ಮೈಸೂರು: ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಉನ್ನತ ಸ್ಥಾನಕ್ಕೇರಿದ್ದರೂ ಸರಳ ಸಜ್ಜನಿಕೆಯೊಂದಿಗೆ ಸಾಮನ್ಯ ವ್ಯಕ್ತಿಯಂತೆ ಬದುಕುವ ಮೂಲಕ ಯುವಪೀಳಿಗೆಗೆ ಆದರ್ಶವಾಗಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನೋತ್ಸವದ ಅಂಗವಾಗಿ ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಸೋಮವಾರ ಮಕ್ಕಳಿಗೆ ಚಿತ್ರಬಿಡಿಸುವ ಸ್ಪರ್ಧೆ ಹಾಗೂ ಹಸಿರೇ ಉಸಿರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದೇಶಾಂಗ ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು. ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ಸೇವೆ ಮತ್ತು ಯೋಜನೆಗಳು ಎಲ್ಲರಿಗೂ ಮಾರ್ಗದರ್ಶನ, ಅವರ ಹುಟ್ಟಿದ ದಿನವನ್ನು ಇಂದಿಗೂ ಉತ್ತಮ ಆಡಳಿತ ದಿನವಾಗಿ ದೇಶದೆಲ್ಲಡೆ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ರಾಮಪ್ರಸಾದ್, ವಿದ್ಯಾಅರಸ್, ಮುಖಂಡರಾದ ಉಮೇಶ್, ಸಿ.ಸಂದೀಪ್, ಗೋಪಾಲ್ ರಾಜ್ ಅರಸ್, ಪುರುಷೋತ್ತಮ್, ಶಿವಪ್ಪ, ಅಜಯ್ ಶಾಸ್ತ್ರಿ, ಮಂಜುಳಾ, ಲಲಿತಾಂಬ , ಧರ್ಮೇಂದ್ರ, ಶಿವಲಿಂಗ ಆಚಾರ್, ಸೂರ್ಯ, ಬಸವರಾಜು, ಮಂಜು, ದೀಪಕ್, ಆನಂದ್, ಅಂಬಳೆ ಶಿವಣ್ಣ, ಧನುಷ್, ಕಿಶೋರ್, ರಾಜಶೇಖರ್, ರವಿ, ಸುರೇಶ್ ಇತರು ಇದ್ದರು.
ಉನ್ನತ ಸ್ಥಾನಕ್ಕೇರಿದ್ದರೂ ಸಾಮನ್ಯ ವ್ಯಕ್ತಿಯಂತೆ ಬದುಕು
You Might Also Like
ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream
Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…
ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items
Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…