ಯಾದಗಿರಿ : ಯಾದಗಿರಿ ಉಪ ವಿಭಾಗದಲ್ಲಿ 2020-21ರಲ್ಲಿ ನೋಂದಾಣಿಯಾದ ಮತ್ತು ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳು ಮತ್ತು ಗಿರಿವಿದಾರರು ಹಾಗೂ ಲೇವದೇವಿಗಾರರ ಲೈಸೆನ್ಸ್ಗಳನ್ನು 2025ರ ಎಪ್ರಿಲ್ 1 ರಿಂದ 2030ರ ಮಾರ್ಚ್ 31ರ ಅವಧಿಗಾಗಿ ನವೀಕರಣಕ್ಕೆ ಸೂಚಿಸಿದೆ ಎಂದು ಯಾದಗಿರಿ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶೀಮಾ ಅವರು ತಿಳಿಸಿದ್ದಾರೆ.
ಯಾದಗಿರಿ ಉಪ ವಿಭಾಗದಲ್ಲಿ 2020-21ರಲ್ಲಿ ನೊಂದಣಿಯಾದ ಮತ್ತು ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳ ಲೇವಾದೇವಿಗಾರರು ಮತ್ತು ಗಿರಿವಿದಾರರು ಲೈಸನ್ಸ್ಗಳನ್ನು ದಿನಾಂಕ 01-04-2025 ರಿಂದ 31-03-2030ರ ಅವಧಿಗಾಗಿ ನವೀಕರಣ ಅರ್ಜಿಗಳನ್ನು ಕರ್ನಾಟಕ ಮನಿಲೆಂಡಿAಗ್ ಕಾಯ್ದೆ 1961 ನಿಯಮ 5(2) ರನ್ವಯ ದಾಖಲಾತಿಗಳೊಂದಿಗೆ 2025ರ ಜನವರಿ 31ರ ಒಳಗೆ ಸಹಕಾರ ಸಂಘಗಳ ನಿಬಂಧಕರ ಕಛೇರಿ ಯಾದಗಿರಿ ಇಲ್ಲಿಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
TAGGED:Yadagiri