ಮೂಡಲಗಿ: ಮತದಾರರ ಪಟ್ಟಿಯಲ್ಲಿ ತಪ್ಪದೆ ಹೆಸರು ಸೇರಿಸಿ

ಮೂಡಲಗಿ: ಪ್ರಜಾಪ್ರಭುತ್ವ ಸುಸ್ಥಿರವಾಗುವ ನಿಟ್ಟಿನಲ್ಲಿ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಆದ್ಯ ಕರ್ತವ್ಯ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ಗೋಕಾಕ ತಾಪಂ ಕಾರ್ಯನಿರ್ವಾಹಕ ಅದಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದ್ದಾರೆ.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಭಾನುವಾರ ಜರುಗಿದ ಚುನಾವಣೆ ಆಯೋಗ, ತಾಲೂಕಾಡಳಿತ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಮತದಾರರ ಪಟ್ಟಿ ಪರಿಶೀಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಡಲಗಿ ತಹಸೀಲ್ದಾರ್ ಮುರಳೀಧರ ತಳ್ಳಿಕೇರಿ ಮಾತನಾಡಿ, ಬಿಎಲ್‌ಒಗಳಿಗೆ ಗ್ರಾಮ ಲೆಕ್ಕಾದಿಕಾರಿ ಮೂಲಕ ಅಗತ್ಯ ಸಹಾಯ ನೀಡಲಾಗುವುದು ಎಂದು ತಿಳಿಸಿದರು. ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಮತದಾರ ಪಟ್ಟಿ ಪರಿಶೀಲನೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕ ಸಮುದಾಯ ಸಮರ್ಪಕ ಕಾರ್ಯ ನಿರ್ವಹಿಸಬೇಕು. ಶಿಕ್ಷಕರ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸಲಾಗುವುದು ಎಂದರು. ಶಿಕ್ಷಕ ಸಂಘಟನೆಯ ಬಿ.ಆರ್.ತರಕಾರ, ಆರ್.ಎಂ.ಮಹಾಲಿಂಗಪುರ ಮಾತನಾಡಿದರು. ನಗರದ ಲಕ್ಷ್ಮೀ ನಗರದ ಜನವಸತಿ ಪ್ರದೇಶಗಳಿಗೆ ತೆರಳಿ ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆ, ಮಾರ್ಪಾಡು ಮಾಡುವಂತೆ ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಜಾಥಾ ಜರುಗಿತು.

ತಾಪಂ ಸಹಾಯಕ ನಿರ್ದೇಶಕ ಎಸ್.ಎಚ್ ದೇಸಾಯಿ, ಪುರಸಭೆ ಪ್ರಭಾರ ಮುಖ್ಯಾದಿಕಾರಿ ಚಂದ್ರಶೇಖರ ಪಾಟೀಲ, ಶಿರಸ್ತೆದಾರ ಶಿವಾನಂದ ಬಬಲಿ, ಮುಖ್ಯೋಪಾಧ್ಯಾಯರಾದ ರಾಜೇಂದ್ರ ಕುಲಕರ್ಣಿ, ಶಿವಾನಂದ ಸೋಮವ್ವಗೋಳ, ಭೀಮಪ್ಪ ಹುಲ್ಯಾಳ, ಕೆ.ಎಂ.ವಾಣಿ, ಮಂಜುನಾಥ ಎಂ., ಶಿಕ್ಷಕ ಸಂಘಟನೆಯ ಕೆ.ಎಲ್.ಮೀಶಿ, ಎಸ್.ಎಂ.ದಬಾಡಿ, ಎಸ್.ಎಂ.ಮಂಗಿ, ಆರ್.ಎನ್. ಬಟಕುರ್ಕಿ, ಸುರೇಶ ಕೋಪರ್ಡೆ, ಕೆ.ಜೆ ಜೋಶಿ, ಜಿ.ಬಿ.ನಾಯಿಕ, ಬಿ.ಎ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *