ಹಾವೇರಿ: ಕನ್ನಡ ನಾಡು ನುಡಿಗೆ ಪ್ರಾಚಿನತೆಯ ಇತಿಹಾಸವಿದೆ.ಅನೇಕ ಮಹನೀಯರು ಕಟ್ಟಿದ ಈ ನಾಡಿನಲ್ಲಿ ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ವಿಶೇಷವಾಗಿ ಹಾವೇರಿ ಜಿಲ್ಲೆ ನಾಡಿಗಾಗಿ ತನ್ನದೆಯಾದ ಕೊಡುಗೆ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಭಾವಸಂಗಮ ಸಾಹಿತ್ಯ ಮತ್ತು ಸಾಂಸತಿಕ ವೇದಿಕೆ, ಸಾಹಿತಿ ಕಲಾವಿದರ ಬಳಗ, ಹಂಚಿನಮನಿ ಆರ್ಟ್ ಗ್ಯಾಲರಿಯವರ ಸಂಯುಕ್ತ ಆಶ್ರಯದಲ್ಲಿ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪುಸ್ತಕ ಪ್ರೀತಿ ಅಡಿಯಲ್ಲಿ ಹೊಸ ಬರಹಗಾರರ ಪುಸ್ತಕಗಳ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮನ್ವಯತೆಗೆ ಸಾಕ್ಷಿಯಾದ ಜಿಲ್ಲೆ ಅನೇಕ ಹೆಸರಾಂತ ಸಾಹಿತಿಗಳನ್ನು, ಕೃತಿಗಳನ್ನು ನೀಡಿದೆ. ಎಲ್ಲಾ ಪ್ರಕಾರದ ಪುಸ್ತಕಗಳ ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಬದುಕಿದ್ದಕ್ಕೂ ಉತ್ತಮ ಸಂಗಾತಿಗಳೆಂದರೆ ಉತ್ತಮ ಪುಸ್ತಕಗಳು, ಪ್ರತಿಯೊಂದು ಪುಸ್ತಕ ವಿಮರ್ಶೆಗೆ ಒಳಪಡಬೇಕು. ಲೇಖಕ, ವಿಮರ್ಶಕ ಮತ್ತು ಓದುಗರನ್ನು ಒಂದೆಡೆ ಸೇರಿಸಿ ಚರ್ಚೆ ಮಾಡುವುದರಿಂದ ಪರಸ್ಪರ ಜ್ಞಾನ ವಿಸ್ತರಿಸುವ ಮೂಲಕ ಉತ್ತಮ ಸಾಹಿತ್ಯ ಕೃತಿಗಳು ಸೃಷ್ಟಿಯಾಗಿ ಹೆಚ್ಚು ಜನರನ್ನು ತಲುಪಲು ಸಾಧ್ಯ.ಇತರರನ್ನು ಬದುಕಿನೆಡೆಗೆ ಪ್ರೇರೇಪಿಸುವ ಮತ್ತು ಪ್ರಭಾವಿಸುವ ಸಾಹಿತ್ಯ ಸದಾ ಜೀವಂತವಾಗಿರುತ್ತದೆ ಎಂದರು.
ಸಾಹಿತಿ ಸತೀಶ ಕುಲಕಣಿರ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಸಾಹಿತ್ಯಕ ವಾತಾವರಣ ಸೃಷ್ಟಿಸಲು ಆಯ್ದ ಬರಹಗಾರರ ಕೃತಿಗಳನ್ನು ವಿರ್ಮಶಿಸಿ ಓದುಗ ಮತ್ತು ಲೇಖಕರನ್ನು ಒಂದೇ ವೇದಿಕೆಗೆ ತಂದು ಚಚಿರ್ಸಲಾಗುತ್ತಿದೆ. ಪರಿಣಾಮವಾಗಿ ಲೇಖಕರಿಗೆ ಉತ್ತಮ ಕೃತಿ ಬರಲು ಸಹಾಯವಾದರೆ ಓದುಗರಿಗೆ ಕೃತಿ ರಚಿಸಲು ಪ್ರೇರಣೆಯಾಗುತ್ತದೆ ಎಂದರು.
ಲಿಂಗರಾಜ ಸೊಟ್ಟಪ್ಪನವರ ರವೀಂದ್ರ ಮುದ್ದಿಯವರ “ವರದಾ ತೀರದ ಕಥೆಗಳು’ ಕೃತಿ ವಿರ್ಮಶಿಸಿದರು. ಸಾಹಿತಿ ದೀಪಾ ಗೋನಾಳ ದೇವರಾಜ ಹುಣಸಿಕಟ್ಟಿಯವರ “ಹಕೀಮನೊಬ್ಬನ ತಕರಾರು’ ಕೃತಿ ವಿರ್ಮಶಿಸಿದರು. ಡಾ. ಜಗನ್ನಾಥ ಗೇನಣ್ಣನವರ ರಮೇಶ ಬಡಿಗೇರ ಅವರ ‘ಉಸಿರುಂಡ ಕೊಳ್ಳಲು’ ಕೃತಿ ವಿರ್ಮಶಿಸಿದರು.
ಭಾವಸಂಗಮ ಸಾಹಿತ್ಯ ಮತ್ತು ಸಾಂಸತಿಕ ವೇದಿಕೆ ಸಂಚಾಲಕ ಶೇಖರ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಅನ್ನರ್ಪೂಣ ಬಿಷ್ಟಣ್ಣನವರ, ಸಿ.ಎಸ್. ಮರಳಿಹಳ್ಳಿ, ರಾಜೇಂದ್ರ ಹೆಗಡೆ, ಎಸ್.ಆರ್. ಹಿರೇಮಠ, ಪೃಥ್ವಿರಾಜ ಬೆಟಗೇರಿ, ಮಂಜಯ್ಯ ದೇವರಮನಿ, ವೈ.ಬಿ. ಆಲದಕಟ್ಟಿ, ರೇಣುಕ ಗುಡಿಮನಿ, ನೇತ್ರ ಅಂಗಡಿ, ರಹೀಲ್ ರಾಜಭಕ್ಷಿ ಇತರರು ಉಪಸಿತರಿದ್ದರು.
ಉಪನ್ಯಾಸಕ ಮಂಜುನಾಥ ಹತ್ತಿಯವರ ಸ್ವಾಗತಿಸಿದರು. ಸಾಹಿತಿ ಅನಿತಾ ಮಂಜುನಾಥ ನಿರೂಪಿಸಿದರು. ಸಿ.ಎ. ದೊಡ್ಡಗೌಡ್ರು ವಂದಿಸಿದರು.
ಸಾಹಿತ್ಯಕ್ಕೆ ಹಾವೇರಿ ಕೊಡುಗೆ ಅಪಾರವಾಗಿದೆ; ಜಿಲ್ಲಾಧಿಕಾರಿ

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು
Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…
ಬೇಸಿಗೆಯಲ್ಲಿ ಜಿಮ್ಗೆ ಹೋಗುವ ಮೊದಲು ಸುಸ್ತಾಗುತ್ತೀದ್ರೆ ಈ ಜ್ಯೂಸ್ಗಳನ್ನು ಒಮ್ಮೆ ಟ್ರೈ ಮಾಡಿ, ದಣಿವು ದೂರವಾಗುವುದು ಖಂಡಿತ!Pre Workout Drinks
Pre Workout Drinks: ಬೇಸಿಗೆಯ ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೂ ಸಹ ದೇಹವು ದಣಿಯುತ್ತದೆ, ಬಾಯಾರಿಕೆ…
ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem
Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…