ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್ಬಸ್ಟರ್ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ನಂತರ ಕಂಡಿದ್ದೆಲ್ಲಾ ಅದ್ಭುತ ಯಶಸ್ಸು. ಕಿರಿಕ್ ಪಾರ್ಟಿ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಪುನೀತ್ ರಾಜ್ಕುಮಾರ್ ಅವರ ‘ಅಂಜನಿಪುತ್ರ’, ಗಣೇಶ್ ನಟನೆಯ ‘ಚಮಕ್’ ಮತ್ತು ದರ್ಶನ್ ಅಭಿನಯದ ‘ಯಜಮಾನ’ ಚಿತ್ರಗಳಲ್ಲಿ ಮಿಂಚಿದ ‘ನ್ಯಾಷನಲ್ ಕ್ರಶ್’, ನಂತರ ಜಿಗಿದಿದ್ದು ನೇರವಾಗಿ ಟಾಲಿವುಡ್ ಅಂಗಳಕ್ಕೆ.
ಇದನ್ನೂ ಓದಿ: ಮೃತ ಸರ್ಕಾರಿ ನೌಕರ ರುದ್ರಣ್ಣ ಯಡವನ್ನವರ್ ಮನೆಗೆ ಭೇಟಿ ನೀಡಿದ ಸಂಸದ ಜಗದೀಶ್ ಶೆಟ್ಟರ್
ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ಗುರುತಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ನಂತರದಲ್ಲಿ ತಮ್ಮ ನಟನೆಯ ಛಾಪನ್ನು ತೆಲುಗು ಸಿನಿಮಾಗಳ ಮುಖೇನ ಪ್ರೇಕ್ಷಕರಿಗೆ ಮತ್ತಷ್ಟು ಪರಿಚಯಿಸಿದರು. ತಿಳಿಯದ ಭಾಷೆಯಾದರೂ ತಮ್ಮ ನಟನಾ ಕೌಶಲ್ಯ ತೋರಿಸುವಲ್ಲಿ ಹಿಂದುಳಿಯದ ರಶ್ಮಿಕಾ, ಟಾಲಿವುಡ್ನ ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್ ನಟರೊಂದಿಗೆ ನಟಿಸಿ, ತೆಲುಗು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಇದೀಗ ಬಾಲಿವುಡ್ನಲ್ಲಿಯೂ ನಟಿಸಿರುವ ನ್ಯಾಷನಲ್ ಕ್ರಶ್, ಅಪಾರ ಪ್ರಶಂಸೆ, ಮನ್ನಣೆ ಗಳಿಸಿದ್ದಾರೆ. ಗಮನಾರ್ಹವಾಗಿ ನಟಿಯ ಕೊಡುಗೆ ಟಾಲಿವುಡ್ ಚಿತ್ರರಂಗಕ್ಕೆ ಹೆಚ್ಚಿದ್ದು, ಅವರು ಅಭಿಯಸಿರುವ ಅಷ್ಟು ತೆಲುಗು ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಒಟ್ಟು 9 ಸಿನಿಮಾಗಳಲ್ಲಿ ನಟನೆ
1. ಚಲೋ (2018): ನಿರ್ದೇಶಕ ವೆಂಕಿ ಕುಡುಮಾಲ, ನಾಯಕಿ ರಶ್ಮಿಕಾ ಮಂದಣ್ಣ, ನಾಯಕ ನಾಗ ಶೌರ್ಯ.
2. ಗೀತಾ ಗೋವಿಂದಂ (2018): ನಿರ್ದೇಶಕ ಪರಶುರಾಮ್, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ವಿಜಯ್ ದೇವರಕೊಂಡ
3. ದೇವದಾಸ್ (2018): ನಿರ್ದೇಶಕ ಶ್ರೀರಾಮ್ ಆದಿತ್ಯ, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟರು ನಾನಿ, ನಾಗಾರ್ಜುನ ಅಕ್ಕಿನೇನಿ
4. ಡಿಯರ್ ಕಾಮ್ರೇಡ್ (2019): ನಿರ್ದೇಶಕ ಭರತ್ ಕಮ್ಮ, ನಟಿ
ರಶ್ಮಿಕಾ ಮಂದಣ್ಣ, ನಾಯಕ ನಟ ವಿಜಯ್ ದೇವರಕೊಂಡ
5. ಸರಿಲೇರು ನೀಕೆವ್ವರು (2020): ನಿರ್ದೇಶಕ ಅನಿಲ್ ರವಿಪುಡಿ,
ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಮಹೇಶ್ ಬಾಬು
6. ಭೀಷ್ಮ (2020): ನಿರ್ದೇಶಕ ವೆಂಕಿ ಕುಡುಮಲ,
ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ನಿತಿನ್
7. ಪುಷ್ಪ: ದಿ ರೈಸ್ (2021) ನಿರ್ದೇಶಕ ಸುಕುಮಾರ್,
ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಅಲ್ಲು ಅರ್ಜುನ್,
8. ಆದವಲ್ಲು ಮೀಕು ಜೋಹಾರ್ಲು (2022): ನಿರ್ದೇಶಕ ಕಿಶೋರ್ ತಿರುಮಲ, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಶರ್ವಾನಂದ್
9. ಪುಷ್ಪ 2 (2024): ನಿರ್ದೇಶಕ ಸುಕುಮಾರ್, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಅಲ್ಲು ಅರ್ಜುನ್ (ಡಿ.05ರಂದು ಬಿಡುಗಡೆಗೆ ಸಿದ್ಧವಾಗಿದೆ).
ಈ ಅನುಭವಗಳು ನಿಮಗಾಗಿದ್ದರೆ ಖಂಡಿತ ನೀವು ಮಿಡೆಲ್ ಕ್ಲಾಸ್ ಕುಟುಂಬದಲ್ಲಿ ಬೆಳೆದವರೇ!
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ