ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಗಂಗಾವತಿ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಮದ್ಯ ಮಾರಾಟ ಮತ್ತು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಕ್ರಮ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಬಣದ ಸದಸ್ಯರು ನಗರದ ಮಿನಿವಿಧಾನಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್ ವೀರೇಶ ಬಿರಾದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಜಿ.ಹಂಪೇಶ ಹರಿಗೋಲು ಮಾತನಾಡಿ, ತಾಲೂಕಿನ ಬಾರ್, ರೆಸ್ಟೋರೆಂಟ್‌ಗಳಲ್ಲಿ ಅಬಕಾರಿ ಕಾಯ್ದೆ ಉಲ್ಲಂಸಲಾಗುತ್ತಿದೆ. ವಲಯ ನಿರೀಕ್ಷಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಿಯಮ ಉಲ್ಲಂಸುವ ಲೈಸೆನ್ಸ್‌ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂ.ಸಂಚಾಲಕ ಹನುಮಂತಪ್ಪ ನಾಯಕ ವಡ್ಡರಹಟ್ಟಿ, ಖಜಾಂಚಿ ಜಯರಾಜ್ ನಾಯಕ, ಪದಾಧಿಕಾರಿಗಳಾದ ಯಮನೂರಪ್ಪ ನಾಯಕ, ರಾಮಣ್ಣಚೌಡ್ಕಿ, ಬಲರಾಂ ಬಂಡಿ, ಶಿವಪ್ಪ ಹಿರೇವಡ್ರಕಲ್, ಉಮೇಶ ಹೂವಿನಾಳ್, ಕನಕಪ್ಪ ನಾಹಯಕ, ಮಲ್ಲಪ್ಪ ಇತರರು ಇದ್ದರು.