ಫುಟ್ಬಾಲ್​​ ಲೋಕದಲ್ಲಿ ದಾಖಲೆ ಸೃಷ್ಟಿಸಿದ ವಿಶ್ವದ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ

ದೆಹಲಿ: ವಿಶ್ವದ ಶ್ರೇಷ್ಠ ಫುಟ್ಬಾಲ್​​​ ತಾರೆ ಲಿಯೋನೆಲ್ ಮೆಸ್ಸಿ ಅವರು ಅದ್ಭುತ ಪ್ರದರ್ಶನದ ಮೂಲಕ ಬಾರ್ಸಿಲೋನಾ ಕ್ಲಬ್​​​ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ಬಾರ್ಸಿಲೋನಾ ಕ್ಲಬ್​​ನ ಮುಂಚೂಣಿ ಆಟಗಾರ ಮೆಸ್ಸಿ ಬುಧವಾರ ತಡರಾತ್ರಿ ನಡೆದ ಚಾಂಪಿಯನ್ಸ್​​ ಲೀಗ್​​ನ ಸೆಮಿಫೈನಲ್​ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ಲಿವರ್​​​ಪೂಲ್​​ ಎದುರಿನ ಪಂದ್ಯದಲ್ಲಿ ರೋಚಕ ಎರಡು ಗೋಲುಗಳನ್ನು ಸಿಡಿಸಿ ತಂಡ ಗೆಲುವಿನ ರೂವಾರಿಗಳಾಗಿ ಮಿಂಚಿದರು. ಈ ಮೂಲಕ ತಮ್ಮ ಬಾರ್ಸಿಲೋನಾ ಕ್ಲಬ್​​​​​​​​​​ನ 600ನೇ ಗೋಲನ್ನು ಸಿಡಿಸಿ ಸಂಭ್ರಮಿಸಿದರು.

ಮೆಸ್ಸಿ ಅವರು ಮಾಡಿರುವ ಈ ಸಾಧನೆಗೆ ವಿಶ್ವದ ಪ್ರಮುಖ ಫುಟ್ಬಾಲ್​​ ದಿಗ್ಗಜರು ಸಾಮಾಜಿಕ ಜಾಲ ತಾಣಗಳಲ್ಲಿ ಹೊಗಳಿದ್ದಾರೆ.

ಈ ಪಂದ್ಯದ ಕೊನೆಯಲ್ಲಿ ಮೆಸ್ಸಿಗೆ ಸಿಕ್ಕ ಫ್ರೀ-ಕಿಕ್​​​​​​​ ಅನ್ನು ಸದುಪಯೋಗಪಡಿಸಿಕೊಂಡು ಅದ್ಭುತ ಗೋಲನ್ನು ಬಾರಿಸಿದರು. ಇದರೊಂದಿಗೆ ಬಾರ್ಸಿಲೋನಾ ತಂಡ 3-0 ಗೋಲುಗಳಿಂದ ಜಯ ದಾಖಲಿಸಿ ಚಾಂಪಿಯನ್ಸ್​​ ಲೀಗ್​ನ ಫೈನಲ್​​ ಪ್ರವೇಶಿಸಿತು.

ಪಂದ್ಯ ವೀಕ್ಷಕ ವಿಮರ್ಶಕ ಮೆಸ್ಸಿಯ ಭರ್ಜರಿ ಪ್ರದರ್ಶನವನ್ನು ನೋಡಿ ಬಹಳ ಸಂತಸ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. (ಏಜನ್ಸೀಸ್​​)