಾಮದಲ್ಲಿ ಅಂಬರೀಶ್ ಅವರ ಪ್ರತಿಮೆಯನ್ನು ಇಟ್ಟು ಗ್ರಾಮಸ್ಥರಿಂದ ಸಂತಾಪ.
ಚಿತೆಯ ಕಟ್ಟೆಯೊಳಗೆ ಕಟ್ಟಿಗೆ ಜೋಡಿಸುತ್ತಿರುವುದು.
ಚಿತೆಯ ಕಟ್ಟೆಯ ಮೇಲೆ ಪಂಚಭೂತಗಳಲ್ಲಿ ಲೀನ ದೊಡ್ಡರಸಿನಕೆರೆ ಎಂ.ಹುಚ್ಚೆಗೌಡರ ಪುತ್ರ ರತ್ನ ಎಂದು ಬರೆಯಲಾಗಿದೆ.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯ.

01:00PM- ಅರಮನೆ ರಸ್ತೆ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

12:55PM- ಮೈಸೂರ್​ ಬ್ಯಾಂಕ್​ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

ಚಿತೆಯ ಕಟ್ಟೆಯೊಳಗೆ ಕಟ್ಟಿಗೆ ಇಡುತ್ತಿರುವ ನಿರ್ದೇಶಕ ಎಸ್. ನಾರಾಯಣ್​.
ಅಂಬಿ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಕಂಡುಬಂದ ಜನಸಾಗರ.
ಚಿತೆಯ ಕಟ್ಟೆಯೊಳಗೆ ಕಟ್ಟಿಗೆ ಇಡುತ್ತಿರುವ ನಟ ಶಿವರಾಜ್​ ಕುಮಾರ್​​.

12:48PM- ಕೆ.ಜಿ ರಸ್ತೆ ತಲುಪಿದ ಅಂಬಿ ಪಾರ್ಥಿವ ಶರೀರ ಮೆರವಣಿಗೆ.

12:47PM- ಚಿತೆಯ ಕಟ್ಟೆಯ ಮೇಲೆ ಪಂಚಭೂತಗಳಲ್ಲಿ ಲೀನ ದೊಡ್ಡರಸಿನಕೆರೆ ಎಂ.ಹುಚ್ಚೆಗೌಡರ ಪುತ್ರ ರತ್ನ ಎಂದು ಬರೆಯಲಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ವಿಧಿ ವಿಧಾನ ನೆರವೇರಿಸುತ್ತಿರುವ ಪುರೋಹಿತರು.
ಕಂಠೀರವ ಸ್ಟುಡಿಯೋಗೆ ಆಗಮಿಸಿದ ನಟ ಶಿವರಾಜ್​ ಕುಮಾರ್​.

ನಟ ಅಂಬರೀಷ್ ಪಾರ್ಥಿವ ಶರೀರ ಸಾಗುವ ಮಾರ್ಗಗಳು
12:41PM- ಹಡ್ಸನ್ ವೃತ್ತ, ಹಲಸೂರುಗೇಟ್ ಠಾಣೆ, ಪೊಲೀಸ್ ಕಾರ್ನ​ರ್, ಕೆ.ಜಿ.ರೋಡ್, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕ​ಲ್, ಹಳೆ ಹೈಗ್ರೌಂಡ್ಸ್ ಠಾಣೆ, ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕ​ಲ್, ಸ್ಯಾಂಕಿ ರಸ್ತೆ, ಮಾರಮ್ಮ ಸರ್ಕಲ್, BHEL, ಯಶವಂತಪುರ ಮೇಲ್ಸೇತುವೆ, ಮೆಟ್ರೋ ಬಲ ತಿರುವು, ಆರ್​ಎಂಸಿ ಯಾರ್ಡ್​ ಠಾಣೆ, ಗೊರಗುಂಟೆಪಾಳ್ಯ ಜಂಕ್ಷನ್ ಎಡ ತಿರುವು, ಸಿಎಂಟಿಐ, ಎಫ್​ಟಿಐ ಮೂಲಕ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರ.

ಮೆರವಣಿಗೆ ಸಾಗುವ ರಸ್ತೆ ಎರಡು ಇಕ್ಕೆಲಗಳಲ್ಲಿ ನಿಂತಿರುವ ಅಭಿಮಾನಿಗಳು.
ಅಂಬಿ ಪಾರ್ಥಿವ ಶರೀರ ಮೆರವಣಿಗೆಯ ಭದ್ರತೆಗೆ ಆಯೋಜಿಸಲಾಗಿರುವ ಪೊಲೀಸ್​ ಪಡೆ.
ಮೆರವಣಿಗೆ ಹೊರಟ ಅಂಬಿ ಪಾರ್ಥಿವ ಶರೀರ.

12:29PM- ಅಂಬಿ ಪಾರ್ಥಿವ ಶರೀರ ಮೆರವಣಿಗೆ ಆರಂಭ. ಕಂಠೀರವ ಸ್ಟುಡಿಯೋದತ್ತ ಮೆರವಣಿಗೆ.

ಮೆರವಣಿಗೆಯಲ್ಲಿ ಅಂಬಿ ಪಾರ್ಥಿವ ಶರೀರ ಸಾಗಿಸುವ ಗಾಜಿನ ವಾಹನ.
ಕಂಠೀರವ ಸ್ಟುಡಿಯೋದಲ್ಲಿ ಭದ್ರತೆ ಪರಿಶೀಲಿಸುತ್ತಿರುವ ಸಿಸಿಬಿ ಎಡಿಜಿಪಿ ಅಲೋಕ್​ ಕುಮಾರ್​.
ಅಂಬಿ ಅಂತ್ಯಕ್ರಿಯೆ ನೋಡಲು ಕಂಠೀರವ ಸ್ಟುಡಿಯೋದಲ್ಲಿ ನೆರೆದಿರುವ ಅಭಿಮಾನಿ ಸಾಗರ.
ಕಂಠೀರವ ಸ್ಟುಡಿಯೋದಲ್ಲಿ ಸಿದ್ಧಗೊಳ್ಳುತ್ತಿರುವ ಅಂಬಿ ಅಂತ್ಯಕ್ರಿಯೆ ಸ್ಥಳ.
ಅಂಬಿ ಪಾರ್ಥಿವ ಶರೀರ ಮೆರವಣಿಗೆಗೆ ಕ್ಷಣಗಣನೆ.

12:10PM- ಕಂಠೀರವ ಸ್ಟೇಡಿಯಂ ಆವರಣದಲ್ಲಿಯೇ ಅಂಬುಲೆನ್ಸ್ ನಲ್ಲಿ ಅಂಬಿ ಮೃತದೇಹ ಅಂತಿಮ ದರ್ಶನ ಪಡೆದ ನಟ ದರ್ಶನ್.

ಪ್ರದರ್ಶನಕ್ಕಿಡದೇ ನೇರ ಅಂತಿಮ‌ ಯಾತ್ರೆ.
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಪೂಜೆ ಶುರು ಮಾಡಿದ ಪುರೋಹಿತರು.
ಅಂಬಿ ಪಾರ್ಥಿವ ಶರೀರ ಮೆರವಣಿಗೆಗೆ ಸಿದ್ಧಗೊಂಡಿರುವ ಗಾಜಿನ ವಾಹನ.

11:51- ಎಚ್ಎಎಲ್​ನಿಂದ ಕಂಠೀರವ ಸ್ಟೇಡಿಯಂ ತಲುಪಿದ ಅಂಬಿ ಪಾರ್ಥಿವ ಶರೀರ.

ಕಂಠೀರವ ಸ್ಟೇಡಿಯಂನತ್ತ ತೆರಳುತ್ತಿರುವ ಅಂಬಿ ಪಾರ್ಥಿವ ಶರೀರವಿರುವ ವಾಹನ.
ನಟಿ ಜಯಪ್ರದರೊಂದಿಗೆ ಸಮಾಲೋಚಿಸುತ್ತಿರುವ ನಟ ಶಿವರಾಜ್​ ಕುಮಾರ್​.

11:44- ಒಲ್ಡ್ ಏರ್ಪೋರ್ಟ ರಸ್ತೆಯ ಎರಡು ಇಕ್ಕೆಳಗಳಲ್ಲೂ ಅಂಬಿ ಪಾರ್ಥಿವ ಶರೀರ ನೋಡಲು ನಿಂತಿರುವ ಅಭಿಮಾನಿಗಳು.

ಕಂಠೀರವ ಸ್ಟೇಡಿಯಂ ಆಗಮಿಸಿದ ನಟ ದರ್ಶನ್​.
ಎಚ್​ಎಎಲ್​ನಿಂದ ಕಂಠೀರವ ಸ್ಟೇಡಿಯಂ ಕಡೆಗೆ ಅಂಬಿ ಪಾರ್ಥಿವ ಶರೀರ.
ಎಚ್​ಎಎಲ್​ನಿಂದ ಕಂಠೀರವ ಸ್ಟೇಡಿಯಂನತ್ತ ಹೊರಟ ಅಂಬಿ ಪಾರ್ಥಿವ ಶರೀರ.

 

11:29- ಮನೆಯಿಂದ ನೇರ ಕಂಠೀರವ ಸ್ಟೇಡಿಯಂಗೆ ಆಗಮಿಸಿದ ನಟ ದರ್ಶನ್​​.

ಎಚ್​ಎಎಲ್​ ತಲುಪಿದ ಸೇನಾ ಹೆಲಿಕಾಪ್ಟರ್​.

11:24- ಕಾವೇರಿ ವಿಷಯದಲ್ಲಿ ಅಂಬರೀಷ್​ ಹೋರಾಟ ಮಾಡಿದ್ದರು. ಪ್ರಮಾಣಿಕವಾಗಿ ಕೆಲಸ ಮಾಡಿದ್ದರು. ಚಲನಚಿತ್ರ ರಂಗದಲ್ಲಿ ಉನ್ನತ ಮಟ್ಟದ ಹೆಸರು ಮಾಡಿದ್ದರು. ಹಣ, ಆಸ್ತಿ ಮಾಡದೇ ಬಂದಿದ್ದನ್ನು ಬಡವರಿಗೆ ದಾನ ಮಾಡಿದ ವ್ಯಕ್ತಿ ಅಂಬರೀಷ್​. ಇದ್ದರೇ ಒಂದು ಫಾರ್ಮ್ ಹೌಸ್ ಇರಬಹುದು ಅಷ್ಟೇ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಹಾಸನದ ಹರದನಹಳ್ಳಿಯಲ್ಲಿ ಪ್ರತಿಕ್ರಿಯಿಸಿದರು.

11:15- ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಅಂಬಿ ಪಾರ್ಥಿವ ಶರೀರ ಹೊತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಸೇನಾ ಹೆಲಿಕಾಪ್ಟರ್​ ಎಚ್​ಎಎಲ್​​ ತಲುಪಿದೆ.

ಮಂಡ್ಯದಿಂದ ಪಾರ್ಥಿವ ಶರೀರ ಹೊರಡುವ ಮುನ್ನ ಅಂಬಿ ಮುಖ ಮುಟ್ಟಿ ನಟ ಯಶ್​ ಭಾವುಕರಾದ ಕ್ಷಣ.

11:15- ಸಾಗರೋಪಾದಿಯಲ್ಲಿ ಕಂಠೀರವ ಸ್ಟುಡಿಯೊದತ್ತ ಹರಿದು ಬರುತ್ತಿರುವ ಅಭಿಮಾನಿಗಳು.

11:05- ಅವರು ಎತ್ತರ ಸ್ಥಾನಕ್ಕೂ ಹೋದರು ಕೂಡ ತುಂಬಾ ಸ್ನೇಹ ಜೀವಿ ಆಗಿದ್ದರು. ಅವರ ಸ್ಥಾನ ತುಂಬಲು ಯಾರಿಂದಲೂ ಸಾದ್ಯವಿಲ್ಲ. ಈಗ ಅವರು ಇಲ್ಲ ಎನ್ನುವುದು ತುಂಬಾ ಕಷ್ಟವಾಗುತ್ತಿದೆ. ಕಳೆದ ತಿಂಗಳ ಅವರೊಂದಿಗೆ ಮಾತನಾಡಿದ್ದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಮಾತನಾಡಿದ್ವಿ. ಚಿತ್ರರಂಗ ಅಷ್ಟೇ ಅಲ್ಲಾ ಇಡೀ ಕರ್ನಾಟಕ್ಕೆ ಅವರಂತ ವ್ಯಕ್ತಿ ಸಿಗಲ್ಲ ಎಂದು ನಟಿ, ಸಚಿವೆ, ಜಯಮಾಲಾ ಸಂತಾಪ ಸೂಚಿಸಿದರು.

ಏರ್​ಲಿಫ್ಟ್​ ಮುನ್ನ ಅಂಬಿ ಹಣೆಗೆ ಮಂಡ್ಯ ಮಣ್ಣು ಹಚ್ಚಿದ ಪುತ್ರ ಅಭಿಷೇಕ್​, ಪತ್ನಿ ಸುಮಲತಾ.
ಏರ್​ಲಿಫ್ಟ್​ ಮುನ್ನ ಅಂಬಿ ಹಣೆಗೆ ಮಂಡ್ಯ ಮಣ್ಣು ಹಚ್ಚಿದ ಪುತ್ರ ಅಭಿಷೇಕ್​, ಪತ್ನಿ ಸುಮಲತಾ.
ಅಂಬಿ ಪಾರ್ಥಿವ ಶರೀರ ಹೊತ್ತು ಬೆಂಗಳೂರಿನತ್ತ ಸಾಗಿದ ಸೇನಾ ಹೆಲಿಕಾಪ್ಟರ್​.
ಏರ್​ಲಿಫ್ಟ್​ ಆಗಲು ಸಿದ್ಧವಾಗುತ್ತಿರುವ ಸೇನಾ ಹೆಲಿಕಾಪ್ಟರ್​.

10:50- ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಅಂಬಿ ಪಾರ್ಥಿವ ಶರೀರ ಹೊತ್ತು ಬೆಂಗಳೂರಿನತ್ತ ಹೊರಟ ಸೇನಾ ಹೆಲಿಕಾಪ್ಟರ್​.

ಸೇನಾ ಹೆಲಿಕಾಪ್ಟರ್​ ಪ್ರವೇಶಿಸುವ ಮುಂಚೆ ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಅರ್ಪಿಸಿದ ಅಂಬಿ ಪುತ್ರ ಅಭಿಷೇಕ್​.
ಸೇನಾ ಹೆಲಿಕಾಪ್ಟರ್​ ಒಳಗೆ ಅಂಬಿ ಪತ್ನಿ ಸುಮಲತಾ ಪ್ರವೇಶ.
ಅಂಬಿ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್​ ಬಳಿ ಕೊಂಡೊಯ್ಯುತ್ತಿರುವುದು.
ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಿದ ಅಂಬಿ ಪುತ್ರ ಅಭಿಷೇಕ್​.

10:26- ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಆಗಮಿಸಿದ ಸೇನಾ ಹೆಲಿಕಾಪ್ಟರ್​.

10:24- ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಇಡೀ ಸ್ಯಾಂಡಲ್​ವುಡ್ ಭಾಗವಹಿಸಲಿದೆ. ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಪಟ್ಟಿಯನ್ನು ಈಗಾಗಲೇ ಪೊಲೀಸ್​ ಆಯುಕ್ತರಿಗೆ ನೀಡಲಾಗಿದ್ದು, ಭಧ್ರತೆ ದೃಷ್ಟಿಯಿಂದ ಯಾರ್ಯಾರು ಭಾಗವಹಿಸುತ್ತಾರೆ ಎಂಬ ಪಟ್ಟಿಯನ್ನು ಒದಗಿಸಲಾಗಿದೆ. ಪಟ್ಟಿಯಲ್ಲಿರುವಂತೆ ಯಶ್, ಸುದೀಪ್, ದರ್ಶನ್, ಪುನೀತ್ ಉಪೇಂದ್ರ, ಜಗ್ಗೇಶ್, ರವಿಚಂದ್ರನ್, ಪ್ರೇಮಾ, ಸುಧಾರಣಿ, ತಾರಾ, ಧೃವಾ, ಸೇರಿ ಸಾಕಷ್ಟು ತಾರೆಯರು ರೆಬೆಲ್ ಸ್ಟಾರ್ ಅಂತಿಮ ಕ್ಷಣದಲ್ಲಿ ಭಾಗಿಯಾಗಲಿದ್ದಾರೆ.

10:22- ಕೇಂದ್ರದಿಂದ ಸೆಂಟ್ರಲ್ ರಿಸರ್ವ್ ಪೋರ್ಸ್​ನ 3ತುಕಡಿಗಳ ನೇಮಕ. ಒಂದೊಂದು ತಂಡದಲ್ಲಿ 120 ಜನ ಪೋಲೀಸರನ್ನ ನೇಮಕ ಮಾಡಲಾಗಿದೆ. 66 ಮಹಿಳಾ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿ ಭಾಗಿಯಾಗಿದ್ದಾರೆ.

10:20-ಸಾಗರೋಪಾದಿಯಲ್ಲಿ ಕಂಠೀರವ ಸ್ಟುಡಿಯೊದತ್ತ ಹರಿದು ಬರುತ್ತಿರುವ ಅಭಿಮಾನಿಗಳ ದಂಡು. ಅಭಿಮಾನಿಗಳ ತಪಾಸಣೆ ಮಾಡಿ ಒಳಗೆ ಬಿಡುತ್ತಿರುವ ಪೊಲೀಸರು.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೇನಾ ಹೆಲಿಕಾಪ್ಟರ್​ ಆಗಮನಕ್ಕೆ ಕ್ಷಣಗಣನೆ.
ಅಂಬಿ ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋದ ಹೊರಭಾಗದಲ್ಲಿ ಕ್ಕಿಕ್ಕಿರಿದು ತುಂಬಿರುವ ಅಭಿಮಾನಿಗಳು.
ಕಂಠೀರವ ಸ್ಟುಡಿಯೋದ ಹೊರಭಾಗದಲ್ಲಿ ನಿಯೋಜಿಸಲಾಗಿರುವ ಪೊಲೀಸ್​ ಭಧ್ರತೆ.
ಅಂಬಿ ಪಾರ್ಥಿವ ಶರೀರ ಮೆರವಣಿಗೆಗೆ ಸಂಪೂರ್ಣ ಸಿದ್ಧಗೊಂಡಿರುವ ಗಾಜಿನ ವಾಹನ.

10:07: ಅಂಬಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ. ಕಂಠೀರವ ಸ್ಟೇಡಿಯಂ ನಿಂದ ಸ್ಟುಡಿಯೋವರೆಗೂ ಮೆರವಣಿಗೆ ಸಾಗಲಿದ್ದು, ಅದಕ್ಕಾಗಿ ಗಾಜಿನ ವಾಹನ ಸಂಪೂರ್ಣವಾಗಿ ಅಲಂಕಾರ ಗೊಂಡಿದೆ. ಅಲಂಕಾರಕ್ಕಾಗಿ 1900 ಕೆಜಿ ಹೂ ಬಳಕೆ ಮಾಡಲಾಗಿದೆ. ತುಳಸಿ, ಚೆಂಡು ಹೂ, ಬಿಳಿ ಸಾವಂತಿಗೆ ಹಾಗೂ ಕೆಂಪು ಸಾವಂತಿಗೆ ಹೂಗಳನ್ನು ಬಳಸಲಾಗಿದೆ. 20ಕ್ಕೂ ಹೆಚ್ಚು ಕೆಲಸಗಾರರಿಂದ ಅಲಂಕಾರ ಮಾಡಲಾಗಿದೆ. ಪಾರ್ಥಿವ ಶರೀರ ಸಾಗುವ ವಾಹನದಲ್ಲಿ ಕುಟುಂಬಸ್ಥರಿಗೆ ಮಾತ್ರ ಅವಕಾಶವಿದ್ದು, ರಾಹುಕಾಲ ಮುಗಿದ ಬಳಿಕ ಸ್ಟೇಡಿಯಂನಿಂದ ವಾಹನ ತೆರಳಲಿದೆ. ವಾಹನ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ದರ್ಶನವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

10:05: ಎಚ್​ಎಎಲ್​ನಿಂದ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದತ್ತ ಹೊರಟ ಸೇನಾ ಹೆಲಿಕಾಪ್ಟರ್​. ಇನ್ನೂ 20 ನಿಮಿಷಗಳಲ್ಲಿ ಮಂಡ್ಯ ತಲುಪಲಿರುವ ಸೇನಾ ಕಾಪ್ಟರ್.

ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸೇನಾ ಹೆಲಿಕಾಪ್ಟರ್​ ಬರುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್​ನಲ್ಲಿದ್ದ ಬೀದಿ ನಾಯಿಗಳನ್ನು ಓಡಿಸಿದ ಪೋಲಿಸರು.

10:00- ನಗರದಲ್ಲಿ ದಟ್ಟ ಮಂಜು ಕವಿದ ವಾತಾವರಣ ಹಿನ್ನೆಲೆಯಲ್ಲಿ ಏರ್ ಲಿಫ್ಟ್ ವಿಳಂಬ ಸಾಧ್ಯತೆ. ಇನ್ನೂ ಒಂದು ಗಂಟೆಗಳ ಕಾಲ ಮಂಜು ಕವಿದ ವಾತಾವರಣ ಮುಂದುವರಿಕೆ ಸಾಧ್ಯತೆ.

ಅಂಬಿ ಪಾರ್ಥಿವ ಶರೀರ ಮೆರವಣಿಗೆಯ ಭದ್ರತೆಯ ನೇತೃತ್ವ ವಹಿಸಿಕೊಂಡಿರುವ ಪೊಲೀಸ್​ ಅಧಿಕಾರಿಗಳು

 • ಡಿ ದೇವರಾಜು, ಡಿಸಿಪಿ, ಕೇಂದ್ರ ವಿಭಾಗ
 • ರಾಹುಲ್ ಕುಮಾರ್ ಶಹಾಪುರವಾಡ್, ಡಿಸಿಪಿ, ಪೂರ್ವ ವಿಭಾಗ
 • ಚೇತನ್ ಸಿಂಗ್ ರಾಥೋರ್, ಡಿಸಿಪಿ, ಉತ್ತರ ವಿಭಾಗ
 • ಡಾ.ಬೋರಲಿಂಗಯ್ಯ, ಡಿಸಿಪಿ, ಆಗ್ನೇಯ ವಿಭಾಗ
 • ಕಲಾ ಕೃಷ್ಣಮೂರ್ತಿ, ಡಿಸಿಪಿ, ಈಶಾನ್ಯ ವಿಭಾಗ
 • ಅಬ್ದುಲ್ ಅಹದ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ
 • ಕೆ ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ
 • ರವಿ ಡಿ ಚೆನ್ನಣ್ಣನವರ್, ಡಿಸಿಪಿ, ಪಶ್ಚಿಮ ವಿಭಾಗ
 • ಎಂಎನ್ ಅನುಚೇತ್, ಡಿಸಿಪಿ, ಆಡಳಿತ
 • ಸಾರಾ ಫಾತಿಮ, ಡಿಸಿಪಿ, ಉತ್ತರ ವಿಭಾಗ ಸಂಚಾರ
 • ಡಾ.ಚಂದ್ರಗುಪ್ತ, ಡಿಸಿಪಿ, ಪೂರ್ವ ವಿಭಾಗ ಸಂಚಾರ
 • ಸೌಮ್ಯಲತಾ ಎಸ್‌ಕೆ, ಡಿಸಿಪಿ, ಪಶ್ಚಿಮ ವಿಭಾಗ ಸಂಚಾರ
ಅಂಬಿ ಅಂತ್ಯಕ್ರಿಯೆ ಸ್ಥಳ ಪರಿಶೀಲಿಸುತ್ತಿರುವ ಡಿಸಿಎಂ ಡಾ.ಜಿ.ಪರಮೇಶ್ವರ್​.
ಅಂಬರೀಷ್​ ಕುರಿತು ಮಾತನಾಡಿ ಸಂತಾಪ ಸೂಚಿಸಿದ ನಟ ರವಿಶಂಕರ್​.

09:40- ಅಂಬಿ ಒಂದು ಮಹಾಶಕ್ತಿ. ಎಲ್ಲರ ಜೊತೆ ಹೇಗಿದ್ದರು ಎಂದು ನನಗೆ ಗೊತ್ತು. ಕೋಟಿಗೊಬ್ಬ ಎಂದರೆ ಅದು ಅಂಬರೀಷ್.​ ಆ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ. ಎಲ್ಲರಿಗೂ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಅವರೊಂದಿಗೆ ದೊಡ್ಮನೆ, ಕುರುಕ್ಷೇತ್ರ ಸಿನಿಮಾ ಮಾಡಿದ್ದೇನೆ. ಶೂಟಿಂಗ್​ ವೇಳೆ ಅವರ ಜೊತೆ ಮಾತನಾಡಿದ್ದೇನೆ. ಒಂದು ಅಪೂರ್ವ ಶಕ್ತಿ ಕಳೆದುಕೊಂಡಿದ್ದೇವೆ. ಅವರು ನಮ್ಮ ಮಧ್ಯದಲ್ಲೇ ಇದ್ದಾರೆ ಎಂದು ಸಂತಾಪ ಸೂಚಿಸಿದ ಆರ್ಮುಗಂ ಖ್ಯಾತಿಯ ನಟ ರವಿಶಂಕರ್​.

ಅಂಬಿ ಅಂತಿಮ ದರ್ಶನಕ್ಕೆ ಸ್ವೀಡನ್​ನಿಂದ ಬೆಂಗಳೂರಿಗೆ ಆಗಮಿಸಿದ ನಟ ದರ್ಶನ್​.

09:37- ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಸಲುವಾಗಿ ಯೋಜನೆಯನ್ನು ಸಿದ್ದಪಡಿಸುತ್ತೇವೆ ಎಂದ ಸಿಎಂ.

09:33- ಮೊದಲು ಕಂಠೀರವ ಸ್ಟೇಡಿಯಂಗೆ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ರವಾನಿಸಿ ಅಂತ್ಯಕ್ರಿಯೆ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ ಸಿಎಂ.

09:32- ಸುಮಾರು ಎರಡೂವರೆ ಲಕ್ಷ ಜನರು ಅಂತಿಮ ದರ್ಶನ ಪಡೆದಿದ್ದಾರೆ. ಅಂಬಿ ಮೇಲಿನ ಅಭಿಮಾನಕ್ಕೆ ಮಂಡ್ಯ ಜನರು ಶಾಂತಿಯಿಂದ ವರ್ತಿಸಿದ್ದಾರೆ. ಸರ್ಕಾರದ ವತಿಯಿಂದ ನಿಮ್ಮ ಆಸೆ ಈಡೇರಿಸಿದ್ದೇವೆ. ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ತರುವುದೇ ಸವಾಲಾಗಿತ್ತು. ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತ ರೀತಿಯಲ್ಲಿ ವರ್ತಿಸಿ ಸಹಕಾರ ನೀಡಿದ ನಿಮಗೆ ಧನ್ಯವಾದಗಳು ಎಂದು ಸಿಎಂ ಪ್ರತಿಕ್ರಿಯೆ ನೀಡಿದರು.

09:27- ಮಂಡ್ಯ ಜನತೆ ಹಾಗೂ ಅಭಿಮಾನಿಗಳ ಬಯಕೆಯನ್ನು ಈಡೇರಿಸಿದ್ದೇವೆ. ಅಂಬರೀಷ್​ ಕೊಟ್ಟಿರುವ ಪ್ರೀತಿ ಚಿರಕಾಲ ಹೀಗೆ ಇರುತ್ತದೆ ಎಂದ ಸಿಎಂ.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ.

09:22- ಯಾವುದೇ ಅಹಿತಕರ ಘಟನೆಗೆ ಸಾಕ್ಷಿಯಾಗದಂತೆ ಅಂಬಿ ಅಂತಿಮ ದರ್ಶನ ಕಾರ್ಯವನ್ನು ಸುಗಮವಾಗಿ ನಡೆಸಿಕೊಟ್ಟಂತಹ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸಿಎಂ ಕುಮಾರಸ್ವಾಮಿ.

ಅಂಬಿ ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಸಿದ್ಧತೆ.

09:18- ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸುತ್ತಿರುವ ಪೊಲೀಸರು.
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ.

09:07- ಅಂಬಿ ಅಂತಿಮ ದರ್ಶನಕ್ಕೆ ಸ್ವೀಡನ್​ನಿಂದ ಬೆಂಗಳೂರಿಗೆ ಆಗಮಿಸಿದ ದರ್ಶನ್​.

09:05- ಸಿಎಂ ಆಗಮನಕ್ಕೆ ಕ್ಷಣಗಣನೆ. ಸಿಎಂ ಆಗಮನದ ಬಳಿಕ ಪಾರ್ಥಿವ ಶರೀರ ರವಾನೆ. ರಾತ್ರಿ ಕೆಆರ್​ಎಸ್​ನಲ್ಲಿ ತಂಗಿದ್ದ ಸಿಎಂ ಹೆಚ್ಡಿಕೆ, ಪುತ್ರ ನಿಖಿಲ್. ಕೆಆರ್​ಎಸ್​ನಿಂದ ಮಂಡ್ಯದತ್ತ ಹೊರಟಿರುವ ಸಿಎಂ.

09:03- ಅಭಿಮಾನಿಗಳಿಂದ ಅಭಿಷೇಕ್​ಗೆ ಮನವಿ. ಮಂಡ್ಯ ಮರೆಯಬೇಡಿ. ಮಂಡ್ಯದ ಗಂಡಿನಂತೆ ಮುನ್ನಡೆಯಿರಿ. ನಿಮ್ಮೊಟ್ಟಿಗೆ ನಾವಿದ್ದೇವೆ ಎಂದು ಘೋಷಣೆ ಕೂಗಿದ ಅಭಿಮಾನಿಗಳು.

ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ ನಟ ಜಗ್ಗೇಶ್‌.

08: 57- ಕನ್ನಡ ಚಿತ್ರರಂಗದ ಒಂದೊಂದೆ ಕೊಂಡಿಗಳು ಕಳಚಿಕೊಳ್ಳುತ್ತಿವೆ ಎಲ್ಲ ಭಗವಂತನ ಲೀಲೆ. ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ರಾಜ್‌ಕುಮಾರ್‌ ಇದ್ದಾಗ ಇದ್ದ ಘನತೆಯನ್ನು ತೆಗೆದುಕೊಂಡು ಬಂದವರು ಅಂಬರೀಷ್‌ ಅವರು. ವಿಷ್ಣುವರ್ಧನ್‌ ಕೂಡ ಸಹಕಾರ ನೀಡಿದ್ದರು. ಯಾವುದೇ ಸಮಸ್ಯೆ ಇದ್ದರೂ ಮುತುವರ್ಜಿಯಿಂದ ಬಗೆಹರಿಸುತ್ತಿದ್ದರು.

ಅಂಬರೀಶ್ ಪಾರ್ಥಿವ ಶರೀರದ ಮೆರವಣಿಗೆಗೆ ಸಿದ್ಧಗೊಳ್ಳುತ್ತಿರುವ ವಾಹನ.

08: 50- ಅಂಬರೀಷ್ ಅಂತ್ಯಕ್ರಿಯೆಗೆ ನೀಲಗಿರಿ, ಹುಣಸೆ ,ಹತ್ತಿ, ಸಾರ್ವೆ, ಗಂಧದ ಮರದ ತುಂಡುಗಳ ಬಳಕೆ. 500 ಕೆಜಿ ಗಂಧದ ತುಂಡು ತಂದ ಅರಣ್ಯಾಧಿಕಾರಿಗಳು.

ಡಾ.ರಾಜ್​ಕುಮಾರ್​ ಸ್ಮಾರಕ ಬಳಿ ಅಂಬಿ ಅಂತ್ಯಕ್ರಿಯೆ.

08:41- ಮಂಡ್ಯದಲ್ಲಿರುವ ಅಂಬಿ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಕ್ಷಣಗಣನೆ. ಸದ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದೊಳಗಿರುವವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕ್ರೀಡಾಂಗಣದೊಳಗೆ ಜನ ಹೆಚ್ಚಾದರೆ ಪಾರ್ಥಿವ ಶರೀರ ರವಾನೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಕ್ರೀಡಾಂಗಣದ ಗೇಟ್ ಹಾಕಿ ಪೊಲೀಸರಿಂದ ಮುನ್ನೆಚ್ಚರಿಕೆ.

08:37- ಯಜಮಾನ ಚಿತ್ರದ ಶೂಟಿಂಗ್​ಗೆ ಸ್ವೀಡನ್​ಗೆ ತೆರಳಿದ್ದ ನಟ ದರ್ಶನ್ ಚಿತ್ರೀಕರಣ ರದ್ದುಗೊಳಿಸಿ ಆಗಮನ. ಮೊನ್ನೆ ರಾತ್ರಿ ಟಿಕೆಟ್ ಸಮಸ್ಯೆಯಿಂದ ದರ್ಶನ್ ಪರದಾಟ ನಡೆಸಿದ್ದರು. ಸ್ವೀಡನ್​ನಿಂದ ದುಬೈಗೆ ಬಂದು ಮಧ್ಯ ರಾತ್ರಿ 2ಗಂಟೆಯಲ್ಲಿ ದುಬೈನಿಂದ ಬೆಂಗಳೂರಿನತ್ತ ಹೊರಟು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಮೊದಲು ಕಂಠೀರವ ‌ಸ್ಟೇಡಿಯಂಗೆ ಪಾರ್ಥಿವ ಶರೀರ ಬರುವ ಕಾರಣ ದರ್ಶನ್ ನೇರವಾಗಿ ಅಲ್ಲಿಗೆ ಬರುವ ಸಾಧ್ಯತೆಯಿದೆ. ಕೆಲವೇ ಕ್ಷಣಗಳಲ್ಲಿ ದರ್ಶನ್ ತಲುಪಲಿದ್ದಾರೆ.

08:31- ಕಂಠೀರವ ಸ್ಟೇಡಿಯಂನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್. ಇಡೀ ಬೆಂಗಳೂರಿನಾದ್ಯಂತ 15 ಸಾವಿರ ಪೊಲೀಸರ ನಿಯೋಜನೆ. ಕೆಎಸ್​ಆರ್​ಪಿ ತುಕಡಿ, ಟ್ರಾಫಿಕ್ ಪೊಲೀಸ್, ಲಾ ಅಂಡ್ ಆರ್ಡರ್ ಪೊಲಿಸರು ಸೇರಿ 15 ಸಾವಿರಕ್ಕೂ ಹೆಚ್ಚು ಪೊಲಿಸರ ನಿಯೋಜನೆ. ಮೆರವಣಿಗೆ ಸಾಗುವ ವೇಳೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ. ಮೆರವಣಿಗೆ ಉದ್ದಕ್ಕೂ 4 ಮಂದಿ ಹೆಚ್ಚುವರಿ ಆಯುಕ್ತರು ಹಾಗೂ 15 ಮಂದಿ ಡಿಸಿಪಿ, 30 ಕೆಎಸ್ಆರ್​ಪಿ ಭದ್ರತೆಯನ್ನು ಒದಗಿಸಲಿದ್ದಾರೆ.

08:25- ಮಂಡ್ಯದಲ್ಲಿ ಅಂಬರೀಷ್ ಅಂತಿಮದರ್ಶನ ಮುಕ್ತಾಯ. ಕ್ರೀಡಾಂಗಣದಲ್ಲಿ ಸಾರ್ವಜನಿಕ ಪ್ರವೇಶದ ದ್ವಾರ ಬಂದ್. ಕ್ರೀಡಾಂಗಣದ ಒಳಗಿರುವವರಿಗೆ ಮಾತ್ರ ಅವಕಾಶ.

08:24- ಇನ್ನು ಕೆಲವೇ ಕ್ಷಣಗಳಲ್ಲಿ ಮಂಡ್ಯಕ್ಕೆ ಆಗಮಿಸಲಿರುವ ಸೇನಾ ಹೆಲಿಕಾಪ್ಟರ್. ಸರ್.ಎಂ.ವಿ. ಕ್ರೀಡಾಂಗಣದಿಂದ ಕೆಲವೇ ಕ್ಷಣಗಳಲ್ಲಿ ಬೆಂಗಳೂರು ಎಚ್.ಎ.ಎಲ್ ಗೆ ಅಂಬಿ ಪಾರ್ಥಿವ ಶರೀರ ರವಾನೆ.

08:21- ಮಂಡ್ಯಕ್ಕೆ ಇಂದು ಕತ್ತಲೆಯಾಗಿದೆ. ಅಂಬಿ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ಮಠದಿಂದ ಪ್ರಥಮ ಕಲಾಯೋಗಿ ಪ್ರಶಸ್ತಿ ಪಡೆದಿದ್ದರು. ನನಗೆ ಮಠಾಧೀಶನಾಗಿ ಪಟ್ಟಾಭಿಷೇಕವಾದಾಗಿನಿಂದ ಹಲವಾರು ಕೆಲಸಗಳಲ್ಲಿ ನಮ್ಮ ಜೊತೆ ಇದ್ದರು. ತಮಿಳುನಾಡಿನಿಂದ ಅವರ ದರ್ಶನಕ್ಕೆ ಆಗಮಿಸಿದ್ದೇನೆ. ಭಗವಂತ ಅವರ ಆತ್ಮಕ್ಕೆ ಮೋಕ್ಷ ನೀಡಲಿ. ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ಕೊಡಲಿ ಎಂದು ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಂತಾಪ.

08:20- ಇದುವರೆಗೂ ನಟ ಅಂಬರೀಷ್ ಅಂತಿಮ ದರ್ಶನ ಪಡೆಯದ ನಟಿ ರಮ್ಯಾ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ‌ ನಡೆಗೆ ನೆಟ್ಟಿಗರ ಆಕ್ರೋಶ. ಮಂಡ್ಯ ಜಿಲ್ಲೆ ಹಾಗೂ ಅಂಬಿ ಹೆಸರಿನೊಂದಿಗೆ ಬೆಳೆದು ಬಂದ ರಮ್ಯಾ ಮೇಡಂ ಚಿತ್ರರಂಗ ಮತ್ತು ರಾಜಕೀಯ ರಂಗದೊಂದಿಗೆ ಮಂಡ್ಯದ ಜನರ ಮನಸ್ಸಿನಿಂದಲೂ ಮಾಜಿಯಾಗಿದ್ದಾರೆ ಎಂದು ಆಕ್ರೋಶ.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ಪಡೆಯುತ್ತಿರುವ ಅಭಿಮಾನಿಗಳು.
ಅಂಬಿ ಅಂತ್ಯಕ್ರಿಯೆಗೆ ಸಿದ್ಧತೆ.
ಅಂಬಿ ಅಂತ್ಯಕ್ರಿಯೆ ವೀಕ್ಷಣೆಗೆ ಕಂಠೀರವ ಸ್ಟುಡಿಯೋದಲ್ಲಿ ಮಾಡಲಾಗಿರುವ ಆಸನ ವ್ಯವಸ್ಥೆ.
ಕಂಠೀರವ ಸ್ಟುಡಿಯೋದಲ್ಲಿ ನಿಯೋಜಿಸಲಾಗಿರುವ ಪೊಲೀಸ್​ ಪಡೆ.

08:03- ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಕ್ರಿಯೆಗೆ ಸಿದ್ಧತೆ. ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ಸ್ಥಳ ಪರಿಶೀಲನೆ. ಪೊಲೀಸ್ ಇಲಾಖೆಯಿಂದ ಅಂತ್ಯಕ್ರಿಯೆಯ ಸ್ಥಳ ಪರಿಶೀಲನೆ. ಯಾವುದೇ ಅಹಿತರಕರ ಘಟನೆ ನಡೆಯದಂತೆ ಮುಂಜಾಗ್ರತೆ.

08:01- ಮಂಡ್ಯದಲ್ಲಿ 8.15ಕ್ಕೆ ಅಂತಿಮ ದರ್ಶನ ಮುಕ್ತಾಯ. ಆನಂತರ ಸ್ಟೇಡಿಯಂ ಒಳಗಿರುವ ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ. ದರ್ಶನ ಮುಗಿದ ಬಳಿಕ ಸೇನಾ ಹೆಲಿಕಾಪ್ಟರ್​​ನಲ್ಲಿ ಪಾರ್ಥಿವ ಶರೀರ ರವಾನೆ.

7:58- ಅಂತ್ಯಕ್ರಿಯೆಯ ಉಸ್ತುವಾರಿಯನ್ನು ಜಿಲ್ಲಾಡಳಿತ, ಸ್ಥಳೀಯ ಶಾಸಕ ಗೋಪಾಲಯ್ಯ ಹಾಗೂ ಬಿಬಿಎಂಪಿ ವಹಿಸಿಕೊಂಡಿದೆ. ಖ್ಯಾತ ವೈಧಿಕ ಡಾ.ಭಾನುಪ್ರಕಾಶ್ ಶಿಷ್ಯರ ತಂಡದಿಂದ ಅಂತಿಮ ವಿಧಿವಿಧಾನ ನೆರವೇರಲಿದೆ. ಭಾನುಪ್ರಕಾಶ್‌ ಅಮೆರಿಕದಲ್ಲಿರುವುದರಿಂದ ಶಿಷ್ಯರಿಗೆ ಫೋನ್ ಮೂಲಕ ಮಾರ್ಗದರ್ಶನ ನೀಡಲಿದ್ದಾರೆ.

ಮಂಡ್ಯದ ಕಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ.

7:45- ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಕ್ರಿಯೆಗೆ ಸಿದ್ಧತೆ. ಒಕ್ಕಲಿಗ ಸಂಪ್ರದಾಯದಂತೆ ನಡೆಯುವ ಅಂತ್ಯಕ್ರಿಯೆ. ಪಾರ್ಥಿವ ಶರೀರಕ್ಕೆ ಪುತ್ರ ಅಭಿಷೇಕ್ ಅವರಿಂದ​ ಅಗ್ನಿಸ್ಪರ್ಶ. ಅಂತ್ಯಕ್ರಿಯೆಗೆ ನೀಲಗಿರಿ, ಉಣಸೆ, ಹತ್ತಿ, ಸಾರ್ವೆ ಹಾಗೂ ಗಂಧದ ಕಡ್ಡಿಗಳನ್ನು ಸಿದ್ಧಗೊಳಿಸಲಾಗಿದೆ. ಜತೆಗೆ 13 ಕೆಜಿ ಗಂಧದ ಚಕ್ಕೆ, 10 ಕೆಜಿ ಕೊಬರಿ, 30 ಕೆಜಿ ತುಪ್ಪ, 5 ಕೆಜಿ ಕರ್ಪೂರ ಹಾಗೂ ಒಂದು ಚೀಲದಷ್ಟು ಹಸುವಿನ ಒಣಗಿದ ಬೆರಣಿ ಬಳಕೆ ಮಾಡಲಾಗುತ್ತಿದೆ.

ಅಗಲಿದ ನಾಯಕನಿಗೆ ಅಂತಿಮ ನಮನ.
ಅಂತಿಮ ದರ್ಶನಕ್ಕೆ ಅಂಬಿ ಪಾರ್ಥಿವ ಶರೀರವನ್ನು ಇಡಲಾಗಿದ್ದ ಕಂಠೀರವ ಕ್ರೀಡಾಂಗಣ ಸ್ಥಳ.

7:35- ಹಿಂದು ಸಂಪ್ರದಾಯದಂತೆ ಅಂಬಿ ಅಂತ್ಯ ಸಂಸ್ಕಾರ. ಇದಕ್ಕಾಗಿ ಮೂರುವರೆ ಅಡಿ ಎತ್ತರದ ಕಟ್ಟೆ ನಿರ್ಮಿಣ. ಎರಡೂವರೆ ಟನ್ ಕಟ್ಟಿಗೆ, 5 ಕೆಜಿ ಗಂಧದ ಮರ, 50 ಕೆಜಿ ತುಪ್ಪ ಬಳಕೆ. ಇಂದು ಮಧ್ಯಾಹ್ನ 2 ಗಂಟೆಗೆ ಅಂಬರೀಷ್ ಅಂತ್ಯಸಂಸ್ಕಾರ.

7:28- ಅಂಬಿ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಅಭಿಮಾನಿಗಳು. ಸಾರ್ವಜನಿಕರನ್ನು ನಿಯಂತ್ರಿಸಲು ಪೋಲಿಸರ ಹರಸಾಹಸ. ನೂಕುನುಗ್ಗಲು ಹೆಚ್ಚಾದ ಹಿನ್ನೆಲೆಯಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದ ಸಾರ್ವಜನಿಕರ ಪ್ರವೇಶ ದ್ವಾರ ಬಂದ್ ಮಾಡಲಾಗಿದೆ.

ಅಂಬರೀಶ್ ಪಾರ್ಥಿವ ಶರೀರದ ಮೆರವಣಿಗೆ ವಾಹನ.

ಅಂಬರೀಷ್​ ಕುರಿತು ನಟ ಕಿಚ್ಚ ಸುದೀಪ್ ಬರೆದಿರುವ ಅಂತಿಮ ವಿದಾಯದ ಪತ್ರ ಹೀಗಿದೆ. 

7:20- ಅಂಬರೀಶ್ ಪಾರ್ಥಿವ ಶರೀರದ ಮೆರವಣಿಗೆಗೆ ಸಿದ್ಧತೆ ಆರಂಭ. ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಮೆರವಣಿಗೆ ವಾಹನ. ಹೂವಿನ ಅಲಂಕಾರದ ಮೂಲಕ ವಾಹನಕ್ಕೆ ಸಿಂಗಾರ. ಸೆಂಟ್ ಪೀಟರ್ಸ್ ಸಂಸ್ಥೆಯ ವಾಹನದಲ್ಲಿ ಅಂಬಿ ಪಾರ್ಥಿವ ಶರೀರದ ಮೆರವಣಿಗೆ.

7:19- ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ HAL ವಿಮಾನ ನಿಲ್ದಾಣಕ್ಕೆ ಅಂಬಿ ಪಾರ್ಥಿವ ಶರೀರವನ್ನು ರವಾನಿಸಲು ಸಿದ್ದತೆ ಆರಂಭವಾಗಿದೆ. ಸೇನಾಹೆಲಿಕಾಪ್ಟರ್ ಮೂಲಕ HAL ವಿಮಾನನಿಲ್ದಾಣ ತಲುಪಲಿರುವ ಅಂಬಿ ಪಾರ್ಥಿವ ಶರೀರ.

7:16- ನಟ ದರ್ಶನ್​ಗೆ ದುಬೈನಿಂದ ವಿಮಾನ ಸಿಕ್ಕಿದ್ದು, ಸುಮಾರು 9 ಗಂಟೆಗೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ಕಂಠೀರವ ಸ್ಟುಡಿಯೋಗೆ ದರ್ಶನ್​ ಬರಲಿದ್ದಾರೆ.

6.52 – ಬೆಳಗ್ಗೆ 8 ಗಂಟೆಗೆ ಸೇನಾ ಹೆಲಿಕಾಪ್ಟರ್​ ಕ್ರೀಡಾಂಗಣದಲ್ಲಿ ಲ್ಯಾಂಡ್​ ಆಗಲಿದೆ.

6.50 – ಹೆಲಿಕಾಪ್ಟರ್​ ಲ್ಯಾಂಡಿಂಗ್​ಗಾಗಿ ಸಿದ್ಧತೆ ನಡೆಯುತ್ತಿದ್ದು, ಕ್ರೀಡಾಂಗಣದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್​ಗೆ ನೀರು ಸಿಂಪರಿಸಿಸುತ್ತಿರುವ ನಗರಸಭೆ ನೌಕರರು.

6.31 – ಚಳಿಯನ್ನೂ ಲೆಕ್ಕಿಸದೆ ಬೆಳಗ್ಗೆ 5 ಗಂಟೆಯಿಂದ ಮತ್ತೆ ತಂಡೋಪತಂಡವಾಗಿ ಆಗಮಿಸುತ್ತಿರುವ ಅಭಿಮಾನಿಗಳು.

6.30 – ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರಾತ್ರಿಯಿಡೀ ಅಂಬರೀಷ್​ ಪಾರ್ಥಿವ ಶರೀರದ ದರ್ಶನ ಪಡೆದ ಅಭಿಮಾನಿಗಳು.

6.25 – ರಾತ್ರಿ ಇಡೀ ವಿಶ್ರಾಂತಿಯಿಲ್ಲದೆ ಅಂಬಿ ಅಭಿಮಾನಿಗಳನ್ನು ನಿಯಂತ್ರಿಸುತ್ತಿರುವ ಪೊಲೀಸರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯವಸ್ಥಿತವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು.

ಮಂಡ್ಯದಲ್ಲಿ ಬೆಳಗ್ಗೆ 9 ರವರೆಗೂ ದರ್ಶನ

ಅಂಬರೀಷ್ ತವರು ಜಿಲ್ಲೆ ಮಂಡ್ಯದ ಜನರ ಒತ್ತಾಯಕ್ಕೆ ಮಣಿದ ಸರ್ಕಾರ, ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಒಯ್ದು ಸೋಮವಾರ ಬೆಳಗ್ಗೆ 9ರವರೆಗೂ ಅಂತಿಮ ದರ್ಶನ ವ್ಯವಸ್ಥೆ ಮಾಡಿದೆ. ಭಾನುವಾರ ತಡರಾತ್ರಿ ಜನರನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದರು.

20 ಸಾವಿರ ಪೊಲೀಸರ ನಿಯೋಜನೆ

ಅಂಬರೀಷ್ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸೋಮವಾರ ನಗರದಾದ್ಯಂತ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ 11 ಸಾವಿರ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಮತ್ತು ಅಧಿಕಾರಿಗಳು, 4 ಸಾವಿರ ಸಂಚಾರ ಸಿಬ್ಬಂದಿ ಮತ್ತು ಅಧಿಕಾರಿಗಳು, 30 ಕೆಎಸ್​ಆರ್​ಪಿ ತುಕಡಿಗಳು, 34 ಸಿಎಎಆರ್ ತುಕಡಿಗಳು, 3 ಆರ್​ಎಎಫ್ ಕಂಪನಿ, 5 ರ್ಯಾಪಿಡ್ ಇಂಟರ್​ವೆನ್ಷನ್ ವಾಹನ(ಆರ್.ಐ.ವಿ), 15 ಡಿಸಿಪಿಗಳು, 4 ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪಾರ್ಥಿವ ಶರೀರ ಹೋಗುವ ರಸ್ತೆಗಳನ್ನು ಸೆಕ್ಟರ್​ಗಳಾಗಿ ವಿಂಗಡಿಸಿ ಪ್ರತಿಯೊಂದು ಸೆಕ್ಟರ್​ಗಳ ಉಸ್ತುವಾರಿಯನ್ನು ಆಯಾ ಡಿಸಿಪಿ ತಂಡಕ್ಕೆ ವಹಿಸಲಾಗಿದೆ.

ನಗರದ ಕೆಲವೆಡೆ ಸಂಚಾರ ಬದಲಾವಣೆ: ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯ ಸಂಸ್ಕಾರ ಹಾಗೂ ಪಾರ್ಥಿವ ಶರೀರ ಮೆರವಣಿಗೆ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಗರದ ಕೆಲವೆಡೆ ಸೋಮವಾರ ಬೆಳಗ್ಗೆಯಿಂದ ಸಂಚಾರ ಬದಲಾವಣೆ ಮಾಡಿದ್ದಾರೆ. ಹೊರ ವರ್ತಲ ರಸ್ತೆ ಸುಮನಹಳ್ಳಿ ಜಂಕ್ಷನ್​ನಿಂದ ಗೊರಗುಂಟೆಪಾಳ್ಯದ ಕಡೆ ಹೋಗುವ ಲಘು ವಾಹನಗಳು, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಹೌಸಿಂಗ್ ಬೋರ್ಡ್, ಮಾಗಡಿ ರಸ್ತೆ ಟೋಲ್​ಗೇಟ್ ಮೂಲಕ ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಸಂಚರಿಸಬಹುದಾಗಿದೆ.

ಗೊರಗುಂಟೆಪಾಳ್ಯ ಜಂಕ್ಷನ್​ನಿಂದ ಸುಮನಹಳ್ಳಿ ಜಂಕ್ಷನ್ ಕಡೆ ಸಂಚರಿಸುವ ವಾಹನಗಳು, ಎಂಇಐ ಜಂಕ್ಷನ್, ಆರ್.ಎಂ.ಸಿ. ಯಾರ್ಡ್, ಮಾರಪ್ಪನಪಾಳ್ಯ, ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವೃತ್ತದ ಮೂಲಕ ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಹಾದು ಹೋಗಬಹುದು. ಸ್ಯಾಂಕಿ ರಸ್ತೆ, ಮಾರಮ್ಮ ವೃತ್ತ, ಯಶವಂತಪುರ ಮೂಲಕ ತುಮಕೂರು ರಸ್ತೆಗೆ ಹೋಗುವ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಇಲ್ಲಿ ಸಂಚರಿಸುವ ವಾಹನಗಳು ಮೇಖ್ರಿ ವೃತ್ತದಲ್ಲಿ ಎಡತಿರುವು ಪಡೆದು, ಸದಾಶಿವನಗರ ಪೊಲೀಸ್ ಠಾಣಾ ಜಂಕ್ಷನ್​ನಲ್ಲಿ ಬಲತಿರುವು ಪಡೆದು, ಬಿಎಎಲ್ ರಸ್ತೆ ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆಯಬೇಕು. ನಂತರ ಬಿಇಎಲ್ ವೃತ್ತದಲ್ಲಿ ಬಲ ತಿರುವು ಪಡೆದು, ಗಂಗಮ್ಮ ವೃತ್ತದಲ್ಲಿ ಎಡತಿರುವು ಪಡೆದು ತುಮಕೂರು ರಸ್ತೆ ತಲುಪಬಹುದು.

ಮೆರವಣಿಗೆ ಮಾರ್ಗ

ಪಾರ್ಥಿವ ಶರೀರದ ಮೆರವಣಿಗೆಯು ಕಂಠೀರವ ಸ್ಟೇಡಿಯಂನಿಂದ ಹಡ್ಸನ್ ವೃತ್ತ, ಹಲಸೂರು ಗೇಟ್ ಪೊಲೀಸ್ ಠಾಣೆ, ಪೊಲೀಸ್ ಕಾರ್ನರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ವೃತ್ತದ ಸ್ಟೋಕ್ 10, ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್, ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಾರಮ್ಮನ ವೃತ್ತ, ಬಿಎಚ್​ಇಐ, ಯಶವಂತ ಪುರ ಮೇಲ್ಸೇತುವೆ, ಮೆಟ್ರೋದಲ್ಲಿ ಬಲ ತಿರುವು, ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆ, ಗೊರಗುಂಟೆಪಾಳ್ಯ ಜಂಕ್ಷನ್​ನಲ್ಲಿ ಎಡತಿರುವು, ಸಿಎಂಟಿಐ, ಎಫ್​ಟಿಐ ಮಾರ್ಗವಾಗಿ ಕಂಠೀರವ ಸ್ಟುಡಿಯೋಗೆ ತೆರಳಲಿದೆ. ಆದರೆ, ಕೊನೆಯ ಕ್ಷಣದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ತಿಳಿಸಿದ್ದಾರೆ.

ಏನೇನಾಯ್ತು?

 • ಬೆಳಗ್ಗೆ 6.30: ಜೆ.ಪಿ.ನಗರ ನಿವಾಸದಿಂದ ಪಾರ್ಥಿವ ಶರೀರ ರವಾನೆ.
 • 7.00: ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ.
 • 7.30: ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ.
 • 11.30: ಮಂಡ್ಯಕ್ಕೆ ಪಾರ್ಥಿವ ಶರೀರ ಕೊಂಡೊಯ್ಯುವುದಾಗಿ ಸಿಎಂ ಘೋಷಣೆ.

ಮಧ್ಯಾಹ್ನ

 • 3.00: ಕಂಠೀರವ ಕ್ರೀಡಾಂಗಣದೊಳಗೆ ಅಭಿಮಾನಿಗಳ ಪ್ರವೇಶಕ್ಕೆ ತಡೆ.
 • 3.30: ಪಾರ್ಥಿವ ಶರೀರ ಕ್ರೀಡಾಂಗಣದಿಂದ ಎಚ್​ಎಎಲ್​ಗೆ.
 • 4.10: ಎಚ್​ಎಎಲ್ ವಿಮಾನ ನಿಲ್ದಾಣ ದಿಂದ ಮಂಡ್ಯಕ್ಕೆ ಹೆಲಿಕಾಪ್ಟರ್ ಟೇಕಾಫ್.
 • ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ.

ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ

ನಟ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ನಂದಿನಿ ಬಡಾವಣೆಯ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಕಂಠೀರವ ಸ್ಟುಡಿಯೂ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿರುವ ಜಾಗದಲ್ಲಿ ಸ್ಮಾರಕ ನಿರ್ವಣಕ್ಕೆ ಸಿದ್ಧತೆಗಳು ನಡೆದಿದ್ದು, ಸೋಮವಾರ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ. 2 ಸಾವಿರಕ್ಕೂ ಅಧಿಕ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಸೋಮವಾರ ನಡೆಯಲಿರುವ ಅಂತಿಮ ಸಂಸ್ಕಾರಕ್ಕಾಗಿ ಮೂರೂವರೆ ಅಡಿ ಎತ್ತರದ ಕಟ್ಟೆ ನಿರ್ವಿುಸಲಾಗಿದ್ದು, ಅದರ ಮೇಲೆ ಎರಡೂವರೆ ಟನ್ ಕಟ್ಟಿಗೆ ಬಳಸಿ ಅಂಬರೀಷ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. 5 ಕೆ.ಜಿ. ಗಂಧದ ಮರ, 50 ಕೆಜಿ ತುಪ್ಪವನ್ನು ತರಿಸಲಾಗಿದ್ದು, ಬಿಬಿಎಂಪಿ, ಬೆಸ್ಕಾಂ ಸೇರಿ ಇತರ ಇಲಾಖೆಗಳ ಸಿಬ್ಬಂದಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ಕಡೆ 200 ಜನ ಕುಟುಂಬಸ್ಥರಿಗಾಗಿಯೂ ಶಾಮಿಯಾನ ಹಾಕಲಾಗಿದ್ದು, ಆಸನದ ವ್ಯವಸ್ಥೆಯಿದೆ. ಮಹಾಲಕ್ಷ್ಮೀ ಬಡಾವಣೆ ಶಾಸಕ ಗೋಪಾಲಯ್ಯ ಸಿದ್ಧತೆಗಳ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

4.5 ಕಿ.ಮೀ ಬ್ಯಾರಿಕೇಡ್: ಅಂಬರೀಷ್ ಅಂತಿಮ ಸಂಸ್ಕಾರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸುವ ಸಾಧ್ಯತೆಯಿದ್ದು, ಕಂಠೀರವ ಕ್ರೀಡಾಂಗಣದ ಹೊರಭಾಗ 1 ಸಾವಿರಕ್ಕೂ ಅಧಿಕ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದ್ದು, ಒಟ್ಟು 4.5 ಕಿ.ಮೀ. ವರೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.

ಸ್ಟುಡಿಯೋ ಪ್ರವೇಶದ್ವಾರವಿರುವ ರಿಂಗ್​ರೋಡ್​ನಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು, ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಭಾನುವಾರ ಸಂಜೆಯಿಂದಲೇ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವಿಐಪಿಗಳಿಗೆ ಹಿಂಬಾಗಿಲ ಮೂಲಕ ಪ್ರವೇಶ

ಕಂಠೀರವ ಸ್ಟುಡಿಯೋ ಹಿಂಭಾಗದಲ್ಲಿ ಎರಡು ದ್ವಾರಗಳಿವೆ ಎನ್ನಲಾಗಿದ್ದು, ಗಣ್ಯರಿಗೆ ಹಿಂಭಾಗದಿಂದಲೇ ಪ್ರವೇಶದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಂಠೀರವ ಸ್ಟುಡಿಯೋದ ಮುಖ್ಯ ಪ್ರವೇಶ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದರೆ ಗಣ್ಯರನ್ನು ಒಳಗೆ ಕರೆದೊಯ್ಯುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಹಿಂಭಾಗದಿಂದಲೇ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

200ಕ್ಕೂ ಹೆಚ್ಚು ಸಿಬ್ಬಂದಿ

ಭಾನುವಾರ ಮಧ್ಯಾಹ್ನದ ನಂತರ ಅಂಬರೀಷ್ ಅಂತಿಮ ಸಂಸ್ಕಾರಕ್ಕಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, 200ಕ್ಕೂ ಅಧಿಕ ಸಿಬ್ಬಂದಿ ಸಿದ್ಧತಾ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಇನ್ನುಳಿದಂತೆ ಪೊಲೀಸ್, ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಅಂಬರೀಷ್ ಸ್ಮಾರಕ

ಕಂಠೀರವ ಸ್ಟುಡಿಯೋದ ಪ್ರವೇಶದ್ವಾರದ ಎಡಭಾಗದಲ್ಲಿರುವ ಒಂದೂವರೆ ಎಕರೆ ಭೂಮಿಯಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣವಾಗಲಿದೆ. ಬಲಭಾಗದಲ್ಲಿ ಡಾ.ರಾಜ್​ಕುಮಾರ್ ಹಾಗೂ ಪಾರ್ವತಮ್ಮನವರ ಸಮಾಧಿ ಇದೆ. ಅಂತ್ಯ ಸಂಸ್ಕಾರ ನಡೆಯುವ ಸ್ಥಳದಲ್ಲಿ ಗಣ್ಯರು, ಕುಟುಂಬಸ್ಥರು, ಮಾಧ್ಯಮಗಳಿಗೆ ವ್ಯವಸ್ಥೆ ಮಾಡುವುದರೊಂದಿಗೆ ಸಾರ್ವಜನಿಕರ ವೀಕ್ಷಣೆಗಾಗಿಯೂ ಅವಕಾಶ ಕಲ್ಪಿಸಲಾಗಿದೆ. 3 ಸಾವಿರ ಜನರು ನಿಗದಿಪಡಿಸಿದ ಸ್ಥಳದಲ್ಲಿ ನಿಂತು ಅಂತಿಮ ಸಂಸ್ಕಾರವನ್ನು ವೀಕ್ಷಿಸಬಹುದಾಗಿದೆ.


ನೆಚ್ಚಿನ ನಾಯಕನ ದರ್ಶನಕ್ಕೆ ಜನಸಾಗರ

ನೆಚ್ಚಿನ ನಟ ಹಾಗೂ ಜನನಾಯಕ ಅಂಬರೀಷ್ ಅಂತಿಮ ದರ್ಶನಕ್ಕೆ ಭಾನುವಾರ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಧಾವಿಸಿ ಬಂದಿದ್ದರು. ಅಂತ್ಯಕ್ರಿಯೆ ನಡೆಯಲಿರುವ ಸೋಮವಾರವೂ ಲಕ್ಷಾಂತರ ಅಭಿಮಾನಿಗಳು ಸೇರುವ ನಿರೀಕ್ಷೆ ಇದ್ದು ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭಾನುವಾರ ಬೆಳಗ್ಗೆ 7.30ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಸುಲಲಿತ ಅಂತಿಮ ದರ್ಶನಕ್ಕೆ ಬೆಂಗಳೂರು ಪೊಲೀಸರು ಅನುವು ಮಾಡಿಕೊಟ್ಟರು. ಸಣ್ಣ ಅಹಿತಕರ ಘಟನೆಗೂ ಆಸ್ಪದ ಕೊಡದೆ ಬಿಗಿ ಭದ್ರತೆ ಒದಗಿಸಿದರು.

ಶನಿವಾರ ರಾತ್ರಿ 10.25ಕ್ಕೆ ಅಂಬರೀಷ್ ನಿಧನ ವಾರ್ತೆ ತಿಳಿದ ಪೊಲೀಸ್ ಆಯುಕ್ತ ಟಿ. ಸುನೀಲ್​ಕುಮಾರ್, ತಕ್ಷಣ ಆಸ್ಪತ್ರೆ ಮತ್ತು ಜೆ.ಪಿ.ನಗರ ಅಂಬರೀಷ್ ನಿವಾಸದ ಬಳಿ ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದರು. ಹೆಚ್ಚುವರಿ ಪೊಲೀಸ್ ಆಯುಕ್ತರಾದ ಬಿ.ಕೆ.ಸಿಂಗ್, ಸೀಮಂತ್ ಕುಮಾರ್ ಸಿಂಗ್, ಆಸ್ಪತ್ರೆ ಬಳಿ ಮೊಕ್ಕಾಂ ಹೂಡಿದ್ದರು. ಜತೆಗೆ ವೈಟ್​ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಕಲಾ ಕೃಷ್ಣಸ್ವಾಮಿ, ಕೇಂದ್ರ ವಿಭಾಗದ ದೇವರಾಜ್ ಭದ್ರತೆ ಉಸ್ತುವಾರಿ ವಹಿಸಿದ್ದರು.

ಜೆ.ಪಿ.ನಗರದ ನಿವಾಸದಿಂದ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ 7.30ಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಸಿನಿಮಾ ನಟ, ನಟಿಯರು, ಕಲಾವಿದರು, ರಾಜಕೀಯ ಮುಖಂಡರು ಸೇರಿ ಗಣ್ಯರಿಗೆ ಕ್ರೀಡಾಂಗಣದ ಮುಖ್ಯದ್ವಾರದಲ್ಲಿ ಬರಲು ಅವಕಾಶ ನೀಡಿದರೆ, ಸಾರ್ವಜನಿಕರಿಗೆ ಪ್ರತ್ಯೇಕ ಸಾಲು ವ್ಯವಸ್ಥೆ ಮಾಡಲಾಗಿತ್ತು. ಡಿಜಿಪಿ ನೀಲಮಣಿ ಎನ್.ರಾಜು ಕ್ರೀಡಾಂಗಣಕ್ಕೆ ಭೇಟಿ ಕೊಟ್ಟು ಭದ್ರತೆಯನ್ನು ಪರಿಶೀಲನೆ ನಡೆಸಿದರು. ನಗರ ಆಯುಕ್ತ ಸುನೀಲ್​ಕುಮಾರ್, ಕೇಂದ್ರ ವಿಭಾಗ ಡಿಸಿಪಿ ದೇವರಾಜ್ ಅಂತಿಮ ದರ್ಶನದ ಸ್ಥಳದಲ್ಲಿ ಭದ್ರತೆ ಉಸ್ತುವಾರಿ ವಹಿಸಿದ್ದರು. ಆಗ್ನೇಯ ವಿಭಾಗ ಡಿಸಿಪಿ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದ ತಂಡ ಸಾರ್ವಜನಿಕರನ್ನು ನಿಯಂತ್ರಿಸುವ ಉಸ್ತುವಾರಿ ವಹಿಸಿದ್ದರು. ರಸ್ತೆಬದಿ ಬ್ಯಾರಿಕೇಡ್ ಅಳವಡಿಸಿ ಸಾಲಾಗಿ ಜನರನ್ನು ಕ್ರೀಡಾಂಗಣದ ಒಳಗೆ ಬಿಡಲಾಗುತ್ತಿತ್ತು.

ಪ್ರಮುಖ ಜಂಕ್ಷನ್​ನಲ್ಲಿ ಅಲರ್ಟ್

ಕಂಠೀರವ ಕ್ರೀಡಾಂಗಣದ ಸುತ್ತಲ ಪ್ರದೇಶದ ಪ್ರಮುಖ ರಸ್ತೆ ಮತ್ತು ಜಂಕ್ಷನ್​ಗಳಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ಕನಕಪುರ ರಸ್ತೆ ಸೇರಿ ಎಲ್ಲ ವೃತ್ತಗಳಲ್ಲಿ ಸ್ಥಳೀಯ ಠಾಣಾ ಪೊಲೀಸರನ್ನು ಕಾವಲಿಗೆ ಇರಿಸಲಾಗಿತ್ತು.

ರಜೆಯಿಂದಾಗಿ ದಟ್ಟಣೆಯಾಗಲಿಲ್ಲ

ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಅವೆನ್ಯೂ ರಸ್ತೆ, ಚಿಕ್ಕಪೇಟೆ, ಎಸ್​ಪಿ ರಸ್ತೆಗಳಲ್ಲಿ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಸರ್ಕಾರಿ ಕಚೇರಿಗೆ, ಶಾಲಾ ಕಾಲೇಜು ವಾಹನಗಳ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದ ಸುತ್ತಲಿನ ರಸ್ತೆಗಳಲ್ಲಿ ನಿಧಾನಗತಿ ವಾಹನ ಸಂಚಾರವಿತ್ತು. ಇಲ್ಲದಿದ್ದರೆ ಕ್ರೀಡಾಂಗಣ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಬೇಕಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಏಕಕಾಲಕ್ಕೆ ಎರಡು ಕಡೆ ನಿಭಾಯಿಸಿದ ಪೊಲೀಸ್

ಅಂಬರೀಷ್ ಅಂತಿಮ ದರ್ಶನ ನಡೆಯುತ್ತಿದ್ದಾಲೇ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ನಿಧನರಾದರು. ಕಂಠೀರವ ಕ್ರೀಡಾಂಗಣದಲ್ಲಿದ್ದ ಡಿಜಿಪಿ ನೀಲಮಣಿ ಎನ್.ರಾಜು ಮತ್ತು ಆಯುಕ್ತ ಸುನೀಲ್​ಕುಮಾರ್ ಒಂದೇ ಕಾರಿನಲ್ಲಿ ಜಾಫರ್ ಷರೀಫ್ ಮನೆ ಬಳಿಗೆ ತೆರಳಿ ಭದ್ರತೆ ನಿಯೋಜನೆ ಮಾಡಿದರು. ಡಿಸಿಪಿಗಳಾದ ಡಾ.ಚೇತನ್ ಸಿಂಗ್ ರಾಥೋಡ್, ರಾಹುಲ್ ಕುಮಾರ್, ಶಹಪುರ್​ವಾದ್ ಅವರನ್ನು ನಿಯೋಜನೆ ಮಾಡಿ ಏಕಕಾಲಕ್ಕೆ 2 ಕಡೆ ಭದ್ರತೆ ನಿಭಾಯಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಮಂಡ್ಯಕ್ಕೆ ಸಾಗಿಸಲು ಎಚ್​ಎಎಲ್​ಗೆ ಸ್ಥಳಾಂತರ

ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಅದಕ್ಕಾಗಿ ಮನವಿ ಮೇರೆಗೆ ರಕ್ಷಣಾ ಇಲಾಖೆ ಹೆಲಿಕಾಪ್ಟರ್ ಒದಗಿಸಿತು. ಆದರೆ, ಹೆಲಿಕಾಪ್ಟರ್ ಲ್ಯಾಂಡಿಂಗ್ ಬಗ್ಗೆ ನಿರ್ಧರಿಸಲಾಗಿರಲಿಲ್ಲ. ಹೀಗಾಗಿಯೇ ಏರ್​ಫೋರ್ಸ್​ನ ಕಮಾಂಡರ್ ಒಬ್ಬರು ಕಂಠೀರವ ಕ್ರೀಡಾಂಗಣಕ್ಕೆ ಬಂದು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಬಹುದಾದ ಜಾಗವನ್ನು ಪರಿಶೀಲಿಸಿದರು. ಕ್ರೀಡಾಂಗಣದಲ್ಲಿ ಅದು ಸಾಧ್ಯವಿಲ್ಲ ಎಂದು ತಿಳಿದು, ನಂತರ ಎಚ್​ಎಎಲ್​ಗೆ ಪಾರ್ಥಿವ ಶರೀರ ತೆಗೆದುಕೊಂಡು ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ತೆಗೆದುಕೊಂಡು ಹೋಗಲಾಯಿತು.

ಇಂದು ಮಧ್ಯರಾತ್ರಿವರೆಗೆ ಮದ್ಯ ನಿಷೇಧ

ಬೆಂಗಳೂರಿನ ಎಲ್ಲೆಡೆ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಕಿಡಿಗೇಡಿಗಳು ದುಷ್ಕತ್ಯ ಎಸಗುವ ಸಾಧ್ಯತೆ ಹಿನ್ನೆಲೆ ಯಲ್ಲಿ ಭಾನುವಾರ ಬೆಳಗ್ಗೆ 6ರಿಂದ ಸೋಮವಾರ (ನ.26) ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿದ್ದಾರೆ.

ಭದ್ರತೆ ಪರಿಶೀಲನೆ

ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಅಂತ್ಯಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರು ಡಿಸಿ, ಪೊಲೀಸ್ ಕಮಿಷನರ್, ಶಾಸಕ ಗೋಪಾಲಯ್ಯ ಭದ್ರತೆ ಪರಿಶೀಲನೆ ನಡೆಸಿದರು. ಸೋಮವಾರ ಬೆಳಗ್ಗೆ ಕ್ರೀಡಾಂಗಣದಿಂದ ಸ್ಟುಡಿಯೋವರೆಗೂ ರಸ್ತೆ ಉದ್ದಕ್ಕೂ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ. ಅಂತ್ಯ ಸಂಸ್ಕಾರದ ವೇಳೆಯೂ ಗೊಂದಲ ಉಂಟಾಗದಂತೆ ಭದ್ರತೆ ಒದಗಿಸುವುದಾಗಿ ಸುನೀಲ್​ಕುಮಾರ್ ತಿಳಿಸಿದ್ದಾರೆ.

ಅಭಿಮಾನಿಗಳ ಅಶ್ರುತರ್ಪಣ

ನಟ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ನಗರದ ಚಿತ್ರಮಂದಿರ, ಮಾಲ್ ಹಾಗೂ ವಿವಿಧ ವೃತ್ತಗಳಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕುರುಬರಹಳ್ಳಿ, ವಿಜಯನಗರ, ಬನಶಂಕರಿ, ಹೆಬ್ಬಾಳ, ಕೆ.ಆರ್. ಪುರ, ಮಲ್ಲೇಶ್ವರ, ಮೈಸೂರು ರಸ್ತೆ ಸೇರಿ ಅನೇಕ ಕಡೆ ಕನ್ನಡಪರ ಸಂಘಟನೆಗಳು, ಆಟೋ ಚಾಲಕರು, ಅಭಿಮಾನಿಗಳು ಅಂಬರೀಷ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಚಿತ್ರನಟರಾಗಿ, ರಾಜಕಾರಣಿಯಾಗಿ ಕನ್ನಡ ನಾಡಿಗೆ ಅಂಬರೀಷ್ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಅಭಿಮಾನಿಗಳು, 2 ನಿಮಿಷ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು. ಪೆಟ್ರೋಲ್ ಬಂಕ್​ಗಳಲ್ಲಿಯೂ ಅಂಬರೀಷ್ ಫೋಟೋ ಇರಿಸಿ ನಮನ ಸಲ್ಲಿಸಲಾಯಿತು. ರಾಜಧಾನಿಯಿಡೀ ಶೋಕಾಚರಣೆಯಲ್ಲಿ ಮುಳುಗಿತ್ತು.


ಅಂಬಿ ಅಣ್ಣನಿಗೆ ಜೈ.. ಮಂಡ್ಯದ ಗಂಡಿಗೆ ಜೈ..

ಬೆಂಗಳೂರು: ಅಂಬಿ ಅಣ್ಣನಿಗೆ ಜೈ… ಮಂಡ್ಯದ ಗಂಡಿಗೆ ಜೈ… ಈ ಉದ್ಘೋಷ ಕಂಠೀರವ ಕ್ರೀಡಾಂಗಣದಲ್ಲಿ ಮಾರ್ದನಿಸುತ್ತಿತ್ತು. ನೆಚ್ಚಿನ ನಟನನ್ನು ಕಳೆದುಕೊಂಡ ದುಃಖ ಪ್ರತಿಯೋರ್ವರಲ್ಲೂ ಮನೆಮಾಡಿತ್ತು.

ಕ್ರೀಡಾಂಗಣ ಸುತ್ತಮುತ್ತ ಬೆಳಗ್ಗೆ 7ರಿಂದಲೇ ಅಭಿಮಾನಿಗಳು ಜಮೆಯಾಗಿದ್ದರು. ಅಂಬಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ರಾಜ್ಯದ ಹಲವೆಡೆಯಿಂದ ಜನಪ್ರವಾಹ ಹರಿದುಬರ ಲಾರಂಭಿಸಿತ್ತು. ಕ್ರೀಡಾಂ ಗಣದ 4ನೇ ದ್ವಾರದಿಂದ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ಅಂಬರೀಷ್ ಫೋಟೋ: ಕೈಯಲ್ಲಿ ಅಂಬರೀಷ್ ಫೋಟೋ ಹಿಡಿದು ಅಭಿಮಾನಿಗಳು ಜೈಕಾರದೊಂದಿಗೆ ಕಂಠೀರವ ಕ್ರೀಡಾಂಗಣ ಪ್ರವೇಶಿಸುತ್ತಿದ್ದರು. ಪಾರ್ಥಿವ ಶರೀರದ ದರ್ಶನ ಪಡೆದು ಹೊರಹೋಗುವವರೆಗೂ ಜೈಕಾರದ ಮೂಲಕ ನಮನ ಸಲ್ಲಿಸಿದರು. ಕೆಂಗೇರಿ ನಿವಾಸಿ ಅಂಗವಿಕಲೆ ಜಯಮ್ಮ ಅಂಬರೀಷ್ ಸಹಾಯ ನೆನೆದು ಕಣ್ಣೀರಿಟ್ಟರು. ‘ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಭೇಟಿಯಾಗಿ ನನ್ನ ನೋವು ತಿಳಿಸಿದ್ದೆ. ಈ ಸಂದರ್ಭದಲ್ಲಿ ಅಂಗಡಿ ನಿರ್ವಣಕ್ಕೆ ಸಹಾಯ ಮಾಡಿದ್ದರು. ಅಂಗವಿಕಲೆ ಅನ್ನುವ ಕಾರಣಕ್ಕೆ ತಕ್ಷಣದಲ್ಲೇ ನೆರವಿನ ಹಸ್ತ ಚಾಚಿದ್ದರು. ಇಂದು ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದೆ’ ಎಂದು ಭಾವುಕರಾದರು.

ಮಧ್ಯಾಹ್ನ ಮೂರು ಗಂಟೆವರೆಗೂ ಸಾರ್ವಜನಿಕರಿಗೆ ಅಂಬಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಕ್ರೀಡಾಂಗಣದ ಮುಖ್ಯದ್ವಾರವನ್ನು ಪೊಲೀಸರು ಮುಚ್ಚಿದರು. ಉಳಿದವರು ಸೋಮವಾರ ಬೆಳಗ್ಗೆ ಆಗಮಿಸಿ ಅಂತಿಮ ದರ್ಶನ ಪಡೆಯುವಂತೆ ಸೂಚಿಸಿದರು. ಮಂಡ್ಯಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಂತೆ ಅಂತಿಮ ದರ್ಶನ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಕೊಂಚ ನೂಕುನುಗ್ಗಲು ಉಂಟಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಂಡ್ಯ ಕಡೆಯಿಂದ ಸಾವಿರಾರು ಜನರು ವಿಶೇಷ ಬಸ್​ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು.

ವಿಐಪಿ ಗೇಟ್​ನಲ್ಲಿ ಗೊಂದಲ

ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ವಿಐಪಿ ಗೇಟ್​ನಲ್ಲಿ ಗಣ್ಯರ ಜತೆ ಹತ್ತಾರು ಬೆಂಬಲಿಗರೂ ಆಗಮಿಸಿದ್ದ ಕಾರಣ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿ ಯಾಯಿತು. ಬೆಂಬಲಿಗರನ್ನು ಪೊಲೀಸರು ತಡೆದ ಸಂದರ್ಭದಲ್ಲಿ ಮಾತಿನ ಚಕಮಕಿ ಉಂಟಾಯಿತು.ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ರೆಬೆಲ್​ ಸ್ಟಾರ್​ ಅಂಬರೀಷ್(66)​ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿತ್ರರಂಗ, ರಾಜಕೀಯ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ಮಂಡ್ಯದಲ್ಲೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವಾಯುಪಡೆ ಹೆಲಿಕಾಪ್ಟರ್​ ಮೂಲಕ ರವಾನಿಸಲಾಯಿತು. ಇಂದು ಸಂಜೆ 5 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

8.30 PM:  ನಾಳೆ ಮಧ್ಯಾಹ್ನ 2 ಗಂಟೆಗೆ ಅಂಬರೀಷ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸಾರಿಗೆ ಸಚಿವ D.C.ತಮ್ಮಣ್ಣ  ತಿಳಿಸಿದ್ದಾರೆ.
ಬೆಳಗ್ಗೆ 9.05ಕ್ಕೆ ಮಂಡ್ಯದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿರುವ ಅಂಬರೀಷ್​ ಪಾರ್ಥಿವ ಶರೀರ, HALಗೆ ಬರಲಿದೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಗುತ್ತದೆ. ನಂತರ ಶರೀರವನ್ನು ಕಂಠೀರವ ಸ್ಟುಡಿಯೋಗೆ ಕೊಂಡೊಯ್ದು, ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಹಿಂದು ಸಂಪ್ರದಾಯದಂತೆ ದೇಹವನ್ನು ದಹಿಸುವ ಮೂಲಕ ಅಂತ್ಯಕ್ರಿಯೆ ನಡೆಯಲಿದೆ. ಭಾನುಪ್ರಕಾಶ್ ಶರ್ಮಾ ಅವರು ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ.

7.30PM: ಮಂಡ್ಯದಲ್ಲಿ ಅಂಬರೀಷ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಅದರಂತೆ ಸೋಮವಾರ  ಬೆಳಗ್ಗೆ 9 ಗಂಟೆವರೆಗೆ ಅಂತಿಮ ದರ್ಶನ ನಡೆಯಲಿದೆ.  ಈ ಮೊದಲು ಸೋಮವಾರ ಬೆಳಗ್ಗೆ 6ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 9 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದು ಸಚಿವ ಪುಟ್ಟರಾಜು ಹೇಳಿದ್ದಾರೆ.

6.07: ಅಗಲಿದ ನಾಯಕನ, ಪ್ರೀತಿಯ ನಟನ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಸರ್​ ಎಂ.ವಿ.ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಜನರು, ಅಭಿಮಾನಿಗಳು ಸರದಿಯ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಕ್ರೀಡಾಂಗಣದ ಒಂದು ಪಾರ್ಶ್ವದಲ್ಲಿ  ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನೂಕು ನುಗ್ಗಲು ಆಗದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಸುಗಮ ವೀಕ್ಷಣೆಗೆ ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ.

ಅಂಬರೀಷ್​ ಮದುವೆ, ರಾಜಕಾರಣ, ಬೈಗುಳದ ಬಗ್ಗೆ ಡಿಕೆಶಿ ಹೇಳಿದ ಮೂರು ಕತೆಗಳು

05 PM: ಅಂಬರೀಷ್​ ಅವರ ಪಾರ್ಥಿವ ಶರೀರವನ್ನು ಹೊತ್ತು ಬೆಂಳೂರಿನಿಂದ ಬಂದ ಸೇನಾ ಹೆಲಿಕಾಪ್ಟರ್​ ಮಂಡ್ಯದ ಸರ್​. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬಂದಿಳಿದಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಅಂಬರೀಷ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುಲಾಗುತ್ತದೆ.

3:51PM- ಜಾತಿ, ಧರ್ಮ, ಪಕ್ಷ ಭೇದವಿಲ್ಲದ ಒಬ್ಬ ವ್ಯಕ್ತಿ ಯಾರಾದರೂ ರಾಜ್ಯದಲ್ಲಿದ್ದರೆ ಅವರು ಅಂಬರೀಷ್ ಮಾತ್ರ. ಅವರ ವ್ಯಕ್ತಿತ್ವದಿಂದಾಗಿ ಅವರ ಬೆಂಬಲಕ್ಕೆ ಎಲ್ಲರೂ ಇದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಅಂಬರೀಷ್​ ಪಾರ್ಥಿವ ಶರೀರ ದರ್ಶನ ಮಾಡಿದ ನಂತರ ಅಭಿಪ್ರಾಯಪಟ್ಟರು.

3:37PM- ಮಂಡ್ಯಕ್ಕೆ ರವಾನಿಸಲು ಎಚ್ಎಎಲ್​ನತ್ತ ಪಾರ್ಥಿವ ಶರೀರವನ್ನು ವಾಹನದ ಮೂಲಕ ಸಾಗಣೆ.

3:33PM- ಸಾರ್ವಜನಿಕ ದರ್ಶನಕ್ಕೆ ಮತ್ತೆ ಅವಕಾಶ. ಅಭಿಮಾನಿಗಳಿಗೆ ನೆಚ್ಚಿನ ನಟನ ದರ್ಶನಕ್ಕೆ ಅನುವು.

3:29PM- ಕೆಲವೇ ಕ್ಷಣಗಳಲ್ಲಿ ಎಚ್ಎಎಲ್​ನತ್ತ ಪಾರ್ಥಿವ ಶರೀರ. ಅಲ್ಲಿಂದ ಮಂಡ್ಯಕ್ಕೆ ಏರ್​ ಲಿಫ್ಟ್​.

ಅಂತಿಮ ದರ್ಶನ ಪಡೆದ ನಟಿ ಸುಹಾಸಿನಿ.
ಸಚಿವ ಡಿ.ಕೆ.ಶಿವಕುಮಾರ್​ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂತಿಮ ದರ್ಶನ.

3:08PM- ಪಾರ್ಥಿವ ಶರೀರಕ್ಕೆ ಒಂದು ಹೆಲಿಕ್ಯಾಪ್ಟರ್ ನಿಯೋಜನೆ ಮಾಡಲಾಗಿದ್ದು, ಮಾಹಿತಿ ಪ್ರಕಾರ ಪಾರ್ಥಿವ ಶರೀರದ ಜತೆ ಆಪ್ತರು ತೆರಳಲು ಎರಡು ಪ್ರತ್ಯೇಕ ಚಾಪರ್​ಗಳನ್ನ ರೆಡಿ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಮಂಡ್ಯದತ್ತ ಪ್ರಯಾಣ ಮಾಡಲಿದ್ದಾರೆ.

3:05PM- ಝೀರೊ ಟ್ರಾಫಿಕ್​ ಮೂಲಕ ಎಚ್​ಎಎಲ್​ಗೆ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ.

3:04PM- ಕಂಠೀರವ ಸ್ಟೇಡಿಯಂಗೆ ಆಂಬುಲೆನ್ಸ್ ಆಗಮಿಸಿದ್ದು, ​ ಎಚ್​ಎಎಲ್​​ಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಅಲ್ಲಿಂದ ಸೇನಾ ಹೆಲಿಕಾಪ್ಟರ್​ ಮೂಲಕ ಮಂಡ್ಯಕ್ಕೆ ಕೊಂಡೊಯ್ಯಲಾಗುತ್ತದೆ.

3:00PM- ಅಭಿಮಾನಿಗಳ ಬಳಿ ಅಂಬಿ ಪುತ್ರ ಮನವಿ. ಸಾರ್ವಜನಿಕರಿಗೆ ತಾಳ್ಮೆಯಿಂದ ಇರಿ ಎಂದು ಕೈ ಸನ್ನೆ ಮೂಲಕ ಮನವಿ ಮಾಡಿದ ಅಂಬಿ ಪುತ್ರ ಅಭಿಷೇಕ್.

2:57PM- ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳ ಆಕ್ರಂದನ. ನೆಚ್ಚಿನ ನಟನನ್ನು ನೋಡಲು ಹರಿದುಬರುತ್ತಿರುವ ಅಭಿಮಾನಿಗಳು. ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ. ಬ್ಯಾರಿಕೇಡ್​​​ಗಳನ್ನು ತಳ್ಳಿ ಬರುತ್ತಿರುವ ಅಭಿಮಾನಿಗಳು.

ಅಂಬಿ ಅಂತಿಮ ದರ್ಶನ ಪಡೆದ ನಟಿ ಪ್ರೇಮ.
ಅಂಬಿ ಅಂತಿಮ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿರುವ ಅಭಿಮಾನಿಗಳು.

2:50PM- ಕಂಠೀರವ ಸ್ಟೇಡಿಯಂನಿಂದ ಏರ್​ಲಿಫ್ಟ್ ಮಾಡಲು ಸಾಧ್ಯವಿಲ್ಲ. ಪರಿಶೀಲನೆ ಬಳಿಕ ಏರ್​ಪೋರ್ಸ್​ ಅಧಿಕಾರಿಗಳ ಸ್ಪಷ್ಟನೆ. ಎತ್ತರದ ಬಿಲ್ಡಿಂಗ್​ಗಳು, ಮರಗಳು, ಪಕ್ಷಿಗಳ ಹಾರಾಟ ಹಿನ್ನೆಲೆಯಲ್ಲಿ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಂಠೀರವದಿಂದ ಏರ್​ಲಿಫ್ಟ್​ ಬೇಡ ಎಂದು ಪರಿಶೀಲನೆ ಬಳಿಕ ಏರ್​ಪೋರ್ಸ್​​ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ರಸ್ತೆ ಮಾರ್ಗವಾಗಿ ಎಚ್​ಎಎಲ್​​ಗೆ ಅಂಬರೀಷ್​ ಪಾರ್ಥಿವ ಶರೀರವನ್ನು ಕೊಂಡೊಯ್ದ ಬಳಿಕ ಸೇನಾ ಹೆಲಿಕಾಪ್ಟರ್​​ನಲ್ಲಿ ಮಂಡ್ಯಕ್ಕೆ ಪಾರ್ಥಿವ ಶರೀರ ರವಾನಿಸಲು ನಿರ್ಧರಿಸಲಾಗಿದೆ.

ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಂದ ಅಂತಿಮ ದರ್ಶನ.
ಅಂತಿಮ ದರ್ಶನ ಬಳಿಕ ಮಾತನಾಡಿದ ಹಿರಿಯ ನಟ ಅನಂತ್​ನಾಗ್​.

2:39PM- ಅನೇಕ ಚಿತ್ರಗಳಲ್ಲಿ ಅಂಬರೀಷ್ ಜತೆ ನಟಿಸಿದ್ದೇನೆ. ಚಿತ್ರರಂಗವನ್ನೂ ಮೀರಿ ಬೆಳೆದಿದ್ದ ಅಂಬಿ. ಅವರಿಲ್ಲದೆ ಕರ್ನಾಟಕ ಶೋಕ ಸಾಗರದಲ್ಲಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸದಾ ಖುಷಿಯಿಂದ ಇರುತ್ತಿದ್ದ ಅಂಬಿ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿರುತ್ತಾರೆ. ಅವರು ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದು ಹಿರಿಯ ನಟ ಅನಂತ್​ನಾಗ್​ ಅಂತಿಮ ದರ್ಶನ ಬಳಿಕ ಪ್ರತಿಕ್ರಿಯಿಸಿದರು.

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ರಿಂದ ಟ್ವೀಟ್​ ಮೂಲಕ ಸಂತಾಪ

ಟ್ವೀಟ್​ ಮೂಲಕ ಸಂತಾಪ ಸೂಚಿಸಿರುವ ಮಲೆಯಾಳಂ ನಟ ಮುಮ್ಮಟ್ಟಿ.

ಟ್ವೀಟ್​ ಮೂಲಕ ಸಂತಾಪ ಸೂಚಿಸಿರುವ ಮಲೆಯಾಳಂ ನಟ ಮೋಹನ್​ ಲಾಲ್​.

ಹಿರಿಯ ನಟ ಅನಂತ್​​ನಾಗ್​ ಅವರಿಂದ ಅಂತಿಮ ದರ್ಶನ.

2:29PM- ಚಿತೆಯ ಮೂಲಕ ಅಂಬಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅದಕ್ಕಾಗಿ ಅರ್ಧ ಟನ್​ ಗಂಧದ ಕಟ್ಟಿಗೆ ಬಳಕೆ ಮಾಡಲಾಗುವುದು ಎಂದು ದಿಗ್ವಿಜಯ ನ್ಯೂಸ್​ಗೆ ಮುನಿರತ್ನ ಹೇಳಿಕೆ ನೀಡಿದ್ದಾರೆ.

ಅಂತಿಮ ದರ್ಶನ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರತಿಕ್ರಿಯೆ.

2:15PM- ಅಂಬರೀಷ್ ಜತೆಯಲ್ಲಿ 14 ವರ್ಷದಿಂದ ಒಡನಾಟವಿತ್ತು. ನನ್ನ ಕಷ್ಟದ ಜೀವನದಲ್ಲಿ ನನ್ನ ಜತೆಗಿದ್ದು, ನನಗೆ ಧೈರ್ಯ ಹೇಳುತ್ತಿದ್ದರು. ಒಂದು ವಾರದ ಹಿಂದೆ ಅಂಬರೀಷ್​ರನ್ನು ಭೇಟಿಯಾಗಿದ್ದೆ. ಅವರ ನಿಧನದಿಂದ ತುಂಬ ನೋವಾಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಸಂತಾಪ ಸೂಚಿಸಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಂದ ಅಂತಿಮ ದರ್ಶನ.

2:09PM- ಸೇನಾ ಹೆಲಿಕಾಪ್ಟರ್ ಟ್ರಯಲ್ ಲ್ಯಾಂಡ್ ಮಂಡ್ಯದಲ್ಲಿ ಯಶಸ್ವಿ. ಅಂಬಿ ಪಾರ್ಥಿವ ಶರೀರ ಹೊತ್ತು ಬರಲಿರುವ ಸೇನಾ ಹೆಲಿಕಾಪ್ಟರ್. ಪಾರ್ಥಿವ ಶರೀರ ತರುವ ಮುನ್ನವೇ ಲ್ಯಾಂಡಿಂಗ್ ಟ್ರಯಲ್. ತಾತ್ಕಾಲಿಕ ಹೆಲಿಪ್ಯಾಡ್​ನಲ್ಲಿ ಲ್ಯಾಂಡಿಂಗ್ ಟ್ರಯಲ್ ನಡೆಸಿದ ಹೆಲಿಕಾಪ್ಟರ್. ಸರ್.ಎಂ.ವಿ ಕ್ರೀಡಾಂಗಣದಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರಿಂದ ಅಂತಿಮ ದರ್ಶನ.

2:03PM- ಕಿರಿಯ-ಹಿರಿಯರೆನ್ನದೇ ಗೌರವ ಕೊಡುತ್ತಿದ್ದ ವ್ಯಕ್ತಿ ಅಂಬಿ. ತೆಲುಗು, ಕನ್ನಡ ಹಾಗೂ ತಮಿಳರೆನ್ನದೇ ಎಲ್ಲರ ಜೊತೆ ಬೇರೆಯುತ್ತಿದ್ದರು. ಅಂತಹ ವ್ಯಕ್ತಿಯನ್ನ ನಾವು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ತೆಲುಗು ನಟ ಮೋಹನ್ ಬಾಬು ಅಂತಿಮ ದರ್ಶನದ ಬಳಿಕ ಮಾತನಾಡಿದರು.

ಯಾದಗಿರಿಯಲ್ಲಿ‌ ಕರವೇ ಕಾರ್ಯಕರ್ತರು ಅಂಬರೀಷ್​ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

2:00PM- 2010 ಮಾರ್ಚ 6, 7 ಹಾಗೂ 8 ರಂದು ರಾಯಚೂರಿನ ದೇವದುರ್ಗಕ್ಕೆ ಅಂಬಿ ಆಗಮಿಸಿದ್ದರು. ರಾಯಚೂರು ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನಕ್ಕೆ ಅಂಬಿ ಆಗಮಿಸಿದ್ದರು. ಈ‌ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನಿಂದ ಅಂಬಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಗಿತ್ತು. ಬೆಳ್ಳಿಯ ಮೂರ್ತಿಯಲ್ಲಿ ಅಂಬಿ ಕುಟುಂಬದ ಚಿತ್ರವಿರುವ ಮೂರ್ತಿ ನೀಡಿ ಗೌರವಿಸಲಾಗಿತ್ತು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ಬದುಕಿನ ಬಗ್ಗೆ ಅಂಬಿ ಮಾತನಾಡಿದ್ದರು. ಅಂದಿನ ದಿನವನ್ನು ನೆನಪಿಸಿಕೊಳ್ಳತ್ತಿರುವ ದೇವದುರ್ಗ ಜನತೆ.

ಕಂಠೀರವ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಇಳಿಸುವ ಕುರಿತು ಪೊಲೀಸ್ ಹಾಗೂ ಸೇನಾ ಸಿಬ್ಬಂದಿ ಪರಿಶೀಲನೆ.

1:53PM- ಕಂಠೀರವ ಕ್ರೀಡಾಂಗಣದಲ್ಲಿ ನೆಚ್ಚಿನ ನಾಯಕನನ್ನು ನೋಡಬೇಕೆಂಬ ಧಾವಂತದಲ್ಲಿ ನೂಕು ನುಗ್ಗಲು. ಈ ವೇಳೆ ಸಾರ್ವಜನಿಕರಿಗೆ ಅಳವಡಿಸಿದ್ದ ಬ್ಯಾರಿಕೇಡ್ ನೆಲಕ್ಕುರುಳಿಸಿದ ಅಭಿಮಾನಿಗಳು.

1:50PM- ಅಂಬರೀಶ್ ಕನ್ನಡ ನಾಡಿನ ಅದಮ್ಯ ಶಕ್ತಿ. ಅವರು ಶ್ರೀ ಮಠದ ಸದ್ಭಕ್ತರು ಹಾಗೂ ಭೈರವೈಕ್ಯ ಶ್ರೀಗಳ ಕಾಲದಿಂದಲೂ ಶ್ರೀಮಠದೊಂದಿಗೆ ಅವಿನಾವಭಾವ ಸಂಬಂಧ ಹೊಂದಿದ್ದರು. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಚಿತ್ರರಂಗದ ಯಾವುದೇ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಅವರಿಗಿತ್ತು. ಅವರು ಸ್ನೇಹ ಜೀವಿ. ಕಂಠೀರವ ಸ್ಟೂಡಿಯೋದ ಆವರಣದಲ್ಲಿಯೇ ಶವ ಸಂಸ್ಕಾರ ಮಾಡುವುದು ಒಳ್ಳೆಯದು. ಡಾ.ರಾಜ್, ಡಾ.ವಿಷ್ಣುವರ್ಧನ್ ಹಾಗೂ ಡಾ.ಅಂಬರೀಶ್ ಅವರ ತ್ರಿವಳಿ ಕಲಾರತ್ನಗಳ ಸ್ಮಾರಕ ಒಂದೇ ಸ್ಥಳದಲ್ಲಿ ಮಾಡುವುದು ಸೂಕ್ತ. ಅಂಬರೀಶ್ ಅವರ ಅಗಲಿಕೆಯ ದುಖಃವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಕರುಣಿಸಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ದುಃಖದ ಮಡುವಿನಲ್ಲಿ ಪತ್ನಿ ಸುಮಾಲತಾ, ನಟರಾದ ಚಿರಂಜೀವಿ, ಮೋಹನ್​ ಬಾಬು.
ನಟರಾದ ಅರ್ಜುನ್​ ಸರ್ಜಾ, ಧ್ರುವ ಸರ್ಜಾರಿಂದ ಅಂಬಿ ಅಂತಿಮ ದರ್ಶನ. ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ಅರ್ಜುನ್​.

1:37PM- ಸಂಜೆ 4ಗಂಟೆ ನಂತರ ಪಾರ್ಥಿವ ಶರೀರ ಆಗಮನವಾಗಲಿದ್ದು, ಸರ್.ಎಂ.ವಿ ಕ್ರೀಡಾಂಗಣದಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೀಡಾಂಗಣದಲ್ಲೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲಾಗುವುದು. ಸಾರ್ವಜನಿಕರು ಸರತಿ ಸಾಲಲ್ಲಿ ಹೋಗಲು, ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತೂಬಿನಕೆರೆ, ವಿ.ಸಿ.ಫಾರಂನಲ್ಲಿ ಗಣ್ಯರ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 4-5ಲಕ್ಷ ಜನ ಬರುವ ನಿರೀಕ್ಷೆ ಇದೆ. ಭದ್ರತೆಗಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೇಳಿಕೆ ನೀಡಿದ್ದಾರೆ.

1:35PM- ಕಂಠೀರವ ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಅಭಿಮಾನಿಗಳು. ಜನಸಾಗರ ನಿಯಂತ್ರಣ ಮಾಡುವಲ್ಲಿ ಪೊಲೀಸರ ಹರಸಾಹಸ. ಸಂಜೆ 4 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಕಂಠೀರವ ಸ್ಟೇಡಿಯಂ ನಿಂದಲೇ ಮಂಡ್ಯಕ್ಕೆ ಅಂಬರೀಷ್ ಅವರ ಪಾರ್ಥಿವ ಶರೀರ ತೆರಳಲಿದೆ.

1:30PM- ನನಗೆ ಆ ಕಾಲದಲ್ಲೇ ಗಾಲ್ಫ್ ಕಿಟ್ ಕೊಟ್ಟಿದ್ದರು. ಅದು ಮೂರು ಮುಕ್ಕಾಲು ಲಕ್ಷ ಬೆಲೆ ಬಾಳುವ ಕಿಟ್​. ಇವತ್ತಿಗೂ ನಾನು ಅದರಲ್ಲೇ ಆಟ ಆಡುತ್ತೇನೆ. ಅವರು ನಿಜವಾಗಿಯೂ ಕಲಿಯುಗದ ಕರ್ಣ ಎಂದು ನಟ ಚರಣ್ ರಾಜ್ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದರು.

ನಟ ರಕ್ಷಿತ್​ ಶೆಟ್ಟಿ ಅವರಿಂದ ಅಂಬಿ ಅಂತಿಮ ದರ್ಶನ.
ಅಂಬಿ ಪಾರ್ಥಿವ ಶರೀರ ಕಂಡು ನಟ ಸುದೀಪ್​ ಕಣ್ಣೀರು.
ಅಂಬಿ ಪತ್ನಿ ಸುಮಾಲತ ಅವರಿಗೆ ಸಾಂತ್ವನ ಹೇಳುತ್ತಿರುವ ನಟ ಸುದೀಪ್​, ಪತ್ನಿ ಪ್ರಿಯಾ ಸುದೀಪ್​.
ಅಂಬಿ ಪಾರ್ಥಿವ ಶರೀರ ಕಂಡು ಭಾವುಕರಾದ ನಟ ಕಿಚ್ಚ ಸುದೀಪ್.​
ಅಂತಿಮ ದರ್ಶನ ಪಡೆದ ನಟ ಕಿಚ್ಚ ಸುದೀಪ್​, ಪತ್ನಿ ಪ್ರಿಯಾ ಸುದೀಪ್​.
ಅಂತಿಮ ದರ್ಶನ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ.
ಅಂತಿಮ ದರ್ಶನ ಪಡೆದ ನಟ ಗಣೇಶ್​ ದಂಪತಿ.

1:12PM- ಡಾ. ರಾಜ್ ಕುಮಾರ್ ಸಮಾಧಿಯ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಲು ನಿಗದಿ ಪಡಿಸಿದ ಸ್ಥಳ ಪರಿಶೀಲನೆ ನಡೆಸಿ ಪೂರ್ವಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಕುಮಾರಸ್ವಾಮಿ ಚರ್ಚಿಸಿದರು. ಸ್ಥಳೀಯ ಶಾಸಕ ಗೋಪಾಲಯ್ಯ, ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.

1:11PM- ನಾಳೆ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಅಂಬಿ ಅಂತಿಮ ಕ್ರಿಯೆಗೆ ಬಿಗಿ ಭದ್ರತೆ. ಸ್ಟೇಡಿಯಂ ಮುಂದೆ ವಿಶೇಷ ಪೊಲೀಸ್ ತುಕಡಿ ನೇಮಕ.

ಕನ್ನಡ ಚಳುವಳಿ ಹೋರಾಟಗಾರ ವಾಟಾಳ್​ ನಾಗರಾಜ್​ ಅವರಿಂದ ಅಂತಿಮ ದರ್ಶನ.

12:41PM- ಮದ್ದೂರಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಂತೆ ಹುಚ್ಚು ಅಭಿಮಾನದಲ್ಲಿ ಜೀವಕ್ಕೆ ಹಾನಿ ಮಾಡಿಕೊಳ್ಳಬೇಡಿ. ನೀವು ಅಭಿಮಾನದಿಂದ ಕೈಗೊಳ್ಳುವ ತೀರ್ಮಾನದಿಂದ ಕುಟುಂಬ ನೋವು ಅನುಭವಿಸಬೇಕಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಮನವಿ.

12:39PM- ಮಂಡ್ಯದ ದೊಡ್ಡರಸಿಕೆರೆಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಿದರೆ ಜನರಿಗೆ ಬರಲು ಕಷ್ಟವಾಗುತ್ತದೆ. ಹೀಗಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

12:37PM- ನಾಳೆ ಬೆ.7 ಕ್ಕೆ ಬೆಂಗಳೂರಿಗೆ ಶರೀರ ತರಲಾಗುವುದು. ಬೆಳಗ್ಗೆ 10 ಕ್ಕೆ ಕಂಠೀರವ ಕ್ರೀಡಾಂಗಣದಿಂದ ಸ್ಟುಡಿಯೊಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1:30ರೊಳಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಅಂತಿಮ ದರ್ಶನ ಪಡೆದ ನಿರ್ಮಾಪಕ ರಾಮು ಹಾಗೂ ಪತ್ನಿ, ನಟಿ ಮಾಲಾಶ್ರಿ.
ಅಂತಿಮ ದರ್ಶನ ಬಳಿಕ ಮಾತನಾಡಿದ ನಟ ಶಿವ ರಾಜಕುಮಾರ್​.

12:31PM- ಅಂಬರೀಷ್​ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ. ಅವರು ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದರು. ಅವರು ನಮ್ಮ ಜತೆ ಇರುತ್ತಾರೆಂದು ಭಾವಿಸಬೇಕು. ಅವರ ಒಳ್ಳೆಯತನವನ್ನು ನಾವು ಬೆಳೆಸಿಕೊಳ್ಳಬೇಕು. ಅಭಿಷೇಕ್ ಜತೆಯಲ್ಲಿ ನಾವು ಯಾವಾಗಲೂ ಇರುತ್ತೇವೆ. ಅಂಬರೀಷ್ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಎಂದು ನಟ ಶಿವ ರಾಜಕುಮಾರ್​ ಅಂತಿಮ ದರ್ಶನ ಬಳಿಕ ಮಾತನಾಡಿದರು.

ಅಂತಿಮ ದರ್ಶನ ಪಡೆದು ಗಳಗಳನೆ ಅತ್ತ ನಟರಾದ ಚಿರಂಜೀವಿ, ಮೋಹನ್​ ಬಾಬು ಹಾಗೂ ಚಿರಂಜೀವಿ ಪತ್ನಿ.

12:25PM- ಭಾವೋದ್ವೇಗಕ್ಕೆ ಒಳಗಾಗದಿರಿ ಎಂದು ಅಭಿಮಾನಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಯಾವುದೇ ಅತಿರೇಕದ ಹೆಜ್ಜೆಯಿಡಬಾರದು. ಅಂಬಿ ಅವರ ನಿಧನ ಎಲ್ಲರಿಗೂ ದುಃಖದ ಸಂಗತಿ. ಅವರಿಗೆ ಗೌರವಪೂರ್ಣ ವಿದಾಯ ಹೇಳುವುದು ನಮ್ಮ ಕರ್ತವ್ಯ. ಆದ್ದರಿಂದ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗದೆ ಸಂಯಮ ತಂದು ಕೊಳ್ಳುವಂತೆ ಮನವಿ ಮಾಡಿದ್ದಾರೆ.

12:24PM- ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ. ಆರೋಗ್ಯದ ಕಡೆ ಗಮನಕೊಡಿ ಅಂತ ಹೇಳಿದ್ವಿ. ನಾನು ಎಲ್ಲರಿಗೂ ಅದನ್ನೇ ಹೇಳುತ್ತೇನೆ. ಅವರ ನಿಧನದಿಂದ ತುಂಬಾ ನೋವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಎಂದು ಹಿರಿಯ ನಟಿ ಜಯಂತಿ ಅಂತಿಮ ದರ್ಶನ ಬಳಿಕ ಮಾತನಾಡಿದರು.

ಅಂತಿಮ ದರ್ಶನ ಪಡೆದು ಗಳಗಳನೆ ಅತ್ತ ತೆಲುಗು ನಟ ಮೋಹನ್​ ಬಾಬು.
ಅಂಬಿ ಅಂತಿಮ ದರ್ಶನ ವೇಳೆ ಪಾರ್ಥಿಮ ಶರೀರ ಕಂಡು ಕಣ್ಣೀರಿಟ್ಟ ತೆಲುಗು ನಟ ಚಿರಂಜೀವಿ ಹಾಗು ಪತ್ನಿ.

12:12 PM: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಡ್ಯದ ಗಂಡಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ. ನಗರದ ಚನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ. ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಕೆ. ‘ಅಂಬಿ ಮತ್ತೆ ಹುಟ್ಟಿಬಾ’ ಎಂದು ಘೋಷಣೆ ಕೂಗಿದ ಅಭಿಮಾನಿಗಳು.

ಅಂಬಿ ಅಂತಿಮ ದರ್ಶನ ವೇಳೆ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ಹಿರಿಯ ನಟಿ ಜಯಂತಿ ಹಾಗೂ ಗಿರಿಜಾ ಲೋಕೇಶ್​.

12:07 PM: ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಶಾಂತಿಯುತವಾಗಿರುವಂತೆ ಅಂಬಿ ಅಭಿಮಾನಿಗಳಲ್ಲಿ ಮನವಿ ಮಾಡಿದ ಸಿಎಂ ಕುಮಾರಸ್ವಾಮಿ.

12:05 PM: ಅವರೊಬ್ಬ ಅಪೂರ್ವ ವ್ಯಕ್ತಿ. ಅವರನ್ನ ಕಳೆದುಕೊಂಡು ಕನ್ನಡ ಚಿತ್ರೋದ್ಯಮ ಬಡವಾಗಿದೆ. ಅವರು ನಕ್ಕರು ಇಷ್ಟ ಕೋಪ ಮಾಡಿಕೊಂಡರು ಇಷ್ಟ. ಎಲ್ಲರನ್ನು ಸಮಾನವಾಗಿ ನೋಡುತ್ತಿದ್ದ ವ್ಯಕ್ತಿ ಅಂಬರೀಷ್​ ಎಂದು ನಟ ಪುನಿತ್ ರಾಜಕುಮಾರ್ ಅಂತಿಮ ದರ್ಶನದ ಬಳಿಕ ಮಾತನಾಡಿದರು.

ಹಿರಿಯ ನಟ ಶ್ರೀನಾಥ್ ಅವರಿಂದ ಅಂತಿಮ ದರ್ಶನ.
ನಟ ಶಿವ ರಾಜಕುಮಾರ್​, ಪತ್ನಿ ಗೀತಾ ಶಿವ ರಾಜಕುಮಾರ್​ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಂದ ಅಂತಿಮ ದರ್ಶನ.

11: 59- ಟ್ವೀಟ್​ ಮೂಲಕ ಅಂಬಿ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​ ಗಾಂಧಿ.

11:53- ಅಂಬರೀಷ್​ ಯಾವಾಗಲೂ ಖುಷಿಯಾಗಿ ಇರುತ್ತಿದ್ದರು. 3 ವರ್ಷದಿಂದ ಡಯಾಲಿಸಿಸ್​ಗೆ ಆಗಾಗ ಒಳಗಾಗ್ತಿದ್ದರು. ರಾಜಕೀಯದಲ್ಲಿ ನಿರತರಾದ ಮೇಲೆ ಕಡಿಮೆ ಭೇಟಿಯಾಗುತ್ತಿದ್ದೆವು. ನಮ್ಮನ್ನು ಕರೆದು ಆಗಾಗ ಮಾತನಾಡಿಸುತ್ತಿದ್ದರು ಎಂದು ನಟ ರವಿಚಂದ್ರನ್​ ತಿಳಿಸಿದರು.

11:42- ಸೇನಾ ಹೆಲಿಕಾಪ್ಟರ್​ನಲ್ಲಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲು ರಕ್ಷಣಾ ಇಲಾಖೆ ಅನುಮತಿ ನೀಡಿದ್ದು, ಸಂಜೆ 5 ರಿಂದ ನಾಳೆ ಬೆಳಗ್ಗೆ 6ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಬೆಂಗಳೂರಿನಲ್ಲೇ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಡಿಕೆ ಸ್ಪಷ್ಟಪಡಿಸಿದ್ದಾರೆ.

ಅಂತಿಮ ದರ್ಶನ ಬಳಿಕ ಅಂಬಿ ಕುರಿತು ಮಾತನಾಡಿದ ನಟ ರಜಿನಿಕಾಂತ್​.

11:39- ಬೆಂಗಳೂರಿಗೆ ಬಂದಾಗಲೆಲ್ಲ ಅಂಬರೀಷ್​ ಭೇಟಿಯಾಗದೇ ಹೋಗುತ್ತಿರಲಿಲ್ಲ. ಕಳೆದ ಮೂರ್ನಾಲ್ಕು ಬಾರಿ ಭೇಟಿಯಾಗಲು ಆಗಲಿಲ್ಲ. ಕಳೆದವಾರವೂ ಬೆಂಗಳೂರಿಗೆ ಬಂದಿದ್ದೆ. ಈ ಬಾರಿ ಅರ್ಜೆಂಟ್ ಇತ್ತು ಎಂದು ಫೋನ್ ಮಾಡಿ ಹೇಳಿದಾಗ ನಿನ್ನ ಸಾಯಿಸ್ಬಿಡ್ತಿನಿ ಎಂದು ಹೇಳಿದ್ದರು. ಅಂಬಿ ಅಂತ ಸ್ನೇಹ ಜೀವಿ ಇನ್ನೊಬ್ಬನಿಲ್ಲ. ಅಂಬಿ ಅಂತ ಒಬ್ಬ ನಟ ಬರಬಹುದು. ಆದರೆ, ಅವರಂತ ಒಬ್ಬ ವ್ಯಕ್ತಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ರಜಿನಿಕಾಂತ್​ ಅಂತಿಮ ದರ್ಶನ ಬಳಿಕ ಮಾತನಾಡಿದರು.

11:32- ಅಂಬಿ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿ ಆತ್ಮಹತ್ಯೆ. ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮದ ತಮ್ಮಯ್ಯ ಎಂಬಾತ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತನಿಗೆ ಪತ್ನಿ ಸುಧಾ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಅಂಬರೀಶ್ ಅಂತಿಮ ದರ್ಶನಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿದ್ಧತೆ. ಜಿಲ್ಲಾಡಳಿತದಿಂದ ವೇದಿಕೆ ಸಿದ್ಧತಪಡಿಸಲಾಗುತ್ತಿದೆ.

11:28- ಫೇಸ್​ಬುಕ್​ ಮೂಲಕ ಸಂತಾಪ ಸೂಚಿಸಿದ ನಟ ಯಶ್​​ ಪತ್ನಿ ನಟಿ ರಾಧಿಕಾ ಪಂಡಿತ್.

Will miss u Anna.. 😔😔

Radhika Pandit ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ನವೆಂಬರ್ 24, 2018

ಶಾಸಕ ಕುಮಾರ್​ ಬಂಗಾರಪ್ಪ ಅವರಿಂದ ಅಂತಿಮ ದರ್ಶನ.
ಹಾಸ್ಯ ನಟ ರಂಗಾಯಣ ರಘು, ಅರುಣ್​ ಕುಮಾರ್​ ಅವರಿಂದ ಅಂತಿಮ ದರ್ಶನ.
ದೊಡ್ಡರಸಿನಕೆರೆ ಗ್ರಾಮಸ್ಥರಿಂದ ಅಂಬಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ.

11:18- ಅಂಬಿ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಂಬಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜೈಕಾರ ಕೂಗಿ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಂದ ಸಂತಾಪ.

11:14- ಅಂಬರೀಷ್ ನಿಧನ ವಾರ್ತೆ ಕೇಳಿ ಮನಸಿಗೆ ನೋವಾಯಿತು. ನನ್ನ ಪತಿ ಎಂಪಿ ಆಗಿದ್ದಾಗ ಆಗಾಗ ಭೇಟಿಯಾಗುತ್ತಿದ್ದರು. ದಸರಾದಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಧೈರ್ಯ ಹಾಗೂ ಶಕ್ತಿ ನೀಡಲಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ.

ಅಂಬಿ ಅಂತಿಮ ದರ್ಶನಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿದ್ಧತೆ.

11: 09- ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಷ್​ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಿದ್ಧತೆ. ಕ್ರೀಡಾಂಗಣದಲ್ಲಿ ಭದ್ರತೆಗಾಗಿ ಮಂಡ್ಯ, ಮೈಸೂರು ಹಾಗೂ ಹಾಸನ ಸೇರಿ ಹಲವು ಜಿಲ್ಲೆಯಿಂದ ಸಿಎಆರ್, ಡಿಎಆರ್ ಹಾಗೂ ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ. ದಕ್ಷಿಣವಲಯ ಐಜಿಪಿ ಶರತ್ ಚಂದ್ರ ಅವರಿಂದ ಸಿದ್ಧತೆ ಪರಿಶೀಲನೆ.

ಅಂಬಿ ಅಂತಿಮ ದರ್ಶನ ಬಳಿಕ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ನಟ ರಜನಿಕಾಂತ್​ ಹಾಗೂ ನಟ ರವಿಚಂದ್ರನ್​ ಮಾತುಕತೆ ನಡೆಸುತ್ತಿರುವುದು.
ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟಿ ಭವ್ಯ.

ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ನಟ ಗಣೇಶ್.

ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್​ ಕುಮಾರ್​ ಅವರಿಂದ ಅಂತಿಮ ದರ್ಶನ.
ಅಂತಿಮ ದರ್ಶನ ಪಡೆದ ನಟ ರವಿಚಂದ್ರನ್​, ಸಂಗೀತ ದಿಗ್ಗಜ ಹಂಸಲೇಖ.

10:53- ಅಂಬರೀಷ್‌ ಅವರ ಸಾವು ದುಃಖವನ್ನುಂಟು ಮಾಡಿದೆ. ನನಗೆ ವೈಯಕ್ತಿಕವಾಗಿ ತುಂಬಾ ನೋವಾಗಿದೆ. ನಾನು ಹಾಗೂ ಅಂಬರೀಷ್‌ 40 ವರ್ಷದ ಆತ್ಮೀಯರು. ಅವರೊಬ್ಬ ವರ್ಣ ರಂಜಿತ ರಾಜಕಾರಣಿ, ಸ್ನೇಹಜೀವಿ. ಅವರಿಗೆ ಅಸಂಖ್ಯಾತ ಸ್ನೇಹಿತರು ಇದ್ದರು. ಎಲ್ಲ ಕ್ಷೇತ್ರದಲ್ಲೂ ಅವರಿಗೆ ಸ್ನೇಹಿತರಿದ್ದರು. ಕನ್ನಡ ಚಿತ್ರರಂಗ ಇಷ್ಟೊಂದು ಸಮೃದ್ಧವಾಗಿದೆ ಎಂದರೆ ಅದಕ್ಕೆ ಅಂಬಿ ಕೂಡ ಕಾರಣ. ರಾಜಕುಮಾರ್, ವಿಷ್ಣುವರ್ಧನ್‌ ಸಾಲಿಗೆ ಸೇರುವ ಮೇರು ವ್ಯಕ್ತಿ ಅಂಬರೀಶ್. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

10:50- ಇದುವರೆಗೂ ಅಂಬಿ ದರ್ಶನ ಪಡೆದ ಗಣ್ಯರು
ಲಕ್ಷ್ಮೀ ವಜ್ರಮುನಿ, ಬಸವರಾಜ್ ಬೊಮ್ಮಾಯಿ, ನಿರ್ದೇಶಕ ಎಸ್​.ನಾರಾಯಣ್, ನಟಿ ಸುಧಾರಾಣಿ, ಸಚಿವ ಕೆ.ಜೆ.ಜಾರ್ಜ್​​, ನಿರ್ದೇಶಕ ಟಿ.ಎನ್​.ಸೀತಾರಾಮ್​, ನಟ ರಾಘವೇಂದ್ರ ರಾಜ್​ಕುಮಾರ್​, ಅಶೋಕ್ ಖೇಣಿ, ನಟ ಶಿವಕುಮಾರ್, ಪ್ರಕಾಶ್ ರೈ, ನಟಿ ರಶ್ಮಿ, ನಿರ್ದೇಶಕ ಸಾಯಿಪ್ರಕಾಶ್, ನಿರ್ದೇಶಕ ಪ್ರೇಮ್, ಹಿರಿಯ ನಟಿ ಲಕ್ಷ್ಮೀ, ಶಾಸಕ ಗೋಪಾಲಯ್ಯ, ನಟಿ ಶ್ರುತಿ, ರಾಕ್​​ಲೈನ್ ವೆಂಕಟೇಶ್​, ನಟ ವಶಿಷ್ಠಸಿಂಹ, ಟಗರು ಖ್ಯಾತಿಯ ಡಾಲಿ ಧನಂಜಯ, ದುನಿಯಾ ವಿಜಯ್, ಮಾಜಿ ಶಾಸಕ ನರೇಂದ್ರಸ್ವಾಮಿ, ನಟಿ ಲೀಲಾವತಿ, ವಿನೋದ್​ ರಾಜ್​, ಭಾರತಿ ವಿಷ್ಣುವರ್ಧನ್​, ಸಾ.ರಾ.ಗೋವಿಂದು, ಸಿಎಂ ಕುಮಾರಸ್ವಾಮಿ, ಎಚ್​.ಡಿ.ದೇವೇಗೌಡ, ಚನ್ನಮ್ಮ ದೇವೇಗೌಡ, ನಟಿಯರಾದ ರಾಧಿಕಾ, ಅಂಬಿಕಾ, ನಟ ರಮೇಶ್, ಮಾಳವಿಕ, ಅವಿನಾಶ್, ರಜಿನಿಕಾಂತ್, ಅಭಿನಯ, ಆಶಾಲತಾ, ಶರತ್​ಕುಮಾರ್, ರವಿಚಂದ್ರನ್​, ಪುನೀತ್ ರಾಜ್​ಕುಮಾರ್​, ಅಜಯ್, ಕೀರ್ತಿರಾಜ್ ಹಾಗೂ ಹಂಸಲೇಖ.

ಅಂತಿಮ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ.

10:45- ಅಂಬರೀಷ್ ಕಳೆದುಕೊಂಡು ಈ ನಾಡು ಬಡವಾಗಿದೆ. ವಿಷ್ಣುವರ್ಧನ್ ನಂತರ ಕನ್ನಡ ಚಿತ್ರರಂಗ ಮುಂದುವರೆಸಿದ ನಾಯಕ ಅಂಬಿ. ಬೆಳಗಾವಿ ಅಧಿವೇಶನದಲ್ಲಿ ನಾನು ಧರಣಿ ಮಾಡುವಾಗ ನನ್ನ ಕೈಹಿಡಿದು ಚೇರಿನ ಮೇಲೆ ಕುಳಿಸಿದ್ದರು. ಅಂತ ನಾಯಕನನ್ನ ಕಳೆದುಕೊಂಡು ಈ ನಾಡು ಬಡವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಂತಿಮ ದರ್ಶನ ಬಳಿಕ ಮಾತನಾಡಿದರು.

ಅಂತಿಮ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ.

10:34- ಸಂಜೆ 4ಕ್ಕೆ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲಾಗುವುದು. ನಾಳೆ ಬೆಳಗ್ಗೆ 6 ಗಂಟೆ ವರೆಗೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

10:33- ಅಭಿಮಾನಿಗಳ ಬೇಡಿಕೆಯಂತೆ ನಟ ಅಂಬರೀಷ್​ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್​ ನೆರವಿನೊಂದಿಗೆ ರವಾನಿಸುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿಕೆ.

ತಮಿಳು ನಟ ಶರತ್​ ಕುಮಾರ್​ ಮಾತನಾಡುತ್ತಿರುವುದು.

10:28- ಅಂಬರೀಷ್​ ನನಗೆ ಉತ್ತಮ ಸ್ನೇಹಿತರಾಗಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲಾ ಅವರನ್ನ ಭೇಟಿಯಾಗುತ್ತಿದೆ. ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು. ಅವರಿಗೆ ಯಾವುದೇ ಶತ್ರುಗಳು ಇರಲಿಲ್ಲ. ಅಂಬಿ ಅಪಾರ ಸ್ನೇಹಿತರ ಬಳಗ ಹೊಂದಿದ್ದರು ಎಂದು ತಮಿಳು ನಟ ಶರತ್​ಕುಮಾರ್​ ಸಂತಾಪ ಸೂಚಿಸಿದರು.

ಅಂಬಿ ಅಂತಿಮ ದರ್ಶನ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್​.

10:25- ಅಂಬರೀಷ್​ರನ್ನು ಮತ್ತೆ ರಾಜಕೀಯದಲ್ಲಿ ನೋಡಲು ಬಯಸಿದ್ದೆವು. ಅನೇಕ ಜನಮನ್ನಣೆಯನ್ನು ಗಳಿಸಿದ್ದ ಅಂಬಿ ನಿಧನದಿಂದ ನಮಗೆ ತುಂಬ ನೋವಾಗಿದೆ. ಅವರ​ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ. ಅಭಿಮಾನಿಗಳು ತಾಳ್ಮೆಯನ್ನು ಕಳೆದುಕೊಳ್ಳಬಾರದು. ಶಾಂತಿಯಿಂದಲೇ ಅಂಬರೀಷ್​ ಅವರನ್ನು ಕಳಿಸಿಕೊಡೋಣ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಂತಿಮ ದರ್ಶನದ ಬಳಿಕ ಹೇಳಿದರು.

10:18- ನಾಳೆ ಬೆಳಗ್ಗೆ 10 ಗಂಟೆ ಬಳಿಕ ಅಂತ್ಯಕ್ರಿಯೆ ವ್ಯವಸ್ಥೆ ಮಾಡಲಾಗುವುದು. ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಅಲ್ಲಿ ಅಂತ್ಯಕ್ರಿಯೆಯಾದರೆ ಸ್ಮಾರಕ ನಿರ್ಮಾಣಕ್ಕೆ ಸಹಕಾರಿಯಾಗಲಿದ್ದು, ರಾಜ್​​ ಸ್ಮಾರಕದ ಬಲಬದಿಯಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

10:15- ಕೇಂದ್ರ ಸರ್ಕಾರದ ಜತೆ ನೇರವಾಗಿ ಮಾತನಾಡುತ್ತಿದ್ದೇನೆ. ಸಾಧ್ಯವಾದರೆ ಸಂಜೆ 4ರಿಂದ 6ರವರೆಗೆ ಮಂಡ್ಯದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನದ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇನೆ. ಅಭಿಮಾನಿಗಳ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ತಿಳಿಸಿದರು.

ಅಂಬರೀಷ್​ ಅಂತಿಮ ದರ್ಶನ ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಿಎಂ ಎಚ್​.ಡಿ.ಕುಮಾರಸ್ವಾಮಿ.

10:11- ಸೇನೆ ಹೆಲಿಕಾಪ್ಟರ್​ನಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಪಾರ್ಥಿವ ಶರೀರ ರವಾನೆಗೆ ಚಿಂತನೆ ಮಾಡಿದ್ದೇವೆ ಎಂದ ಸಿಎಂ.

10:10- ಮಂಡ್ಯದಲ್ಲಿ ಅಂತಿಮದರ್ಶನಕ್ಕೆ ಅಭಿಮಾನಿಗಳ ಬೇಡಿಕೆ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಮತ್ತೆ ತರೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ. ಅಂತಿಮ ದರ್ಶನ ಬಳಿಕ ಹೇಳಿಕೆ.

ಅಂಬಿ ಪತ್ನಿ ಸುಮಲತಾ ಅವರಿಗೆ ಸಾಂತ್ವನ ಹೇಳಿದ ನಟಿ ರಜಿನಿಕಾಂತ್​.
ಅಗಲಿದ ಗೆಳೆಯನ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ರಜಿನಿಕಾಂತ್​.
ಅಂಬಿ ಪಾರ್ಥಿವ ಶರೀರ ಕಂಡು ಭಾವುಕರಾದ ರಜಿನಿಕಾಂತ್​.

9:58- ಅಂಬಿ ಅಂತಿಮ ದರ್ಶನಕ್ಕೆ ಆಗಮಿಸಿದ ನಟ ರಜನಿಕಾಂತ್​.

ಅಂತಿಮ ದರ್ಶನ ಪಡೆದ ತಮಿಳು ನಟ ಶರತ್​ ಕುಮಾರ್​, ಪತ್ನಿ ರಾಧಿಕ ಶರತ್​ ಕುಮಾರ್​.
ಅಂತಿಮ ದರ್ಶನ ಪಡೆದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಹಾಗೂ ಅಳಿಯ ಅನಿರುದ್ಧ್​​.
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಂದ ಅಂಬಿ ಅಂತಿಮ ದರ್ಶನ.

9:48- ವ್ಹೀಲ್​ಚೇರ್​ನಲ್ಲಿ ಬಂದು ಅಂಬರೀಷ್ ಅಂತಿಮ ದರ್ಶನ ಪಡೆದ ನಟಿ ಭಾರತಿ ವಿಷ್ಣುವರ್ಧನ್.

9:44- ಅಂಬರೀಶ್ ಸಾವಿಗೆ ಹಿರಿಯ ಲೀಲಾವತಿ ಕಣ್ಣೀರು. ಅಂಬಿ ಜತೆಗಿನ ಒಡನಾಟ ನೆನೆದು ಬಿಕ್ಕಿ ಬಿಕ್ಕಿ ಅತ್ತ ನಟಿ ಲೀಲಾವತಿ. ಇಷ್ಟು ಬೇಗ ಅವರು ಹೋಗಬಾರದಿತ್ತು ಎಂದು ಲೀಲಾವತಿ ಕಣ್ಣೀರ ನುಡಿ.

9:43- ಮುಖ ಕಾಣ್ತಿಲ್ಲ ಎಂದು ಅಭಿಮಾನಿಗಳ ಚೀರಾಟ. ಮಂಡ್ಯದಿಂದ ಬಂದಿದ್ದೀವಿ ದಯವಿಟ್ಟು ಮುಖ ಕಾಣುವ ಹಾಗೆ ಶವ ಇಡಿ ಎಂದು ಅಭಿಮಾನಿಗಳ ಅಳಲು. ಸಮಾಧಾನ ಪಡಿಸಿ ಕಳಿಸಿದ ಪೊಲೀಸರು.

ನಟ, ನಿರ್ದೇಶಕ ಪ್ರೇಮ್​ ಅವರಿಂದ ಅಂತಿಮ ದರ್ಶನ.
ಹಿರಿಯ ನಟಿ ಜೂಲಿ ಲಕ್ಷ್ಮೀ ಅವರಿಂದ ಅಂತಿಮ ದರ್ಶನ.
ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್​ ರಾಜ್​ ಅವರಿಂದ ಅಂತಿಮ ದರ್ಶನ.

9:34- ಚಿತ್ರರಂಗದ ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಏನೇ ಸಮಸ್ಯೆ ಬಂದರೂ ನಾನಿದ್ದೀನಿ ಎಂದು ಬರುತ್ತಿದ್ದರು. ಅಂತಹ ಅಣ್ಣನನ್ನು ಕಳೆದುಕೊಂಡು ಬಡವಾಗಿದ್ದೇವೆ. ಅಂಬರೀಷ್​​ ಸರ್ ಮತ್ತೆ ಹುಟ್ಟಿ ಬರಬೇಕು ಎಂದು ನಟಿ ಶ್ರುತಿ ಸಂತಾಪ ಸೂಚಿಸಿದರು.

ನಟ ದುನಿಯಾ ವಿಜಯ್​ ಅವರಿಂದ ಅಂತಿಮ ದರ್ಶನ.

9:23- ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ಬೀದಿಬದಿ ವ್ಯಾಪಾರಿಗಳು ಸೇರಿ ಕರುನಾಡ ಕರ್ಣನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಚನ್ನಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ರೇಷ್ಮೆಗೂಡುಗಳಿಂದ ಅರ್ಚನೆ ಮಾಡುವ ಮೂಲಕ ಮತ್ತೊಮ್ಮೆ ಹುಟ್ಟಿ ಬಾ ಕಾವೇರಿ ವರಪುತ್ರ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.

9:11- ಜೀವನದಲ್ಲಿ ನಾವು ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ನೋಡಿ ಬೆಳೆದವರು. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರಂತಿದ್ದರು. ಈಗ ಮೂವರನ್ನೂ ಕಳೆದುಕೊಂಡು ನಾವು ಬಡವಾಗಿದ್ದೇವೆ. ಕನ್ನಡ ಜನರಿಗೆ ನೋವು ಬರಿಸುವ ಶಕ್ತಿ ನೀಡಲಿ ಎಂದು ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅಂತಿಮ ದರ್ಶನ ಬಳಿಕ ಮಾತನಾಡಿದರು.

9:10- ಇದುವರೆಗೂ ಅಂತಿಮ ದರ್ಶನ ಪಡೆದ ಗಣ್ಯರು
ನಟ ಜೈಜಗದೀಶ್, ಲಕ್ಷ್ಮೀ ವಜ್ರಮುನಿ, ಶಾಸಕ ಬಸವರಾಜ್ ಬೊಮ್ಮಾಯಿ, ನಿರ್ದೇಶಕ ಎಸ್​.ನಾರಾಯಣ್, ನಟಿ ಸುಧಾರಾಣಿ, ಸಚಿವ ಕೆ.ಜೆ.ಜಾರ್ಜ್​​, ನಿರ್ದೇಶಕ ಟಿ.ಸೀತಾರಾಮ್​, ನಟ ರಾಘವೇಂದ್ರ ರಾಜ್​ಕುಮಾರ್​, ಅಶೋಕ್ ಖೇಣಿ, ನಟ ಶಿವಕುಮಾರ್, ಪ್ರಕಾಶ್ ರೈ, ನಟಿ ರಶ್ಮಿ, ನಿರ್ದೇಶಕ ಸಾಯಿಪ್ರಕಾಶ್ ಹಾಗೂ ನಿರ್ದೇಶಕ ಪ್ರೇಮ್, ಹಿರಿಯ ನಟಿ ಲಕ್ಷ್ಮೀ, ಶಾಸಕ ಗೋಪಾಲಯ್ಯ, ನಟಿ ಶ್ರುತಿ, ರಾಕ್​​ಲೈನ್ ವೆಂಕಟೇಶ್​, ನಟ ವಶಿಷ್ಠಸಿಂಹ, ಟಗರು ಖ್ಯಾತಿಯ ಡಾಲಿ ಧನಂಜಯ, ದುನಿಯಾ ವಿಜಯ್.

ಮಂಡ್ಯದಲ್ಲಿ ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ.

9:07- ದೇವರಿಗೆ ಅವರ ಮೇಲೆ ಪ್ರೀತಿ ಜಾಸ್ತಿ. ಅದಕ್ಕೆ ಅವರನ್ನು ಬೇಗ ಕರೆದುಕೊಂಡಿದ್ದಾನೆ. ನನ್ನ ಅವರ ಸ್ನೇಹ ತುಂಬಾ ಚೆನ್ನಾಗಿತ್ತು. ಅಂತ ಮನಸಿರುವ ವ್ಯಕ್ತಿ ಸಿಗೋದು ಕಷ್ಟ. ಕರ್ನಾಟಕ ಜನತೆಗೆ ಇದು ತುಂಬಲಾರದ ನಷ್ಟ ಎಂದು ನೈಸ್​ ಮುಖ್ಯಸ್ಥ ಅಶೋಕ್ ಖೇಣಿ ಅಂತಿಮ ದರ್ಶನದ ನಂತರ ಮಾತನಾಡಿದರು.

ನೈಸ್​ ಮುಖ್ಯಸ್ಥ ಅಶೋಕ್​ ಖೇಣಿ ಅವರಿಂದ ಅಂತಿಮ ದರ್ಶನ.

9:00- ನಟ ಅಂಬರೀಷ್​ ನಿಧನ ಹಿನ್ನೆಲೆ ಮಂಡ್ಯ ಜಿಲ್ಲಾದ್ಯಂತ ಸೆಕ್ಷನ್​ 144 ಜಾರಿ.

8:56- ಅಂಬರೀಷ್ ಹುಟ್ಟೂರಿನಲ್ಲಿ ಮಗಿಲು‌ಮುಟ್ಟಿದ ಆಕ್ರಂದನ. ಮದ್ದೂರು ತಾಲೂಕಿನ ದೊಡ್ಡಾರಸಿನಕೆರೆ ಗ್ರಾಮದಲ್ಲಿ ನೀರವ ಮೌನ. ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತರುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು. ಅರ್ಧ ಗಂಟೆಯಾದರೂ ಗ್ರಾಮಕ್ಕೆ ಪ್ರಾರ್ಥಿವ ಶರೀರವನ್ನ ತರುವಂತೆ ಒತ್ತಾಯ. ಹತ್ತಿರದ ಸಂಬಂಧಿಕರು ಅಂತಿಮ ದರ್ಶನಕ್ಕಾಗಿ ಬೆಂಗಳೂರಿನತ್ತ ಪ್ರಯಾಣ.

8:51- ಅಂಬಿ ನಿಧನಕ್ಕೆ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಪ್ರಧಾನಿ ಮೋದಿ.

8:48- ಅಂಬರೀಷ್ ಚಿತ್ರರಂಗಕ್ಕೆ ಒಂದು ಗೂಡು ಕಟ್ಟಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ನಾವು ನಡೆದುಕೊಳ್ಳಬೇಕು. ನಮ್ಮಕುಟುಂಬದಲ್ಲಿ ಅಂಬಿ ಕೂಡ ಒಬ್ಬರಾಗಿದ್ದರು. ಅವರ ನಿಧನದಿಂದ ಮನಸ್ಸಿಗೆ ತುಂಬ ನೋವಾಯ್ತು ಎಂದು ನಟ ರಾಘವೇಂದ್ರ ರಾಜಕುಮಾರ್​ ಅಂತಿಮ ದರ್ಶನದ ಬಳಿಕ ಮಾತನಾಡಿದರು.

8:45- ಅಂಬರೀಶ್​​ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೇ, ಅವರ ಸಾವು ನನಗೆ ನೋವು ತಂದಿದೆ. ಅವರದ್ದು ಇನ್ನು ಚಿಕ್ಕವಯಸ್ಸು. ಅಂಬರೀಶ್​​ ಅವರು ಮೃದು ಸ್ವಭಾವದ ವ್ಯಕ್ತಿ, ಅವರ ಜತೆ ತುಂಬಾ ಒಡನಾಟ ಹೊಂದಿದ್ದೆ. ಅಲ್ಲದೇ ಅವರ ತಂದೆಯೊಂದಿಗೂ ಒಡನಾಟವಿತ್ತು. ಅವರು ರಾಜಕೀಯವಾಗಿಯೂ ಹೆಸರು ಮಾಡಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ , ದೇಶಕ್ಕೆ ನಷ್ಟವಾಗಿದೆ ಎಂದು ಮಾಜಿ ಸಂಸದ ಜಿ. ಮಾದೇಗೌಡ ಸಂತಾಪ ಸೂಚಿಸಿದ್ದಾರೆ.

ನಟ ರಾಘವೇಂದ್ರ ರಾಜಕುಮಾರ್​ ಮತ್ತು ಕುಟುಂಬದಿಂದ ಅಂಬಿ ಅಂತಿಮ ದರ್ಶನ.
ಬಹುಭಾಷ ನಟ ಪ್ರಕಾಶ್​ ರಾಜ್​ ಅವರಿಂದ ಅಂಬಿ ಅಂತಿಮ ದರ್ಶನ.
ಅಂಬಿ ಅಂತಿಮ ದರ್ಶನಕ್ಕೆ ಸರದಿ ಸಾಲಲ್ಲಿ ನಿಂತಿರುವ ಆಭಿಮಾನಿಗಳ ಸಮೂಹ.

8:37- ಅಂಬರೀಷ್ ನಿಧನದಿಂದ ತುಂಬ ನೋವಾಗಿದೆ. ಚಿತ್ರರಂಗದಲ್ಲಿ ಡೈನಾಮಿಕ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ ಎಂದು ಸಂತಾಪ ಸೂಚಿಸಿದ ನಟಿ ಸುಧಾರಾಣಿ.

ಅಂಬಿ ಪತ್ನಿ ಸುಮಲತಾ ಅವರನ್ನು ಕಂಡು ಭಾವುಕರಾದ ನಟಿ ಸುಧಾರಾಣಿ.
ನಟಿ ಸುಧಾರಾಣಿ ಅವರಿಂದ ಅಂಬಿ ಅಂತಿಮ ದರ್ಶನ.
ಅಂತಿಮ ದರ್ಶನ ಪಡೆದ ಸಚಿವ ಕೆ.ಜೆ.ಜಾರ್ಜ್​.

8:24- ವಜ್ರಮುನಿ ಮತ್ತು ಅಂಬರೀಷ್ ಹಲವು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದು ತೀವ್ರ ದುಃಖ ತಂದಿದೆ ಎಂದು ಪತ್ನಿ ಲಕ್ಷ್ಮೀ ವಜ್ರಮುನಿ ಅವರು ಸಂತಾಪ ಸೂಚಿಸಿದರು.

ಅಂಬರೀಷ್​ ಅವರ ಅಂತಿಮ ದರ್ಶನ ಪಡೆಯುತ್ತಿರುವ ಅಭಿಮಾನಿಗಳು.

8:17- ಅಂತಿಮ ದರ್ಶನ ಪಡೆಯುವ ವೇಳೆ ಭಾವುಕರಾಗುತ್ತಿರುವ ಅಭಿಮಾನಿಗಳು. ಅಣ್ಣಾ ಮಾತಾಡು ಅಣ್ಣಾ ಎಂದು ಕಣ್ಣೀರಿಡುತ್ತಿರುವ ಅಭಿಮಾನಿಗಳು.

8:15- ಸಾರ್ವಜನಿಕರಿಗೆ ಅಂಬಿ ಅಂತಿಮ ದರ್ಶನಕ್ಕೆ ಅವಕಾಶ. ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆಯುತ್ತಿರುವ ಸಾರ್ವಜನಿಕರು. ಪಲ್ಲವಿ ಥಿಯೇಟರ್​ ಗೇಟ್​​​ನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ. ಪಾರ್ಥಿವ ಶರೀರದ ಬಳಿ ಭಾವುಕರಾದ ಅಭಿಮಾನಿಗಳು.

8:13- ಅಂಬಿ ನಿಧನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇಂದು ಬೆಳಗ್ಗೆ ಆರು ಗಂಟೆಯಿಂದ ನಾಳೆ ಬೆಳಗ್ಗೆ ಆರು ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಆದೇಶ ಹೊರಡಿಸಿದ್ದಾರೆ.

ಅಂಬಿ ಅಂತಿಮ ದರ್ಶನ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿರುವ ನಟ ಯಶ್​ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​.

 

ಹಿರಿಯ ನಟ ಜೈ ಜಗದೀಶ್​ ಅವರಿಂದ ಅಂಬಿ ಅಂತಿಮ ದರ್ಶನ.

 

ಶಾಸಕ ಬಸವರಾಜ್ ಬೊಮ್ಮಾಯಿ ಅವರಿಂದ ಅಂಬಿ ಅಂತಿಮ ದರ್ಶನ.

8:05- ನಮ್ಮನ್ನು ದುಃಖದ ಮಡುವಿನಲ್ಲಿ ಬಿಟ್ಟು ಹೋಗಿದ್ದಾರೆ. ಅಂಬರೀಷ್ ನಿಜವಾಗಿಯೂ ಒಬ್ಬ ರೆಬೆಲ್. ರಾಜಕೀಯ ರಂಗದಲ್ಲೂ ಹೋರಾಟದ ಮೂಲಕ ಬದುಕಿದ್ದರು. ಅವರ ಆರೋಗ್ಯ ವಿಚಾರದಲ್ಲೂ ನಿರಂತರ ಹೋರಾಟ ನಡೆಸಿದ್ದರು. 35 ವರ್ಷದಿಂದ ಅಂಬಿ ನನಗೆ ಸ್ನೇಹಿತ. ಅವರ ಜತೆ ಕಳೆದ ದಿನಗಳು ನನ್ನ ಕಣ್ಣ ಮುಂದಿವೆ. ಅವರಿಗೆ ಪ್ರೀತಿ ಮಾಡೋದು ಬಿಟ್ಟು ಬೇರೆ ಗೊತ್ತಿರಲಿಲ್ಲ. ಮಂಡ್ಯ, ಮೈಸೂರಿಗರನ್ನು ಹೃದಯದ ಹತ್ತಿರ ಇಟ್ಟುಕೊಂಡಿದ್ದರು. ಅಂಬಿ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಶಾಸಕ ಬಸವರಾಜ್ ಬೊಮ್ಮಾಯಿ ಅಂತಿಮ ದರ್ಶನ ಪಡೆದು ಮಾತನಾಡಿದರು.

ನಿರ್ದೇಶಕ ಎಸ್​.ನಾರಯಣರಿಂದ ಅಂಬಿ ಅಂತಿಮ ದರ್ಶನ.

8:00- ಅಣ್ಣ ಮೃತಪಟ್ಟ ಒಂದು ವರ್ಷಕ್ಕೆ ಸರಿಯಾಗಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ನಿಧನ. ಇದೇ ದಿನಾಂಕದ ಒಂದು ವರ್ಷದ ಹಿಂದೆ ಅಂಬರೀಶ್ ಅಣ್ಣ ಡಾಕ್ಟರ್ ಎಂ.ಎಚ್. ಹರೀಶ್ ನಿಧನಗೊಂಡಿದ್ದರು.

7:59- ಅಂಬರೀಷ್ ಅಂತಿಮ ದರ್ಶನ ಪಡೆದ ನಿರ್ದೇಶಕ ಎಸ್​. ನಾರಾಯಣ್.

7:55- ಅಂಬಿ ನಿಧನಕ್ಕೆ ಅಮೆರಿಕ ಒಕ್ಕಲಿಗ ಪರಿಷತ್ ಸಂತಾಪ. ಪರಿಷತ್ ಅಧ್ಯಕ್ಷ ಬಾಬು ಕೀಲಾರರಿಂದ ಸಂತಾಪ.

7:54- ನಾನು ಮತ್ತು ನಟ ಅಂಬರೀಷ್ ಒಂದೇ ಜಿಲ್ಲೆಯವರು. ರಾಜಕೀಯದಲ್ಲಿ ಬೇರೆ ಪಕ್ಷಗಳಲ್ಲಿದ್ದರೂ ಉತ್ತಮ ಸ್ನೇಹ ಸಂಬಂಧ ಇತ್ತು. ಕಲಿಯುಗ ಕರ್ಣನನ್ನು ಕಳೆದುಕೊಂಡು ಇಡೀ ರಾಜ್ಯ ಬಡವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಸಂತಾಪ ಸೂಚಿಸಿದ್ದಾರೆ.

7: 50- ತಮ್ಮ ಒಳ್ಳೆಯತನದಿಂದ ಎಲ್ಲರ ಅಣ್ಣ ಹಾಗೂ ಸ್ನೇಹಿತರಾಗಿದ್ದರು. ತಮ್ಮ ಹುಸಿಕೋಪದಿಂದಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದರು. ಚಿತ್ರನಟರಾಗಿ, ರಾಜಕಾರಣಿಯಾಗಿ, ಹಿರಿಯಣ್ಣರಾಗಿ ಭಾವುಕ ಪ್ರೀತಿ ತೋರಿಸಿದ್ದ ಸಹೃದಯಿ ಇನ್ನಿಲ್ಲವೆಂಬ ಮಾತು ಅತ್ಯಂತ ಕಠಿಣ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಎಲ್ಲರಿಗೂ ಭಗವಂತ ನೀಡಲಿ ಎಂದು ಕೇಂದ್ರ ಸಚಿವ ಸದಾನಂದಾ ಗೌಡರಿಂದ ಸಂತಾಪ.

ಕಂಠೀರವ ಕ್ರೀಡಾಂಗಣದಲ್ಲಿ ಅಂಬಿ ಅಂತಿಮ ದರ್ಶನ.

7:38- ಕನ್ನಡ ಚಿತ್ರರಂಗ ದೊಡ್ಡಣ್ಣನನ್ನು ಕಳೆದುಕೊಂಡಿದೆ. ಅಂಬರೀಷ್ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅಂಬರೀಷ್ ನಿಧನದಿಂದ ಕರ್ನಾಟಕಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಶಾಸಕ ಬಿ.ಸಿ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.

ಅಂಬಿ ಅಭಿಮಾನಿಗಳಿಂದ ಮಂಡ್ಯದಲ್ಲಿ ಪ್ರತಿಭಟನೆ.

7: 33 ಅಂಬರೀಶಣ್ಣ ಹುಟ್ಟಿ ಬೆಳೆದದ್ದು ಮಂಡ್ಯದಲ್ಲಿ. ಕನಿಷ್ಠ ಒಂದು ಗಂಟೆಯಾದರೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಸಿ ಎಂದು ಮಂಡ್ಯದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲೇ ಮಾಡಿ. ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ನಮ್ಮ ಕ್ರೀಡಾಂಗಣದಲ್ಲಿ ಒಂದು ಗಂಟೆಯಾದರೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ. ನಮ್ಮ ನೋವು ಅರ್ಥಮಾಡಿಕೊಳ್ಳಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಕಂಠೀರವ ಸ್ಟೇಡಿಯಂ ಬಳಿ ಸಿದ್ಧತೆ ಪರಿಶೀಲಿಸುತ್ತಿರುವ ನಟ ಯಶ್ ಮತ್ತು ರಾಕ್ ಲೈನ್ ವೆಂಕಟೇಶ್.

7:28- ಕ್ರೀಡಾಂಗಣದ ಗೇಟ್​​ 4 ರಿಂದ ಅಂಬಿ ಪಾರ್ಥಿವ ಶರೀರ ಪ್ರವೇಶ.

7:27- ಸಿದ್ಧತೆ ಪರಿಶೀಲನೆಗೆ ಕಂಠೀರವ ಸ್ಟೇಡಿಯಂ ಬಳಿ ಆಗಮಿಸಿದ ನಟ ಯಶ್ ಮತ್ತು ರಾಕ್ ಲೈನ್ ವೆಂಕಟೇಶ್.

7:26- ಕಂಠೀರವ ಸ್ಟೇಡಿಯಂಗೆ ಹಿರಿಯ ನಟ ದೊಡ್ಡಣ್ಣ ಆಗಮನ.

7:19: ಕಂಠೀರವ ಕ್ರೀಡಾಂಗಣ ತಲುಪಿದ ಅಂಬಿ ಪಾರ್ಥಿವ ಶರೀರ.

7: 18- ನಾನು ಸತ್ತರೂ ಚಿಂತೆಯಿಲ್ಲ ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕು ಎಂದು ಒತ್ತಾಯಿಸಿ ಮೈಸೂರಿನಿಂದ ಬಂದಿರುವ ಅಭಿಮಾನಿ ಮಹದೇವು ಪ್ರತಿಭಟನೆ. ಎದೆಗೆ ಚಾಕು ಚುಚ್ಚಿಕೊಳ್ಳುತ್ತೇನೆ ಎಂದಿರುವ ಮಹದೇವು. ಮಂಡ್ಯದ ಸಂಜಯ ವೃತ್ತದಲ್ಲಿ ಬಿಗುವಿನ ವಾತಾವರಣ.

7: 16- ಮಂಡ್ಯದ ಸಂಜಯ ವೃತ್ತದಲ್ಲಿ ಜಮಾಯಿಸುತ್ತಿರುವ ಅಭಿಮಾನಿಗಳು. ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕೆಂದು ಅಭಿಮಾನಿಗಳಿಂದ ಒತ್ತಾಯ. ಮೈಸೂರಿನಿಂದಲೂ ಮಂಡ್ಯಕ್ಕೆ ಬಂದಿರುವ ಅಭಿಮಾನಿಗಳು.

ಕಂಠೀರವ ಕ್ರೀಡಾಂಗಣದಲ್ಲಿ ಅಂಬಿ ಅಂತಿಮ ದರ್ಶನಕ್ಕೆ ಸಿದ್ಧತೆ.
ಕಂಠೀರವ ಕ್ರೀಡಾಂಗಣದ ಸುತ್ತ ಪೊಲೀಸ್​ ಬಿಗಿ ಭದ್ರತೆ.

7:12- ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಚೇರಿಯಿಂದ ಹೊರಟ ಅಂಬಿ ಪಾರ್ಥಿವ ಶರೀರ.

ಮಂಡ್ಯದಲ್ಲಿ ನೀರವ ಮೌನ. ಇನ್ನು ತೆರೆಯದ ಅಂಗಡಿ ಮುಂಗಟ್ಟುಗಳು.

7:05- ಅಂಬರೀಶ್ ನಿಧನ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನೀರವ ಮೌನ ಆವರಿಸಿದೆ. ಬೆಳಗಾದರೂ ಅಂಗಡಿ ಮುಂಗಟ್ಟುಗಳಿನ್ನು ತೆರೆದಿಲ್ಲ. ಸ್ವಯಂ ಘೋಷಿತ ಬಂದ್ ವಾತಾವರಣ ಮಂಡ್ಯದಲ್ಲಿ ಮನೆ ಮಾಡಿದ್ದು, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವೂ ಬಣಗುಡುತ್ತಿದೆ.

7:00- ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಚೇರಿ ತಲುಪಿದ ಅಂಬಿ ಪಾರ್ಥಿವ ಶರೀರ.

6:59 – ಮಂಡ್ಯ ನಗರದ ಸಂಯ್​ ವೃತ್ತದಲ್ಲಿ ನೆರೆದ ನೂರಾರು ಅಭಿಮಾನಿಗಳಿಂದ ಅಂಬಿ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಮಾಡಲು ವಿರೋಧ, ಶಾಂತಿಯುತ ಪ್ರತಿಭಟನೆ ನಡೆಸಿ ಎಂದು ಪೊಲೀಸರ ಮನವಿ

6:58 – ಅಂಬರೀಷ್​ ನಿಧನದಿಂದ ಮಂಡ್ಯ ಜಿಲ್ಲೆ ಸಂಪೂರ್ಣ ಸ್ತಬ್ಧ, ಜಿಲ್ಲೆಯಲ್ಲಿ ಹೈ ಅಲರ್ಟ್​, ಮಂಡ್ಯ ನಗರದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​

6:58: ಕರ್ನಾಟಕ ರಾಜ್ಯದ ಕಲಿಯುಗದ ಕರ್ಣ ಅಂಬಿ ನಿಧನಕ್ಕೆ ನಟ ಹಾಗೂ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪರಿಂದ ಸಂತಾಪ.

6:55- ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಂಠೀರವ ಸ್ಟೇಡಿಯಂ ಬಳಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

6:50- ಜೆ.ಪಿ.ನಗರದಲ್ಲಿರುವ ನಿವಾಸಕ್ಕೆ ‌ದಕ್ಷಿಣ ವಿಭಾಗ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ದಕ್ಷಿಣ ವಿಭಾಗ ಡಿಸಿಪಿ‌ ಅಣ್ಣಾಮಲೈ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್. ಅಂಬಿ ನಿವಾಸದ ಬಳಿ ಭದ್ರತೆ ಪರಿಶೀಲಿಸುತ್ತಿರುವ ಡಿಸಿಪಿ ಅಣ್ಣಾಮಲೈ

6:35 – ಜೆ.ಪಿ ನಗರದ ನಿವಾಸದಿಂದ ಕಂಠೀರವ ಕ್ರೀಡಾಂಗಣಕ್ಕೆ ಅಂಬರೀಷ್ ಪಾರ್ಥಿವ ಶರೀರ ರವಾನೆ.​

ಅಂಬಿ ಅಂತಿಮ ದರ್ಶನಕ್ಕಾಗಿ ವಿಷೇಶ ಬಸ್ ಸೌಲಭ್ಯ ವ್ಯವಸ್ಥೆ ಹಿನ್ನೆಲೆಯಲ್ಲಿ ಈವರೆಗೂ ಅಧಿಕೃತ ಆದೇಶ ಬಾರದಿರುವುದರಿಂದ ಮಂಡ್ಯದ ಅಂಬಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ನಟ ಅಂಬರೀಷ್ ಅಮರ

ಪುಟ್ಟಣ್ಣ ಹೆಕ್ಕಿ ತೆಗೆದ ರೆಬೆಲ್ ಎಂಬ ತಾರೆ

ರೆಬೆಲ್ ಸ್ಟಾರ್