ಬೆಂಗಳೂರು: ಮದ್ಯದ ದರ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸಣ್ಣ ಸುಳಿವು ನೀಡಿದೆ. ಸಣ್ಣ ಮಟ್ಟದಲ್ಲಿ ದರ ಪರಿಷ್ಕರಣೆ ನಡೆಸಲು ಮುಂದಾಗಿದ್ದು, ಶೀಘ್ರವೇ ಮುಖ್ಯಮಂತ್ರಿಯವರ ಮುಂದೆ ಪ್ರಸ್ತಾವನೆ ಇಟ್ಟು ಒಪ್ಪಿಗೆ ಪಡೆಯಲು ಬಯಸಿದೆ.
ಯಾವ ಪ್ರಮಾಣದಲ್ಲಿ ದರ ಏರಿಕೆಯಾಗಲಿದೆ, ಯಾವ ವರ್ಗದ ಮದ್ಯದ ದರ ಪರಿಷ್ಕರಣೆಯಾಗಲಿದೆ ಎಂಬುದು ಮುಂದಿನ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಅಬಕಾರಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ರಾಮಪ್ಪ ಬಾಳಪ್ಪ ತಿಮ್ಮಾಪುರ, ಮದ್ಯದ ದರ ಏರಿಸುವ ಬಗ್ಗೆ ಈ ವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ನಮ್ಮ ಇಲಾಖೆ 38 ಸಾವಿರ ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ. ಹಾಗಂತ ದರ ಹೆಚ್ಚಳ ಮಾಡುವುದಿಲ್ಲ. ನಿರೀಕ್ಷಿತ ಗುರಿ ಮುಟ್ಟಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಮದ್ಯದ ದರ ಏರಿಕೆ ಅನಿವಾರ್ಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿಗೂ ದರ ಪರಿಷ್ಕರಣೆಗೂ ಸಂಬಂಧವಿಲ್ಲ. ಅಕ್ಕಪಕ್ಕದ ರಾಜ್ಯಗಳಲ್ಲಿ ಮದ್ಯದ ದರ ಏನಿದೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಮಹಾರಾಷ್ಟ್ರ, ಗೋವಾದಲ್ಲಿ ಬೆಲೆ ಏನಿದೆ ಎಂದು ಮಾಹಿತಿ ಕಲೆಹಾಕಲಾಗಿದೆ. ಕೆಲವು ಬ್ರಾಂಡ್‌ಗಳು ಮತ್ತು ಸ್ಲಾಬ್ ರೇಟ್ ಚರ್ಚೆ ನಡೆಯುತ್ತಿದೆಯಷ್ಟೇ ಎಂದು ಸ್ಪಷ್ಟಪಡಿಸಿದರು.
ಇಂಧನ ಸೇರಿ ವಿವಿಧ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆಯನ್ನು ಸಾಮಾನ್ಯರು ಸಹಿಸಿಕೊಳ್ಳಬೇಕು. ಬಿಜೆಪಿಯವರು ಹೆಚ್ಚಿಸಿದಾಗ ಸಹಿಸಿಕೊಂಡಿದ್ದರು. ನಾವು ಗ್ಯಾರೆಂಟಿಗಳನ್ನು ಕೊಡುತ್ತಿದ್ದೇವೆ. ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಜನ ಸಾಮಾನ್ಯರಿಗೆ ಏನು ಕೊಡಬೇಕೋ ಕೊಡುತ್ತಿದ್ದೇವೆ ಎಂದರು.
ಮದ್ಯದ ದರ ಹೆಚ್ಚಳ ಸುಳಿವು

You Might Also Like
ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips
Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…
ಬೇಸಿಗೆಯಲ್ಲಿ ಸೌತೆಕಾಯಿ ಒಂದು ವರದಾನ.. ಆರೋಗ್ಯದ ಜತೆಗೆ ಸೌಂದರ್ಯವನ್ನೂ ತರುತ್ತದೆ.. Beauty Benefits Of Cucumber
ಬಿಸಿಲಿನಲ್ಲಿ ಸೌತೆಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ Beauty Benefits Of Cucumber : ಸೌತೆಕಾಯಿಯು ಹಲವಾರು…
ಶನಿಯ ಅನುಗ್ರಹದಿಂದಾಗಿ ಈ 3 ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…