ಹುಬ್ಬಳ್ಳಿ : ಅರವತ್ತು ವಯಸ್ಸಿನ ನಂತರ ಹಿರಿಯ ನಾಗರಿಕರು ತಮಗಾಗಿ ಬದುಕಬೇಕೆಂದು ಧಾರವಾಡ ಐ.ಐ.ಟಿ.ಯ ಭೌತಶಾಸ್ತ್ರದ ಡೀನ್ ಮತ್ತು ಪ್ರ್ರಾಧ್ಯಾಪಕ ಡಾ. ಎಸ್. ಎಂ. ಶಿವಪ್ರಸಾದ ಹೇಳಿದರು.
ಇಲ್ಲಿನ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪ್ರೋಬಸ್ ಕ್ಲಬ್ನ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಓದುವದು, ಹಾಡುವದು, ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸುವದು, ಧ್ಯಾನ, ಯೋಗ, ನಡಿಗೆ, ಸಾಧ್ಯವಾದಷ್ಟು ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಜೀವಿಸಲು ಹಿರಿಯ ನಾಗರಿಕರು ಪ್ರಯತ್ನಿಸಬೇಕು. ಸ್ನೇಹಿತರೊಂದಿಗೆ ಹೆಚ್ಚು ಸಮಯ ವಿನಯೋಗಿಸಿ, ಉತ್ತಮ ಹವ್ಯಾಸವನ್ನು ಬೆಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷ ಡಾ. ಬಸವರಾಜ ಕೋಟಿ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ನ ನಿರ್ದೇಶಕ ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಕರಡಿ ಪ್ರಾರ್ಥಿಸಿದರು. ಡಾ. ಜಿ. ಬಿ. ಕಲಕೋಟಿ ಪರಿಚಯಿಸಿದರು. ಡಾ. ಎಂ. ಜಿ. ಸಜ್ಜನರ ನಿರೂಪಿಸಿದರು. ಉಮೇಶ ಪಾಟೀಲ ವಂದಿಸಿದರು.