ಹುಬ್ಬಳ್ಳಿ : ನಾವು ಪ್ರಕೃತಿಯನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ಕಾಯುತ್ತದೆ ಎಂದು ವಿದ್ಯಾವಿಕಾಸ ಪ್ರಕಲ್ಪ ಸಮಿತಿಯ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ ಹೇಳಿದರು.
ಸೇವಾ ಭಾರತಿ ಟ್ರಸ್ಟಿನ ರಜತ ಮಹೋತ್ಸವ ದ ಅಂಗವಾಗಿ ವಿದ್ಯಾವಿಕಾಸ ಪ್ರಕಲ್ಪದ ವತಿಯಿಂದ
ಹಳೇ ಹುಬ್ಬಳ್ಳಿ ಚನ್ನಪೇಟೆಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 20ರಲ್ಲಿ ಸೋಮವಾರ ಆಯೋಜಿಸಿದ್ದ ಪ್ರಕೃತಿ ವಂದನ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಯಾವ ರೀತಿ ಗಿಡ, ಮರಗಳು ತಮ್ಮ ಅಸ್ತೀತ್ವವನ್ನು ಸವಿಸಿ, ಮನುಕುಲಕ್ಕೆ ಉಪಕಾರವನ್ನು ಮಾಡುವವೋ, ಅದೇ ರೀತಿ ನಾವು ಕೂಡ ಪರೋಪಕಾರದ ಮನೋಭಾವನೆಯಿಂದ ಜೀವನವನ್ನು ನಡೆಸುವಂತಾಗಬೇಕು ಎಂದರು.
ಮಳೆನೀರು ಸಂಗ್ರಹಿಸಲು ಇಂಗು ಗುಂಡಿ ನಿರ್ಮಾಣ ಮಾಡಲು ಇದೇ ಸಂದರ್ಭದಲ್ಲಿ ಭೂಮಿಪೂಜೆ ಮಾಡಲಾಯಿತು.
ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮೀ ಸಾಳದೆ ಅಧ್ಯಕ್ಷತೆ ವಹಿಸಿದ್ದರು. ಮಾಹಾನಗರ ಪಾಲಿಕೆ ಸದಸ್ಯೆ ರಾಧಾಬಾಯಿ ಸಫಾರೆ ಅಥಿತಿಯಾಗಿದ್ದರು. ಸೇವಾ ಭಾರತಿ ಟ್ರಸ್ಟಿನ ಪೂರ್ಣಾವಧಿ ಕಾರ್ಯಕರ್ತ ಗೋಪಾಲ ಮಗಜಿಕೊಂಡಿ , ಬಾಲಕಲ್ಯಾಣ ಕೇಂದ್ರದ ವೀಣಾ ಮಳಿಯೆ , ಹೆಣ್ಣು ಮಕ್ಕಳ ಶಾಲೆ ಮುಖ್ಯೋಪಾಧ್ಯಾಯರಾದ ಪಾರ್ವತಿ ಅಂದವಾಳೆ ಹಾಗೂ ಇತರರು ಉಪಸ್ಥಿತರಿದ್ದರು.
ಎಂ.ಟಿ. ಯಾದವ ಸ್ವಾಗತಿಸಿ, ಪರಿಚಯಿಸಿದರು. ಜಯಶ್ರೀ ಹಿರೇಮಠ ನಿರೂಪಿಸಿದದರು. ಸುಮನ ಭಜಂತ್ರಿ ವಂದಿಸಿದರು.