ಬೆಳಗಾವಿ: ಮದ್ಯದಂಗಡಿ ಮುಚ್ಚಿಸಲು ಆದೇಶ ನೀಡಿ

ಬೆಳಗಾವಿ: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಎರಡು ಮದ್ಯದಂಗಡಿಗಳನ್ನು ಮುಚ್ಚಿಸಲು ಜಿಲ್ಲಾಡಳಿತ ಆದೇಶ ನೀಡಬೇಕು ಎಂದು ಒತ್ತಾಯಿಸಿ ಆದಿಶಕ್ತಿ ಮಾತಂಗಿದೇವಿ ಮಹಿಳಾ ಸಂಘದ ಕಾರ್ಯಕರ್ತೆಯರು ಡಿಸಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎರಡು ಮದ್ಯದಂಗಡಿಗಳು ಬಸವೇಶ್ವರ ದೇವಸ್ಥಾನ, ಪರಮ ರಾಮಾರೂಢಮಠ, ಖಾಸಗಿ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರದಲ್ಲಿವೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವ ವಾಹನಗಳು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಇದೇ ಮಾರ್ಗದಲ್ಲಿ ಸಾಗುತ್ತವೆ. ಮದ್ಯ ಸೇವಿಸುವವರು ಅಂಗಡಿ ಮುಂಭಾಗದಲ್ಲಿ ನಿಂತು ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹಾಗಾಗಿ, ಎರಡು ಮದ್ಯದಂಗಡಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದುರ್ಗವ್ವ ಮ್ಯಾಗೇರಿ, ರೇಣವ್ವ ಬಡೆಪ್ಪನವರ, ದ್ರಾಕ್ಷಾಯಿಣಿ ಬಸಲಿಂಗನವರ, ಮಹಾದೇವಿ ಕಾಳಪ್ಪನವರ, ಅನಸೂಯಾ ಬಸಲಿಂಗನವರ, ಕಸ್ತೂರಿ ಕೋಟೂರ ಇತರರು ಇದ್ದರು.

Leave a Reply

Your email address will not be published. Required fields are marked *